Breaking News

Breaking News

ಅಟೋ ಚಾಲಕ ಸಾವು; ಪತ್ನಿಯಿಂದ ದೂರು

ಸುಳ್ಯದಲ್ಲಿ ಅಟೋ ರಿಕ್ಷಾ ಚಾಲಕರೋರ್ವರು ಮೃತರಾಗಿದ್ದು, ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿ ಅವರ ಪತ್ನಿ ಸುಳ್ಯ ಠಾಣೆಗೆ ದೂರು ನೀಡಿದ್ದಾರೆ.ಸುಳ್ಯ ಶಾಂತಿನಗರದ ಬೆಟ್ಟಂಪಾಡಿ ನಿವಾಸಿ ಅಟೋ ಚಾಲಕ ಜಬ್ಬಾರ್ (35) ಅವರು ಅ. 17ರ ರಾತ್ರಿ ನಿಧನ ಹೊಂದಿದ್ದರು.ಅವರು ಕೆಲವು ತಿಂಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆದು, ಗುಣಮುಖರಾಗಿದ್ದು, ಮತ್ತೆ ಅಟೋ ಚಾಲನೆ ಕೆಲಸ ಮಾಡುತ್ತಿದ್ದರು.ಜಬ್ಬಾರ್ ಸಾವಿನ ಕುರಿತು ಅನುಮಾನ ವ್ಯಕ್ತಪಡಿಸಿರುವ ಪತ್ನಿಯು, ವ್ಯಕ್ತಿಯೋರ್ವರು ಹಲ್ಲೆ …

Read More »

ಮತ ಕಳವು ಸಾಕ್ಷ್ಯಕ್ಕೆ ಹಳ್ಳದಲ್ಲಿ ಶೋಧ! ಸುಟ್ಟ ಸ್ಥಿತಿಯಲ್ಲಿ ರಾಶಿ ರಾಶಿ ವೋಟರ್‌ ಐಡಿಗಳು

ಕಲಬುರ್ಗಿಯ ಆಳಂದ ತಾಲೂಕಿನ ವಿಧಾನಸಭೆ ಚುನಾವಣೆಯಲ್ಲಿ ಮತ ಕಳವು ನಡೆದಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಶೋಧಕ್ಕೆ ಇಳಿದಿದ್ದ ಎಸ್‌ಐಟಿ ತಂಡದ ಅಧಿಕಾರಿಗಳು ಶುಕ್ರವಾರ ತಡರಾತ್ರಿ ಮತ್ತು ಶನಿವಾರ ಬೆಳಗಿನ ಜಾವ ಹಳ್ಳದ ದಂಡೆಯಲ್ಲೂ ದಾಖಲೆಗಳಿಗಾಗಿ ಹುಡುಕಾಟ ನಡೆಸಿದ್ದಾರೆ.ಅಲ್ಲಿ ರಾಶಿ-ರಾಶಿ ವೋಟರ್‌ ಐಡಿಗಳು, ಮತಪಟ್ಟಿಗಳು ಸುಟ್ಟ ಸ್ಥಿತಿಯಲ್ಲಿ ಸಿಕ್ಕಿವೆ ಎಂದು ಹೇಳಲಾಗುತ್ತಿದೆ.ಮತಪಟ್ಟಿ ಹಾಗೂ ವೋಟರ್‌ ಕಾರ್ಡ್‌ ಗಳ ಮಾಹಿತಿ ಇರುವ ಕಾಗದಗಳನ್ನು ಸುಡಲು ಮೊದಲು ವಾಹನ ಬಳಕೆ ಮಾಡಲಾಗಿತ್ತು. ಆಗ ಬೆಂಕಿ …

Read More »

ತಳಿರುತೋರಣ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು!

ಚಿಕ್ಕಬಳ್ಳಾಪುರದಲ್ಲಿ ದೀಪಾವಳಿ ಹಬ್ಬದಂದೆ ಘೋರವಾದ ದುರಂತ ನಡೆದಿದ್ದು, ಹಬ್ಬಕ್ಕಾಗಿ ರೆಸ್ಟೋರೆಂಟ್ ಮುಂಭಾಗದಲ್ಲಿ ತಳಿರುತೋರಣ ಕಟ್ಟಲು ಹೋದ ಯುವಕನಿಗೆ ವಿದ್ಯುತ್ ಸ್ವರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದೆ.ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿಯ ಡಿ.ಕೆ ಫ್ಯಾಮಿಲಿ ರೆಸ್ಟೋರೆಂಟ್​ನಲ್ಲಿ ಶನಿವಾರ ಬೆಳಗ್ಗೆ 11.30ರ ಸಮಯದಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ನೇಪಾಳ ಮೂಲದ ಪದಮ್ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿ ಡಿ.ಕೆ.ಫ್ಯಾಮಿಲಿ ರೆಸ್ಟೋರೆಂಟ್​ನಲ್ಲಿ ಆಡುಗೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.ರೆಸ್ಟೋರೆಂಟ್​ನಲ್ಲಿ ದೀಪಾವಳಿ ಹಬ್ಬವನ್ನು ಆಚರಣೆ …

Read More »

ವಿಮಾನದಲ್ಲಿ `ಬಾಂಬ್’ ಇದೆ ಎಂದು ಬರೆದು ವ್ಯಕ್ತಿಯಿಂದ ಹುಚ್ಚಾಟ : ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಎಮರ್ಜೆನ್ಸಿ ಲ್ಯಾಂಡ್.!

ವಿಮಾನದಲ್ಲಿ ಬಾಂಬ್ ಇದೆ ಎಂದು ಬರೆದು ವ್ಯಕ್ತಿಯೊಬ್ಬ ಹುಚ್ಚಾಟ ಮೆರೆದಿರುವ ಘಟನೆ ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ನಡೆದಿದೆ.ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಇಂಡಿಗೋ 6E4814 ವಿಮಾನದಲ್ಲಿ 168 ಪ್ರಯಾಣಿಕರಿದ್ದರು. ವ್ಯಕ್ತಿಯ ಹುಚ್ಚಾಟದಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಬಾಂಬ್ ಎಂಬ ಪದ ನೋಡಿ ಪ್ರಯಾಣಿಕರು ಆತಂಕಗೊಂಡಿದ್ದರು. ಕೂಡಲೇ ಪೈಲಟ್ ಬೆಂಗಳೂರಿಗೆ ವಿಮಾಣವನ್ನು ಡೈವರ್ಟ್ ಮಾಡಿದ್ದಾರೆ. ಮಧ್ಯರಾತ್ರಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಲ್ಯಾಂಡ್ ಮಾಡಲಾಗಿದೆ. ಬಳಿಕ ಬಾಂಬ್ ನಿಷ್ಕ್ರಿಯ …

Read More »

ನಾಸಿಕ್ ನಲ್ಲಿ ಘೋರ ದುರಂತ : ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುತ್ತಿದ್ದವರ ಮೇಲೆ ರೈಲು ಹರಿದು ಇಬ್ಬರು ಸಾವು.!

ಮಹಾರಾಷ್ಟ್ರದ ನಾಸಿಕ್ ರೈಲು ನಿಲ್ದಾಣದಲ್ಲಿ ಒಂದು ಭೀಕರ ಅಪಘಾತ ಸಂಭವಿಸಿದೆ. ಮುಂಬೈನಿಂದ ಬಿಹಾರಕ್ಕೆ ಹೋಗುತ್ತಿದ್ದ ಕರ್ಮಭೂಮಿ ಎಕ್ಸ್ಪ್ರೆಸ್ ಅನ್ನು ಹಿಡಿಯಲು ಪ್ರಯತ್ನಿಸುತ್ತಿದ್ದ ಮೂವರು ಪ್ರಯಾಣಿಕರು ರೈಲು ಡಿಕ್ಕಿ ಹೊಡೆದರು. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಒಬ್ಬರು ಗಂಭೀರವಾಗಿ ಗಾಯಗೊಂಡರು.ವರದಿಗಳ ಪ್ರಕಾರ, ಹಬ್ಬದ ಸಮಯದಲ್ಲಿ ಮುಂಬೈ ಮತ್ತು ಮಹಾರಾಷ್ಟ್ರದ ಇತರ ನಗರಗಳಿಂದ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಹಳ್ಳಿಗಳಿಗೆ ಮರಳುತ್ತಿದ್ದಾರೆ. ಏತನ್ಮಧ್ಯೆ, ನಾಸಿಕ್ ನಿಲ್ದಾಣದಲ್ಲಿ ರೈಲು ಹಿಡಿಯುವ ಧಾವಿಸಿ ಇಬ್ಬರು ಪ್ರಯಾಣಿಕರನ್ನು ಬಲಿ …

Read More »

ಗೋವಿನ ಅಕ್ರಮ ಸಾಗಾಟ ಪ್ರಕರಣ: ತಲೆಮರೆಸಿಕೊಂಡಿದ್ದ ಮೂವರನ್ನು ಹುಡುಕಿ ಬಂಧಿಸಿದ ಪೊಲೀಸರು

ಕೊಡಗಿನಿಂದ ಗೋವು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಅರಕಲಗೂಡಿನ ಹೂಳಲುಗೋಡು ಗ್ರಾಮದ ದಿಲ್ ನವಾಜ್ ಅಲಿಯಾಸ್ ಶಾನವಾಜ್ ಹಾಗೂ ಸಯ್ಯದ್ ಗಫೂರ್ ಎಂಬವರನ್ನು ಬಂಧಿಸಲಾಗಿದ್ದು, ಈ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿದಂತಾಗಿದೆ.ಇತ್ತೀಚೆಗೆ ಸೋಮವಾರಪೇಟೆಯಿಂದ ಗೋವು ಸಾಗಾಟ ಮಾಡುತ್ತಿದ್ದ ವೇಳೆ ಕಾಗಡಿಕಟ್ಟೆ ಬಳಿ ಗೋವುಗಳಿದ್ದ ವಾಹನ ಅಪಘಾತಕ್ಕೀಡಾಗಿ ಮಗುಚಿಕೊಂಡಿತ್ತು. ನಂತರ ಬೆಂಗಾವಲು ಇನೋವಾ ಕಾರಿನಲ್ಲಿ ಮೂವರು ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣವನ್ನು ಬೇಧಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಇತ್ತೀಚೆಗೆ …

Read More »

ಮಹಿಳೆಯ ಬೆರಳು ಕತ್ತರಿಸಿ ಚಿನ್ನಾಭರಣ ದರೋಡೆ ಮಾಡಿದ್ದ ಇಬ್ಬರ ಬಂಧನ

ಆರ್ಕೆಸ್ಟ್ರಾ ನೋಡಿಕೊಂಡು ಮನೆಗೆ ಹೋಗುತ್ತಿದ್ದ ಮಹಿಳೆಯರನ್ನು ಗುರಿಯಾಗಿಸಿ, ಲಾಂಗ್‌ನಿಂದ ಹಲ್ಲೆ ಮಾಡಿ, ಸರಗಳ್ಳತನ ಮಾಡಿ ಪರಾರಿಯಾಗಿದ್ದ ಇಬ್ಬರು ಖದೀಮರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.ಯೋಗಾನಂದ (35) ಹಾಗೂ ಈತನ ಸಹಚರ ಪ್ರವೀಣ್ ಬಂಧಿತರು.ದೂರುದಾರ ಮಹಿಳೆ ಉಷಾ ಹಾಗೂ ಸ್ನೇಹಿತೆ ವರಲಕ್ಷ್ಮೀ ಎಂಬವರು ಗಣೇಶ ಹಬ್ಬದ ಆರ್ಕೆಸ್ಟ್ರಾ ಮುಗಿಸಿ ಮನೆಗೆ ವಾಪಸ್ ಆಗುವಾಗ ಪಲ್ಸರ್ ಬೈಕ್​ನಲ್ಲಿ ಬಂದ ದುರುಳರು ಮಚ್ಚು ತೋರಿಸಿದ್ಧಾರೆ. ಗಾಬರಿಗೊಂಡ ಉಷಾ ಸರ ನೀಡಿದರೆ, ವರಲಕ್ಷ್ಮಿ ಅವರು …

Read More »

ಬಸ್ ಕಂಡಕ್ಟರ್ ಮೇಲೆ ಹಲ್ಲೆ: ಮಹಿಳೆ ಸೇರಿ ಮೂವರ ವಿರುದ್ಧ ಕೇಸ್ ದಾಖಲು

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಕೋಟಿಪುರ ಗ್ರಾಮದಲ್ಲಿ ಕೆಎಸ್‌ಆರ್ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.ಹಲ್ಲೆಗೊಳಗಾದ ಬಸ್ ಕಂಡಕ್ಟರ್ ತನ್ವೀರ್ ಹೊರಕೆರೆ(38) ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆಶಿಕಾರಿಪುರದಿಂದ ಮುಡುಬ ಸಿದ್ದಾಪುರ ಮಾರ್ಗದಲ್ಲಿ ಸಂಚರಿಸುವ ಬಸ್ ನಲ್ಲಿ ಕಂಡಕ್ಟರ್ ಆಗಿ ತನ್ವೀರ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಮೇಲೆ ಹಲ್ಲೆ ಮಾಡಿದ ಇಬ್ಬರು ಪುರುಷರು, ಓರ್ವ ಮಹಿಳೆ …

Read More »

ಕಾನ್‌ಸ್ಟೆಬಲ್‌ಗೆ ಚಾಕುವಿನಿಂದ ತಿವಿದು ಕೊಲೆ

ಹೈದ್ರಾಬಾದ್ ಪ್ರಕರಣವೊಂದರಲ್ಲಿ ಬಂಧಿತನಾಗಿರುವ ಶೇಖ್‌ ರಿಯಾಜ್‌ (24) ಎಂಬಾತ ನಿಜಾಮಾಬಾದ್‌ ಠಾಣೆಗೆ ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುತ್ತಿದ್ದ ಕಾನ್‌ಸ್ಟೆಬಲ್‌ ಇ.ಪ್ರಮೋದ್‌ (42) ಅವರ ಎದೆಗೆ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ.ಶುಕ್ರವಾರ ರಾತ್ರಿ 8.30ರಿಂದ 9ರ ಅವಧಿಯಲ್ಲಿ ಈ ಘಟನೆ ನಡೆದಿದೆ.ಆರೋಪಿಯು ಚಾಕುವನ್ನು ಶೂ ಒಳಗೆ ಇರಿಸಿಕೊಂಡಿದ್ದ. ತೀವ್ರವಾಗಿ ಗಾಯಗೊಂಡಿದ್ದ ಪ್ರಮೋದ್‌ ಅಸುನೀಗಿದ್ದಾರೆ. ಕಾನ್‌ಸ್ಟೆಬಲ್‌ ಬೈಕ್‌ ಹಿಂಬಾಲಿಸುತ್ತಿದ್ದ ಸಬ್‌ ಇನ್‌ಸ್ಪೆಕ್ಟರ್‌ ಮೇಲೆಯೂ ಆರೋಪಿಯು ದಾಳಿ ನಡೆಸಿದ್ದು, ಅವರ ಬೆರಳುಗಳಿಗೆ ಗಾಯಗಳಾಗಿವೆ. ಆರೋಪಿಯು ಪರಾರಿಯಾಗಿದ್ದು, …

Read More »

₹12 ಸಾವಿರ ಲಂಚ: ಹಾನಗಲ್ ತಹಶೀಲ್ದಾರ್ ಕಚೇರಿ ಶಿರಸ್ತೆದಾರ, ಇಬ್ಬರು SDA ಬಂಧನ

ಹಾವೇರಿ ಜಿಲ್ಲೆಯ ಹಾನಗಲ್ ತಹಶೀಲ್ದಾರ್ ಕಚೇರಿಯಲ್ಲಿ ₹12 ಸಾವಿರ ಲಂಚ ಪಡೆಯುತ್ತಿದ್ದ ಆರೋಪದಡಿ ಶಿರಸ್ತೆದಾರ ಹಾಗೂ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು (ಎಸ್‌ಡಿಎ) ಹಾವೇರಿ ಜಿಲ್ಲಾ ಲೋಕಾಯುಕ್ತ ಪೊಲೀಸರು ಶನಿವಾರ ಬಂಧಿಸಿದ್ದಾರೆ.ಪಹಣಿ ಪತ್ರ (ಆರ್‌.ಟಿ.ಸಿ.) ದುರಸ್ತಿ ಮಾಡಿಸಲು ₹ 12 ಸಾವಿರ ಲಂಚ ಪಡೆಯುತ್ತಿದ್ದಾಗಲೇ ಶಿರಸ್ತೆದಾರ ತಮ್ಮಣ್ಣ ಕಾಂಬಳೆ, ಎಸ್‌ಡಿಎ ಗೂಳಪ್ಪ ಮನಗೂಳಿ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಎಸ್‌ಡಿಎ ಶಿವಾನಂದ ಬಡಿಗೇರ್ ಎಂಬುವವರನ್ನು ಬಂಧಿಸಲಾಗಿದೆ’ ಎಂದು ಲೋಕಾಯುಕ್ತ ಪೊಲೀಸ್ ಡಿವೈಎಸ್ಪಿ …

Read More »