Breaking News

Breaking News

ಮನೆಯಲ್ಲಿ `AC’ ಸ್ಪೋಟಗೊಂಡು ಒಂದೇ ಕುಟುಂಬದ ಮೂವರು ಸಾವು.!

ದೆಹಲಿಗೆ ಹೊಂದಿಕೊಂಡಿರುವ ಹರಿಯಾಣದ ಫರಿದಾಬಾದ್ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಎಸಿ ಸ್ಪೋಟಗೊಂಡ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.ಗ್ರೀನ್ ಫೀಲ್ಡ್ ಕಾಲೋನಿಯಲ್ಲಿರುವ ಮನೆಯ ಮೊದಲ ಮಹಡಿಯಲ್ಲಿ ಎಸಿ ಸ್ಫೋಟಗೊಂಡ ನಂತರ ಬೆಂಕಿ ಕಾಣಿಸಿಕೊಂಡಿದೆ.ಮೃತರನ್ನು ಕುಟುಂಬದ ಮುಖ್ಯಸ್ಥ ಸಚಿನ್ ಕಪೂರ್, ಅವರ ಪತ್ನಿ ರಿಂಕು ಕಪೂರ್ ಮತ್ತು ಮಗಳು ಸುಜನ್ ಕಪೂರ್ ಎಂದು ಗುರುತಿಸಲಾಗಿದೆ. ಅಪಘಾತದ ನಂತರ ಪ್ರದೇಶದಲ್ಲಿ ಶೋಕ ಹರಡಿದ್ದು, ನೆರೆಹೊರೆಯವರು ಈ ದುರಂತದಿಂದ …

Read More »

ಯುವನಿಧಿ ಫಲಾನುಭವಿಗಳಿಗೆ ಅಲ್ಪಾವಧಿ ಉಚಿತ ಕೌಶಲ್ಯ ತರಬೇತಿ.

ಕದ್ರಿಹಿಲ್ಸ್‍ ನಲ್ಲಿರುವ ಮಹಿಳಾ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ)ಯಲ್ಲಿ ಡಿಪ್ಲೋಮಾ/ಪದವಿ ಪೂರೈಸಿರುವ ಯುವನಿಧಿ ಫಲಾನುಭವಿಗಳಿಗೆ ಉಚಿತ ಕೌಶಲ್ಯ ತರಬೇತಿ ನೀಡಿ ಉದ್ಯೋಗಸ್ಥರನ್ನಾಗಿಸುವ ಉದ್ದೇಶದಿಂದ ಅರ್ಹ ಅಭ್ಯರ್ಥಿಗಳಿಗೆ ಉಚಿತ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:0824-2211477, 8277741731 ಸಂಪರ್ಕಿಸಬಹುದು ಎಂದು ಕೆ.ಜಿ.ಟಿ.ಟಿ.ಐ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More »

ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ, ಮದ್ದೂರು ಉದ್ವಿಗ್ನ, ಲಘು ಲಾಠಿ ಪ್ರಹಾರ.

ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದ ಮದ್ದೂರು ಉದ್ವಿಗ್ನಗೊಂಡಿದೆ. ಘಟನೆ ಖಂಡಿಸಿ ಸಾಗರೋಪಾದಿಯಲ್ಲಿ ಸೇರಿದ್ದ ಜನ ಕೋಮು ಗಲಭೆಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.ಹೀಗಾಗಿ ಸ್ಥಳದಲ್ಲಿ ನಿಷೇದಾಜ್ಞೆ ಜಾರಿಗೆ ತರಲಾಗಿತ್ತು. ಆದರೂ ಇಂದು ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ಘಟನೆ ನಡೆದ ಸ್ಥಳದಲ್ಲಿ ಜಮಾಯಿಸಿದ ಜನರ ಗುಂಪು ಕೆಲ ರಸ್ತೆಗಳಲ್ಲಿ ಅಳವಡಿಸಲಾಗಿದ್ದ …

Read More »

ರಿಂಗ್‌ ರಸ್ತೆಯಲ್ಲಿ ಸರಣಿ ಅಪಘಾತ – ನಾಲ್ವರು ಬಾಲಕರು ಬಲಿ!

ಚಾಮರಾಜನಗರ ಜಿಲ್ಲೆಯ ಗಾಳೀಪುರ ಸಮೀಪದ ರಿಂಗ್ ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ನಾಲ್ಕು ಜನ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.ಮೃತರನ್ನು ರೆಹಾನ್, ಆದಾನ್ ಪಾಷಾ, ಫೈಜಲ್, ಮೆರಾನ್ ಎಂದು ಗುರುತಿಸಲಾಗಿದೆ.ಮೊಪೆಡ್ ನಲ್ಲಿ ನಾಲ್ವರು ಬಾಲಕರು ಹೋಗುತ್ತಿದ್ದ ವೇಳೆ ಲಾರಿ, ಕಾರು, ಮೊಪೆಡ್ ನಡುವೆ ಸರಣಿ ಅಪಘಾತ ಸಂಭವಿಸಿದೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Read More »

ವ್ಯಕ್ತಿಯೊಬ್ಬ ಗೂಡ್ಸ್ ಆಟೋ ಚಾಲಕನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ.

ವ್ಯಕ್ತಿಯೊಬ್ಬ ಗೂಡ್ಸ್ ಆಟೋ ಚಾಲಕನ ಮೇಲೆ ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನಿಸಿದ್ದು, ಇದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹಳೇ ದ್ವೇಷದಿಂದ ಈ ದಾಂದಲೆ ನಡೆದಿದೆ ಎನ್ನಲಾಗಿದೆ. ಈ ಎಲ್ಲಾ ಘಟನೆಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೈಕ್ ಸವಾರ ರಸ್ತೆಯ ಮಧ್ಯದಲ್ಲಿ ಚಾಕುವಿನಿಂದ ಹಲ್ಲೆ ನಡೆಸಿದ್ದಲ್ಲದೆ, ಸರಕು ಸಾಗಣೆ ವಾಹನದ ವಿಂಡ್ ಷೀಲ್ಡ್ ಅನ್ನು ಪುಡಿಪುಡಿ ಮಾಡಿದ್ದಾನೆ. ಬೈಕ್ ಸವಾರ ತನ್ನ ಕೈಯಲ್ಲಿ ಮಾರಕಾಸ್ತ್ರ ಹಿಡಿದುಕೊಂಡು ಇನ್ನೊಬ್ಬ ಪ್ರಯಾಣಿಕನಿಗೆ ಬೆದರಿಕೆ …

Read More »

ಪಂದ್ಯ ನಡೆಯುತ್ತಿರುವಾಗಲೇ ಕ್ರಿಕೆಟ್ ಮೈದಾನದಲ್ಲಿ ಬಾಂಬ್ ಸ್ಫೋಟ; ದಿಕ್ಕಾಪಾಲಾಗಿ ಓಡಿದ ಜನರು.

ಪಾಕಿಸ್ತಾನದಲ್ಲಿ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯುತ್ತಿರೋ ವೇಳೆಯೇ ಬಾಂಬ್ ಸ್ಫೋಟ ನಡೆದಿದೆ ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಪಾಕಿಸ್ತಾನದ ಮಿಡಿಯಾ ಏಜೆನ್ಸಿ ‘ಡಾನ್’ ವರದಿ ಪ್ರಕಾರ, ಪಖ್ತುಂಖ್ವಾ ಪ್ರಾಂತ್ಯದಲ್ಲಿ ಬಾಂಬ್ ಸ್ಪೋಟವಾಗಿದೆ.ಒಂದು ವಾರದ ಹಿಂದೆಯಷ್ಟೇ ಖೈಬರ್ ಪಖ್ತುನ್ಖ್ವಾದ ಪೊಲೀಸ್ ಠಾಣೆಯ ಮೇಲೆ ಕ್ವಾಡ್‌ಕಾಪ್ಟರ್ ಬಳಸಿ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಓರ್ವ ಪೊಲೀಸ್ ಕಾನ್ಸ್‌ಟೇಬಲ್ ಮತ್ತು ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಇದೇ ಪ್ರದೇಶದಲ್ಲಿ …

Read More »

ಪಂಜಾಬ್‌ನಲ್ಲಿ ಭೀಕರ ಪ್ರವಾಹ: ಕೃಷಿಗೆ ಭಾರೀ ನಷ್ಟ, ಸಾವಿನ ಸಂಖ್ಯೆ 46ಕ್ಕೆ ಏರಿಕೆ.

ಭಾಕ್ರಾ, ಪೊಂಗ್ ಮತ್ತು ರಂಜಿತ್ ಸಾಗರ ಅಣೆಕಟ್ಟುಗಳಿಂದ ಬಿಡುಗಡೆಯಾದ ಹೆಚ್ಚುವರಿ ನೀರು ಪರಿಸ್ಥಿತಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.ಗುರುದಾಸ್ಪುರ್, ಅಮೃತಸರ, ಫಿರೋಜ್ಪುರ, ಪಠಾಣ್‌ಕೋಟ್, ಕಪೂರ್ಥಲಾ ಮತ್ತು ಫಜಿಲ್ಕಾ ಜಿಲ್ಲೆಗಳು ತೀವ್ರ ಹಾನಿಗೊಳಗಾಗಿದ್ದು, ಸಾವಿರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಕೃಷಿಕ ಸಮುದಾಯಕ್ಕೆ ಈ ಪ್ರವಾಹವು ತೀವ್ರ ಆರ್ಥಿಕ ಸಂಕಷ್ಟ ತಂದಿದ್ದು, 18 ಜಿಲ್ಲೆಗಳಲ್ಲಿ 1.75 ಲಕ್ಷ ಹೆಕ್ಟೇರ್ ಭೂಮಿಯಲ್ಲಿದ್ದ ಬೆಳೆಗಳು ಮುಳುಗಿವೆ. ವಿಶೇಷವಾಗಿ ಬಾಸ್ಮತಿ ಭತ್ತದ ಕೊಯ್ಲು ಶೇ. 20-25ರಷ್ಟು ಹಾನಿಗೊಳಗಾಗಿದೆ.

Read More »

ಉಪರಾಷ್ಟ್ರಪತಿ ಚುನಾವಣೆಗೂ ಮುನ್ನ ರಾಷ್ಟ್ರಪತಿ ಮುರ್ಮು ಭೇಟಿ ಮಾಡಿದ ಪ್ರಧಾನಿ ಮೋದಿ.

ಮುಂಬರುವ ಉಪರಾಷ್ಟ್ರಪತಿ ಚುನಾವಣೆಗೆ ಮೂರು ದಿನಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದರು.ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪೋಸ್ಟ್ಗೆ ಪ್ರಧಾನಿ ಶುಕ್ರವಾರ ಪ್ರತಿಕ್ರಿಯಿಸಿದ ನಂತರ ಈ ಸಭೆ ನಡೆಯಿತು.ಸೆಪ್ಟೆಂಬರ್ 9 ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಸಿಪಿ ರಾಧಾಕೃಷ್ಣನ್ ಅವರು ಪ್ರತಿಪಕ್ಷಗಳ ಅಭ್ಯರ್ಥಿ ಬಿ ಸುದರ್ಶನ್ ರೆಡ್ಡಿ ವಿರುದ್ಧ ಸ್ಪರ್ಧಿಸಲಿದ್ದಾರೆ..

Read More »

ರಾತ್ರಿಯಿಡೀ ಬೊಕೊ ಹರಾಮ್ ಉಗ್ರರ ಕ್ರೂರ ದಾಳಿ: 60ಕ್ಕೂ ಹೆಚ್ಚು ಜನ ಸಾವು, ಮನೆಗಳಿಗೆ ಬೆಂಕಿ, ಕುಟುಂಬಗಳ ಪಲಾಯನ.

ನೈಜೀರಿಯಾದ ಬೊರ್ನೊ ರಾಜ್ಯದ ಹಳ್ಳಿಯೊಂದರಲ್ಲಿ ಬೊಕೊ ಹರಾಮ್ ಉಗ್ರಗಾಮಿಗಳು ರಾತ್ರಿಯಿಡೀ ನಡೆಸಿದ ಕ್ರೂರ ದಾಳಿಯಲ್ಲಿ 60 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.ಬಾಮಾ ಸ್ಥಳೀಯ ಸರ್ಕಾರಿ ಪ್ರದೇಶದ ಸಮುದಾಯವಾದ ದಾರುಲ್ ಜಮಾಲ್‌ನಲ್ಲಿ ಈ ದಾಳಿ ನಡೆದಿದೆ.ಯುಎನ್ ಪ್ರಕಾರ, ಈ ಸಂಘರ್ಷವು ನೈಜೀರಿಯಾ ಮತ್ತು ನೆರೆಯ ದೇಶಗಳಲ್ಲಿ ಸುಮಾರು 35,000 ನಾಗರಿಕರನ್ನು ಕೊಂದಿದೆ ಮತ್ತು ಎರಡು ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಸ್ಥಳಾಂತರಿಸಿದೆ.

Read More »

ಇಸ್ರೇಲ್‌ನಿಂದ ಗಾಜಾದ ಬಹುಮಹಡಿ ಕಟ್ಟಡಗಳ ಧ್ವಂಸ.

ಗಾಜಾ ಮೇಲೆ ಇಸ್ರೇಲ್‌ ದಾಳಿ ಮುಂದುವರಿದಿದ್ದು, ಪ್ರಮುಖ ಬಹುಮಹಡಿ ಕಟ್ಟಡವಾದ “ಸೂಸಿ ಟವರ್‌’ ಅನ್ನು ಶನಿವಾರ ಧ್ವಂಸಗೊಳಿಸಿದೆ. 15 ಮಹಡಿಗಳ ಈ ಕಟ್ಟಡ ಕೆಲವೇ ಸೆಕೆಂಡುಗಳಲ್ಲಿ ಕುಸಿದು ಬೀಳುವ ವಿಡಿಯೋ ವೈರಲ್‌ ಆಗಿದೆ.ಶಸ್ತ್ರಾಸ್ತ್ರಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿತ್ತು ಎಂದು ಇಸ್ರೇಲ್‌ ಆರೋಪಿಸಿದೆ. ದಾಳಿಗೂ ಮುನ್ನ ಕಟ್ಟಡದಿಂದ ಸ್ಥಳಾಂತರಗೊಳ್ಳಲು ನಿವಾಸಿಗಳಿಗೆ ಅವಕಾಶ ನೀಡಲಾಗಿತ್ತು ಎಂದೂ ತಿಳಿಸಿದೆ. ಶುಕ್ರವಾರ “ಮುಷ್ತಾಹಾ ಟವರ್‌’ ಎಂಬ ಕಟ್ಟಡವನ್ನು ಇಸ್ರೇಲ್‌ ಧ್ವಂಸಗೊಳಿಸಿತ್ತು.

Read More »