BigTv News
November 14, 2025
Breaking News
ಕೇರಳ ಹೈಕೋರ್ಟ್ ನೇಮಿಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನದಲ್ಲಿ ಚಿನ್ನ ಕಳವು ಪ್ರಕರಣ ಸಂಬಂಧಿಸಿ ಆರೋಪಿಗಳ ಸ್ಥಾನದಲ್ಲಿರುವ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಮತ್ತು ಹಾಲಿ ಅಧಿಕಾರಿಗಳು, ಉನ್ನತ ರಾಜಕೀಯ ನೇಮಕಾತಿದಾರರು ಸಹಿತ ಭ್ರಷ್ಟಾಚಾರ ತಡೆ ಕಾಯ್ದೆಯ ವ್ಯಾಪ್ತಿಗೆ ತರುವ ಕುರಿತು ಪರಿಶೀಲಿಸುತ್ತಿದೆ .ದೇವಾಲಯದ ಕಲ್ಲಿನ ಕೆತ್ತನೆ ಮತ್ತು ಶಿಲ್ಪಗಳನ್ನು ನವೀಕರಣಕ್ಕಾಗಿ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಗೆ ಹಸ್ತಾಂತರಿಸುವ ಮೊದಲು ಚಿನ್ನ ಲೇಪಿತ …
Read More »
BigTv News
November 14, 2025
Breaking News
ಮೇಕೆದಾಟು ಯೋಜನೇ ಸಂಬಂಧ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಗೆಲುವು ಸಿಕ್ಕಿದೆ. ತಮಿಳುನಾಡು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇದೀಗ ವಜಾಗೊಳಿಸಿದೆ.ಮೇಕೆದಾಟು ಯೋಜನೆ ಇನ್ನು ಆರಂಭಿಕ ಹಂತದಲ್ಲಿ ಇದೆ. ಯಾವುದೇ ನಿರ್ಮಾಣ ಕಾರ್ಯ ಪ್ರಾರಂಭವಾಗಿಲ್ಲ. ಈ ಯೋಜನೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕೇಂದ್ರ ಜಲ ಆಯೋಗದಂತಹ ತಜ್ಞ ಸಂಸ್ಥೆಗಳ ಪರಿಶೀಲನೆಯಲ್ಲಿದೆ. ಹೀಗಾಗಿ ಮಧ್ಯಪ್ರವೇಶ ಮಾಡಲ್ಲ ಎಂದು ಸುಪ್ರೀಂಕೋರ್ಟ್ ತಮಿಳುನಾಡು ಸಲ್ಲಿಸಿದ್ದ ಪರಿಟ್ ಅರ್ಜಿ ವಜಾ ಗೊಳಿಸಿ ಆದೇಶ …
Read More »
BigTv News
November 14, 2025
Breaking News
ಸಿನಿಮಾದಲ್ಲಿ ಅವಕಾಶ ಕಲ್ಪಿಸುವುದಾಗಿ ತಿಳಿಸಿ ಬಾಲಕಿಯ ನಗ್ನ ಭಾವಚಿತ್ರಗಳನ್ನು ಕೇಳಿದ ಕಾಸರಗೋಡು ಕಾಟಿಪಳ್ಳದ ಶಿಬಿನ್ (29) ಎಂಬಾತನನ್ನು ಕಲ್ಲಿಕೋಟೆ ಬೇಪೂರು ಪೊಲೀಸರು ಬಂಧಿಸಿದ್ದಾರೆ. ಬೇಪೂರು ನಿವಾಸಿಯಾದ 10ನೇ ತರಗತಿ ವಿದ್ಯಾರ್ಥಿನಿಗೆ ತಾನು ಸಿನಿಮಾ ನಿರ್ದೇಶಕನೆಂದೂ, ಸಿನಿಮಾದಲ್ಲಿ ಅಭಿನಯಿಸಲು ಅವಕಾಶವೊದಗಿಸುವುದಾಗಿಯೂ ಅದಕ್ಕಾಗಿ ಆಕೆಯ ನಗ್ನ ಚಿತ್ರಗಳನ್ನು ನೀಡುವಂತೆ ತಿಳಿಸಿ ಬಾಲಕಿಗೆ ಫೋನ್ ಕರೆ ಮಾಡಿದ್ದಲ್ಲದೆ ವಾಟ್ಸ್‌ಆಯಪ್ ಮೂಲಕ ಸಂದೇಶ ಕಳುಹಿಸಿದ್ದನೆಂದು ಪೊಲೀಸರಿಗೆ ದೂರು ನೀಡಲಾಗಿತ್ತು.ಪೊಲೀಸರು ಸೈಬರ್ ವಿಭಾಗದ ನೆರವಿನೊಂದಿಗೆ ಶಿಬಿನ್‌ನನ್ನು ಬಂಧಿಸಿದ್ದಾರೆ.
Read More »
BigTv News
November 14, 2025
Breaking News
ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪುಲ್ವಮಾದಲ್ಲಿ ಪ್ರಮುಖ ಶಂಕಿತ ಡಾ. ಉಮರ್ ಉನ್ ನಬಿ ನಿವಾಸವನ್ನು ಭದ್ರತಾ ಪಡೆಗಳು ನೆಲಸಮಗೊಳಿಸಿದ್ದಾರೆ.ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟದಲ್ಲಿ 13 ಜನರು ಮೃತಪಟ್ಟಿದ್ದರು. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.ಈ ಕುರಿತ ತನಿಖೆಯ ಭಾಗವಾಗಿ ಸುಧಾರಿತ ಸ್ಫೋಟಕ ಸಾಧನವನ್ನು ಬಳಸಿ ಡಾ. ಉಮರ್ ಮನೆಯನ್ನು ಧ್ವಂಸ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟಕ್ಕೆ ಬಳಸಿದ ಹುಂಡೈ i20 ಕಾರು …
Read More »
BigTv News
November 14, 2025
Breaking News
ಮನೆಯಲ್ಲಿ ಒಂಟಿಯಾಗಿದ್ದ ಅಂಗವಿಕಲ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನನ್ನು ಸ್ಥಳೀಯರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ಆಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಲಕ್ಷ್ಮಣರಾವ್ ನಗರ ನಿವಾಸಿ ವಿಘ್ನೇಶ್ ಅಲಿಯಾಸ್ ದಾಡು (26) ಬಂಧಿತ ಆರೋಪಿ.ಈತ ನ.10ರಂದು ಲಕ್ಷ್ಮಣ್‌ರಾವ್ ನಗರ ನಿವಾಸಿ 20 ವರ್ಷದ ಅಂಗವಿಕಲ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಪೋಷಕರ ಜತೆ ವಾಸವಾಗಿರುವ ಸಂತ್ರಸ್ತೆಗೆ ಮಾತು ಬರುವುದಿಲ್ಲ. ಜತೆಗೆ ಕಾಲು ಸ್ವಾಧೀನವಿಲ್ಲ. ಯುವತಿ …
Read More »
BigTv News
November 14, 2025
Breaking News
ಯಡ್ರಾಮಿ: ಮಗನ ಸಾವಿಗೆ ಸೊಸೆ ಕಾರಣವೆಂದು ತಿಳಿದು ಮಗನ ತಾಯಿ ಲಕ್ಷ್ಮೀಬಾಯಿ ಹದಿನಾಲ್ಕು ತಿಂಗಳ ಬಳಿಕ ತಾಲ್ಲೂಕಿನ ಕಣಮೇಶ್ವರ ಗ್ರಾಮದಲ್ಲಿ ಹೂತಿದ್ದ ಹೆಣವನ್ನು ಹೊರ ತೆಗೆಸಿ ಶವ ಪರೀಕ್ಷೆ ಮಾಡಿಸಿದ ಘಟನೆ ಬುಧವಾರ ಮುಂಜಾನೆ ನಡೆಯಿತು.36 ವರ್ಷದ ಪಂಡಿತ್ ದೊಡಮನಿ ಹದಿನಾಲ್ಕು ತಿಂಗಳ ಹಿಂದೆ ಮೃತಪಟ್ಟ ದುರ್ದೈವಿ. ಇವರು ಯಡ್ರಾಮಿ ತಾಲ್ಲೂಕಿನ ಕಣಮೇಶ್ವರ ಗ್ರಾಮದಲ್ಲಿ ವಾಸವಾಗಿದ್ದರು.ಮೃತ ಪಂಡಿತ್ ಅವರ ತಾಯಿ ಮಗನ ಸಾವಿನ ವಿಚಾರದಲ್ಲಿ ಸೊಸೆ ರೂಪಾ ಮೇಲೆ ಅನುಮಾನ …
Read More »
BigTv News
November 14, 2025
Breaking News
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗ್ರಾಮದಲ್ಲಿ ಹದಿಹರೆಯದ ವಯಸ್ಸಿನಲ್ಲಿ ತಿಳಿಯದೆಯೇ ಯುವಕ-ಯುವತಿಯೊಬ್ಬಳು ಪರಸ್ಪರ ಪ್ರೀತಿಸಿ ಮನೆ ಬಿಟ್ಟು ಬಂದು ಮದುವೆಯಾಗಿದ್ದರು. ಆದರೆ ಮನೆಗೆ ಬಂದ ಜೋಡಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ.ಹೌದು… ಅದಕ್ಕೆ ಕಾರಣ ಸಂಬಂಧ. ಈ ಜೋಡಿ ವರಸೆಯಲ್ಲಿ ಅಣ್ಣಾ-ತಂಗಿ ಆಗಬೇಕು ಎಂದು ಪೋಷಕರು ಹೇಳಿದ್ದೂ ಈ ಮದುವೆಗೆ ಸುತಾರಾಂ ಒಪ್ಪಿವುದಿಲ್ಲ ಎಂದು ಪೋಷಕರು ಹಠ ಹಿಡಿದಿದ್ದರು. ಗೋಪಲ್ಲಿ ಗ್ರಾಮದ 23 ವರ್ಷದ ನಿತಿನ್ ಹಾಗೂ …
Read More »
BigTv News
November 14, 2025
Breaking News
ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಜೊಂದರ ಕ್ಯಾಂಟಿನ್‌ನಲ್ಲಿ ಕೆಲಸಗಾರ ಚೇತನ್‌ನನ್ನು ಐದು ವರ್ಷಗಳ ಹಿಂದೆ ಹತ್ಯೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದ ಚಿದಾನಂದ ಪರಶುನಾಯ್ಕರ್ ಎಂಬವನಿಗೆ ನಗರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಸಜೆ ವಿಧಿಸಿದೆ.ಮೃತ ಚೇತನ್ ಮತ್ತು ಆರೋಪಿ ಚಿದಾನಂದ ಒಟ್ಟಿಗೆ ಕಾಲೇಜಿನ ಕ್ಯಾಂಟಿನ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಕೆಲಸದ ವಿಚಾರದಲ್ಲಿ ಇವರ ನಡುವೆ ತಕರಾರು ಉಂಟಾಗಿದ್ದು, 2020 ಅ.30ರಂದು ರಾತ್ರಿ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಸಿಬ್ಬಂದಿಯ ವಿಶ್ರಾಂತಿ ಕೊಠಡಿಗೆ …
Read More »
BigTv News
November 14, 2025
Breaking News
ಚೀಟಿ ವ್ಯವಹಾರದಲ್ಲಿ ನಷ್ಟಕ್ಕೆ ಒಳಗಾದ ಟ್ರಾವೆಲ್ಸ್ ಕಂಪನಿ ಮಾಲೀಕ, ಕೋದಂಡರಾಮಪುರದ ನಿವಾಸಿ ವೆಂಕಟೇಶ್(51) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕಂಪನಿ ಕಚೇರಿಯಲ್ಲಿ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡು ಸ್ಥಳೀಯರು ಬುಧವಾರ ಪೊಲೀಸರಿಗೆ ಮಾಹಿತಿ ನೀಡಿದ್ದರು.ಸ್ಥಳಕ್ಕೆ ಬಂದಿದ್ದ ಪೊಲೀಸರು, ಕಚೇರಿಯ ಬಾಗಿಲು ತೆರೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ವೆಂಕಟೇಶ್ ಅವರು ಬಿಜೆಪಿ ಕಾರ್ಯಕರ್ತರಾಗಿದ್ದರು. ವಿನಾಯಕ ವೃತ್ತದಲ್ಲಿ ಟ್ರಾವೆಲ್ಸ್ ಕಂಪನಿ ಸಹ ನಡೆಸುತ್ತಿದ್ದರು. ‘ಆರು ಮಂದಿ ಸ್ನೇಹಿತರೊಂದಿಗೆ ವೆಂಕಟೇಶ್ ಅವರು ಚೀಟಿ ವ್ಯವಹಾರ ನಡೆಸುತ್ತಿದ್ದರು. ಕೆಲವರು …
Read More »
BigTv News
November 14, 2025
Breaking News
ಗಿರ್ ಸೋಮನಾಥ ಜಿಲ್ಲೆಯ ಪ್ರಭಾಸ ಪಾಟಣದಲ್ಲಿ ಆಡಳಿತವು ಪ್ರಾರಂಭಿಸಿದ ಅತಿಕ್ರಮಣ ತೆರವು ಕಾರ್ಯಾಚರಣೆಯ ಸಮಯದಲ್ಲಿ ಉದ್ವಿಗ್ನತೆ ಉಂಟಾಯಿತು. ಸರಕಾರಿ ಜಮೀನಿನಲ್ಲಿದ್ದ ಅನಧಿಕೃತ ದರ್ಗಾ ಒಂದನ್ನು ತೆರವುಗೊಳಿಸುವ ಕೆಲಸ ನಡೆಯುತ್ತಿದ್ದಾಗ, ಅಲ್ಲಿ ಜಮಾಯಿಸಿದ್ದ ಮುಸ್ಲಿಮರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.ನಂತರ, ಸುಮಾರು ೧೦೦ ಜನರ ಗುಂಪು ಘೋಷಣೆಗಳನ್ನು ಕೂಗುತ್ತಾ ನೇರವಾಗಿ ಪೊಲೀಸರ ಮೇಲೆ ಕಲ್ಲು ತೂರಾಟವನ್ನು ಪ್ರಾರಂಭಿಸಿತು. ಇದರಲ್ಲಿ ೨ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ೧. ನವೆಂಬರ್ ೧೦ ರಂದು ಆಡಳಿತವು ಸೋಮನಾಥ …
Read More »