Breaking News

Breaking News

ಧೂಮ್ ಸಿನಿಮಾ ಸ್ಟೈಲ್ ನಲ್ಲಿ ಮನೆ ಕಳ್ಳತನ, ಬೆಳಗಾವಿಯಲ್ಲಿ ಐಷಾರಾಮಿ ಕಳ್ಳ ಅಂದರ್!

ಸಿನಿಮಾ ಸ್ಟೈಲ್ ನಲ್ಲಿ ಮನೆ ಕಳ್ಳತನ (Thief) ಮಾಡುತ್ತಾ ಐಷಾರಾಮಿ ಜೀವನ ನಡೆಸಲು ಪ್ಲಾನ್ ಮಾಡಿದ್ದ ಕಳ್ಳನನ್ನು ಬೆಳಗಾವಿ (Belagavi) ಯಮಕನಮರಡಿ ಪೋಲೀಸರು (Police) ಬಂಧಿಸಿದ್ದಾರೆ. ಈತ ಧೂಮ್ ಸಿನಿಮಾ ಮಾದರಿಯಲ್ಲಿ ಹಲವಾರು ಮನೆಗಳ ಕಳ್ಳತನ ಮಾಡಿದ್ದು, ಈತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ & ಬೆಳ್ಳಿ ವಶಕ್ಕೆ ಪಡೆಯಲಾಗಿದೆ.ಹೌದು, ಬೆಳಗಾವಿ ನಿವಾಸಿ ಸುರೇಶ ಮಾರುತಿ ನಾಯಿಕ ಬಂಧಿತ ಆರೋಪಿ. ಸದ್ಯ ಈತನಿಂದ 1,280 ಗ್ರಾಂ ಚಿನ್ನಾಭರಣ, 8.5 ಕೆ.ಜಿ …

Read More »

ಶಾಹೀನ್‌ ಜತೆ ನಂಟು: ಕಾನ್ಪುರ ವೈದ್ಯಕೀಯ ವಿದ್ಯಾರ್ಥಿ ಪೊಲೀಸ್‌ ವಶಕ್ಕೆ

ದೆಹಲಿ ಕಾರ್‌ ಸ್ಫೋಟದ ತನಿಖೆಯ ಭಾಗವಾಗಿ ಕಾನ್ಪುರದ ವೈದ್ಯಕೀಯ ವಿದ್ಯಾರ್ಥಿಯೊಬ್ಬನನ್ನು ಉತ್ತರಪ್ರದೇಶದ ಭಯೋತ್ಪಾದಕ ನಿಗ್ರಹ ದಳ ವಶಕ್ಕೆ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸರ್ಕಾರಿ ವೈದ್ಯಕೀಯ ಕಾಲೇಜೊಂದರಲ್ಲಿ ಹೃದ್ರೋಗಕ್ಕೆ ಸಂಬಂಧಿಸಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಡಾ.ಮೊಹಮದ್‌ ಆರೀಫ್‌ನನ್ನು ಆತನ ಬಾಡಿಗೆ ಮನೆಯಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.ಆರೀಫ್‌ ಜಮ್ಮು ಕಾಶ್ಮೀರದ ಅನಂತನಾಗ್ ಮೂಲದವನು ಎಂದು ತಿಳಿದುಬಂದಿದೆ. ದೆಹಲಿ ಸ್ಫೋಟ ನಡೆದ ದಿನದಂದು, ಕೃತ್ಯದ ಪ್ರಮುಖ ಆರೋಪಿಯಾದ ಡಾ.ಶಾಹೀನ್ ಸಯೀದ್‌ ಮತ್ತಾಕೆಯ ಸಹಚರರೊಂದಿಗೆ …

Read More »

ಪುಲ್ವಾಮಾದ ಶಂಕಿತ ಆರೋಪಿ ಡಾ. ಉಮರ್ ನಬಿ ಮನೆ ಧ್ವಂಸ

ದೆಹಲಿಯ ಕೆಂಪು ಕೋಟೆ ಸಮೀಪದಲ್ಲಿ ಪ್ರಬಲ ಕಾರು ಸ್ಫೋಟದ ಶಂಕಿತ ಆರೋಪಿ ಡಾ. ಉಮರ್ ನಬಿ ಅವರ ಮನೆಯನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಧ್ವಂಸಗೊಳಿಸಿವೆ ಎಂದು ಅಧಿಕಾರಿಗಳು ಇಂದು (ಶುಕ್ರವಾರ) ತಿಳಿಸಿದ್ದಾರೆ. ಕೆಂಪುಕೋಟೆ ಬಳಿ ಪ್ರಬಲವಾಗಿ ಸ್ಫೋಟಗೊಂಡ ಕಾರನ್ನು ಚಲಾಯಿಸುತ್ತಿದ್ದು ಉಮರ್‌ ನಬಿ ಎನ್ನುವುದು ತನಿಖೆಯಲ್ಲಿ ದೃಢಪಟ್ಟಿದೆ.ಹುಂಡೈ ಐ20 ಕಾರಿನಲ್ಲಿ ದೊರೆತ ದೇಹದ ಭಾಗಗಳನ್ನು ಉಮರ್‌ ತಾಯಿಯ ಡಿಎನ್‌ಎ ಜತೆ ಪರೀಕ್ಷಿಸಿದ ಬಳಿಕ ಅದು …

Read More »

ಪತಿಯನ್ನು ಗೃಹಬಂಧನದಲ್ಲಿಟ್ಟ ಆರೋಪ: ಪೊಲೀಸರಿಂದ ವಿಚಾರಣೆ

ಆಸ್ತಿ ಸಲುವಾಗಿ ಪತಿಯನ್ನು ಗೃಹಬಂಧನದಲ್ಲಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡಿದ ಹಿನ್ನಲೆಯಲ್ಲಿ ಬೆಟಗೇರಿಯ ವೀರಾಂಜನೇಯ ದೇವಸ್ಥಾನ ಸಮೀಪದ ಕಲಬುರಗಿ ಓಣಿಯಲ್ಲಿರುವ ಮನೆಗೆ ಭೇಟಿ ನೀಡಿ, ಪರಿಶೀಲಿಸಿದ ಪೊಲೀಸರು ವ್ಯಕ್ತಿಯನ್ನು ಬಂಧ ಮುಕ್ತಗೊಳಿಸಿದ ಘಟನೆ ಗುರುವಾರ ನಡೆದಿದೆ. ಗಜಾನನಸಾ ಬಸವಾ (54) ಅವರನ್ನು ಪತ್ನಿ ಶೋಭಾ 15 ದಿನಗಳಿಂದ ತಗಡಿನ ಕೊಠಡಿಯಲ್ಲಿ ಕೂಡಿಹಾಕಿದ್ದರು ಎಂದು ಸ್ಥಳೀಯರು ದೂರಿದ್ದರು. ಈ ಹಿನ್ನಲೆಯಲ್ಲಿ ಬೆಟಗೇರಿ ಠಾಣೆಯ ಪಿಎಸ್‌ಐ ರಾಜೇಶ್‌ ಬಟಕುರ್ಕಿ ಮತ್ತು ಸಿಬ್ಬಂದಿ ಗಜಾನಾನಸಾ …

Read More »

ಸಾಲುಮರದ ತಿಮ್ಮಕ್ಕನವರ ನಿಧನ.

ಸಾಲುಮರದ ತಿಮ್ಮಕ್ಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಇವರು ಇಂದು (ನವೆಂಬರ್ 14, 2025) ನಿಧನರಾಗಿದ್ದಾರೆ. ಅವರಿಗೆ 114 ವರ್ಷ ವಯಸ್ಸಾಗಿತ್ತು. ಅವರು ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು. ತಿಮ್ಮಕ್ಕನವರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು ಪರಿಸರವಾದಿಯಾಗಿದ್ದರು ಮತ್ತು ರಾಮನಗರ ಜಿಲ್ಲೆಯ ಹುಲಿಕಲ್ ಮತ್ತು ಕುದೂರು ನಡುವಿನ ಹೆದ್ದಾರಿಯಲ್ಲಿ 385 ಆಲದ ಮರಗಳನ್ನು ನೆಟ್ಟು ಪೋಷಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ.ಅವರು ಸುಮಾರು 8000 ಇತರ …

Read More »

ಕುಡಿದ ಮತ್ತಿನಲ್ಲಿ ಹಾಸ್ಟೆಲ್ ನ ಅನ್ನದ ಪಾತ್ರೆಯಲ್ಲಿ ಕಾಲಿಟ್ಟು ಮಲಗಿದ ಕಾವಲುಗಾರ.!

ತೆಲಂಗಾಣದ ಸಂಗರೆಡ್ಡಿಯಲ್ಲಿರುವ ಹಾಸ್ಟೆಲ್ ನಲ್ಲಿ ನಿಯೋಜಿತರಾಗಿದ್ದ ಪಾನಮತ್ತ ಕಾವಲುಗಾರನೊಬ್ಬ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ ಅನ್ನದಲ್ಲಿ ಕಾಲು ಇಟ್ಟುಕೊಂಡು ಮಲಗಿರುವುದು ಕಂಡುಬಂದಿದೆ.ಇಸ್ಮಾಯಿಲ್ ಖಾನ್ಪೇಟೆ ಪ್ರದೇಶದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ.ಊಟಕ್ಕೆ ಮೆಸ್ ಗೆ ಬಂದ ವಿದ್ಯಾರ್ಥಿಗಳು, ಕಾವಲುಗಾರ ಅಕ್ಕಿ ಇರುವ ಪಾತ್ರೆಯೊಳಗೆ ಕಾಲು ಇಟ್ಟುಕೊಂಡು ಮಲಗಿರುವುದನ್ನು ನೋಡಿ ಆಘಾತಕ್ಕೊಳಗಾದರು. ಕಾಲೇಜು ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಕಾವಲುಗಾರನನ್ನು ಎಬ್ಬಿಸಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಘಟನೆಯ ನಂತರ, ಕಾವಲುಗಾರನನ್ನು ವಜಾಗೊಳಿಸಲಾಯಿತು.

Read More »

ಒಂದೇ ಹುಡುಗಿ ಮೇಲೆ ಇಬ್ಬರಿಗೆ ಲವ್​: ಹುಬ್ಬಳ್ಳಿಯಲ್ಲಿ ಹರಿದಿದ್ದು ನೆತ್ತರ ಕೋಡಿ

ಒಂದೇ ಯುವತಿಯನ್ನು ಇಬ್ಬರು ಪ್ರೀತಿಸಿದ ವಿಚಾರಕ್ಕೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಇಬ್ಬರು ಯುವಕರಿಗೆ ಚಾಕು ಇರಿದಿರುವ ಘಟನೆ ಹುಬ್ಬಳ್ಳಿ ನಗರದ ಗ್ಲೋಬಲ್ ಕಾಲೇಜು ಮುಂಭಾಗ ನಡೆದಿದೆ. ಗಾಯಾಳು ಯುವಕರನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಘಟನೆ ಸಂಬಂಧ ಪ್ರಮುಖ ಆರೋಪಿ ಸೇರಿ ಒಟ್ಟು 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.ಮಣಿಕಂಠ ಮತ್ತು ಪವನ್ ಎಂಬ ವಿದ್ಯಾರ್ಥಿಗಳು ಗ್ಲೋಬಲ್ ಕಾಲೇಜ್​ನಲ್ಲಿ ಬಿಬಿಎ ಮೊದಲ ವರ್ಷದಲ್ಲಿ ಓದುತ್ತಿದ್ದು, ಇಬ್ಬರೂ ಒಂದೇ ಹುಡುಗಿಯನ್ನ …

Read More »

ತುಮಕೂರಿನಲ್ಲಿ ಮತ್ತೆ ಹರಿದ ನೆತ್ತರು | ಇಬ್ಬರ ಮೇಲೆ ಡೆಡ್ಲಿ ಅಟ್ಯಾಕ್ : ಓರ್ವ ಸ್ಥಳದಲ್ಲೇ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ತುಮಕೂರು ನಗರದಲ್ಲಿ ಮತ್ತೆ ನೆತ್ತರಕೋಡಿ ಹರಿದಿದೆ. ಇಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆದಿದ್ದು, ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರ ಎನ್ನಲಾಗುತ್ತಿದೆ.ಅಭಿ (28) ಅಲಿಯಸ್ ಟಿಬೆಟ್ ದಾಳಿಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದ ಯುವಕ, ಮನೋಜ್ (32) ಅಲಿಯಸ್ ಪ್ಯಾಚ್ ಎಂಬ ರೌಡಿಶೀಟರ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.ನಿನ್ನೆ ಗುರುವಾರ ರಾತ್ರಿ 10.30ರ ಸುಮಾರಿನಲ್ಲಿ ತುಮಕೂರು ಔಟರ್ ರಿಂಗ್ ರಸ್ಥೆ‌, ಎಸ್ ಎಚ್ ಕೆ ಲಾಡ್ಜ್ ಹಿಂಬಾಗದಲ್ಲಿ ಇಬ್ಬರ ಮೇಲೆ …

Read More »

ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ 15ಕ್ಕೂ ಹೆಚ್ಚು ವಾಹನದ ಮೇಲೆ ಹರಿದ ಟ್ರಕ್, ಐದು ಸಾವು.

ಮುಂಬೈ ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಪುಣೆಯ ಹೊರವಲಯದ ಸೆಲ್ಫಿ ಪಾಯಿಂಟ್ ಬ್ರಿಡ್ಜ್ ಬಳಿ ಈ ದುರ್ಘಟನೆ ನಡೆದಿದೆ. ಕಂಟೈನರ್ ಟ್ರಕ್‌ನಿಂದ ಸರಣಿ ಅಪಘಾತ ಸಂಭವಿಸಿದೆ. ಟ್ರಕ್ ಡಿಕ್ಕಿಯಾದ ಪರಿಣಾಮ ಕಾರು ಅಪ್ಪಚ್ಚಿಯಾಗಿದೆ. ಇಷ್ಟೇ ಅಲ್ಲ ಬೆಂಕಿ ಹೊತ್ತಿಕೊಂಡು ಟ್ರಕ್, ಕಾರು ಹೊತ್ತಿ ಉರಿದಿದೆ.ಐವರು ಮೃತಪಟ್ಟಿದ್ದರೆ, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಗಿದೆ. ಇತ್ತ ಅಗ್ನಿಶಾಮಕ ದಳ, ಪೊಲೀಸರು ಸ್ಥಳದಲ್ಲಿ ಪರಿಸ್ಥತಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

Read More »

ಗೆಳತಿಯ ಪೋಷಕರನ್ನು ಮೆಚ್ಚಿಸಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ.

ಗ್ಯಾಸ್ಟ್ರಿಕ್ ಬೈಪಾಸ್ ಶಸ್ತ್ರಚಿಕಿತ್ಸೆಗಾಗಿ ಲಿ ಜಿಯಾಂಗ್ ಸೆಪ್ಟೆಂಬರ್ 30ರಂದು ಝೆಂಗ್‌ಝೌನಲ್ಲಿರುವ ಪೀಪಲ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆಯನ್ನು ಅಕ್ಟೋಬರ್ 2 ರಂದು ನಡೆಸಲಾಯಿತು, ಜತೆಗೆ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಮರುದಿನ ಜನರಲ್​​​ ವಾರ್ಡ್‌ಗೆ ಸ್ಥಳಾಂತರಿಸುವ ಮುನ್ನ ಅವರನ್ನು ತೀವ್ರ ನಿಗಾ ಘಟಕ (ICU)ಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿಂದ ಸ್ವಲ್ಪ ಚೇತರಿಸಿಕೊಂಡ ಅವರನ್ನು ಸಾಮಾನ್ಯ ಸಾಮಾನ್ಯ ವಾರ್ಡ್‌ಗೆ ಕರೆದುಕೊಂಡು ಹೋಗಲಾಯಿತು. ಆದರೆ​ ಅಕ್ಟೋಬರ್ 4ರಂದು ಅವರ ಸ್ಥಿತಿ ಇನ್ನು ಗಂಭೀರವಾಗಿತ್ತು. ಬೆಳಿಗ್ಗೆ 6.40ರ …

Read More »