Breaking News

‘ಅಖಂಡತೆ ಒಪ್ಕೊಂಡೇ ಅಭಿವೃದ್ಧಿ ಕೇಳೋಣ, ಪ್ರತ್ಯೇಕ ಪರ ನಾನಿಲ್ಲ’ – ಲಕ್ಷ್ಮಿ ಹೆಬ್ಬಾಳ್ಕರ್

ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ ಆನಂದ‌ ಚೋಪ್ರಾ ಆರೋಗ್ಯ ವಿಚಾರಿಸಿದ ಹೆಬ್ಬಾಳ್ಕರ್.
ಖಾಸಗಿ ಆಸ್ಪತ್ರೆಗೆ ಭೇಟಿ‌ ನೀಡಿ ಆರೋಗ್ಯ ವಿಚಾರಿಸಿದ ಲಕ್ಷ್ಮಿ ಹೆಬ್ಬಾಳ್ಕರ್.
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ನ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್.
ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹುಬ್ಬಳ್ಳಿಯಲ್ಲಿ ಹೇಳಿಕೆ.
ಆನಂದ ಚೋಪ್ರಾ ವೈಯಕ್ತಿಕವಾಗಿ ಹಾಗೂ ರಾಜಕೀಯವಾಗಿಯೂ ಆಪ್ತರು.
ಕಾಂಗ್ರೆಸ್ ನಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದರು. ನನಗೆ ಸ್ವಂತ ಅಣ್ಣನ ರೀತಿಯಲ್ಲಿದಾರೆ. 
ಚೋಪ್ರಾ ಕೊಲೆ ಯತ್ನ ನಡೆದಿರೋದು ದುರದೃಷ್ಟಕರ. 
ಈಗಾಗಲೇ ಆರೋಪಿಗಳು ಸಿಕ್ಕಿದ್ದು, ಯಾವ ಕಾರಣಕ್ಕೆ ಕೊಲೆಗೆ ಯತ್ನ ನಡೆದಿದೆ ಅನ್ನೋದ್ ತನಿಖೆಯಿಂದ ತಿಳಿಯಲಿದೆ. 
ಆದಷ್ಟುಬೇಗ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸ್ತೇನೆ. ಧೈರ್ಯವನ್ನೂ ಹೇಳಿದ್ದೇನೆ. 
ಆನಂದ ಚೋಪ್ರಾ ಒಂದ್ರೀತಿ ಅಜಾತಶತ್ರುವಿದ್ದಂತೆ. 
ಸಂಸತ್ ಚುನಾವಣೆ ವೇಳೆ ೨ ತಿಂಗಳು ನನ್ನ ಗೆಲುವಿಗಾಗಿ ಶ್ರಮಿಸಿದ್ರು. 
ರಾಜಕಾರಣದಲ್ಲಿ ಇಂಥವರು ಕಡಿಮೆ ಜನ ಸಿಗ್ತಾರೆ.
ಪ್ರತ್ಯೇಕ ಉತ್ತರಕರ್ನಾಟಕ ಅನ್ನೋದು ತಪ್ಪು. 
ಉತ್ತರಕರ್ನಾಟಕಕ್ಕೆ ಇನ್ನೂ ಅಭಿವೃದ್ಧಿ ಆಗ್ಬೇಕು ಅನ್ನೋದರ ಪರ ನಾನಿರುವೆ.
ಉತ್ತರಕರ್ನಾಟಕಕ್ಕೆ ಏನೇನ್ ಕೊಡುಗೆ ನೀಡಿಲಾಗಿದೆ ಅನ್ನೋದರ ಬಗ್ಗೆ ಶ್ವೇತ ಪತ್ರ ಹೊರಡಿಸಲಿ. 
ಪ್ರತ್ಯೇಕ ರಾಜ್ಯದ ಬೇಡಿಕೆಗೆ ಕುಮಾರಸ್ವಾಮಿಯವರು ಕುಮ್ಮಕ್ಕು ಕೊಡ್ತಾರೆ ಅಂತ ನನಗೆ ಅನಿಸೋದಿಲ್ಲ. 
ಆ ರೀತಿ ಕುಮಾರಸ್ವಾಮಿ ಮಾತಾಡಿದಾರೆ ಅನ್ನೋದನ್ನ ನಾನೇನೂ ಕೇಳಿಲ್ಲ. 
ಕರ್ನಾಟಕ ಏಕೀಕರಣದಲ್ಲಿ ಏನೇನಾಗಿತ್ತೋ ಅದನ್ನ ನೋಡ್ಬೇಕು. ಅದನ್ನ ಮೆಲುಕು ಹಾಕೋಣ.
ಅಖಂಡ ಕರ್ನಾಟಕದ ಕನಸು ನಮ್ಮದು. ಇದನ್ನೇ ಇರಿಸಿಕೊಂಡ ಅಭಿವೃದ್ಧಿಯನ್ನ ಕೇಳೋಣ. 
ಹುಬ್ಬಳ್ಳಿಯಲ್ಲಿ ಬೆಳಗಾವಿ ಗ್ರಾಮೀಣ ಕಾಂಗ್ರೆಸ್  ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ.
Share News

About Shaikh BIG TV NEWS, Hubballi

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *