Breaking News

ಮೊಬೈಲ್ ಕಳ್ಳರಿಗೆ ಚಳ್ಳೆ ಹಣ್ಣು ತಿನ್ನಿಸಿದ ಬಾಗಲೂರು ಪೋಲೀಸರು.

ಬಾಗಲೂರು: ಬೈಕ ನಲ್ಲಿ ಬಂದು ಸಾರ್ವಜನಿಕರ ಮೊಬೈಲ್ ಫೋನ್‌ಗಳನ್ನು‌ ಸುಲಿಗೆ ಮಾಡುತ್ತಿದ್ದ ಕಳ್ಳರ ತಂಡವೊಂದನ್ನು ಹಿಡಿಯುವಲ್ಲಿ ಬಾಗಲೂರು ಪೋಲೀಸರು ಯಶಸ್ವಿಯಾಗಿದ್ದಾರೆ.ಸಾಯಿಕೃಷ್ಣ, ರಾಜಶೇಖರ ಹಾಗೂ ಮುನಿಯಪ್ಪ ಬಂಧಿತ ಆರೋಪಿಗಳು.ಜನರಿಗೆ ಚಳ್ಳೆ ಹಣ್ಣು ತಿನಿಸುವ ಕಳ್ಳರಿಗೆ ಪೋಲೀಸರೇ ಚಳ್ಳೆ ಹಣ್ಣು ತಿನಿಸಿದ್ದಾರೆ.ನಿತ್ಯ ಬೈಕ್ ನಲ್ಲಿ ಸಂಚರಿಸುತ್ತಾ ಕಳ್ಳತನದಲ್ಲಿ ತೊಡಗಿದ್ದು, ಸಮಯ ಸಾಧಿಸಿ ಮೊಬೈಲ್ ಗಳನ್ನು ಸುಲಿಗೆ ಮಾಡುತ್ತಿದ್ದರು ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ‌ಪೋಲೀಸರುಬಂಧಿತರಿಂದ ಆರು ಆ್ಯಂಡ್ರಾಯ್ಡ ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡು ವಿಚಾರಣೆ ಮುಂದುವರೆಸಿದ್ದಾರೆ.ಬಾಗಲೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About admin

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *