Breaking News

Breaking News

ಹಿಟ್ ಆಯಂಡ್ ರನ್‌ಗೆ ವೃದ್ದ ಬಲಿ.. ವಾಕಿಂಗ್‌ ಹೋಗಿದ್ದ ವೇಳೆ ನಡೀತು ದುರಂತ!

ಬೀದರ್​​​ನ ಕುಂಬಾರವಾಡ ಬಡಾವಣೆಯಲ್ಲಿ ವೇಗವಾಗಿ ಬಂದ ಕಾರೊಂದು ಗುದ್ದಿದ ಪರಿಣಾಮ ವಾಕಿಂಗ್ ಮಾಡುತ್ತಿದ್ದ ವೃದ್ದರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು 76 ವರ್ಷ ವಯಸ್ಸಿನ ಭೀಮಣ್ಣ ಎಂದು ಗುರುತಿಸಲಾಗಿದೆ. ಕಾರು ಗುದ್ದಿರುವ ರಭಸಕ್ಕೆ ಭೀಮಣ್ಣ ದೇಹ 50 ಅಡಿಯಷ್ಟು ದೂರಕ್ಕೆ ಎಸೆಯಲ್ಪಟ್ಟಿದ್ದು, ಕಾರು ಚಾಲಕ ಕಾರನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ.ಇಂದು ಬೆಳಗ್ಗೆ 5:30 ಸುಮಾರಿಗೆ ಸಂಭವಿಸಿದ ಘಟನೆಯ ಭಿಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ …

Read More »

ಬೆಂಗಳೂರಲ್ಲಿ ಟೆರೇಸ್‌‍ನಿಂದ ಬಿದ್ದು ಯುವಕ ಸಾವು

ಬೆಂಗಳೂರು,ಅ.23- ಮನೆಯೊಂದರ ನಾಲ್ಕನೇ ಮಹಡಿಯಿಂದ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಕೆಜಿ ಹಳ್ಳಿ ಪೊಲೀಸ್‌‍ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ನಡೆದಿದೆ.ಮುಸ್ಲಿಂ ಕಾಲೋನಿ ನಿವಾಸಿ ಅಹಮದ್‌ (25) ಮೃತಪಟ್ಟ ಯುವಕ. ನಿನ್ನೆ ಸಂಜೆ 4.30 ರ ಸುಮಾರಿಗೆ ಈತ ಬಿಎಂ ಲೇಔಟ್‌ನ ಮನೆಯೊಂದಕ್ಕೆ ಹೋಗಿದ್ದು, ನಾಲ್ಕನೇ ಮಹಡಿಯ ಟೆರೇಸ್‌‍ನಿಂದ ಬಿದ್ದು ಗಾಯಗೊಂಡಿದ್ದನು.ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಮೃತದೇಹವನ್ನು ಅಂಬೇಡ್ಕರ್‌ ಆಸ್ಪತ್ರೆಗೆ ರವಾನಿಸಲಾಗಿದೆ.ಈತ ಯಾವ ಕಾರಣಕ್ಕೆ ಬಿಎಂ ಲೇಔಟ್‌ನ ಆ …

Read More »

ತುಮಕೂರಲ್ಲಿ ಘೋರ ದುರಂತ : ಭಾರಿ ಮಳೆಯಿಂದಾಗಿ ಕೆರೆಯಲ್ಲಿ ಮುಳುಗಿ, ತಂದೆ-ಮಗಳು ಸೇರಿ ಮೂವರು ಸಾವು!

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲಿ ಮುಂದಿನ ಹಲವು ದಿನಗಳ ಕಾಲ ಭಾರಿ ಮಳ ಆಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಇದೀಗ ತುಮಕೂರು ಜಿಲ್ಲೆಯ ವಿವಿಧೆಡೆ ಮಂಗಳವಾರ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.ಇನ್ನೊಂದೆಡೆ, ಹಳ್ಳ-ಕೊಳ್ಳಗಳಲ್ಲಿ ಯಥೇಚ್ಛವಾಗಿ ನೀರು ಹರಿದು ಹೋಗುತ್ತಿರುವುದರಿಂದ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗುಬ್ಬಿ, ತಿಪಟೂರು, ತುರುವೇಕೆರೆ ಸೇರಿದಂತೆ ಇತರೆ ಭಾಗದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಇಲ್ಲಿನ ಕೆರೆಗಳೆಲ್ಲ …

Read More »

ಲಾರಿ-ಆಟೋ ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು, ಮತ್ತಿಬ್ಬರ ಸ್ಥಿತಿ ಗಂಭೀರ

ರಾಮನಗರದಲ್ಲಿ ಲಾರಿ-ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಇಬ್ಬರು ಮೃತಪಟ್ಟು ಮತ್ತಿಬ್ಬರು ಸ್ಥಿತಿ ಗಂಭೀರಗೊಂಡ ಘಟನೆ ಅ.22ರ ಬುಧವಾರ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಹೊನ್ನಿಗನಹಳ್ಳಿಯಲ್ಲಿ ನಡೆದಿದೆ.ಮಳವಳ್ಳಿ ಮುಖ್ಯರಸ್ತೆಯಲ್ಲಿ ದುರ್ಘಟನೆ ನಡೆದಿದ್ದು, ಇಬ್ಬರು ಮೃತಪಟ್ಟು, ಮತ್ತಿಬ್ಬರು ಸೇರಿ ಒಟ್ಟು ನಾಲ್ಕು ಜನ ಯುವಕರು ಇದ್ದರು.ಇವರು ಬೆಂಗಳೂರು ಮೂಲದವರಾಗಿದ್ದು, ಹಬ್ಬದ ಪ್ರಯುಕ್ತ ಪ್ರವಾಸಕ್ಕೆ ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.ಇಬ್ಬರ ಮೃತದೇಹಗಳನ್ನು ಹಾರೋಹಳ್ಳಿ ಬಳಿಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಮತ್ತಿಬ್ಬರಿಗೆ ಚಿಕಿತ್ಸೆ …

Read More »

ದಿಲ್ಲಿ ಬಳಿ ಬಿಹಾರದ ಕುಖ್ಯಾತ ರೌಡಿ ರಂಜನ್ ಪಾಠಕ್ ಮತ್ತು ಸಹಚರರ ಎನ್ ಕೌಂಟರ್

ಬಿಹಾರದ ಕುಖ್ಯಾತ ರೌಡಿ ರಂಜನ್ ಪಾಠಕ್ ಸೇರಿದಂತೆ ನಾಲ್ವರನ್ನು ದಿಲ್ಲಿಯ ದಕ್ಷಿಣ ಭಾಗವಾದ ರೋಹಿಣಿ ಪ್ರದೇಶದಲ್ಲಿ ಇಂದು ನಡೆದ ಎನ್‍ ಕೌಂಟರ್ ಹತ್ಯೆಗೈಯ್ಯಲಾಗಿದೆ.ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಹಾಗೂ ಅಭ್ಯರ್ಥಿಗಳಿಗೆ ಬೆದರಿಕೆ ಒಡ್ಡಲು ರಂಜನ್ ಪಾಠಕ್ ಮತ್ತವನ ತಂಡ ಸಕ್ರಿಯವಾಗಿತ್ತು ಎನ್ನಲಾಗಿದೆ. ಈ ತಂಡದ ಬಂಧನಕ್ಕೆ ಬಿಹಾರ ಪೊಲೀಸರು ಕಳೆದ ಹಲವು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು.ಖಚಿತ ಸುಳಿವನ್ನಾಧರಿಸಿ, ಇಂದು ಬೆಳಗಿನ ಜಾವ 2.30ರ ವೇಳೆಗೆ ರೋಹಿಣಿ …

Read More »

ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ; ಇಬ್ಬರ ಬಂಧನ –

ಉಡುಪಿ ತಾಲೂಕಿನ ಮಣಿಪಾಲದಲ್ಲಿ ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮಣಿಪಾಲ ಪೊಲೀಸರು ದಾಳಿ‌ ನಡೆಸಿ ಪಡೆದಿದ್ದಾರೆ.ಬಂಧಿತ ಆರೋಪಿಗಳನ್ನು ಇಮ್ರಾನ್ ಹಾಗೂ ಜೈಬಾಯ್ ಎಂದು ಗುರುತಿಸಲಾಗಿದೆ.ಮಣಿಪಾಲದಲ್ಲಿ ಕೆಲವು ಮಸಾಜ್ ಪಾರ್ಲರ್ ಗಳಿದ್ದು ಅಲ್ಲಿ‌ ಕೆಲವು ಮಸಾಜ್ ಪಾರ್ಲರ್ ಹೆಸರಿನಲ್ಲಿ ಹುಡುಗಿಯರನ್ನು‌ ಇಟ್ಟುಕೊಂಡು ಅನೈತಿಕ ದಂಧೆ ನಡೆಸುತ್ತಾರೆ ಎಂದು ಆರೋಪ ಕೇಳಿಬರುತ್ತಿದೆಅ. 21 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಮಹೇಶ್‌ ಪ್ರಸಾದ್‌ , ಪೊಲೀಸ್‌ …

Read More »

ಮೈಸೂರು ಬಳಿ ಫಾರಂ ಹೌಸ್‌ನಲ್ಲಿ ಭ್ರೂಣಲಿಂಗ ಪತ್ತೆ ಕೆಲಸ: ಐವರ ಬಂಧನ

ಹುಣಗನಹಳ್ಳಿ ಗ್ರಾಮದ ಫಾರಂ ಹೌಸೊಂದಲ್ಲಿ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬನ್ನೂರು ರಸ್ತೆಯ ಸುತ್ತಮುತ್ತಲ ಗ್ರಾಮಗಳಲ್ಲಿ ಭ್ರೂಣಲಿಂಗ ಪತ್ತೆ ಕಾರ್ಯ ನಡೆಯುತ್ತಿರುವ ಮಾಹಿತಿಯ ಮೇರೆಗೆ ಎರಡು ತಿಂಗಳಿಂದ ಕಣ್ಗಾವಲು ಇಟ್ಟಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಬುಧವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿ, ಜಾಲವನ್ನು ಪತ್ತೆ ಹಚ್ಚಿದ್ದಾರೆ.ಬೆಳಿಗ್ಗೆ 6.30ರ ವೇಳೆ ಗರ್ಭಿಣಿ ಮಹಿಳೆಯೊಂದಿಗೆ ತೆರಳಿದ್ದಾಗ ಭ್ರೂಣ ಲಿಂಗ ಪತ್ತೆ …

Read More »

ಬೆಂಗಳೂರಲ್ಲಿ ಘೋರ ಘಟನೆ :`ತಿಗಣೆ ಔಷಧಿ’ ವಾಸನೆಗೆ ಬಿಟೆಕ್ ವಿದ್ಯಾರ್ಥಿ ಬಲಿ.!

ಬೆಂಗಳೂರಿನಲ್ಲಿ ತಿಗಣಿ ಔಷಧಿ ವಾಸನೆಗೆ ವಿದ್ಯಾರ್ಥಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ತಿರುಪತಿ ಮೂಲದ ಪವನ್ ಎಂದು ತಿಳಿದುಬಂದಿದೆ.HAL ಪೊಲೀಸ್ ಠಾಣಾ ವ್ಯಾಪ್ತಿಯ ಪಿಜಿಯಲ್ಲಿ ಆಗಿರುವಂತಹ ಘಟನೆಗಾಗಿದ್ದು, ಪವನ್ ವಾಸವಿದ್ದ ಪಿಜಿ ಅಲ್ಲಿ ತಿಗಣಿ ಔಷಧಿಯನ್ನು ಸಿಂಪಡಣೆ ಮಾಡಿದ್ದಾರೆ.ಈ ವಿಚಾರ ಗೊತ್ತಿಲ್ಲದೇ ಆದ ತನ್ನ ರೂಮ್ಗೆ ತೆರಳಿದ್ದಾನೆ ಎಂದು ತಿಳಿದುಬಂದಿದೆ.ಬಿಟೆಕ್ ವಿದ್ಯಾರ್ಥಿಯಾಗಿದ್ದ ಪವನ್ ಈತ ವಾಸವಾಗಿದ್ದ ಕೊಠಡಿ ಯಲ್ಲಿ ತಿಗಣೆ ಔಷಧಿ ಸಿಂಪಡನೆ ಮಾಡಲಾಗಿರುತ್ತದೆ. ಈ ಮಾಹಿತಿ ಪವನ್ ಗೆ ಗೊತ್ತಿರಲಿಲ್ಲ. …

Read More »

ರೈಲ್ವೆ ಹಳಿ ಪಕ್ಕ ನಿಂತು ರೀಲ್ಸ್​ ಮಾಡುತ್ತಿದ್ದ ಬಾಲಕನಿಗೆ ರೈಲು ಡಿಕ್ಕಿ

ರೈಲ್ವೆ ಹಳಿ ಪಕ್ಕ ನಿಂತು ರೀಲ್ಸ್​ ಮಾಡುತ್ತಿದ್ದ ಬಾಲಕನಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪುರಿಯಲ್ಲಿ ನಡೆದಿದೆ. ಮಂಗಳಘಾಟ್ ನಿವಾಸಿಯಾದ ಬಾಲಕ ತನ್ನ ತಾಯಿಯೊಂದಿಗೆ ಇಂದು ಮುಂಜಾನೆ ದಕ್ಷಿಣಕಾಳಿ ದೇವಸ್ಥಾನಕ್ಕೆ ಹೋಗಿದ್ದನು.ಅವರು ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ತನ್ನ ಮೊಬೈಲ್ ಫೋನ್‌ನಲ್ಲಿ ರೀಲ್ಸ್​ ರೆಕಾರ್ಡ್ ಮಾಡಲು ರೈಲ್ವೆ ಹಳಿ ಪಕ್ಕ ನಿಂತಿದ್ದಾಗ ಈ ಘಟನೆ ನಡೆದಿದೆ. ಡಿಕ್ಕಿಯ ರಭಸ ಎಷ್ಟು ತೀವ್ರವಾಗಿತ್ತೆಂದರೆ ಆತ …

Read More »

ರಾಜ್ಯದಲ್ಲಿ ಮಳೆ ಅಬ್ಬರಕ್ಕೆ ರೈತ ಬಲಿ: ಎಮ್ಮೆ ಮೇಯಿಸಲು ಹೋದ ವೇಳೆ ಹಳ್ಳದಲ್ಲಿ ಬಿದ್ದು ಸಾವು

ಮಲೆನಾಡು ಸೇರಿದಂತೆ ರಾಜ್ಯದ ಬಹುತೇಕ ಭಾಗದಲ್ಲಿ ಹಿಂಗಾರು ಮಳೆ ಆರ್ಭಟಿಸುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಹಲವು ಮಳೆಯ ಅಬ್ಬರ ಮುಂದುವರೆದಿದ್ದು, ಎಮ್ಮೆ ಮೇಯಿಸಲು ಹೋಗಿದ್ದ ರೈತರೊಬ್ಬರು ಹಳ್ಳದಲ್ಲಿ ಬಿದ್ದು ಮೃತಪಟ್ಟಿದ್ದಾರೆ.45 ವರ್ಷದ ಲಕ್ಷ್ಮಣಗೌಡ ಮೃತಪಟ್ಟವರು. ಮಂಗಳವಾರ ಸಂಜೆಯಿಂದ ಲಕ್ಷ್ಮಣಗೌಡ ನಾಪತ್ತೆಯಾಗಿದ್ದರು. ಅವರಿಗಾಗಿ ಹುಡುಕಾಟ ನಡೆಸಲಾಗಿತ್ತು. ಹಳ್ಳ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

Read More »