Breaking News

Breaking News

ಕಂಟೈನರ್ ಟ್ರಕ್ ಪಲ್ಟಿಯಾಗಿ ಇಬ್ಬರು ಸಾವು, ನಾಲ್ವರಿಗೆ ಗಾಯ!

ವೇಗವಾಗಿ ಬಂದ ಕಂಟೈನರ್ ಟ್ರಕ್ ರಸ್ತೆ ತಿರುವಿನಲ್ಲಿ ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಬೆಂಗಳೂರು ಹೊರವಲಯದ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭಾನುವಾರ ಬೆಳಗ್ಗೆ ಉರಗನದೊಡ್ಡಿ ಬಳಿ ರಸ್ತೆ ತಿರುವು ತೆಗೆದುಕೊಳ್ಳುತ್ತಿದ್ದಾಗ ಈ ದುರಂತ ಸಂಭವಿಸಿದೆ.ಮೃತರನ್ನು ಆಂಧ್ರಪ್ರದೇಶ ಮೂಲದ ಟ್ರಕ್ ಚಾಲಕ ಶ್ರೀನಿವಾಸ್ (26) ಮತ್ತು ಜಾರ್ಖಂಡ್‌ನಿಂದ ಬಂದಿದ್ದ ಕೇಬಲ್ ಡ್ರಿಲ್ಲಿಂಗ್ ಮೆಷಿನ್ ಆಪರೇಟರ್ ಶ್ರೀಮನ್ (25) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ನಾಲ್ವರು ಕಾರ್ಮಿಕರಿಗೆ …

Read More »

ಟಿಪ್ಪು ಸುಲ್ತಾನ್’ ಬೇಸಿಗೆ ಅರಮನೆ ಗೋಡೆ ಮೇಲೆ ಗ್ಯಾಂಗ್ ಸ್ಟರ್ ‘ಲಾರೆನ್ಸ್ ಬಿಷ್ಣೋಯ್’ ಹೆಸರು ಬರೆದು ವಿಕೃತಿ ಮೆರೆದ ಕಿಡಿಗೇಡಿಗಳು.!

ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಗೋಡೆ ಮೇಲೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರು ಬರೆದು ವಿಕೃತಿ ಮೆರೆದಿರುವ ಘಟನೆ ನಡೆದಿದೆ.ಕುಖ್ಯಾತ ಅಂತರಾಷ್ಟ್ರೀಯ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಅರೆಮನೆ ಗೋಡೆ ಮೇಲೆ ಬರೆದು ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.ಕಿಡಿಗೇಡಿಗಳ ವರ್ತನೆಗೆ ಪ್ರವಾಸಿಗರು ಅಸಮಾಧಾನ ಹೊರಹಾಕಿದ್ದಾರೆ.ಭಾರತೀಯ ಪುರಾತತ್ವ ಇಲಾಖೆ ಅಧೀನದಲ್ಲಿರುವ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಗೋಡೆ ಮೇಲೆ ಬರಹ ಕಂಡು ಬಂದಿದೆ. ಕಿಡಿಗೇಡಿಗಳನ್ನು ಬಂಧಿಸಿ ಸೂಕ್ರ ಕ್ರಮ ಕೈಗೊಳ್ಳುವಂತೆ ಸ್ಥಳೀಯರು …

Read More »

ಹೂವಿನಹಡಗಲಿ ಲಾಡ್ಜ್‌ನಲ್ಲಿ ಹುಬ್ಬಳ್ಳಿಯ ಗುತ್ತಿಗೆದಾರ ಆತ್ಮಹತ್ಯೆ

ಹುಬ್ಬಳ್ಳಿಯ ಉದ್ಯಮಿ ಹಾಗೂ ಸಿವಿಲ್ ಗುತ್ತಿಗೆದಾರ ಆನಂದ ಉಮೇಶ್ ಹೆಗಡೆ (40) ಅವರು ಪಟ್ಟಣದ ದಾಕ್ಷಾಯಣಿ ಲಾಡ್ಜ್‌ನಲ್ಲಿ ಭಾನುವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಹುಬ್ಭಳ್ಳಿಯ ಭವಾನಿ ನಗರ ನಿವಾಸಿಯಾದ ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.ಸೋಮವಾರ ಬೆಳಿಗ್ಗೆ ಕುಟುಂಬದವರು ಅನೇಕ ಬಾರಿ ಕರೆ ಮಾಡಿದರೂ ಸ್ವೀಕರಿಸದೇ ಇದ್ದಾಗ ಲಾಡ್ಜ್ ಸ್ವಾಗತಕಾರರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೊಠಡಿಯ ಬಾಗಿಲು ತಟ್ಟಿದರೂ ತೆರೆಯದೇ ಇದ್ದಾಗ ಲಾಡ್ಜ್ ಸಿಬ್ಬಂದಿ ಪೊಲೀಸ್ ಠಾಣೆಗೆ …

Read More »

ಹಾಸನದಲ್ಲಿ 3 ಕೋಟಿಗು ಹೆಚ್ಚು ಹಣ ಪಡೆದು ವಂಚನೆ : ನಡು ರಸ್ತೆಯಲ್ಲಿಯೇ ಲೇಡಿಸ್ ಡ್ರೆಸ್ ಮೇಕರ್ ಗೆ ಬಿತ್ತು ಗೂಸಾ!

ಮೂರು ಕೋಟಿಗೂ ಹೆಚ್ಚು ಹಣ ಪಡೆದು ವಂಚನೆ ಎಸಗಿದ್ದರ ಹಿನ್ನೆಲೆಯಲ್ಲಿ ಟೈಲರ್ ಶಾಪ್ ಮಹಿಳೆಯ ವಿರುದ್ಧ ಕೋಟ್ಯಾಂತರ ರೂಪಾಯಿ ವಂಚನೆ ಆರೋಪ ಕೇಳಿ ಬಂದಿದೆ. ಮಹಿಳೆಯರು ಹೇಮಾವತಿಯನ್ನು ಎಳೆದಾಡಿ ಥಳಿಸಿದ್ದಾರೆ.ಹೇಮಾವತಿ ವಿರುದ್ಧ ಸುಮಾರು 3 ಕೋಟಿಗು ಅಧಿಕ ಹಣ ಪಡೆದು ವಂಚನೆ ಮಾಡಿದ ಆರೋಪ ಕೇಳಿ ಬಂದಿದೆ. ಚಿನ್ನಾಭರಣವನ್ನು ಅಡವಿಟ್ಟು ಗ್ರಾಹಕರು ಲಕ್ಷಾಂತರ ರೂಪಾಯಿ ಹಣ ಆಕೆಗೆ ಕೊಟ್ಟಿದ್ದಾರೆ. ಕೊಡಚಾದ್ರಿ ಚಿಟ್ಸ್ ನಲ್ಲಿ ಒಂದು ಕೋಟಿ ರೂಪಾಯಿ ಚೀಟಿ ಹಾಕಿದ್ದೇನೆ …

Read More »

ಚಾಕುವಿನಿಂದ ಹಲ್ಲೆ ನಡೆಸಿ ಚಿನ್ನದ ಸರ ದೋಚಲು ಯತ್ನ

ನಗರದ ಹಂಡುವಿನಹಳ್ಳಿ ಬಡಾವಣೆಯಲ್ಲಿ ಶನಿವಾರ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ದಂಪತಿಯನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಇರಿದು, ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆಸಿದ್ದಾರೆ.ಹದಿನಾರು ಗ್ರಾಮದ ರಾಜೇಂದ್ರ ಹಾಗೂ ಪತ್ನಿ ಸಂಗೀತಾ ಶನಿವಾರ ಸಂಜೆ ನಗರದ ಹಂಡುವಿನಹಳ್ಳಿ ಬಡಾವಣೆಯ ಮುಖ್ಯರಸ್ತೆಯಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಸವಾರ ರಾಜೇಂದ್ರರನ್ನು ತಳ್ಳಿ ಬೀಳಿಸಿ ಚಾಕುವಿನಿಂದ ಹೊಟ್ಟೆಯ ಭಾಗಕ್ಕೆ ಚುಚ್ಚಿದ್ದರು.ಸಂಗೀತಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಳ್ಳವ ಪ್ರಯತ್ನದಲ್ಲಿದ್ದಾಗ ಎದುರಿನಿಂದ ವಾಹನವೊಂದು …

Read More »

ಎಣ್ಣೆ ಜೊತೆ ಮಿಕ್ಸ್ಚರ್ ಕೊಟ್ಟಿಲ್ಲ ಎಂದು ಬಾರ್ ಕ್ಯಾಷಿಯರ್ ನನ್ನೇ ಹತ್ಯೆಗೈದ ದುಷ್ಕರ್ಮಿ

ಎಣ್ಣೆ ಜೊತೆ ಮಿಕ್ಸ್ಚರ್ ಕೊಟ್ಟಿಲ್ಲ ಎಂದು ದುಷ್ಕರ್ಮಿಯೊಬ್ಬ ಬಾರ್ ಕ್ಯಾಷಿಯರ್ ನನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕೋಲಾರದಲ್ಲಿ ನಡೆದಿದೆ.ಸುಭಾಷ ಆರೋಪಿ. ಕೊಲೆಯಾದ ಕುಮಾರ್ ಲಕ್ಕೂರು ಗ್ರಾಮದ ವೈನ್ ಶಾಪ್ ನಲ್ಲಿ ಕೆಲಸಮಾಡುತ್ತಿದ್ದ. ಅಲ್ಲಿಗೆ ಬಂದಿದ್ದ ಆರೋಪಿ ಕುಡಿಯುವ ವೇಳೆ ತನಗೆ ಮಿಕ್ಸ್ಚರ್ ಕೇಳಿದ್ದಾನೆ. ಈ ವೇಳೆ ಗಲಾಟೆ ನಡೆದಿದೆ.ಬಳಿಕ ಕ್ಯಾಷಿಯರ್ ಬಾರ್ ಬಂದ್ ಮಾಡಿ ಮನೆಯತ್ತ ತೆರಳಿದ್ದಾನೆ. ಹಿಂಬಾಲಿಸಿಕೊಂಡು ಬಂದ ಆರೋಪಿ ಕ್ಯಾಷಿಯರ್ ನ ಹೆಂಡತಿ ಮಕ್ಕಳ ಎದುರಲ್ಲೇ ಚಾಕುವಿನಿಂದ …

Read More »

ಓವರ್ ಟೆಕ್ ಭರದಲ್ಲಿ ಕಾರಿಗೆ ಡಿಕ್ಕಿ ಹೊಡೆದ ಮತ್ತೊಂದು ಕಾರು : ಮಕ್ಕಳು ಸೇರಿ ಐವರಿಗೆ ಗಂಭೀರ ಗಾಯ

ಚಾಮರಾಜನಗರದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಓವರ್ ಟೇಕ್ ವೇಳೆ ಕಾರಿಗೆ ಮತ್ತೊಂದು l ಮತ್ತೊಂದು ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಐವರಿಗೆ ಗಂಭೀರವಾದ ಗಾಯಗಳಾಗಿರುವ ಘಟಡ್ ಮಧುವನಹಳ್ಳಿ ಬೈಪಾಸ್ ಔಟರ್ ರಿಂಗ್ ರಸ್ತೆಯಲ್ಲಿ ಈ ಒಂದು ಅಪಘಾತ ಸಂಭವಿಸಿದೆ.ಚಾಮರಾಜನಗರ ಜಿಲ್ಲೆಯ ಕೊಳೆಗಾಲ ತಾಲೂಕಿನ ಮಧುವನ ಹಳ್ಳಿಯಲ್ಲಿ ಐ 10 ಕಾರಿಗೆ ಮಾರುತಿ ಸುಜುಕಿ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾಂತರಾಜ್, ಸೋಮಣ್ಣ, …

Read More »

ಮೈಸೂರಲ್ಲಿ ಘೋರ ದುರಂತ : ಬಾಲಕನನ್ನು ರಕ್ಷಿಸಲು ಹೋದ ಇಬ್ಬರು ಸಹೋದರರು ನೀರುಪಾಲು

ಮೈಸೂರಿನಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಬಾಲಕನನ್ನು ರಕ್ಷಿಸಲು ಹೋದ ಸಹೋದರರಿಬ್ಬರು ನಿರುಪಾಲಾಗಿರುವ ಘಟನೆ ವರದಿಯಾಗಿದೆ. ಮೈಸೂರಿನ ಬಡಗಲಹುಂಡಿಯಲ್ಲಿ ಈ ಒಂದು ದುರಂತ ಸಂಭವಿಸಿದ್ದು, ವರುಣ ನಾಲೆ ನೀರಿನಲ್ಲಿ ಬಾಲಕನನ್ನು ರಕ್ಷಿಸಲು ಹೋಗಿ ಸಹೋದರರು ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ.ಮೃತರನ್ನು ನಂದನ್ (25) ಮತ್ತು ರಾಕೇಶ್ (20) ಎಂದು ತಿಳಿದುಬಂದಿದೆ. ವರುಣ ನಾಲೆಯಲ್ಲಿ ಬಾಲಕನನ್ನು ಕಾಪಾಡಕ್ಕೆ ಹೋಗಿದ್ದಾರೆ ಆದರೆ ಇಬ್ಬರು ಕೂಡ ಸಾವನಪ್ಪಿದ್ದಾರೆ. ಮರದ ಕೊಂಬನ್ನು ಹಿಡಿದು ಜೀವ ಉಳಿಸಿ ಎಂದು …

Read More »

ಕಾರ್ಮಿಕರ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಕಲಬುರಗಿ ಜಿಲ್ಲೆ: ಕಲ್ಲುಗಣಿ ಕಾರ್ಮಿಕರ ಅಪ್ರಾಪ್ತ ಮಗಳ ಮೇಲೆ ಮಾಲೀಕನ ಮಗ ನಿರಂತರ ಅತ್ಯಾಚಾರ ಎಸಗಿದ್ದು, ಆರೋಪಿ ಮಿರಿಯಾಣ ಗ್ರಾಮದ ಸದ್ದಾಂ ಅಲಿಯಾಸ್ ಇಮ್ರಾನ್ (33) ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ.15 ವರ್ಷದ ಸಂತ್ರಸ್ತೆ 6 ತಿಂಗಳ ಗರ್ಭಿಣಿಯಾಗಿದ್ದಾಳೆ’ ಎಂದು ಪೊಲೀಸರು ತಿಳಿಸಿದ್ದಾರೆ.ಆರೋಪಿಯ ಮೇಲೆ ಈ ಹಿಂದೆ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಆ ಮಹಿಳೆ ಈಗಲೂ ಇವನ ಅಧೀನದಲ್ಲಿಯೇ ಇದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮಿರಿಯಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಹುಬ್ಬಳ್ಳಿಯಲ್ಲಿ ಮೈತ್ತೊಂದು ಚಾಕು ಇರಿತ ಕೇಸ್: ಹಳೇ ದ್ವೇಷದಿಂದ ವ್ಯಕ್ತಿಗೆ ಮೇಲೆ‌ ಅಟ್ಯಾಕ್

ಕಳೆದ‌ ಮೂರು ದಿನಗಳು ಹಿಂದೇ ಅಷ್ಟೇ ಪುಡಿ ರೌಡಿಗಳ ಅಟ್ಟಹಾಸದಿಂದ ಓರ್ವ ವ್ಯಕ್ತಿಯ ಮೇಲೆ ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದ ಪ್ರಕರಣ ನಡೆದ ಬೆನ್ನಲ್ಲೇ ಇನ್ನೊಂದು ಚಾಕು ಇರಿತ ಪ್ರಕರಣ ನಗರದಲ್ಲಿ ತಡ ರಾತ್ರಿ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚಾಕು ಇರಿದ ಘಟನೆ ನಡೆದಿದ್ದು,ನ ಯಲ್ಲಾಪುರ ಓಣಿಯ ಅಫ್ತಾಬ್ ಎಂಬ ಯುವಕನಿಗೆ ನಾಲೈದು ಜನರ ಗುಂಪೊಂದು ಚಾಕು ಇರಿದು ಪರಾರಿಯಾಗಿದ್ದಾರೆ.ಯಲ್ಲಾಪುರ ಓಣಿಯ …

Read More »