BigTv News
September 25, 2025
Breaking News
ಹತ್ತಿಕುಣಿ ಗ್ರಾಮದ ಶರಣಪ್ಪ ದುಗನೂರು ತನ್ನ ಮಕ್ಕಳಾದ ಸಾನ್ವಿ (4.5 ವರ್ಷ) ಭಾರ್ಗವ (2 ವರ್ಷ) ಇಬ್ಬರನ್ನು ಮಂಚದ ಮೇಲೆ ಮಲಗಿದಾಗ ಕೊಡಲಿಯಿಂದ ಕೊಚ್ಚಿದ ರೀತಿಯಲ್ಲಿ ಕೊಲೆಗೈದಿರುವ ಅತ್ಯಂತ ಅಮಾನುಷ ಘಟನೆ ಇದಾಗಿದೆ ಎಂದು ಎಸ್ಪಿ ಪ್ರಥ್ವಿಕ್ ಶಂಕರ್ ತಿಳಿಸಿದ್ದಾರೆ.ತನ್ನ ಮಕ್ಕಳ ಮೇಲೆ ಅನುಮಾನಪಟ್ಟು ತಂದೆಯೇ ಕೊಲೆಮಾಡಿರುವ ಸಂಶಯದ ಬಗ್ಗೆ ಇದೀಗ ಹತ್ತಿಕುಣಿ ಗ್ರಾಮಸ್ಥರು ಮಾತಾಡಿಕೊಳ್ಳುತ್ತಿದ್ದಾರೆ. ಶರಣಪ್ಪ ದಂಪತಿ ನಡುವೆ ಆಗಾಗ ಗಲಾಟೆ ಆಗುತ್ತಿತ್ತು.ಸ್ಥಳಕ್ಕೆ ಯಾದಗಿರಿ ಗ್ರಾಮೀಣ ಠಾಣೆಯ ಪಿಎಸ್‌ಐ …
Read More »
BigTv News
September 25, 2025
Breaking News
ಅಪ್ರಾಪ್ತ ಪ್ರೇಮಿಗಳ ಪ್ರೀತಿ-ಪ್ರೇಮ ಸಾವಿನಲ್ಲಿ ಅಂತ್ಯವಾಗಿದೆ. ಹೌದು…ಕುಟುಂಬದ ಭಯದಿಂದ ಪ್ರೇಮಿಗಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಬ್ಯಾಟರಾಯನಹಳ್ಳಿಯಲ್ಲಿ ನಡೆದಿದೆ.ಸತೀಶ್ ಮತ್ತು ಶ್ವೇತ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಮನೆಯವರು ತಮ್ಮ ಪ್ರೀತಿಯನ್ನು ವಿರೋಧಿಸಬಹುದು ಎಂದು ಊಹಿಸಿ ಬ್ಯಾಟರಾಯನಹಳ್ಳಿ ತಾಲೂಕಿನ ಹೊರವಲಯದಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಂಡು ರೈಲಿಗೆ ತಲೆಕೊಟ್ಟಿದ್ದಾರೆ.ಘಟನಾ ಸ್ಥಳಕ್ಕೆ ಬೆಂಗಳೂರಿನ ರೈಲ್ವೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
Read More »
BigTv News
September 25, 2025
Breaking News
ಪದ್ಮವಿಭೂಷಣ, ಸರಸ್ವತೀ ಸಮ್ಮಾನ್ ಪುರಸ್ಕೃತ ಎಸ್.ಎಲ್.ಬೈರಪ್ಪನವರು, ಮೈಸೂರಿನಲ್ಲಿಯೇ ತಮ್ಮ ಜೀವಿತಾವಧಿಯನ್ನು ಕಳೆದಿದ್ದು, ವಿದ್ಯಾಭ್ಯಾಸ, ಸಾಹಿತ್ಯಕೃಷಿಯಲ್ಲಿ ನಡೆಸಿದ್ದರು. ಆದ್ದರಿಂದ ಮೈಸೂರಿನಲ್ಲಿಯೇ ಎಸ್.ಎಲ್.ಬೈರಪ್ಪನವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.ಯಾವುದೇ ಪ್ರಶಸ್ತಿಗೂ ಹಂಬಲಿಸದ ಬೈರಪ್ಪನವರಿಗೆ ಅವರ ಸಾಹಿತ್ಯದ ಕೊಡುಗೆಯನ್ನು ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿದ್ದರೆ ಉತ್ತಮವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Read More »
BigTv News
September 25, 2025
Breaking News
ಅಮೆರಿಕದ ಫ್ರೀಮಾಂಟ್‌ನಲ್ಲಿ 71 ವರ್ಷದ ನೋಂದಾಯಿತ ಲೈಂಗಿಕ ಅಪರಾಧಿ ಡೇವಿಡ್ ಬ್ರಿಮ್ಮರ್‌ನನ್ನು ಇರಿದು ಕೊಂದ ಆರೋಪದ ಮೇಲೆ 29 ವರ್ಷದ ಭಾರತೀಯ ಮೂಲದ ವರುಣ್ ಸುರೇಶ್ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ.ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ. ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಬ್ರಿಮ್ಮರ್ ತುರ್ತು ಚಿಕಿತ್ಸೆ ಪಡೆದಿದ್ದರೂ ಬಹು ಇರಿತದ ಗಾಯಗಳಿಂದ ಸಾವನ್ನಪ್ಪಿದ್ದಾನೆ ಎಂದು ಇಂಡಿಪೆಂಡೆಂಟ್ ವರದಿ ಮಾಡಿದೆ.’ವರುಣ್ ಸುರೇಶ್ ಪೊಲೀಸರಿಗೆ ತಪ್ಪೊಪ್ಪಿಕೊಂಡಿದ್ದು, ಅವರು ಮಕ್ಕಳನ್ನು ನೋಯಿಸುತ್ತಾರೆ ಮತ್ತು ಸಾಯಲು ಅರ್ಹರು ಎಂದು ಹೇಳುತ್ತಾ, …
Read More »
BigTv News
September 25, 2025
Breaking News
ಲವ್ ಮಹಮ್ಮದ್ʼ ಪ್ಲೆಕ್ಸ್‌ಗಳ ಹಾವಳಿ ರಾಜ್ಯಕ್ಕೂ ಕಾಲಿಟ್ಟಿದೆ. ಈ ವಿಚಾರವಾಗಿ ಎರಡು ಕೋಮುಗಳ ನಡುವೆ ಗಲಾಟೆಯಾಗಿದ್ದು, ಮನೆಗಳ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಈ ಪೋಸ್ಟರ್ ಹಾಕಿದ ಕಿಡಿಗೇಡಿಗಳ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ.ಅನಗತ್ಯವಾಗಿ ಕೋಮು ದ್ವೇಷ ಪ್ರಚೋದಿಸುವ ಉದ್ದೇಶದಿಂದ ಈ ಫ್ಲೆಕ್ಸ್ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ದಾವಣಗೆರೆಯ ಬೇತೂರು ರಸ್ತೆಯ ಕಾರ್ಲ್ ಮಾರ್ಕ್ಸ್ ನಗರದ 13ನೇ ಕ್ರಾಸ್‌ನಲ್ಲಿ ಗಲಾಟೆಯಾಗಿದ್ದು, ನಾಲ್ವರಿಗೆ ಗಾಯಗಳಾಗಿವೆ ಎಂದು ಸ್ಥಳೀಯರು …
Read More »
BigTv News
September 25, 2025
Breaking News
ಡೇಟಿಂಗ್ ಆಯಪ್‌ನಲ್ಲಿ ಭೇಟಿಯಾದ ಯುವಕನೊಬ್ಬ ತನ್ನ ಮೇಲೆ ಹಲ್ಲೆ ನಡೆಸಿ, ಬ್ಲ್ಯಾಕ್‌ಮೇಲ್ ಮಾಡಿ ಸುಲಿಗೆ ಮಾಡಿದ್ದಾರೆ ಎಂದು 23 ವರ್ಷದ ವೈದ್ಯರೊಬ್ಬರು ಮಾಧಾಪುರ ಪೊಲೀಸರನ್ನು ಸಂಪರ್ಕಿಸಿದ್ದಾರೆ.ವೈದ್ಯರೊಂದಿಗೆ ಲೈಂಗಿಕ ಸಂಬಂಧ ಹೊಂದಲು ಬಯಸಿದ್ದನು. ಆದರೆ ಅವರು ನಿರಾಕರಿಸಿದರು. ನಿರಾಕರಣೆಯಿಂದ ಕೋಪಗೊಂಡ ಆರೋಪಿಯು ವೈದ್ಯರಿಗೆ ಕಪಾಳಮೋಕ್ಷ ಮಾಡಿ, ಗುದ್ದಿ ಮತ್ತು ಬೆದರಿಸಿದನು. “ಅವನು ನನ್ನ ತಂದೆಯ ಫೋನ್ ಸಂಖ್ಯೆಯನ್ನು ಬಲವಂತವಾಗಿ ತೆಗೆದುಕೊಂಡು ಅವನಿಗೆ ಹಣ ನೀಡದಿದ್ದರೆ ನಿನ್ನ ಈ ವಿಚಾರ ಅವರಿಗೆ ಬಹಿರಂಗಪಡಿಸುವುದಾಗಿ …
Read More »
BigTv News
September 25, 2025
Breaking News
ಮಕ್ಕಳಿಲ್ಲದ ಹಿಂದೂ ವಿಧವೆಯ ಮರಣದ ನಂತರ, ಆಕೆಯ ಆಸ್ತಿ ಆಕೆಯ ಹೆತ್ತವರ ಬದಲು ಆಕೆಯ ಗಂಡನ ಕುಟುಂಬಕ್ಕೆ ಹೋಗುತ್ತದೆ ಎಂದು ಹೇಳುವ ಹಿಂದೂ ಉತ್ತರಾಧಿಕಾರ ಕಾಯ್ದೆ (ಎಚ್‌ಎಸ್‌ಎ)ಯ ನಿಬಂಧನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಇಂದು (ಸೆ.24) ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ , ಹಿಂದೂ ಕಾನೂನಿನಡಿಯಲ್ಲಿ ಮಹಿಳೆ ಮದುವೆಯಾದಾಗ, ಆಕೆಯ ಗೋತ್ರವೂ ಬದಲಾಗುತ್ತದೆ ಎಂದು ಹೇಳಿದೆ.ಈ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ಪ್ರಸ್ತುತ ಕಾನೂನಿನಡಿಯಲ್ಲಿ, ಆಸ್ತಿಯನ್ನು ಆಕೆಯ …
Read More »
BigTv News
September 25, 2025
Breaking News
ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ದೇವದುರ್ಗ ಸಮೀಪದ ಕೊಪ್ಪರ ರಸ್ತೆಯಲ್ಲಿ ಬುಧವಾರ (ಸೆ.24) ರಾತ್ರಿ ನಡೆದಿದೆ.ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದ ಸುಮಂಗಲಾ (55), ರಾಜವರ್ಧನ (21), ದ್ಯಾವಪ್ಪ (40) ಮತ್ತು ರವಿ (30) ಎಂಬ ನಾಲ್ವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ದಾಳಿಯ ವೇಳೆ ಪೊಲೀಸರು ನಾಲ್ಕು ಆಂಡ್ರಾಯ್ಡ್ ಮೊಬೈಲ್‌ಗಳು ಹಾಗೂ 6,460 ರೂ. ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿ ತನಿಖೆಯನ್ನು …
Read More »
Shaikh BigTv
September 24, 2025
Breaking News, ಕರ್ನಾಟಕ, ದೆಹಲಿ, ರಾಜಕೀಯ ಸುದ್ದಿ
ಮಗುವಿನ ಮನಸ್ಸಿನ, ಸಬ್ಯ ನಾಯಕ ಸಲೀಂ ಅಹ್ಮದ್ ಗೆ ಸಚಿವ ಸ್ಥಾನ ಪಕ್ಕಾ!!! ಉ-ಕ ಅಲ್ಪಸಂಖ್ಯಾತ ನಾಯಕರ ಕೋಟಾದಡಿ ಸಚಿವ ಸ್ಥಾನಕ್ಕೆ ಹೆಚ್ಚಿದ ಒತ್ತಡ.. ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು, ನವೆಂಬರ್ ತಿಂಗಳಲ್ಲಿ ಸಂಪುಟ ಪುನಾರಚನೆಯಾಗಲಿದೆ. ಈ ವೇಳೆ ಶೇ 50ರಷ್ಟು ಸಚಿವರು ಬದಲಾವಣೆಯಾಗುವ ಸಾಧ್ಯತೆ ಇದೆ ಎಂದರು.ಸಚಿವ ಸ್ಥಾನದಿಂದ ಹೊರ ಬಂದವರಿಗೆ ಪಕ್ಷ ಸಂಘಟನೆಯ ಕೆಲಸ ವಹಿಸಲಾಗುತ್ತದೆ. ಇನ್ನು ಹೊಸಬರಿಗೆ …
Read More »
BigTv News
September 24, 2025
Breaking News
ಹಿರಿಯ ಸಾಹಿತಿ ಎಸ್‌ಎಲ್ ಭೈರಪ್ಪ (94) ವಿಧವಿಶರಾಗಿದ್ದಾರೆ. ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಒಬ್ಬ ಭಾರತೀಯ ಕಾದಂಬರಿಕಾರ, ತತ್ವಜ್ಞಾನಿ ಮತ್ತು ಚಿತ್ರಕಥೆಗಾರ, ಅವರು ಕನ್ನಡದಲ್ಲಿ ಬರೆಯುತ್ತಾರೆ. ಅವರ ಕೃತಿಗಳು ಕರ್ನಾಟಕ ರಾಜ್ಯದಲ್ಲಿ ಜನಪ್ರಿಯವಾಗಿವೆ ಮತ್ತು ಅವರನ್ನು ಆಧುನಿಕ ಭಾರತದ ಜನಪ್ರಿಯ ಕಾದಂಬರಿಕಾರರಲ್ಲಿ ಒಬ್ಬರೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.ಅವರ ಹೆಚ್ಚಿನ ಕಾದಂಬರಿಗಳನ್ನು ಬಹುತೇಕ ಎಲ್ಲಾ ಭಾರತೀಯ ಭಾಷೆಗಳಿಗೆ ಮತ್ತು ಆರು ಇಂಗ್ಲಿಷ್‌ಗೆ ಅನುವಾದಿಸಲಾಗಿದೆ. ಅವರು NCERT ಯಲ್ಲಿ ಮೂರು ದಶಕಗಳ ಕಾಲ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ …
Read More »