Breaking News

ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ 9 ಕೋಟಿ ರೂ ಕಳೆದುಕೊಂಡ ವೃದ್ಧ ಅಸ್ವಸ್ಥಗೊಂಡು ಆಸ್ಪತ್ರೆ ದಾಖಲು!

ನಿವೃತ್ತಿ ಜೀವನದಲ್ಲಿದ್ದ 80 ಹರೆಯದ ವೃದ್ಧರೊಬ್ಬರು ಹಾಯಾಗಿ ಜೀವನ ಸಾಗಿಸುತ್ತಿದ್ದರು. ಬ್ಯಾಂಕ್‌ನಲ್ಲಿ ತಮ್ಮ ಜೀವನದ ಉಳಿತಾಯದ ಹಣ, ಪ್ರತಿ ದಿನ ಮೊಬೈಲ್‌ನಲ್ಲಿ ಒಂದಷ್ಟು ಹೊತ್ತು ಜಾಲಾಡುತ್ತಾ ಕಾಲ ಕಳೆಯುತ್ತಿದ್ದರು. ಇದರ ನಡುವೆ ಬಂದ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ ಬರೋಬ್ಬರಿ 9 ಕೋಟಿ ರೂಪಾಯಿ ಕಳೆದುಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.ನಾಲ್ಕು ಹೆಸರಿನಲ್ಲಿ ಕರೆ ಮಾಡಿ, ಚಾಟಿಂಗ್ ಮಾಡಿ ವೃದ್ಧನ ಖೆಡ್ಡಾಗೆ ಬೀಳಿಸಿದ್ದಾರೆ. ಚಾಟಿಂಗ್ ಬಹಿರಂಗಪಡಿಸುವುದಾಗಿ ಬೆದರಿಸಿದ್ದಾರೆ. ಅಶ್ಲೀಲ ಫೋಟೋಗಳನ್ನು ಕಳುಹಿಸಿರುವ ಸ್ಕ್ರೀನ್ ಶಾಟ್ ಇದೆ. ಬಹಿರಂಗಪಡಿಸುತ್ತೇನೆ. ಬದುಕನ್ನೇ ಅಂತ್ಯಗೊಳಿಸುತ್ತೇನೆ ಎಂದೆಲ್ಲಾ ಬೆದರಿಸಿದ್ದಾರೆ. ಬೆದರಿದ ವೃದ್ಧಿ 2023ರಿಂದ ಇಲ್ಲೀವರೆಗೆ 734 ಟ್ರಾನ್ಸಾಕ್ಷನ್ ಮಾಡಿದ್ದಾರೆ. ಈ ಮೂಲಕ ಒಟ್ಟ 8.7 ಕೋಟಿ ರೂಪಾಯಿ ಕಳುಹಿಸಿದ್ದಾರೆ. ತನ್ನ ಎಲ್ಲಾ ಉಳಿತಾಯ ಮುಗಿದಾಗ, ಮಗನಿಂದ 5 ಲಕ್ಷ ರೂಪಾಯಿ, ಮಗಳ ಗಂಡನಿಂದ 2.5 ಲಕ್ಷ ರೂಪಾಯಿ ಪಡೆದು ಅನಾಮಿಕ ಮಹಿಳೆಗೆ ನೀಡಿದ್ದಾರೆ.

ಮಗನಿಗೆ ಅನುಮಾನ ಬಂದು ತಂದೆ ಬಳಿ ಕೇಳಿದಾಗ ಪರಿಸ್ಥಿತಿ ಅರಿವಾಗಿದೆ. ತನ್ನ ಎಲ್ಲಾ ದುಡ್ಡು ಕಳೆದುಕೊಂಡ ವೃದ್ಧ ತೀವ್ರ ಆಘಾತ, ಆತಂಕ, ಒತ್ತಡದಿಂದ ಅಸ್ವಸ್ಥಗೊಂಡಿದ್ದಾರೆ. ಹೀಗಾಗಿ ಕುಟುಂಬಸ್ಥರು ಆಸ್ಪತ್ರೆ ದಾಖಲಿಸಿದ್ದಾರೆ.

Share News

About BigTv News

Check Also

ಬೆಂಗಳೂರಲ್ಲಿ ನಕಲಿ ಡೇಟಿಂಗ್ ಬಲೆ, 20 ಲಕ್ಷ ರೂ. ಮೌಲ್ಯದ ಚಿನ್ನ ಲೂಟಿ

ಬೆಂಗಳೂರು: ಚಂದ್ರಾ ಲೇಔಟ್‌ನಲ್ಲಿ ಡೇಟಿಂಗ್ ಆಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಚಾಕು ತೋರಿಸಿ ಬೆದರಿಸಿ, 226 …

Leave a Reply

Your email address will not be published. Required fields are marked *