Breaking News

Breaking News

ಕಚೇರಿ ಸೂಚನೆ ಮೇರೆಗೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ಅಮಾನತು

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕುರಿಯ ಗ್ರಾಮದಲ್ಲಿ ಆಟೋ ಚಾಲಕರೊಬ್ಬರು ಸಮವಸ್ತ್ರ ಧರಿಸದೆ ಆಟೋ ಚಾಲನೆ ಮಾಡಿದ ಕಾರಣ ಸಂಚಾರಿ ಪೊಲೀಸರು ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಮಾಡಿ ಆಟೋ ಚಾಲಕನನ್ನು ನಿಂದಿಸಿ, ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.ಈ ವಿಚಾರ ಮುಖ್ಯಮಂತ್ರಿಯವರ ಕಚೇರಿಯ ಕುಂದುಕೊರತೆ ವಿಭಾಗದ ಗಮನಕ್ಕೆ ಬಂದಿದ್ದು, ವಿಶೇಷ ಕರ್ತವ್ಯಾಧಿಕಾರಿಗಳು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.ಜನಸ್ನೇಹಿ ಆಡಳಿತ ನೀಡುವುದು ಸರ್ಕಾರದ ಆದ್ಯತೆಯಾಗಿದ್ದು, …

Read More »

ಹುಲಿ ದಾಳಿಯಿಂದ ಗಾಯಗೊಂಡ ಮಹದೇವ್ ಸ್ಥಿತಿ ಕ್ರಿಟಿಕಲ್, ಅಪೊಲೋ ಆಸ್ಪತ್ರೆ ವೈದ್ಯರ ಮಾಹಿತಿ.

ಹುಲಿಯಿಂದ ದಾಳಿಗೊಳಗಾದ ವ್ಯಕ್ತಿ ಆರೋಗ್ಯ ಸ್ಥಿತಿ ಬಗ್ಗೆ ಆಪೊಲೊ ಆಸ್ಪತ್ರೆಯ ಕನ್ಸಲ್ಟೆಂಟ್ ಪ್ಲಾಸ್ಟಿಕ್ ಸರ್ಜನ್ ಡಾ. ಸತೀಶ್ ಮಾಹಿತಿ ನೀಡಿದ್ದಾರೆ.ದಾಳಿಗೊಳಗಾದ ವ್ಯಕ್ತಿಯ ಮುಖದ ಮೂಳೆಗಳೆಲ್ಲ ಮುರಿದಿದ್ದವು. ಅಪರೇಷನ್ ಮಾಡಿ ಅವೆಲ್ಲವನ್ನು ಸರಿ ಮಾಡಲಾಗಿದೆ.ಮೆದುಳಿಗೂ ಸ್ಪಲ್ಪ ಪ್ರಮಾಣದ ಹಾನಿ ಆಗಿದೆ. ಬಲಗಣ್ಣು ಸಂಪೂರ್ಣವಾಗಿ ಹೋಗಿದೆ, ಎಡಗಣ್ಣು ಬಹುತೇಕ ಹಾನಿ ಆಗಿದೆ. ಎಡಗಣ್ಣಿನ ದೃಷ್ಟಿ ಉಳಿಸಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಸದ್ಯ ವ್ಯಕ್ತಿ ಸ್ಥಿತಿ ಇನ್ನೂ ಕ್ರಿಟಿಕಲ್ ಇದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ …

Read More »

26 ದಿನದಲ್ಲೇ ಸುಟ್ಟುಹೋದ ಕಿಯಾ ಕಾರು: ಹೊಸ ಕಾರು ನೀಡಲು ಧಾರವಾಡ ಆಯೋಗ ಸೂಚನೆ

ಹುಬ್ಬಳ್ಳಿಯ ಅಲ್ತಾಪ್ ನಗರದ ಮಹಮ್ಮದ್ ತಾಹೀರ್ ತಂಬೋಳಿ ಅವರು ಕೇವಲ 26 ದಿನಗಳ ಹಿಂದೆ ಖರೀದಿಸಿದ ಕಿಯಾ ಕಾರು ಬೆಂಕಿಗೆ ಆಹುತಿಯಾದ ಪ್ರಕರಣದಲ್ಲಿ, ಧಾರವಾಡ ಜಿಲ್ಲಾ ಗ್ರಾಹಕರ ಆಯೋಗವು ಕಾರು ಉತ್ಪಾದಕರಾದ ಕಿಯಾ ಮೋಟರ್ಸ್ ಕಂಪನಿಯ ವಿರುದ್ಧ ತೀರ್ಪು ನೀಡಿದೆ.ಘಟನೆಯನ್ನು ಉತ್ಪಾದನಾ ದೋಷ ಮತ್ತು ಸೇವಾ ನ್ಯೂನ್ಯತೆ ಎಂದು ಹೇಳಿ, ಕಿಯಾ ಮೋಟರ್ಸ್, ನಾಗಶಾಂತಿ ಸರ್ವಿಸ್ ಸೆಂಟರ್ ಮತ್ತು ಲೋಂಬಾರ್ಡ್ ವಿಮಾ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ 01.08.2023 …

Read More »

ಆರ್ ಎಸ್ ಎಸ್ ಟಾರ್ಗೆಟ್ ಮಾಡಿದ್ಯಾ ಕಾಂಗ್ರೆಸ್‌ ಸರ್ಕಾರ: ಖಡಕ್‌ ಉತ್ತರ ಕೊಟ್ಟ ಸಿದ್ದರಾಮಯ್ಯ.

ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಯಾವುದೇ ಸಂಘಸಂಸ್ಥೆಗಳ ಚಟುವಟಿಕೆಗಳನ್ನು ಜನರಿಗೆ ತೊಂದರೆಯಾಗುವಂತೆ ಸಾರ್ವಜನಿಕ ಸ್ಥಳಗಳಲ್ಲಿ ನಡೆಸಲು ಅನುಮತಿ ಪಡೆಯುವಂತೆ ಆದೇಶ ನೀಡಲಾಗಿದ್ದು, ಇದರಲ್ಲಿ ಯಾವುದೇ ಸಂಘಸಂಸ್ಥೆಗಳನ್ನು ಗುರಿಯಾಗಿಸಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಸಂಘ ಪರಿವಾರ ಮತ್ತು RSS ನವರು ಅಂಬೇಡ್ಕರ್ ಅವರ ಸಂವಿಧಾನವನ್ನು ವಿರೋಧಿಸಿದ್ದರು. ಈಗಲೂ ವಿರೋಧಿಸುತ್ತಿದ್ದಾರೆ. ಹೀಗಾಗಿ ಇವರ ಬಗ್ಗೆ ಎಚ್ಚರಿಕೆ ಇಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆಕೊಟ್ಟರು. ಅಂಬೇಡ್ಕರ್ …

Read More »

ನಡುರಸ್ತೆಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್‌: 25 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು.

ರಾಯಚೂರಿನಿಂದ ಬೆಂಗಳೂರಿಗೆ ಹೊರಟಿದ್ದ ಗ್ರೀನ್ ಲೈನ್ ಕಂಪನಿಯ ಸ್ಲೀಪರ್ ಬಸ್ ಆಂಧ್ರಪ್ರದೇಶದ ಅನಂತಪುರ ಸಮೀಪ ಆಕಸ್ಮಿಕವಾಗಿ ಹೊತ್ತಿ ಉರಿದು ಸಂಪೂರ್ಣ ಸುಟ್ಟು ಕರಲಾಗಿದೆ. ಸಕಾಲದಲ್ಲಿ ಪ್ರಯಾಣಿಕರೊಬ್ಬರು ಎಚ್ಚೆತ್ತುಕೊಂಡಿದ್ದರಿಂದ ರಾಯಚೂರಿನ 25 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಟೈರ್‌ಗೆ ಬೆಂಕಿ ಹತ್ತಿರುವುದನ್ನು ಬಸ್ಸಿನ ಚಾಲಕ ಆರಂಭದಲ್ಲಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಚಾಲಕನನ್ನು ತರಾಟೆಗೆ ತೆಗೆದುಕೊಂಡ ನಂತರ ಎಲ್ಲರೂ ಎಚ್ಚರಗೊಂಡರು. ಬಸ್ಸಿನಲ್ಲಿದ್ದವರು ಎಚ್ಚರಗೊಂಡು ಗಾಬರಿಗೊಂಡು ಕೆಳಗೆ ಇಳಿದಿದ್ದಾರೆ.

Read More »

ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಪಲ್ಟಿ, ತಪ್ಪಿದ ಭಾರೀ ಅನಾಹುತ!

ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ ಚಾಲಕ, ನಿರ್ವಾಹಕ ಸೇರಿದಂತೆ ಪ್ರಯಾಣಿಕರು ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಚವೆ ಬಳಿಯ ವಡ್ಡಿ ಘಾಟ್‌ನಲ್ಲಿ ನಡೆದಿದೆ.ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಾದರೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಅಂಕೋಲಾ ಠಾಣಾ ಪೊಲೀಸರು ತಕ್ಷಣ ಆಗಮಿಸಿ, ಗಾಯಾಳುಗಳನ್ನು ಅಂಕೋಲಾ ಹಾಗೂ ಕುಮಟಾ ಸರಕಾರಿ ಆಸ್ಪತ್ರೆಗಳಿಗೆ ರವಾನಿಸಿದರು. ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆ ನೀಡಲಾಗಿದೆ.

Read More »

ಪುತ್ತೂರು – ಆಟೋಚಾಲಕನ ಮೇಲೆ ಹಲ್ಲೆ ಮಾಡಿದ ಇಬ್ಬರು ಟ್ರಾಫಿಕ್ ಪೊಲೀಸ್ ಸಸ್ಪೆಂಡ್.

ಆಟೋ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಇಬ್ಬರು ಟ್ರಾಫಿಕ್ ಪೊಲೀಸರನ್ನು ದಕ್ಷಿಣಕನ್ನಡ ಜಿಲ್ಲಾ ಎಸ್ಪಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ಆಟೋ ಚಾಲಕ ಗಾಡಿ ನಿಲ್ಲಿಸದೆ ವೇಗವಾಗಿ ಹೋಗಿದ್ದಾನೆ. ಈ ವೇಳೆ ವಾಹನವನ್ನು ಹಿಂಬಾಲಿಸಿದ ಇಬ್ಬರು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ವಾಹನ ನಿಲ್ಲಿಸಿ ಆಟೋ ಡ್ರೈವರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್‌ ಆಗಿತ್ತು. ಇದೀಗ ಚಿದಾನಂದ …

Read More »

ದೊಡ್ಡಬಳ್ಳಾಪುರ| ಕೆಟ್ಟು ನಿಂತ ಲಾರಿಗೆ ಬಸ್‌ ಡಿಕ್ಕಿ: 10ಕ್ಕೂ ಪ್ರಯಾಣಿಕರಿಗೆ ಗಾಯ.

ಹಿಂದೂಪುರ ರಾಜ್ಯ ಹೆದ್ದಾರಿಯ ನಾಯಕರಂಡನಹಳ್ಳಿ ಸಮೀಪ ರಸ್ತೆ ಬದಿಯಲ್ಲಿ ಶನಿವಾರ ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದ ಬಂದಿರುವ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಚಾಲಕ ಸೇರಿದಂತೆ ಹತ್ತಕ್ಕೂ ಹೆಚ್ಚಿನ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.ಪಾವಗಡದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬಸ್ ಕಲ್ಲಿದ್ದಲು ತುಂಬಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಬಸಕ್ಕೆ ಬಸ್ಸಿನ ಮುಂದಿನ ಭಾಗ ನಜ್ಜುಗುಜ್ಜಾಗಿದೆ. ಬಸ್ಸಿನ ಮುಂದಿನ ಸೀಟ್‌ನಲ್ಲೇ ಕುಳಿತಿದ್ದ ಬಾಲಕ ಲಾರಿ ಸೇರಿ ಪ್ರಯಾಣಿಕರು ಗಾಯಗೊಂಡಿದ್ದಾರೆ.‌ ಡಿಕ್ಕಿ ರಭಸಕ್ಕೆ ಬಸ್‌ …

Read More »

ಪೊಲೀಸರ ಗುಂಡಿಗೆ ಬಲಿಯಾದ ಕುಖ್ಯಾತ ರೌಡಿ!

ದರೋಡೆ ಮಾಡಿ ಪರಾರಿಯಾಗಿದ್ದ ಕುಖ್ಯಾತ ರೌಡಿಯನ್ನು ಬಂಧಿಸಲು ತೆರಳಿದ್ದ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದಾಗ ಆತರಕ್ಷಣೆಗಾಗಿ ಇನ್ಸ್ ಪೆಕ್ಟರ್‌ ಹಾರಿಸಿದ ಗುಂಡು ತಗುಲಿ ರೌಡಿ ಮೃತಪಟ್ಟಿ ರುವ ಘಟನೆ ಇಂದು ಬೆಳಿಗ್ಗೆ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದ ಬಳಿ ನಡೆದಿದೆ.ಯುನೀಶ್‌ ಅಕ್ಲಾಸ್‌‍ ಪಟೇಲ್‌ (35) ಪೊಲೀಸರ ಗುಂಡಿಗೆ ಬಲಿ ಯಾದ ಕುಖ್ಯಾತ ರೌಡಿ.ಈತ ಗಾಂಧಿ ಚೌಕ್‌ ಪೊಲೀಸ್‌‍ ಠಾಣೆಯ ರೌಡಿ ಶೀಟರ್‌. ವಿಜಯಪುರದಲ್ಲಿ ವಾಸವಾಗಿದ್ದ ಈತ ಇತ್ತೀಚೆಗೆ ಆಲಮೇಲ ತಾಲೂಕಿನ …

Read More »

ಪೊಲೀಸರು ಎಸೆದ ಕಸವನ್ನು ಪೊಲೀಸರ ಕೈಲೇ ಹೆಕ್ಕಿಸಿದ ಕೊಡಗಿನ ಜನ.

ಕೊಡಗಿಗೆ ಪ್ರವಾಸಿಗರಿಗಿಂತ ಹೆಚ್ಚು ಸಮಸ್ಯೆಯಾಗಿರುವುದ ಅವರು ನಿಸರ್ಗದ ಮಡಿಲಲ್ಲಿ ಎಸೆದು ಹೋಗುತ್ತಿರುವ ಕಸ. ಇದು ಬರೀಯ ಕೊಡಗಿನ ಸಮಸ್ಯೆಯಲ್ಲ ಬಹುತೇಕ ಎಲ್ಲಾ ಪ್ರವಾಸಿ ತಾಣಗಳ ಕತೆಯೂ ಇದೇ ಆಗಿದೆ. ಪ್ರವಾಸಕ್ಕೆಂದು ಬರುವ ಪ್ರವಾಸಿಗರು ಕೊಡಗಿನ ಮಡಿಲಲ್ಲಿ ಪರಿಸರದಲ್ಲಿ ಕರಗದ ಕಸವನ್ನು ಎಸೆದು ಪರಿಸರ ಹಾಳು ಮಾಡಿ ಹೋಗುತ್ತಿದ್ದಾರೆ. ಇದರ ವಿರುದ್ಧ ಈ ಹಿಂದೆಯೂ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಕೊಡಗಿನ ಕೆಲ ಸಂಘಟನೆಗಳು ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿದ್ದರು. ಕೆಲ …

Read More »