ಸಾಲಿಗ್ರಾಮ ತಾಲ್ಲೂಕಿನ ಮಹಾದೇವಿ (29) ಎಂಬುವವರ ಶವ ಸೋಮವಾರ ಕಾವೇರಿ ನದಿಯಲ್ಲಿ ಸಿಕ್ಕಿದೆ. ಈಕೆಯನ್ನು ದೊಡ್ಡಮಗ್ಗೆ ಹೋಬಳಿಯ ಸೀಬಳ್ಳಿಯ ಕುಮಾರ್ ಎಸ್.ಬಿ. ಎಂಬುವವರಿಗೆ 3 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮಹಾದೇವಿಗೆ ತನ್ನ ಗಂಡ ಕೆಟ್ಟದ್ದಾಗಿ ಮೇಸೇಜ್ ಮಾಡಿದ್ದು, ಕೊಣನೂರು ಠಾಣೆಗೆ ದೂರು ನೀಡುವುದಾಗಿ ಹೇಳಿ ನ.14 ರಂದು ಮಗುವಿನೊಂದಿಗೆ ಬಂದಿದ್ದಳು. ಆದರೆ, ನಾಪತ್ತೆಯಾಗಿದ್ದಾಳೆ ಎಂದು ಸಾಲಿಗ್ರಾಮ ಠಾಣೆಯಲ್ಲಿ ದೂರು ದಾಖಲಾಗಿದೆ.ರಾಮನಾಥಪುರ ಹೋಬಳಿಯ ಬೆಟ್ಟಸೋಗೆ ಬಳಿ ಕಾವೇದಿ ನದಿಯಲ್ಲಿ ಸಾಲಿಗ್ರಾಮದ ಮಹಿಳೆ ಶವ ದೊರಕಿದ್ದು, ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಪೊಲೀಸರ ಜೊತೆಗೆ ಸಂಬಂಧಿಕರು ಸೋಮವಾರ ವಾಗ್ವಾದ ನಡೆಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

