Breaking News

Breaking News

ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ : ಹಳೆ ಪಿಂಚಣಿ ಯೋಜನೆ ಜಾರಿಗೆ ಕ್ಷಣಗಣನೆ; ಸರ್ಕಾರದಿಂದ ಆದೇಶ

ಕಳೆದ ಎರಡು ವರ್ಷಗಳಿಂದ ಕಾದು ಕುಳಿತಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಹಳೇ ಪಿಂಚಣಿ ಜಾರಿಗೆ ಒತ್ತಾಯಿಸಿ ನಡೆಸುತ್ತಿದ್ದ ಪ್ರತಿಭಟನೆಗಳು ಫಲ ನೀಡಿದಂತೆ ಕಾಣುತ್ತಿದೆ. ಕಳೆದ ಚುನಾವಣೆಯಲ್ಲಿ ಸರ್ಕಾರಿ ನೌಕರರ ಬೇಡಿಕೆಯನ್ನ ಈಡೇರಿಸುವುದಾಗಿ ರಾಜ್ಯ ಕಾಂಗ್ರೆಸ್‌ ಭರವಸೆಯನ್ನ ನೀಡಿತ್ತು.NPS ರದ್ದುಗೊಳಿಸಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳಲ್ಲಿ ಒಂದಾಗಿರುವ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದು ಎಂದು ರಾಜ್ಯ ಸರ್ಕಾರ ಮಾತು ಕೊಟ್ಟಿದೆ. ಈ ವಿಚಾರದಲ್ಲಿ ಈಗಾಗಲೇ ಜಾರಿಗೊಳಿಸುವುದಾಗಿ …

Read More »

ಹಾಸನದ ಯುವತಿ ಪ್ರೀತಿಸಿ ಕೈಕೊಟ್ಟ ಬಳ್ಳಾರಿ ಯುವಕ, ಮದುವೆಗೆ ಜಾತಿ ಅಡ್ಡಿ ಹುಡುಗನ ಮನೆಮುಂದೆ ಹೆಣ್ಮಗು ಧರಣಿ!

ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ ನಂದೀಶ್, ಯುವತಿಯನ್ನು ಹಾಸನದಿಂದ ಕರೆದುಕೊಂಡು ಬಂದು, ಕಂಪ್ಲಿಯಲ್ಲಿ ಒಂದು ದಿನ ತಿರುಗಾಡಿಸಿದ್ದಾನೆ. ಮನೆಯವರಿಂದ ನಂದೀಶ್ ಪೋನ್ ಬಂದ ಕೂಡಲೇ ಯುವತಿಯನ್ನು ಬಿಟ್ಟು ಹೋಗಿದ್ದಾನೆ. ಮನೆಯವರ ಒತ್ತಡಕ್ಕೆ ತುತ್ತಾಗಿ ಬಿಟ್ಟು ಹೋಗಿದ್ದಾನೆ. ಮನೆಯವರ ವಿರೋಧಕ್ಕೆ ಕಾರಣ ಜಾತಿ ಅಡ್ಡಿ ಬಂದಿದೆ. ಯುವತಿ ಭೋವಿ (ಎಸ್ಸಿ) ಸಮಾಜಕ್ಕೆ ಸೇರಿದ್ದರೆ, ನಂದೀಶ್ ಲಿಂಗಾಯತ ಜಂಗಮ ಸಮಾಜಕ್ಕೆ ಸೇರಿದವನು. ಪ್ರೀತಿ ಮಾಡುವಾಗ ಜಾತಿ ಅಡ್ಡಿಯಾಗದಿದ್ದರೂ, ಮದುವೆಯ ವಿಷಯದಲ್ಲಿ ವಿರೋಧ ವ್ಯಕ್ತವಾಗಿದೆ …

Read More »

ಯೂಟ್ಯೂಬ್ ವೀಡಿಯೋ ನೋಡಿ ಗಂಡನ ಕಿವಿಗೆ ಕೀಟನಾಶಕ ಸುರಿದು ಕೊಲೆ!

ತೆಲಂಗಾಣದಲ್ಲಿ ಮಹಿಳೆಯೊಬ್ಬಳು ಗಂಡನನ್ನು ಯೂಟ್ಯೂಬ್ ವೀಡಿಯೋ ನೋಡಿ ಕೊಲೆ ಮಾಡಿದ್ದು, ಈ ಕೊಲೆ ಪ್ರಕರಣ ನಗರವನ್ನು ಬೆಚ್ಚಿ ಬೀಳಿಸಿದೆ. ಅನೈತಿಕ ಸಂಬಂಧದ ಕಾರಣಕ್ಕೆ ಈ ಕೊಲೆ ನಡೆದಿದೆ.ಸಂಪತ್ ಕೊಲೆಯಾದ ಪತಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಂಪತ್ ಪತ್ನಿ ರಮಾದೇವಿ ಹಾಗೂ ಆಕೆಯ ಲವರ್‌ ರಾಜಯ್ಯ ಹಾಗೂ ಆತನ ಗೆಳೆಯ ಶ್ರೀನಿವಾಸ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

Read More »

ಯಾದಗಿರಿಯಲ್ಲಿ ಗುಡುಗು ಸಹಿತ ಭಾರಿ ಮಳೆ : ಸಿಡಿಲಿಗೆ ಯುವಕ ಬಲಿ, ಮತ್ತೊರ್ವನಿಗೆ ಗಾಯ!

ರಾಜ್ಯದಲ್ಲಿ ಗುಡುಗು-ಸಿಡಿಲು ಸಮೇತ ಶುಕ್ರವಾರ ಭರ್ಜರಿ ಮಳೆ ಸುರಿದಿದ್ದು, ಸಿಡಿಲು ಬಡಿದು ಓರ್ವ ಯುವಕ ಮೃತಪಟ್ಟಿದ್ದಾನೆ. ಬೆಳಗಾವಿ, ರಾಯಚೂರು, ಯಾದಗಿರಿ, ಗದಗ, ಹಾವೇರಿ ಸೇರಿ ಆರೇಳು ಜಿಲ್ಲೆಗಳಲ್ಲಿ ಧಾರಾಕಾರ ವರ್ಷಧಾರೆಗೆ ರಸ್ತೆಗಳು ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.ಗುಡುಗು ಸಹಿತ ಮಳೆ ಬರ್ತಿದ್ದಂತೆ ಅಣ್ಣ-ತಮ್ಮಂದಿರು ಗಿಡದ ಕೆಳಗೆ ನಿಂತಿದ್ದರು. ಆಗ ಸಿಡಿಲು ಬಡಿದಿದ್ದು, ಪರಮಣ್ಣ ಸ್ಥಳದಲ್ಲಯೇ ಮೃತಪಟ್ಟಿದ್ದಾನೆ. ಅಣ್ಣನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More »

ಬ್ಯೂಟಿಪಾರ್ಲರ್‌ ಹೆಸರಿನಲ್ಲಿ ಸೆಕ್ಸ್‌ದಂಧೆ, ಪುರುಷ ಗಿರಾಕಿಗಳೊಂದಿಗೆ ಸಹಕರಿಸಲು ಮಾಲಕಿಯಿಂದಲೇ ಒತ್ತಾಯ, ಸಂತ್ರಸ್ತೆಯಿಂದ ಪೊಲೀಸರಿಗೆ ದೂರು

ಬ್ಯೂಟಿಪಾರ್ಲರ್‌ ಹೆಸರಿನಲ್ಲಿ ಮಾಲಕಿ ಸೆಕ್ಸ್‌ದಂಧೆ ನಡೆಸುತ್ತಿರುವ ವಿಚಾರ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪುರುಷ ಗಿರಾಕಿಗಳೊಂದಿಗೆ ಸಹಕರಿಸಲು ಮಾಲಕಿಯೇ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಹಲ್ಲೆಗೈದು ಅರೆನಗ್ನ ಫೋಟೊ ತೆಗೆದು ಬೆದರಿಕೆ ಒಡ್ಡಿದ್ದಾರೆಂದು ಮಹಿಳೆಯೊಬ್ಬರು ಮಾಧ್ಯಮದ ಮುಂದೆ ಬಂದು ಅಳಲು ತೋಡಿಕೊಂಡಿದ್ದಾರೆ.ಸದ್ಯ ಸಂತ್ರಸ್ತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿಯವರಲ್ಲಿ ವಿಚಾರ ತಿಳಿಸಿದ್ದು, ಅದರಂತೆ ದೂರು ದಾಖಲಾಗಿದೆ. ಸಂಜೆ ವೇಳೆ ಸಂತ್ರಸ್ತೆಯೊಂದಿಗೆ ಮಹಿಳಾ ಪೊಲೀಸರು ಬೆರಳಚ್ಚು ತಜ್ಞರೊಂದಿಗೆ ಆಗಮಿಸಿ ಸಲೂನ್‌ನಲ್ಲಿ …

Read More »

ಟ್ರಂಪ್ ಟ್ಯಾಕ್ಸ್ ತರಲೆಯಿಂದ ಭಾರತದ ದ್ವಿಪಕ್ಷೀಯ ಸಂಬಂಧಕ್ಕೆ ಧಕ್ಕೆ – ಯುಎಸ್ ಆಡಳಿತ ವಾರ್ನಿಂಗ್!

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇತ್ತೀಚೆಗೆ ಭಾರತದಿಂದ ಆಮದಾಗುವ ವಸ್ತುಗಳಿಗೆ 50% ರಷ್ಟು ಭಾರೀ ಸುಂಕವನ್ನು ವಿಧಿಸುವ ಮೂಲಕ ಶಾಕ್‌ ನೀಡಿದ್ದಾರೆ. ಇದೀಗ ಟ್ರಂಪ್‌ ಅವರ ನಿರ್ಧಾರ ಭಾರತ ಹಾಗೂ ಅಮೆರಿಕದ ಸ್ನೇಹಮಯ ಸಂಬಂಧಕ್ಕೆ ದೊಡ್ಡ ಹಾನಿಯನ್ನು ಉಂಟುಮಾಡುವ ಅಪಾಯವಿದೆ ಎಂದು ಅಮೆರಿಕದ ಅಧಿಕಾರಿಗಳೇ ಎಚ್ಚರಿಕೆ ನೀಡಿದ್ದಾರೆ.ಅಮೆರಿಕ ಇಷ್ಟು ದೊಡ್ಡ ಮಟ್ಟದಲ್ಲಿ ಸುಂಕ ಹೇರಿರುವುದು ಭಾರತಕ್ಕೆ ದೀರ್ಘಕಾಲದವರೆಗೆ ನೆನಪಿಸುವಂತೆ ಮಾಡುವುದಂತೂ ಖಚಿತ. ಇದು ಭಾರತಕ್ಕೆ ಅಮೆರಿಕ ಒಂದು ವಿಶ್ವಾಸಾರ್ಹ ಪಾಲುದಾರ …

Read More »

ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ 9 ಕೋಟಿ ರೂ ಕಳೆದುಕೊಂಡ ವೃದ್ಧ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲು!

ನಿವೃತ್ತಿ ಜೀವನದಲ್ಲಿದ್ದ 80 ಹರೆಯದ ವೃದ್ಧರೊಬ್ಬರು ಹಾಯಾಗಿ ಜೀವನ ಸಾಗಿಸುತ್ತಿದ್ದರು. ಬ್ಯಾಂಕ್‌ನಲ್ಲಿ ತಮ್ಮ ಜೀವನದ ಉಳಿತಾಯದ ಹಣ, ಪ್ರತಿ ದಿನ ಮೊಬೈಲ್‌ನಲ್ಲಿ ಒಂದಷ್ಟು ಹೊತ್ತು ಜಾಲಾಡುತ್ತಾ ಕಾಲ ಕಳೆಯುತ್ತಿದ್ದರು. ಇದರ ನಡುವೆ ಬಂದ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ ಬರೋಬ್ಬರಿ 9 ಕೋಟಿ ರೂಪಾಯಿ ಕಳೆದುಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.ನಾಲ್ಕು ಹೆಸರಿನಲ್ಲಿ ಕರೆ ಮಾಡಿ, ಚಾಟಿಂಗ್ ಮಾಡಿ ವೃದ್ಧನ ಖೆಡ್ಡಾಗೆ ಬೀಳಿಸಿದ್ದಾರೆ. ಚಾಟಿಂಗ್ ಬಹಿರಂಗಪಡಿಸುವುದಾಗಿ ಬೆದರಿಸಿದ್ದಾರೆ. ಅಶ್ಲೀಲ ಫೋಟೋಗಳನ್ನು ಕಳುಹಿಸಿರುವ ಸ್ಕ್ರೀನ್ …

Read More »

ಸಾಲ ಭಾದೆ ತಾಳಲಾರದೇ ಲಾರಿ ಮಾಲೀಕ ಆತ್ಮಹತ್ಯೆ!

ಸಂಘ-ಸಂಸ್ಥೆ ಹಾಗೂ ಖಾಸಗಿ ಫೈನಾನ್ಸ್ ನವರ ಕಿರುಕುಳದಿಂದ ಬೇಸತ್ತ ಲಾರಿ ಮಾಲಕರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಗ್ಗೆ ಬೈಲು ಸಮೀಪ ತೀರ್ಥಹಳ್ಳಿಯಲ್ಲಿ ನಡೆದಿದೆ.ಮಂಜುನಾಥ್ ಹೆಚ್. (ಟಿಪ್ಪರ್ ಮಂಜು) (37) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

Read More »

ನಾಸಿಕ್: ರೈಲಿಗೆ ತಲೆ ಕೊಟ್ಟು ದಂಪತಿ ಆತ್ಮಹತ್ಯೆ!

ರೈಲಿಗೆ ತಲೆ ಕೊಟ್ಟು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಾಸಿಕ್​​ನಲ್ಲಿ ನಡೆದಿದೆ. ಇಗತ್ಪುರಿ ತಾಲೂಕಿನ ಪ್ರಮುಖ ಮಾರುಕಟ್ಟೆ ಸ್ಥಳವಾದ ನಾಸಿಕ್​​ನ ಘೋಟಿಯಾ ಸುಧಾನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆಗಸ್ಟ್ 6 ರಂದು ಸಂಜೆ 7.45 ರ ಸುಮಾರಿಗೆ ನಡೆದಿದ್ದು, ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

Read More »

ಆಂಜನೇಯ ದೇಗುಲ ನಿರ್ಮಾಣಕ್ಕೆ 1.83 ಲಕ್ಷ ದೇಣಿಗೆ ನೀಡಿದ ಭಿಕ್ಷುಕಿ: ಜನರ ದುಡ್ಡು ಜನರಿಗೆ ತಲುಪಿಸಿದ ಹೃದಯವಂತೆ!

ರಾಯಚೂರು ತಾಲೂಕಿನ ಬಿಜನಗೇರಾ ಆಂಜನೇಯ ದೇಗುಲ ನಿರ್ಮಾಣಕ್ಕಾಗಿ ವಯಸ್ಸಾದ ಭಿಕ್ಷುಕಿಯೊಬ್ಬರು1.83 ಲಕ್ಷ ರೂ. ದೇಣಿಗೆ ನೀಡಿಗಮನಸೆಳೆದಿದ್ದಾಳೆ. ಬಿಜನಗೇರಾ ಗ್ರಾಮದ 60 ವರ್ಷದ ರಂಗಮ್ಮಬಿಕ್ಷೆಎತ್ತಿದ್ದಬರೋಬ್ಬರಿ 1.83 ಲಕ್ಷ ರೂಪಾಯಿಹಣವನ್ನುಊರಿನಆಂಜನೇಯ ದೇವಸ್ಥಾನ ಜೀರ್ಣೋದ್ಧಾರಕ್ಕೆನೀಡಿದ್ದಾಳೆ. ಈಮೂಲಕಭಿಕ್ಷಾಟನೆ ಹಣದಲ್ಲಿ ಮಜಾ ಉಡಾಯಿಸೋರ ಮಧ್ಯೆ ಜನರ ದುಡ್ಡು ಜನರಿಗೆ ತಲುಪಿಸಿದ ಹೃದಯವಂತೆಎನಿಸಿಕೊಂಡಿದ್ದಾಳೆ. ಕಳೆದ ಆರು ವರ್ಷಗಳಿಂದ ಬಿಕ್ಷಾಟನೆಯಿಂದ ಬಂದಿದ್ದ ಹಣವನ್ನು ಮೂರು ಗೋಣಿ ಚೀಲದಲ್ಲಿ ಸಂಗ್ರಹಿಸಿಟಿದ್ದ ನೋಟುಗಳು, ಚಿಲ್ಲರೆ ಹಣವನ್ನು 20 ಕ್ಕು ಹೆಚ್ಚು ಜನರು ಬರೋಬ್ಬರಿ …

Read More »