BigTv News
October 30, 2025
Breaking News
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ತಮ್ಮ ಇಲೆಕ್ಟ್ರಿಕ್ ರಿಕ್ಷಾವನ್ನು ನಿಲ್ಲಿಸಿ ಚಾಲಕರೊಬ್ಬರು ಕಾಣೆಯಾಗಿರುವ ಘಟನೆ ವರದಿಯಾಗಿದೆ. ಘಟನೆ ನಡೆದ ಸ್ಥಳದ ಪರಿಸ್ಥಿತಿಯನ್ನು ಅವಲೋಕಿಸಿದ ಸ್ಥಳೀಯರು, ಅವರು ನೇತ್ರಾವತಿ ನದಿಗೆ ಹಾರಿರುವ ಸಾಧ್ಯತೆಯ ಬಗ್ಗೆ ತೀವ್ರ ಶಂಕೆ ವ್ಯಕ್ತಪಡಿಸಿದ್ದಾರೆ.ಘಟನೆಯ ಕುರಿತು ಮಾಹಿತಿ ಪಡೆದ ತಕ್ಷಣ, ಬಂಟ್ವಾಳ ನಗರ ಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಶಂಕೆಯ ಹಿನ್ನೆಲೆಯಲ್ಲಿ, …
Read More »
BigTv News
October 30, 2025
Breaking News
ಚಿಕ್ಕಮಗಳೂರು ಮಾಗಡಿ ಬಳಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕೆರೆಗೆ ಬಿದ್ದಿತ್ತು.ಅದರಲ್ಲಿದ್ದ ಜುವೆಲರಿ ಅಂಗಡಿಯ ಮಾಲಕ ಈಜಿ ದಡ ಸೇರಿದ್ದರು. ಕಾರನ್ನು ಕ್ರೇನ್ ತರಿಸಿ ಮೇಲಕ್ಕೆತ್ತಲಾಯಿತು. ಆದರೆ ಕಾರಿನಲ್ಲಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಚೀಲ ನೀರಿಗೆ ಬಿದ್ದಿತ್ತು. ಕೂಡಲೇ ಈಶ್ವರ್ ಮಲ್ಪೆಗೆ ಕರೆ ತಿಳಿಸಲಾಯಿತು. ಕೂಡಲೇ ಅಲ್ಲಿಗೆ ತೆರಳಿದ ಈಶ್ವರ್ ಮಲ್ಪೆ ತಂಡ ಕೇವಲ 15 ನಿಮಿಷದಲ್ಲಿ ಚಿನ್ನದ ಚೀಲವನ್ನು ನೀರಿನಿಂದ ಮೇಲಕ್ಕೆತ್ತಿದರು.ಚಿನ್ನಾಭರಣವಿದ್ದ ಚೀಲ ಕೆಸರಿನಲ್ಲಿ …
Read More »
BigTv News
October 30, 2025
Breaking News
ಪತಿ-ಪತ್ನಿ ಮಧ್ಯೆ ನಿತ್ಯ ಜಗಳವಾಗುತ್ತಿದ್ದು, ಇದರಿಂದ ಕೋಪಗೊಂಡಿದ್ದ ಪತಿ, ಪತ್ನಿಗೆ ಕಬ್ಬಿಣದ ಪೈಪಿನಿಂದ ಹೊಡೆದು ಕೊಲೆ ಮಾಡಿದ್ದಾನೆ.ರಕ್ತಸ್ರಾವದಿಂದ ಬಳಲುತ್ತಿದ್ದ ಮಂಜುಳಾ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಕಾಫಿತೋಟವೊಂದರ ಲೈನ್ ಮನೆಯಲ್ಲಿ ಮಂಜುಳಾ ವಾಸವಿದ್ದರು. ದಂಪತಿ ನಿತ್ಯ ಜಗಳ ಆಡುವುದನ್ನು ನೋಡಿದ್ದ ತೋಟದ ರೈಟರ್ ಕೆಲಸಕ್ಕೆ ಬರಬೇಡಿ ಎಂದಿದ್ದರು. ಇದರಿಂದಾಗಿ ನೊಂದಿದ್ದ ಪತಿ ಮಗುವಿನ ಎದುರೇ ತಾಯಿಯನ್ನು ಕೊಂದಿದ್ದಾನೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
October 30, 2025
Breaking News
ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿಕೊಂಡು ಬಸ್, ರೈಲು ಹಾಗೂ ಆಟೊದಲ್ಲಿ ಪರಾರಿ ಆಗುತ್ತಿದ್ದ ಇಬ್ಬರು ಆರೋಪಿಗಳನ್ನು ಬೇಗೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.ಬಂಧಿತರಿಂದ ₹72 ಲಕ್ಷ ಮೌಲ್ಯದ 614 ಗ್ರಾಂ ಚಿನ್ನ ಹಾಗೂ 470 ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.ವಿಶ್ವಪ್ರಿಯ ಲೇಔಟ್‌ನ ನಿವಾಸಿಯೊಬ್ಬರ ಮನೆಯಲ್ಲಿ ಕಳ್ಳತನ ನಡೆದಿತ್ತು. ಅವರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
Read More »
BigTv News
October 30, 2025
Breaking News
ಸಹಕಾರಿ ಸಂಘವೊಂದರಲ್ಲಿ ನಕಲಿ ಚಿನ್ನಾಭರಣ ಇರಿಸಿ ವಂಚಿಸಿದ ಪ್ರಕರಣದ ವಿರುದ್ಧ ದೂರು ದಾಖಲಾಗಿದೆ.ಸಂಸ್ಥೆಯ ಚಿನ್ನಪರೀಕ್ಷಕ ಚಿನ್ನವೆಂದು ದೃಢಪಡಿಸಿದ ಅನಂತರ 2 ಲಕ್ಷ ರೂ.ಸಾಲ ನೀಡಲಾಗಿತ್ತು. ಅನಂತರ ವಿನೋದ್ ಆ. 6ರಂದು ಬಂದು ನೆಕ್ಲೇಸ್ ಇರಿಸಿ 1.10 ಲಕ್ಷ ರೂ., ಆ. 26ರಂದು ಪುನಃ ಬಂದು ಸರ ಹಾಗೂ ಬ್ರೇಸ್‌ಲೆಟ್ ಇರಿಸಿ 1.10 ಲಕ್ಷ ರೂ. ಸಾಲ ಪಡೆದಿದ್ದ.5ರಂದು ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿ ಪುನಃ 2.10 ಲಕ್ಷ ರೂ. ಸಾಲ ಪಡೆದಿದ್ದ. …
Read More »
BigTv News
October 30, 2025
Breaking News
ಮನೆ ಮುಂದೆ ಶೋ ಗಿಡ ಎಂದು ಮರೆ ಮಾಚಿ ಬೆಳೆದಿದ್ದ ಗಾಂಜಾ ಗಿಡ ಸಹಿತ ಗಿಡ ಬೆಳೆದಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಅ.29ರ ಬುಧವಾರ ತಾಲೂಕಿನ ಶ್ರೀನಿವಾಸ ಅಗ್ರಹಾರದ ಬಳಿ ನಡೆದಿದೆ. ಮನೆ ಮುಂದೆ ಸುತ್ತಲೂ ಸೀರೆ ಕಟ್ಟಿ ಮಧ್ಯದಲ್ಲಿ 5 ಗಾಂಜಾ ಗಿಡವನ್ನು ಬೆಳೆದಿದ್ದು, ಸ್ಥಳಿಯರ ಮಾಹಿತಿ ಮೆರೆಗೆ ಡಿವೈಎಸ್ಪಿ ಶಾಂತ ಮಲ್ಲಪ್ಪ ಅವರ ಮಾರ್ಗದರ್ಶನದಲ್ಲಿ ಆತನ ಮನೆ ಮುಂದೆ ಪರಿಶೀಲಿಸಿದ ನಂತರ 5 ಗಾಂಜಾ …
Read More »
BigTv News
October 30, 2025
Breaking News
ಬೆಂಗಳೂರಿನಲ್ಲೊಂದು ಕ್ಷುಲ್ಲಕ ಕಾರಣಕ್ಕೆ ಭೀಕರ ಕೊಲೆ ನಡೆದಿದೆ. ಕಾರಿನ ಮಿರರ್ ಗೆ ಬೈಕ್ ಟಚ್ ಆಗಿದ ಕಾರಣಕ್ಕೆ ದಂಪತಿಗಳು ಬೈಕ್ ಸವಾರರ ಮೇಲೆ ಕಾರನ್ನು ಗುದ್ದಿಸಿ ಅಪಘಾತವೆಸಗಿ ಸಾಯಿಸಿದ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ದರ್ಶನ್ ಮತ್ತು ವರುಣ್ ಇಬ್ಬರೂ ಬೈಕ್‌ನಲ್ಲಿ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಕಾರಿನ ಮಿರರ್‌ಗೆ ಟಚ್ ಆಗಿದೆ. ಈ ವೇಳೆ ಮಿರರ್ ಒಡೆದಿದ್ದು, ಕಾರಿನಲ್ಲಿದ್ದ ಮನೋಜ್ ಕುಮಾರ್ ಮತ್ತು ಆರತಿ ಶರ್ಮ ದಂಪತಿ …
Read More »
BigTv News
October 29, 2025
Breaking News
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಡಿವೈಡರ್ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಮೆಲ್ಕಾರಿನಲ್ಲಿ ನಡೆದಿದೆ.ಮೃತರನ್ನು ಕಡಬ ತಾಲೂಕಿನ ಸವಣೂರು ನಿವಾಸಿ ಕಾರ್ತಿಕ್(23) ಎಂದು ಗುರುತಿಸಲಾಗಿದೆ.ಕಾರಿನಲ್ಲಿದ್ದ ಅವರ ಗೆಳೆಯರಾಗಿರುವ ಸವಣೂರು ನಿವಾಸಿಗಳಾದ ಹರ್ಷಿತ್, ದೀಕ್ಷಿತ್, ಜಗದೀಶ್ ಮತ್ತು ನಿತಿನ್ ಎಂಬವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ನೂತನವಾಗಿ ನಿರ್ಮಾಣಗೊಂಡ ಮೆಲ್ಕಾರ್ ಎಲಿವೆಟೆಡ್ ರಸ್ತೆಯಲ್ಲಿ ಕಾರು ಚಾಲಕನ ನಿಯಂತ್ರಣ ಕರೆದುಕೊಂಡು ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. …
Read More »
BigTv News
October 29, 2025
Breaking News
ಮಹಿಳೆಯೊಬ್ಬರ ವೈಯಕ್ತಿಕ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿ, ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಕಾಂಗ್ರೆಸ್ ಕಾರ್ಯಕರ್ತನನ್ನು ಚಿಕ್ಕಮಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.ಶ್ರೀನಿವಾಸನಗರದ ಆದಿತ್ಯ(40) ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ.ನಂತರ ವೈಯಕ್ತಿಕ ಫೋಟೋಗಳನ್ನು ಪಡೆದು ಅವುಗಳನ್ನು ಎಡಿಟ್ ಮಾಡಿ ಸ್ನೇಹಿತರಿಗೆ ತೋರಿಸುತ್ತಿದ್ದ. ಅಲ್ಲದೇ ಜೀವ ಬೆದರಿಕೆ ಹಾಕಿದ್ದ’ ಎಂದು ಪೊಲೀರಿಗೆ ಮಹಿಳೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿರುವ ನಗರ ಠಾಣೆ ಪೊಲೀಸರು, ಆರೋಪಿ ಆದಿತ್ಯನನ್ನು ಬಂಧಿಸಿದ್ದಾರೆ.ಆದಿತ್ಯ ಈ ಹಿಂದೆ ಯುವ ಕಾಂಗ್ರೆಸ್ …
Read More »
BigTv News
October 29, 2025
Breaking News
ಮಂಡ್ಯದ ಮದ್ದೂರಿನಲ್ಲಿ ಭಯಾನಕ ಅಪಘಾತ ಸಂಭವಿಸಿದ್ದು, ಗೂಡ್ಸ್ ಆಟೋ ಮತ್ತು ಕಾರ್ ನಡುವೆ ಡಿಕ್ಕಿಯಾಗಿ, ಕಾರು ಡಿಕ್ಕಿಯಾದ ರಭಸಕ್ಕೆ ಗೂಡ್ಸ್ ಆಟೋ ಹಾರಿದೆ.ಮಂಡ್ಯದ ಮದ್ದೂರಿನ ಚಾಮನಹಳ್ಳಿ ಬಳಿ ತಡರಾತ್ರಿ ಈ ಘಟನೆ ನಡೆದಿದ್ದು, ಗೂಡ್ಸ್ ಆಟೋ ಚಾಲಕ ರಾಜುಗೆ ಗಂಭೀರ ಗಾಯವಾಗಿದೆ.ಗಂಭೀರವಾಗಿ ಗಾಯಗೊಂಡ ಆಟೋ ಚಾಲಕನನ್ನು ಮದ್ದೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇನ್ನು ಈ ಅಪಘಾತ ನಡೆಯುವಾಗ ಅಲ್ಲೇ ಇದ್ದ ಬೈಕ್ ಚಾಲಕ …
Read More »