ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಹಾಕಿದ್ದ ಬೆಳ್ತಂಗಡಿ ಮೂಲದ ಯುವತಿಯನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಮಧ್ಯಾಂತರ ಜಾಮೀನು ನೀಡಿದೆ. ಯುವತಿ 2025ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಮಾಡುವಂತಹ ಪೋಸ್ಟ್ ಗಳನ್ನು ಹಂಚಿಕೊಂಡು ಪ್ರಚಾರ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ’ಟೆರರಿಸಂ ಹೇಸ್ ರಿಲೀಜಿಯನ್ ಆಯಂಡ್ ಸೋ ಕಾಲ್ಡ್ ಟೆರರಿಸ್ಟ್ಸ್ ಟೂ. ಇಟ್ಸ್ ಇಸ್ಲಾಂ’ ಹಾಗೂ ಇದೇ ರೀತಿಯ ಪೋಸ್ಟ್ ಗಳನ್ನು ಆಕೆ ಹಂಚಿಕೊಂಡಿರುವ ಬಗ್ಗೆ ತನಿಖೆ ವೇಳೆ ತಿಳಿದು ಬಂದಿದೆ. ಮಾ.19ರಂದು ಆಕೆಯನ್ನು ದಸ್ತಗಿರಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮೊಬೈಲ್ ಮತ್ತು ಪೋಸ್ಟ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

