BigTv News
November 27, 2025
Breaking News
ಭಾರತದ ಮಾಜಿ ಕ್ರಿಕೆಟಿಗ ಚೇತೇಶ್ವರ ಪೂಜಾರ ಅವರ ಭಾಮೈದ ಜೀತ್ ಪಬಾರಿ ಬುಧವಾರ ರಾಜ್‌ಕೋಟ್‌ನ ಹರಿಹರ ಸೊಸೈಟಿಯಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕುಟುಂಬದವರು ಅವರನ್ನು ಆಸ್ಪತ್ರೆಗೆ ಕರೆತಂದರು, ಅಲ್ಲಿ ವೈದ್ಯರು ಅವರ ಸಾವನ್ನು ದೃಢಪಡಿಸಿದರು. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಅವರ ನಿವಾಸವು ಪ್ರಸ್ತುತ ವಿಧಿವಿಜ್ಞಾನ ಮೌಲ್ಯಮಾಪನದ ಭಾಗವಾಗಿದೆ. ಮನೆಯ ವಿಧಿವಿಜ್ಞಾನ ಪರೀಕ್ಷೆಯನ್ನು ನಡೆಸಲಾಗುವುದು ಮತ್ತು ಕುಟುಂಬವು ಮಾತನಾಡಲು ಸಿದ್ಧವಾದ ನಂತರ ತನಿಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುತ್ತಾರೆ ಎಂದು ಅವರು …
Read More »
BigTv News
November 27, 2025
Breaking News
ಸಜೀಪನಡು ಗ್ರಾಮದ ದೇರಾಜೆಯ ದೀಕ್ಷಿತ್ ಅವರ ಮನೆಗೆ ವಿದ್ಯುತ್ ದುರಸ್ತಿಯವನ ಸೋಗಿನಲ್ಲಿ ನುಗ್ಗಿದ ಕಳ್ಳನೋರ್ವ 42 ಸಾವಿರ ರೂ. ಮೌಲ್ಯದ 7 ಗ್ರಾಂ ಚಿನ್ನಾಭರಣ ಹಾಗೂ 6 ಸಾವಿರ ರೂ. ನಗದನ್ನು ಕಳವು ಮಾಡಿದ ಘಟನೆ ನ. 23ರಂದು ನಡೆದಿದೆ.ದುರಸ್ತಿಯ ನಾಟಕ ಮಾಡಿ ಮಲಗುವ ಕೋಣೆಯ ಮಂಚದ ಕೆಳಭಾಗದಲ್ಲಿ ಬ್ಯಾಗ್‌ನಲ್ಲಿದ್ದ ಚಿನ್ನ ಹಾಗೂ ನಗದನ್ನು ಕಳವು ಮಾಡಿದ್ದಾನೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
November 27, 2025
Breaking News
ಛತ್ತೀಸ್‌ಗಢದ ಬಿಜಾಪುರದಲ್ಲಿ 41 ನಕ್ಸಲರು ಬುಧವಾರ ಶರಣಾಗಿದ್ದಾರೆ. ಅವರಲ್ಲಿ 32 ಮಂದಿಯ ತಲೆಗೆ ಒಟ್ಟಾರೆ 1.19 ಕೋಟಿ ರೂ. ಬಹುಮಾನವನ್ನು ಘೋಷಿಸಲಾಗಿತ್ತು. ಈ ಪೈಕಿ 12 ಮಹಿಳೆಯರಿದ್ದಾರೆ. ಶರಣಾದವರಲ್ಲಿ ಮಾವೋವಾದಿಗಳಾದ ಪಿಎಲ್‌ಜಿಎ ಪಡೆ ಸದಸ್ಯರು ಮತ್ತು ವಿವಿಧ ಕಮಾಂಡರ್‌ಗಳು ಇದ್ದು, ಸಂವಿಧಾನದಲ್ಲಿ ವಿಶ್ವಾಸ ಹೊಂದಿದ್ದಾಗಿ ತಿಳಿಸಿದ್ದಾರೆ.ಶರಣಾದ ಪ್ರತಿಯೊಬ್ಬರಿಗೂ ತಲಾ 50,000 ರೂ. ಆರ್ಥಿಕ ನೆರವು ನೀಡಲಾಗಿದೆ. ಎಸ್‌ಪಿ ಜಿತೇಂದ್ರ ಕುಮಾರ್ ಯಾದವ್ ಪ್ರತಿಕ್ರಿಯಿಸಿ, 2024ರ ಜನವರಿಯಿಂದ ಜಿಲ್ಲೆಯಲ್ಲಿ ಒಟ್ಟು 790 …
Read More »
BigTv News
November 27, 2025
Breaking News
ಮಧ್ಯಪ್ರದೇಶದ ರಾಯಸೇನ್ ಜಿಲ್ಲೆಯಲ್ಲಿ 6 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಸಲ್ಮಾನ್ನ ಎರಡು ವಿಡಿಯೋಗಳು ಬಹಿರಂಗಗೊಂಡಿವೆ. ಎರಡೂ ದೃಶ್ಯಗಳಲ್ಲಿ, ಘಟನೆಯ ನಂತರ ಆರೋಪಿಯು ಯಾವುದೇ ಭಯವಿಲ್ಲದೆ ಆ ಪ್ರದೇಶದಲ್ಲಿ ಸುತ್ತಾಡುತ್ತಿರುವಂತೆ ಕಾಣುತ್ತದೆ.ನವೆಂಬರ್ 21 ರಂದು ರಾತ್ರಿ 9.30 ರ ಸುಮಾರಿಗೆ ರೆಕಾರ್ಡ್ ಮಾಡಲಾದ ಮೊದಲ ವೀಡಿಯೊದಲ್ಲಿ ಸಲ್ಮಾನ್ ಅಂಗಡಿಯಿಂದ ಸಿಗರೇಟ್ ಖರೀದಿಸುತ್ತಿರುವುದನ್ನು ತೋರಿಸಲಾಗಿದೆ. ಅದೇ ಸಂಜೆ 7.30 ಕ್ಕೆ ಹೆಣ್ಣು ಮಗು ಕಾಣೆಯಾಗಿತ್ತು ಮತ್ತು ರಾತ್ರಿ …
Read More »
BigTv News
November 27, 2025
Breaking News
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹೊನ್ನೇನಹಳ್ಳಿಯಲ್ಲಿ ನಡೆದಿದೆ.ಲೋಕೇಶ್ ಹಾಗೂ ಕಿರಣ್ ಮೃತ ದುರ್ದೈವಿಗಳು. ವೇಗವಾಗಿ ಬಂದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.ಅಪಘಾತದ ರಭಸಕ್ಕೆ ಬೈಕ್ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೇಲೂರು ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »
BigTv News
November 27, 2025
Breaking News
ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಜಲಾಶಯವು ನಾಡಿಗೆ ಬೆಳಕು ನೀಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಹೀಗೆ ಪ್ರಮುಖ ವಿದ್ಯುತ್ ಉತ್ಪಾದನೆ ಕೇಂದ್ರವಾಗಿರುವಂತ ಲಿಂಗನಮಕ್ಕಿಯ ಪವರ್ ಚಾನಲ್ ಗೆ ಹೆಚ್ಚುವರಿಯಾಗಿ ಕಟ್ಟಿದ್ದಂತ ಕಾಂಕ್ರೀಟ್ ತಡೆಗೋಡೆ ಕುಸಿತಗೊಂಡು ಆಂತಕಕ್ಕೆ ಕಾರಣವಾಗಿದೆ.ಬಹು ಕೋಟಿ ವೆಚ್ಛದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ತಡೆಗೋಡೆ ಕುಸಿತಕ್ಕೆ ಕಳಪೆ ಕಾಮಗಾರಿ ಕಾರಣ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಕೆ. ವಿಜಯಕುಮಾರ್ ಬೆಂಗಳೂರಿನ ಲೋಕಾಯುಕ್ತರ ಕಾರ್ಯಾಲಯದಲ್ಲಿ ದೂರು ದಾಖಲಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ …
Read More »
BigTv News
November 27, 2025
Breaking News
ನಗರದಲ್ಲಿ 7.11 ಕೋಟಿಯ ಹಣವನ್ನು ದರೋಡೆ ಮಾಡಲಾಗಿತ್ತು. ಈಗಾಗಲೇ ಬಹುತೇಕ ಆರೋಪಿಗಳನ್ನು ಬಂಧಿಸಲಾಗಿದೆ. ಹೀಗೆ ಬಂದಿತ ಇಬ್ಬರು ಆರೋಪಿಗಳು ಮಾತ್ರ ತಮ್ಮ ಗರ್ಭಿಣಿ ಪತ್ನಿಯರ ಆರೋಗ್ಯ ವಿಚಾರಿಸಲು ಹೋಗಿ ಪೊಲೀಸರಿಗೆ ಲಾಕ್ ಆಗಿದ್ದಾರೆ.ಬೆಂಗಳೂರಲ್ಲಿ ನಡೆದಿದ್ದಂತ 7.11 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾಗಿದ್ದಂತ ರವಿ ಹಾಗೂ ರಾಕೇಶ್ ಪತ್ನಿಯರು ಗರ್ಭಿಣಿಯರಾಗಿದ್ದರು.ಪತ್ನಿಯರಿಗೆ ಪೋನ್ ಮಾಡಿದ ವಿಷಯ ತಿಳಿದಂತ ಪೊಲೀಸರು, ಆ ನಂಬರ್ ಟ್ರೇಸ್ ಮಾಡಿ, ಹೈದರಾಬಾದ್ ಗೆ ತೆರಳಿ, ಕೊನೆಗೂ ರೈಲ್ವೆ …
Read More »
BigTv News
November 27, 2025
Breaking News
ಮನೆಯೊಳಗೆ ದಂಪತಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಛತ್ತೀಸ್‌ಗಢದ ಬಿಲಾಸ್ಪುರದಲ್ಲಿ ನಡೆದಿದೆ. ಆರಂಭದಲ್ಲಿ ಕೌಟುಂಬಿಕ ಕಲಹದಂತೆ ಕಂಡರೂ ಬಳಿಕ ಗೋಡೆಯ ಮೇಲೆ ಲಿಪ್ಸ್ಟಿಕ್ನಲ್ಲಿ ಬರೆದ ಡೆತ್ ನೋಟ್ ತನಿಖೆಯ ದಿಕ್ಕನ್ನೇ ಬದಲಿಸಿದೆ. ಮೂವತ್ತು ವರ್ಷದ ಶಿವಾನಿ ತಾಂಬೆ ಅಲಿಯಾಸ್ ನೇಹಾ ಹಾಸಿಗೆಯ ಮೇಲೆ ಶವವಾಗಿ ಪತ್ತೆಯಾಗಿದ್ದರೆ, ಆಕೆಯ ಪತಿ ರಾಜ್ ತಾಂಬೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
Read More »
BigTv News
November 27, 2025
Breaking News
ಸ್ನೇಹಿತೆಯ ಮನೆಗೆ ಕರೆದೊಯ್ದು ಪ್ರೇಯಸಿಯನ್ನು ಕೊಲೆಗೈದ ಪರಾರಿಯಾಗಿದ್ದ ಯುವಕನನ್ನು ಮಾದನಾಯಕನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೇವಿಶ್ರಿ ಹಾಗೂ ಪ್ರೇಮ್ ವರ್ಧನ್ ಆಂಧ್ರಪ್ರದೇಶ ಮೂಲ ದವರಾಗಿದ್ದು, ದ್ವಿತೀಯ ಪಿಯುಸಿ ವರೆಗೂ ಒಂದೇ ಶಾಲಾ- ಕಾಲೇಜಿನಲ್ಲಿ ಓದಿದವರು. ಹೀಗಾಗಿ ಇಬ್ಬರು ಸ್ನೇಹಿತರಾಗಿ ಪ್ರೀತಿಸುತ್ತಿದ್ದರು. ದೇವಿಶ್ರೀ ಬಿಬಿಎಂ ಮಾಡಲು ಬೆಂಗಳೂರಿಗೆ ಬಂದಿದ್ದು, ಈ ವೇಳೆ ಆಗಾಗ್ಗೆ ಪ್ರೇಮ್ ವರ್ಧನ್ ಬೆಂಗಳೂರಿಗೆ ಬಂದು ಆಕೆಯನ್ನು ಭೇಟಿಯಾಗುತ್ತಿದ್ದ. ಈ ನಡುವೆ ದೇವಿಶ್ರೀ ಬೇರೊಬ್ಬ ಯುವಕನ ಜತೆ ಸ್ನೇಹ …
Read More »
BigTv News
November 27, 2025
Breaking News
ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದ ಯುವಕನನ್ನು ಹತ್ಯೆಗೈದಿರುವ ಘಟನೆ ಯಶವಂತಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮುತ್ಯಾಲನಗರ ನಿವಾಸಿ ನರಸಿಂಹರಾಜು (35) ಕೊಲೆಯಾದವ.ನರಸಿಂಹ ರಾಜುನನ್ನು ಮನೆಯಿಂದ ಹೊರಗಡೆ ಎಳೆದುಕೊಂಡು ಬಂದು ಸಾರ್ವ ಜನಿಕವಾಗಿ ರಸ್ತೆಯಲ್ಲೇ ಐದಾರು ಮಂದಿ ಮನಸೋ ಇಚ್ಚೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಅಸ್ವಸ್ಥನಾಗಿದ್ದ ನರಸಿಂಹರಾಜುನನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಾಗ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ. ಈ ಸಂಬಂಧ ಮೃತನ ತಾಯಿ, ಪುತ್ರನ ಸಾವಿಗೆ ಆತನ ಸ್ನೇಹಿತೆ ಮತ್ತು ಆಕೆಯ …
Read More »