Breaking News

Breaking News

ದೃಶ್ಯ ಸಿನಿಮಾ ಶೈಲಿಯಲ್ಲಿ ಟೆಕ್ಕಿಯೋರ್ವನನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ದೃಶ್ಯ ಸಿನಿಮಾ ಶೈಲಿಯಲ್ಲಿ ಟೆಕ್ಕಿಯೋರ್ವನನ್ನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಆತನನ್ನು ಕೊಂದು ಆರೋಪಿಗಳು ಮೃತದೇಹವನ್ನು ಮನೆಯಲ್ಲಿ ನೆಲದ ಅಡಿ ಹೂತು ಹಾಕಿದ್ದರು. ಅನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದೆ.ಕೊಲೆಯಾದ ಟೆಕ್ಕಿಯನ್ನು ಆಂಧ್ರಪ್ರದೇಶ ಕುಪ್ಪಂ ಮೂಲದ ಶ್ರೀನಾಥ್ (30) ಎಂದು ಗುರುತಿಸಲಾಗಿದೆ. ಶ್ರೀನಾಥ್ ಅತ್ತಿಬೆಲೆಯ ನೆರಳೂರಿನಲ್ಲಿ ತನ್ನ ಪತ್ನಿ ಹಾಗೂ ಮಗು ಜೊತೆ ವಾಸವಿದ್ದರು. ಹಣ …

Read More »

ಕೊಣನೂರು: ಮಹಿಳೆ ಶವ ಪತ್ತೆ; ಮಗು ನಾಪತ್ತೆ.

ಸಾಲಿಗ್ರಾಮ ತಾಲ್ಲೂಕಿನ ಮಹಾದೇವಿ (29) ಎಂಬುವವರ ಶವ ಸೋಮವಾರ ಕಾವೇರಿ ನದಿಯಲ್ಲಿ ಸಿಕ್ಕಿದೆ. ಈಕೆಯನ್ನು ದೊಡ್ಡಮಗ್ಗೆ ಹೋಬಳಿಯ ಸೀಬಳ್ಳಿಯ ಕುಮಾರ್ ಎಸ್.ಬಿ. ಎಂಬುವವರಿಗೆ 3 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮಹಾದೇವಿಗೆ ತನ್ನ ಗಂಡ ಕೆಟ್ಟದ್ದಾಗಿ ಮೇಸೇಜ್ ಮಾಡಿದ್ದು, ಕೊಣನೂರು ಠಾಣೆಗೆ ದೂರು ನೀಡುವುದಾಗಿ ಹೇಳಿ ನ.14 ರಂದು ಮಗುವಿನೊಂದಿಗೆ ಬಂದಿದ್ದಳು. ಆದರೆ, ನಾಪತ್ತೆಯಾಗಿದ್ದಾಳೆ ಎಂದು ಸಾಲಿಗ್ರಾಮ ಠಾಣೆಯಲ್ಲಿ ದೂರು ದಾಖಲಾಗಿದೆ.ರಾಮನಾಥಪುರ ಹೋಬಳಿಯ ಬೆಟ್ಟಸೋಗೆ ಬಳಿ ಕಾವೇದಿ ನದಿಯಲ್ಲಿ ಸಾಲಿಗ್ರಾಮದ …

Read More »

ಸೌದಿ ಅರೇಬಿಯಾ ಬಸ್ ದುರಂತ 45 ಜನರ ಸಾವು: ಓರ್ವ ಕನ್ನಡಿಗನೂ ಬಲಿ, ಜೀವನಾಧಾರವನ್ನೇ ಕಳೆದುಕೊಂಡ ಕುಟುಂಬ.

ಸೌದಿ ಅರೇಬಿಯಾದಲ್ಲಿ ಬಸ್ ದುರಂತ ಪ್ರಕರಣದಲ್ಲಿ ಒಟ್ಟು 45 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಅನೇಕರು ಹೈದರಾಬಾದ್ ನವರಾಗಿದ್ದಾರೆ ಮತ್ತು ಓರ್ವ ಕರ್ನಾಟಕದ ಹುಬ್ಬಳ್ಳಿಯವರು ಎಂದು ತಿಳಿದುಬಂದಿದೆ. ಅಬ್ದುಲ್ ಘನಿ ಶಿರಹಟ್ಟಿ (55) ಎಂದು ಗುರುತಿಸಲಾಗಿದೆ.ಸೌದಿ ಅರೇಬಿಯಾದ ಮೆಕ್ಕಾ ಮದೀನಾ ರಸ್ತೆಯಲ್ಲಿ ನಡೆದ ಬಸ್ ಮತ್ತು ಟ್ಯಾಂಕರ್ ನಡುವಿನ ಡಿಕ್ಕಿಯ ರಭಸಕ್ಕೆ ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿತ್ತು. ಈ ದುರ್ಘಟನೆಯಲ್ಲಿ ಬಸ್ ನಲ್ಲಿದ್ದ 45 ಜನ ಭಾರತೀಯರು ಸಜೀವವಾಗಿ ದಹನವಾಗಿದ್ದರು.

Read More »

ಅಪರಿಚಿತ ವ್ಯಕ್ತಿಯಿಂದ ಬೆಂಗಳೂರಿನ ಮೆಟ್ರೋ ನಿಲ್ದಾಣ ಸ್ಪೋಟಿಸುವುದಾಗಿ ಬಾಂಬ್ ಬೆದರಿಕೆ `ಇ-ಮೇಲ್’ : `FIR’ ದಾಖಲು.

ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣ ಸ್ಪೋಟಿಸುವುದಾಗಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ವಿಲ್ಸನ್ ಗಾರ್ಡ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.ಬೆಂಗಳೂರಿನ `BMRCL’ ಗೆ ಅಪರಿಚಿತ ವ್ಯಕ್ತಿಯೊಬ್ಬ ಇ-ಮೇಲ್ ಸಂದೇಶ ರವಾನಿಸಿದ್ದು, ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣೆಗೆ ಬಿಎಂಆರ್ ಸಿಎಲ್ ದೂರು ನೀಡಿದೆ.ಬಿಎಂಆರರ್ ಸಿಎಲ್ ಅಧಿಕಾರಿ ದೂರು ನೀಡಿದ್ದಾರೆ. ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡಿದ್ದಾರೆ.

Read More »

ಭ್ರಷ್ಟಾಚಾರದ ವಿರುದ್ದ ಬೀದಿಗಿಳಿದ ಹುಡುಗರು – ಮೆಕ್ಸಿಕೋದಲ್ಲೂ ಜೆನ್ ಝೀ ಪ್ರೊಟೆಸ್ಟ್!

ನೇಪಾಳದಲ್ಲಿ ಹಿಂಸಾತ್ಮಕ ಜೆನ್‌ ಝೀ ಪ್ರತಿಭಟನೆಯ ಬಳಿಕ ಇದೀಗ ಮೆಕ್ಸಿಕೋದಲ್ಲೂ ಯುವ ಜನರ ಗುಂಪು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಪರಾಧ ಮತ್ತು ಭ್ರಷ್ಟಾಚಾರವನ್ನು ವಿರೋಧಿಸಿದಿ ಸಾವಿರಾರು ಜೆನ್‌ ಝೀ ಪ್ರತಿಭಟನಾಕಾರರು ಮೆಕ್ಸಿಕೋ ನಗರದ ಬೀದಿಗಿಳಿದಿದ್ದಾರೆ.ಇನ್ನು ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದ್ದಾರೆ. ನೂರಾರು ಯುವಕರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದಾಗ ಪೊಲೀಸರು ತಮ್ಮ ಗುರಾಣಿಗಳನ್ನು ಬಳಸಿ ಪ್ರತಿಭಟನಾಕಾರರ ಮೇಲೆ ಪ್ರತಿಕ್ರಿಯೆ ನೀಡಿದ್ದಾರೆ.

Read More »

ತುಮಕೂರಿನಲ್ಲಿ ಗೋಧಿ ಲಾರಿ ಪಲ್ಟಿ; ರೋಡಿಗೆ ಬಿದ್ದ ಗೋಧಿ ಬಾಚಲು ಮುಗಿಬಿದ್ದ ಜನ!

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಹುಳಿಯಾರು ರಸ್ತೆಯ ಹುಯಿಲ್ ದೊರೆ ಸೇತುವೆ ಬಳಿ ಗೋಧಿ ತುಂಬಿದ ಲಾರಿ ಪಲ್ಟಿಯಾಗಿದೆ. ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಗೋಧಿ ರಸ್ತೆ ತುಂಬ ಚೆಲ್ಲಿದೆ.ಅಪಘಾತದ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಚೀಲಗಳೊಂದಿಗೆ ಬಂದು ಲಾರಿಯಿಂದ ಬಿದ್ದ ಗೋಧಿಯನ್ನು ಬಾಚಿಕೊಂಡಿದ್ದಾರೆ. ಕೆಲವರಂತೂ ಗೋಧಿಯನ್ನು ಬಾಚಿ ಚೀಲದಲ್ಲಿ ತುಂಬಿಕೊಂಡು ಹೋಗಿದ್ದಾರೆ. ಈ ಘಟನೆ ಶಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ

Read More »

ಪತಿ, ಅತ್ತೆಯ ಕಿರುಕುಳಕ್ಕೆ ಮನನೊಂದ ಗೃಹಿಣಿ ; ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ.

ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಸಾಲಿಗ್ರಾಮ ತಾಲೂಕಿನ ಕರ್ಪೂರವಳ್ಳಿ ಗ್ರಾಮದ ಮಹಾದೇವಿ ಎರಡನೇ ಮದುವೆ ಸಂದರ್ಭ ಕುಟುಂಬಸ್ಥರು ವರದಕ್ಷಿಣೆ ರೂಪದಲ್ಲಿ 100 ಗ್ರಾಂ ಚಿನ್ನ ನೀಡಿದ್ದರು. ಆದರೆ ಇತ್ತೀಚಿಗೆ ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ಕುಮಾರ್, ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದ.ಪತಿ ಹಾಗೂ ಅತ್ತೆಯಿಂದ ಕಿರುಕುಳಕ್ಕೆ ಮನನೊಂದು ಗೃಹಿಣಿಯೊಬ್ಬರು ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ರಾಮನಾಥಪುರ ಬಳಿ ನಡೆದಿದೆ.ಮಹಾದೇವಿ (29) …

Read More »

ಬೆಳಗಾವಿ ಮೃಗಾಲಯದಲ್ಲಿ ಮತ್ತೊಂದು ಕೃಷ್ಣಮೃಗ ಮೃತ್ಯು; ಸಾವಿನ ಸಂಖ್ಯೆ 31ಕ್ಕೆ ಏರಿಕೆ

ಕೃಷ್ಣಮೃಗಗಳಿಗೆ ಸಾವಿಗೆ ಗಳಲೆ ರೋಗ ಕಾರಣ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಬ್ಬಂದಿ ಮೃಗಾಲಯದ ಒಳಗಡೆ ಔಷಧಿ ಸಿಂಪಡಣೆ ಮಾಡಿದ್ದಾರೆ. ಗಳಲೆ ರೋಗ ಇತರೆ ಸಾಕು ಪ್ರಾಣಿಗಳಿಗಳಿಗೆ ಹರಡುವ ಭೀತಿ ಇರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.ಮೃಗಾಲಯದಲ್ಲಿ ಸರಣಿ ಸಾವು ಸಂಭವಿಸಿದ ಬೆನ್ನಲ್ಲೇ ವೈದ್ಯರು ಉಳಿದಿರುವ 7 ಕೃಷ್ಣಮೃಗಗಳಿಗೆ ಆಂಟಿ ಬಯೋಟೆಕ್ ಚಿಕಿತ್ಸೆ ನೀಡುತ್ತಿದ್ದಾರೆ.

Read More »

ದೆಹಲಿ ಕೆಂಪು ಕೋಟೆ ಬಳಿ ಸ್ಫೋಟ: 25 ಸ್ಥಳಗಳಲ್ಲಿ ಇಡಿ ದಾಳಿ.

ಕೆಂಪು ಕೋಟೆ ಸ್ಫೋಟದ ತನಿಖೆಗೆ ಸಂಬಂಧಿಸಿದಂತೆ ಹರ್ಯಾಣದಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯ ಮತ್ತು ಅದರ ಜೊತೆ ಸಂಬಂಧ ಹೊಂದಿರುವ ವ್ಯಕ್ತಿಗಳಿಗೆ ಸಂಬಂಧಪಟ್ಟಂತೆ ದೆಹಲಿ ಮತ್ತು ಫರಿದಾಬಾದ್‌ನ 25 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ(ಇಡಿ) ದಾಳಿ ನಡೆಸಿದೆ.ವೈಟ್ ಕಾಲರ್’ ಫರಿದಾಬಾದ್ ಭಯೋತ್ಪಾದಕ ಘಟಕದಲ್ಲಿ ಆರೋಪಿಗಳಾಗಿದ್ದ ಇತರರು ಕೆಲಸ ಮಾಡಿದ ವಿಶ್ವವಿದ್ಯಾಲಯ ಮತ್ತು ಸಂಸ್ಥೆಯ ಮಾಲೀಕರನ್ನು ಒಳಗೊಂಡಂತೆ ಹಣಕಾಸಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಇಡಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಅಡಿ ಪ್ರಕರಣವನ್ನು ದಾಖಲಿಸಿ ತನಿಖೆ …

Read More »

ಮೊಬೈಲ್‌ ನೋಡುತ್ತಿದ್ದ ಕುಳಿತಿದ್ದನಿಗೆ ಚಾಕುವಿನಿಂದ ಇರಿತ!!

ಮೊಬೈಲ್ ನೋಡುತ್ತಾ ಕುಳಿತಿದ್ದ ಶಹಬಾಜ್ ಬಳಿ ಬಂದ ನವೀನ್ ಏಕಾಏಕಿ ಚಾಕುವಿನಿಂದ ಎದೆಯ ಬಲ ಭಾಗಕ್ಕೆ ಇರಿದಿದ್ದಾನೆ. ರಕ್ತಸ್ರಾವಕ್ಕೊಳಗಾದ ಯುವಕನನ್ನು ಸ್ಥಳೀಯರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಯುವಕನ ಮೇಲೆ ನಡೆದಿರುವ ಚಾಕು ಇರಿತದ ವಿಡಿಯೊ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಸ್ಥಳಕ್ಕೆ ದೊಡ್ಡಬಳ್ಳಾಪುರ ಉಪವಿಭಾಗ ಡಿವೈಎಸ್‍ಪಿ ಪಾಡುರಂಗ, ಆರಕ್ಷಕ ನಿರೀಕ್ಷಕ ಪ್ರಶಾಂತ್ ಎಸ್ ನಾಯಕ್, ಪಿಎಸ್‍ಐ ಸಾಧಿಕ್ ಪಾಷಾ, ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿ ನವೀನ್ ವಿರುದ್ಧ …

Read More »