Breaking News

Breaking News

ಸಾರ್ವಜನಿಕರೇ ಎಚ್ಚರ : ‘SSLC’ ಓದಿ ವೈದ್ಯ ವೃತ್ತಿ ಮಾಡುತ್ತಿದ್ದ ವ್ಯಕ್ತಿಯ ಕ್ಲಿನಿಕ್ ಸೀಜ್.!

ಬಳ್ಳಾರಿ: ಯಾವುದೇ ವೈದ್ಯಕೀಯ ಪದವಿ ಪಡೆಯದೇ ಜನತೆಗೆ ತಾನು ವೈದ್ಯನೆಂದು ಸುಳ್ಳು ಹೇಳಿ ವೈದ್ಯ ವೃತ್ತಿ ಮಾಡುತ್ತಿದ್ದ ಸಂಡೂರಿನ ತೋರಣಗಲ್ಲು ಗ್ರಾಮದ ಅಭಿಲಾಷ್ ಕ್ಲಿನಿಕ್ ನ ಬಿ.ಎನ್.ವೀರೇಶ್ ಎಂಬುವನ ಕ್ಲಿನಿಕ್ ನ್ನು ಸೀಜ್ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಹೇಳಿದ್ದಾರೆ.ಬಿ.ಎನ್.ವೀರೇಶ್ ಯಾವುದೇ ವೈದ್ಯಕೀಯ ಪದವಿ ಪಡೆಯದೇ ಕೇವಲ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿ ಔಷಧಿಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸಾರ್ವಜನಿಕರಿಗೆ ತಾವು …

Read More »

ದೆಹಲಿ ಸ್ಫೋಟ| ಸರ್ಕಾರಿ ನೌಕರರು ಸೇರಿ 10ಮಂದಿ ವಶಕ್ಕೆ ಪಡೆದ ಜಮ್ಮುಕಾಶ್ಮೀರ ಪೊಲೀಸರು

‘ವೈಟ್ ಕಾಲರ್’ ಭಯೋತ್ಪಾದಕ ಜಾಲದ ತನಿಖೆಯ ಭಾಗವಾಗಿ ಜಮ್ಮುಕಾಶ್ಮೀರ ಪೊಲೀಸರು ಮೂವರು ಸರ್ಕಾರಿ ನೌಕರರು ಸೇರಿ ಒಟ್ಟು 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಅನಂತ್‌ನಾಗ್, ಪುಲ್ವಾಮಾ ಮತ್ತು ಕುಲ್ಲಾಂ ಜಿಲ್ಲೆಗಳಲ್ಲಿ ಶಂಕಿತ ವ್ಯಕ್ತಿಗಳ ಮನೆಗಳ ಮೇಲೆ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿಯ ಕೆಂಪು ಕೋಟೆ ಬಳಿ ಸೋಮವಾರ ಸಂಭವಿಸಿದ ಕಾರು ಸ್ಫೋಟದ ನಂತರ ವೈಟ್ ಕಾಲರ್ ಭಯೋತ್ಪಾದಕ ಜಾಲ ಸಕ್ರಿಯವಾಗಿರುವುದು …

Read More »

NIA ತನಿಖೆಯಲ್ಲಿ ಮಹತ್ವದ ಬೆಳವಣಿಗೆ; ಉಗ್ರರ ಡೈರಿ ಪತ್ತೆ, ಸ್ಫೋಟಕ ಮಾಹಿತಿ ಬಹಿರಂಗ..!

ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪು ಕೋಟೆ ಬಳಿಕ ಕಾರು ಸ್ಫೋಟ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯೊಂದು ಕಂಡು ಬಂದಿದೆ. ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಉಗ್ರರ ಡೈರಿಯನ್ನು ಪತ್ತೆ ಮಾಡಿದ್ದು, ಡೈರಿಯಲ್ಲಿ ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿವೆ.ಉಗ್ರ ಮುಜಾಮಿಲ್ ಹಾಗೂ ಆತ್ಮಾಹುತಿ ಉಗ್ರ ಉಮರ್’ಗೆ ಸೇರಿದ್ದ ಡೈರಿ ಇದಾಗಿದ್ದು, ಡೈರಿಯಲ್ಲಿ ಉಗ್ರರ ಷಡ್ಯಂತ್ರ ಹಾಗೂ ಹಲವು ಕೋಡ್ ವರ್ಡ್ ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಡೈರಿಯಲ್ಲಿ ಹಲವು ಬಾರಿ …

Read More »

ಕುಡಿಯುವ ನೀರಿನ ಸಮಸ್ಯೆ: ಎಲ್ ಆ್ಯಂಡ್ ಟಿ ಅಧಿಕಾರಿಗಳ ಚಳಿ ಬಿಡಿಸಿದ ಪಾಲಿಕೆ ಸದಸ್ಯರು…

ಹುಬ್ಬಳ್ಳಿ: 24×7 ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ಕಾಮಗಾರಿ ಗುತ್ತಿಗೆ ಪಡೆದ ಎಲ್ ಆ್ಯಂಡ್ ಟಿ ಸಂಸ್ಥೆಯು ಒಂದಿಲ್ಲೊಂದು ನ್ಯೂನತೆಗಳಿಂದ ಸುದ್ಧಿಯಾಗುತ್ತಲೇ ಇದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಈ ನಿಟ್ಟಿನಲ್ಲಿ ಪಾಲಿಕೆಯ ಸಭೆಯಲ್ಲಿ ಚುನಾಯಿತ ಸದಸ್ಯರು ಎಲ್ ಆ್ಯಂಡ್ ಟಿ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಹಾನಗರ ಪಾಲಿಕೆ ಸಭಾಭವನದಲ್ಲಿ ನಡೆದ ಅವಳಿ ನಗರದ ನೀರಿನ ಸಮಸ್ಯೆ ಬಗ್ಗೆ ಕೆಯುಐಡಿಎಫ್‌ಸಿ …

Read More »

ದೆಹಲಿಯಲ್ಲಿ ಮತ್ತೊಂದು ಸ್ಫೋಟದ ಶಬ್ಧ..!!

ಕೆಂಪು ಕೋಟೆ ಸ್ಫೋಟದ ಆಘಾತದಿಂದ ಇನ್ನೂ ದೆಹಲಿಯಲ್ಲಿ ಭೀತಿ ಕಡಿಮೆಯಾಗುವಷ್ಟರಲ್ಲಿ ಇದೀಗ ಮತ್ತೊಂದು ಸ್ಪೋಟದ ಶಬ್ಧ ಕೇಳಿಬಂದಿದೆ. ಇಂದು ಬೆಳ್ಳಂಬೆಳಗ್ಗೆ ಮತ್ತೊಂದು ಸ್ಫೋಟದ ಶಬ್ದ ಇಡೀ ರಾಜಧಾನಿಯನ್ನು ನಡುಗಿಸಿದೆ. ಗುರುವಾರ ಬೆಳಿಗ್ಗೆ 9:18 ಸುಮಾರಿಗೆ ಮಹಿಪಾಲ್ಪುರದ ರಾಡಿಸನ್ ಹೋಟೆಲ್ ಬಳಿ ಭಯಂಕರ ಸ್ಫೋಟದ ಶಬ್ದ ಕೇಳಿಸಿದೆ.ಅಗ್ನಿಶಾಮಕ ದಳಕ್ಕೆ ತಕ್ಷಣ ಕರೆ ಬಂದಿದ್ದು, ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿವೆ. ಈ ಘಟನೆ ಕೇವಲ ಮೂರು ದಿನಗಳ ಹಿಂದೆ ನಡೆದ …

Read More »

ರಜೆ ಇದ್ದ ಕಾರಣಕ್ಕೆ ಕೆಂಪುಕೋಟೆಯಲ್ಲಿ ತಪ್ಪಿತ್ತು ಘೋರ ಅನಾಹುತ

ಸೋಮವಾರ ಕೆಂಪುಕೋಟೆ ಸಿಗ್ನಲ್‌ ಬಳಿ ಸಂಭವಿಸಿದ ಸ್ಫೋಟ, ವಾಸ್ತವವಾಗಿ ಕೆಂಪುಕೋಟೆಯ ವಾಹನ ಪಾರ್ಕಿಂಗ್‌ ಜಾಗದಲ್ಲಿ ನಡೆಯಬೇಕಿತ್ತು. ಆದರೆ ಸೋಮವಾರ ಕೆಂಪುಕೋಟೆಗೆ ರಜೆ ಇದ್ದ ಕಾರಣ, ಪಾರ್ಕಿಂಗ್ ಜಾಗ ಖಾಲಿ ಇತ್ತು.ಹೀಗಾಗಿ ಅಲ್ಲಿ ಮೂರು ಗಂಟೆ ಕಾದ ಉಗ್ರ ಉಮರ್‌ ನಬಿ, ಅವಕಾಶ ಕೈತಪ್ಪಿದ್ದಕ್ಕೆ ಬೇಸತ್ತು ಅಲ್ಲಿಂದ ಹೊರಟಿದ್ದ. ಅದೇ ಆಕ್ರೋಶದಲ್ಲಿ ಆತ ಕೆಂಪುಕೋಟೆ ಸಮೀಪದ ರಸ್ತೆ ಸಿಗ್ನಲ್‌ ಬಳಿ ಸ್ಫೋಟ ನಡೆಸಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ನಡುವೆ …

Read More »

ಕೆಂಪು ಕೋಟೆ ಬಳಿಕ ಇಂದು ಮತ್ತೊಂದು ಕಡೆ ಸ್ಪೋಟ…!

ರಾಷ್ಟ್ರ ರಾಜಧಾನಿ ದೆಹಲಿಯು ಗುರುವಾರ ಮತ್ತೊಂದು ಸ್ಪೋಟಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಮಹಿಪಾಲ್ಪುರ ಪ್ರದೇಶದ ರಾಡಿಸನ್ ಹೋಟೆಲ್ ಬಳಿ ಸ್ಫೋಟದ ಶಬ್ದ ಕೇಳಿಸಿದೆ. ಇಂದು ಬೆಳಗ್ಗೆ ಬೆಳಿಗ್ಗೆ 9:18 ಕ್ಕೆ ಸ್ಪೋಟ ಸಂಭವಿಸಿದ್ದು, ಇದು ಬಾಂಬ್ ಸ್ಪೋಟವೇ ಆಗಿರಬಹುದೆಂದು ಶಂಕಿಸಲಾಗಿದೆ.ಸ್ಥಳಕ್ಕೆ ಪೊಲೀಸ್ ತಂಡಗಳು ತೆರಳಿದ್ದು, ತನಿಖೆ ಎಲ್ಲಿಂದ ಆಯಿತು, ಹೇಗಾಯಿತು ಎಂಬ ತುರ್ತು ತನಿಖೆ ಆರಂಭಿಸಿದ್ದಾರೆ. ಇಂದು ಬೆಳಗ್ಗೆ ಸ್ಪೋಟ ಸಂಭವಿಸುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಮೂರು ಅಗ್ನಿಶಾಮಕ …

Read More »

ದೂರುದಾರನಿಂದ ಲಂಚಕ್ಕೆ ಬೇಡಿಕೆ: ಅಥಣಿ ಸಿಪಿಐ ಸಂತೋಷ್ ಹಳ್ಳೂರ ವಿರುದ್ಧ ಎಫ್‌ಐಆರ್ ದಾಖಲು!

ಬೆಳಗಾವಿ: ದೂರುದಾರನಿಂದ ಒಂದು ಒಕ್ಷ ರೂಪಾಯಿ ಲಂಚಕ್ಕೆ‌ ಬೇಡಿಕೆ ಇಟ್ಟ ಸಿಪಿಐ ವಿರುದ್ದ ಎಫ್‌ಐಆರ್ ದಾಖಲಾಗಿದೆ. ಎಸ್, ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಭ್ರಷ್ಟಾಚಾರ ಪ್ರಕರಣ ಬಯಲಾಗಿದ್ದು, ಅಥಣಿ ಪೊಲೀಸ್ ಠಾಣೆಯ ಸಿಪಿಐ ಸಂತೋಷ್ ಹಳ್ಳೂರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.ಮೀರಸಾಬ್ ಮುಜಾವರ್ ಎಂಬುವವರು ನೀಡಿದ ದೂರು ಆಧಾರದಲ್ಲಿ ಪ್ರಕರಣ ದಾಖಲಾಗಿದ್ದು, ಅವರು ಅನುಪಕುಮಾರ್ ನಾಯರ್ ಎಂಬುವವರಿಗೆ ಎರಡು ಸೈಟ್ ಕೊಡಿಸುವ ನೆಪದಲ್ಲಿ 20 ಲಕ್ಷ ರೂಪಾಯಿ ನೀಡಿದ್ದರು. ಆದರೆ …

Read More »

ವಿಚಾರಣೆಗೆ ಬಂದ ASI, PSI ರನ್ನೇ ಕಂಬಕ್ಕೆ ಕಟ್ಟಿ ಥಳಿಸಿದ ದಂಪತಿ!

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮಟ್ಟೂರು ತಾಂಡಾದಲ್ಲಿ ವಿಚಿತ್ರ ಘಟನೆ ನಡೆದಿದೆ. ಕೌಟುಂಬಿಕ ಕಲಹದ ವಿಚಾರಣೆಗೆ ತೆರಳಿದ್ದ ASI ಹಾಗೂ PSI ಮೇಲೆಯೇ ದಂಪತಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ವಿಚಾರಣೆಗೆಂದು ತೆರಳಿದ್ದ ASI ವೆಂಕಟಪ್ಪ ನಾಯಕ್ ಮತ್ತು PSI ವೆಂಕಟೇಶ್ ಮೇಲೆ ದಂಪತಿ ಹಿಂಸಾತ್ಮಕವಾಗಿ ವರ್ತಿಸಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.ಮುದಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಈ ಘಟನೆ ನಡೆದಿದೆ. ಆರೋಪಿಗಳಾದ ರಾಮಪ್ಪ ಕೃಷ್ಣ (35) ಮತ್ತು ಪತ್ನಿ …

Read More »

ಸ್ಕ್ಯಾನಿಂಗ್‌ಗೆ ಬಂದ ಹೆಣ್ಣು ಮಕ್ಕಳ ಖಾಸಗಿ ಅಂಗ ಮುಟ್ಟಿ ಲೈಂಗಿಕ ಕಿರುಕುಳ: ರೆಡಿಯಾಲಜಿಸ್ಟ್ ವಿರುದ್ಧ FIR ದಾಖಲು

ಶಾಕಿಂಗ್ ಘಟನೆ ಎನ್ನುವಂತೆ ಸ್ಕ್ಯಾನಿಂಗ್ ಗೆ ತೆರಳಿದಂತ ಹೆಣ್ಣು ಮಕ್ಕಳ ಖಾಸಗಿ ಅಂಗ ಮುಟ್ಟಿ, ಲೈಂಗಿಕ ಕಿರುಕುಳವನ್ನು ರೆಡಿಯಾಲಜಿಸ್ಟ್ ಒಬ್ಬರು ನೀಡಿದಂತ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ಸಮೀಪದ ಆನೇಕಲ್ ನಲ್ಲಿ ಹೀಗೆ ಲೈಂಗಿಕ ಕಿರುಕುಳ ನೀಡಿದಂತ ಕಾಮುಕ ರೆಡಿಯಾಲಜಿಸ್ಟ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಬೆಂಗಳೂರು ಸಮೀಪದ ಆನೇಕಲ್ ಪಟ್ಟಣದಲ್ಲಿ ಸ್ಕ್ಯಾನಿಂಗ್ ಸೆಂಟರ್ ವೊಂದರಲ್ಲಿ ರೆಡಿಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದಂತ ಜಯಕುಮಾರ್ ಎಂಬುವರೇ ಹೀಗೆ ಲೈಂಗಿಕ ಕಿರುಕುಳ ನೀಡಿದಂತ …

Read More »