ಸಿನಿಮಾ ಸ್ಟೈಲ್ ನಲ್ಲಿ ಮನೆ ಕಳ್ಳತನ (Thief) ಮಾಡುತ್ತಾ ಐಷಾರಾಮಿ ಜೀವನ ನಡೆಸಲು ಪ್ಲಾನ್ ಮಾಡಿದ್ದ ಕಳ್ಳನನ್ನು ಬೆಳಗಾವಿ (Belagavi) ಯಮಕನಮರಡಿ ಪೋಲೀಸರು (Police) ಬಂಧಿಸಿದ್ದಾರೆ. ಈತ ಧೂಮ್ ಸಿನಿಮಾ ಮಾದರಿಯಲ್ಲಿ ಹಲವಾರು ಮನೆಗಳ ಕಳ್ಳತನ ಮಾಡಿದ್ದು, ಈತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ & ಬೆಳ್ಳಿ ವಶಕ್ಕೆ ಪಡೆಯಲಾಗಿದೆ.ಹೌದು, ಬೆಳಗಾವಿ ನಿವಾಸಿ ಸುರೇಶ ಮಾರುತಿ ನಾಯಿಕ ಬಂಧಿತ ಆರೋಪಿ. ಸದ್ಯ ಈತನಿಂದ 1,280 ಗ್ರಾಂ ಚಿನ್ನಾಭರಣ, 8.5 ಕೆ.ಜಿ ಬೆಳ್ಳಿ, ₹1.25 ಲಕ್ಷ ನಗದು ಮತ್ತು ಒಂದು ಥಾರ್ ವಾಹನ ಹಾಗೂ ಎರಡು ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ . ಬೆಳಗಾವಿಯ ಯಮಕನಮರಡಿಯಲ್ಲಿ ಕಳೆದ ತಿಂಗಳು ವಿಶ್ವನಾಥ ದುಗ್ಗಾಣಿ ಎಂಬುವವರ ಮನೆಯಲ್ಲಿ 1,280 ಚಿನ್ನಾಭರಣ, 8.5 ಕೆ.ಜಿ ಬೆಳ್ಳಿ ಆಭರಣ, ₹1.25 ಲಕ್ಷ ನಗದು ಕಳ್ಳತನ ಆಗಿತ್ತು. ಈ ಕೇಸ್ ತನಿಖೆ ನಡೆಸಲಾಗಿದ್ದು, ಆರೋಪಿ ಪತ್ತೆಹಚ್ಚಿ ವಿಚಾರಣೆಗೆ ಒಳಪಡಿಸಿದಾಗ ಕೇವಲ ವಿಶ್ವನಾಥ ದುಗ್ಗಾಣಿ ಮನೆ ಮಾತ್ರವಲ್ಲ, ಇದೇ ರೀತಿ ನಾಲ್ಕು ಮನೆಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಈತನ ಮೇಲೆ ಒಟ್ಟು 21 ಪ್ರಕರಣಗಳಿವೆ. ‘ಧೂಮ್’ ಸಿನಿಮಾ ಮಾದರಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಮತ್ತು ಕದ್ದ ಹಣದಲ್ಲೇ ದುಬಾರಿ ಬೆಲೆಯ ಕಾರು, ಎರಡು ಬೈಕ್‌ಗಳನ್ನು ಖರೀದಿಸಿದ್ದ ಎನ್ನಲಾಗಿದೆ. ಐಷಾರಾಮಿ ಜೀವನದ ಆಸೆಗಾಗಿ ಈತ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

