Breaking News

Breaking News

ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಸಚಿವರ ಸಹೋದರ

ಆಂಧ್ರಪ್ರದೇಶದ ರಸ್ತೆ ಮತ್ತು ಕಟ್ಟಡ ಸಚಿವ ಬಿ.ಸಿ.ಜನಾರ್ದನ ರೆಡ್ಡಿ ಅವರ ಸಹೋದರ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದ್ದು, ರಾಜಕೀಯ ವಿವಾದ ಮತ್ತು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.ಕಾನ್ಸ್ಟೇಬಲ್ ಜಸ್ವಂತ್ ಕರ್ತವ್ಯದಲ್ಲಿದ್ದ ರಾಜ್ಯದ ನಂದ್ಯಾಲ್ ಜಿಲ್ಲೆಯ ಕೊಲಿಮಿಗುಂಡ್ಲಾದ ದೇವಾಲಯದಲ್ಲಿ ಈ ಘಟನೆ ನಡೆದಿದೆ.

Read More »

ಗಂಡನನ್ನು ಕೊಂದು ನಾಗರಪಂಚಮಿ ಆಚರಣೆ!

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ಪತ್ನಿ ನಾಗರ ಪಂಚಮಿ ಆಚರಿಸಿದ್ದ ವಿಲಕ್ಷಣ ಘಟನೆಯೊಂದು ಕೊಪ್ಪಳ ತಾಲೂಕಿನ ಬೂದಗುಂಪ ಗ್ರಾಮದಲ್ಲಿ ನಡೆದಿದೆ. ಸದ್ಯ ಕೊಲೆ ಪ್ರಕರಣ ಭೇದಿಸಿರುವ ಮುನಿರಾಬಾದ್​ ಠಾಣೆ ಪೊಲೀಸರು ಆರೋಪಿಗಳಾದ ನೇತ್ರಾವತಿ ಮತ್ತು ಶ್ಯಾಮಣ್ಣ ಎಂಬುವವರನ್ನು ಬಂಧಿಸಿದ್ದಾರೆ.

Read More »

ಬಾಲಕನ ಕಿಡ್ನಾಪ್ ಮಾಡಿ ₹5 ಲಕ್ಷಕ್ಕೆ ಡಿಮ್ಯಾಂಡ್; ಪೊಲೀಸರಿಗೆ ಹೇಳಿದ್ದಕ್ಕೆ ಮಗನ ಕೊಂದು ಎಸೆದು ಹೋದರು!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಅಮಾನುಷವಾದ ಘಟನೆ ನಡೆದಿದೆ. ಕೇವಲ 5 ಲಕ್ಷ ರೂ. ಹಣಕ್ಕಾಗಿ ಸಂಜೆ ಟ್ಯೂಷನ್‌ಗೆ ಹೋಗಿದ್ದ ಮಗನನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಮಗುವಿನ ತಂದೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ವಿಚಾರ ಕಿಡ್ನಾಪರ್ಸ್‌ಗೆ ಗೊತ್ತಾದ ಕೂಡಲೇ, ಆ ಬಾಲಕನನ್ನು ರಸ್ತೆ ಬಳಿಯೇ ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವ ಅತ್ಯಂತ ಅಮಾನವೀಯ ಘಟನೆ ನಡೆದಿದೆ

Read More »

ಶ್ರಾವಣಕ್ಕೆ ದುಬಾರಿಯಾದ ತೆಂಗಿನಕಾಯಿ!

ಶ್ರಾವಣಮಾಸ ಆರಂಭವಾಗಿದ್ದು, ಸಾಲುಸಾಲು ಹಬ್ಬಗಳು ಬಂದಿದ್ದು, ಈಗಾಗಲೇ ಭರದ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಹಬ್ಬಕ್ಕೆ ಪ್ರಮುಖವಾಗಿ ಬೇಕಾದ ತೆಂಗಿನಕಾಯಿ ಬೆಲೆ ಗ್ರಾಹಕರ ಕೈ ಸುಡುವಂತಾಗಿದೆ.ಆಷಾಢದಲ್ಲಿ ಕೊಂಚ ಇಳಿಕೆ ಕಂಡಿದ್ದು, ತೆಂಗಿನಕಾಯಿ ಶ್ರಾವಣ ಪ್ರಾರಂಭವಾಗುತ್ತಿದ್ದಂತೆ ಮತ್ತೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಸಗಟು ಖರೀದಿಯಲ್ಲಿ ಪ್ರತಿ ಕೆಜಿಗೆ 50 ರಿಂದ 60 ರೂ.ಗೆ ಮಾರಾಟವಾಗುತ್ತಿದೆ. ಸಾಲುಸಾಲು ಹಬ್ಬಗಳಿಗೆ ತೆಂಗಿನಕಾಯಿ ಅನಿವಾರ್ಯವಾಗಿದ್ದು, ಬೇಡಿಕೆ ಹೆಚ್ಚಾಗಿದೆ. ತೋಟಗಳಲ್ಲಿ ಇಳುವರಿ ಕುಂಠಿತವಾಗಿ, ಬೇಡಿಕೆ ಹೆಚ್ಚಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ …

Read More »

ಸಾಗರದ ತಾಯಿ-ಮಕ್ಕಳ ಆಸ್ಪತ್ರೆಯ ‘ಜನರೇಟರ್ ಕದ್ದೊಯ್ದ’ವರ ವಿರುದ್ಧ ‘FIR’ ದಾಖಲು

ಸಾಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹಳೆಯ 65 ಕೆವಿ ಜನರೇಟರ್ ಅನ್ನು ರಾತ್ರೋ ರಾತ್ರಿ ಕದ್ದೊಯ್ದಿದ್ದದ್ದು ತಡವಾಗಿ ಬೆಳಕಿಗೆ ಬಂದಿತ್ತು. ಈ ಘಟನೆಯ ಹಿನ್ನಲೆಯಲ್ಲಿ ತಾಯಿ-ಮಕ್ಕಳ ಆಸ್ಪತ್ರೆಯ ಜನರೇಟರ್ ಕದ್ದೊಯ್ದಿರುವಂತ ಆಗಂತುಕರ ವಿರುದ್ಧ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Read More »

ಕಟ್ಟಡ ನಿರ್ಮಾಣಕ್ಕಾಗಿ ‘ಪಾದಚಾರಿ ಮಾರ್ಗ’ದಲ್ಲಿ ಸಾರುವೆ ಅಳವಡಿಸಿದ್ದವರಿಗೆ ‘BBMP ಶಾಕ್’: 1 ಲಕ್ಷ ದಂಡ

ದಕ್ಷಿಣ ವಲಯ ಬಸವನಗುಡಿ ವ್ಯಾಪ್ತಿಯ ಎಂ.ಎನ್ ಕೃಷ್ಣರಾವ್ ರಸ್ತೆಯಲ್ಲಿ ಕಟ್ಟಡ ನಿರ್ಮಾಣದ ಮುಂಭಾಗದಲ್ಲಿರುವ ಪಾದಾಚಾರಿ ಮಾರ್ಗದಲ್ಲಿ ಸಾರುವೆ ಅಳವಡಿಸಿ ನಾಗರಿಕರ ಓಡಾಟಕ್ಕೆ ಸಮಸ್ಯೆ ಮಾಡಿದವರಿಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ.ವಲಯ ಮುಖ್ಯ ಅಭಿಯಂತರರಾದ ಬಸವರಾಜ್ ಕಬಾಡೆ ರವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಲು ಸೂಚಿಸಿರುತ್ತಾರೆ. ಪರಿಶೀಲನೆಯ ವೇಳೆ ಪಾದಚಾರಿ ಮಾರ್ಗದಲ್ಲಿ ಸಾರುವೆ ಅಳವಡಿಸಿ, ಅದಕ್ಕೆ ಗ್ರೀನ್ ನೆಟ್ ಹಾಕಿ ನಾಗರಿಕರು ಓಡಾಡದ ಸ್ಥಿತಿ ಉಂಟಾಗಿರುತ್ತದೆ.

Read More »

ಮನಸ್ಸಿನಲ್ಲಿ ಬೆಟ್ಟದಷ್ಟು ದುಃಖ, ಸ್ನೇಹಿತನ ಕೊನೆಯ ಆಸೆಯಂತೆ ಅಂತ್ಯಕ್ರಿಯೆ ವೇಳೆ ಕುಣಿದ ವ್ಯಕ್ತಿ!

ಮನಸ್ಸಿನಲ್ಲಿ ಬೆಟ್ಟದಷ್ಟು ದುಃಖ ಉಮ್ಮಳಿಸಿ ಬರುತ್ತಿದ್ದರೂ ತೋರಿಸಿಕೊಳ್ಳದೆ ಸ್ನೇಹಿತನ ಅಂತ್ಯಕ್ರಿಯೆಯಲ್ಲಿ ಅವರ ಕೊನೆಯ ಆಸೆಯಂತೆ ವ್ಯಕ್ತಿಯೊಬ್ಬರು ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆ ಮಧ್ಯಪ್ರದೇಶದ ಮಂದಸೌರ್​​ನಲ್ಲಿ ನಡೆದಿದೆ.ನನ್ನ ಅಂತ್ಯಕ್ರಿಯೆ ನಡೆಯುವಾಗ ಆತ ಅಳು ಮೊಗದಲ್ಲಿ ಇರಬಾರದು ನಗು ನಗುತ್ತಾ ನನ್ನನ್ನು ಕಳುಹಿಸಿಕೊಡಬೇಕು ಎಂದು ಆಶಿಸಿದ್ದರು. ಕಣ್ಣೀರು ಹಾಗೂ ನಗುವಿನ ಈ ಸಂಗಮವನ್ನು ನೋಡಿ ಗ್ರಾಮಸ್ಥರು ಭಾವುಕರಾದರು. ಎಲ್ಲರೂ ಈ ವಿಶಿಷ್ಟ ಹಾಗೂ ಹೃದಯಸ್ಪರ್ಶಿ ದೃಶ್ಯವನ್ನು ನೀಡಿ ಮೆಚ್ಚಿದ್ದಾರೆ. …

Read More »

ಒಡಿಶಾದಲ್ಲಿ ಪ್ಯಾಧ್ಯಾಪಕನ ಕಾಟಕ್ಕೆ ಜೀವ ಬಿಟ್ಟ ವಿದ್ಯಾರ್ಥಿನಿ!

ಒಡಿಶಾದ ಬುಬನೇಶ್ವರದ ಬಾಲಸೋರ್ನ ಫಕೀರ್ ಮೋಹನ್ ಸ್ವಾಯತ್ತ ಕಾಲೇಜಿನಲ್ಲಿ B. ED ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ವಿಭಾಗ ಮುಖ್ಯಸ್ಥ ಪ್ರೊಫೆಸರ್ ಸಮೀರ್ ಕುಮಾರ್ ಸಾಹು ಎಂಬಾತ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಿದ್ದ ಎನ್ನಲಾಗಿದೆ. ಇದರ ಮನನೊಂದ ಯುವತಿ ಕಾಲೇಜಿನ ಆಂತರಿಕ ದೂರು ಸಮಿತಿಗೆ ಪತ್ರವನ್ನು ಬರೆದಿದ್ದು, ಆ ಪತ್ರದಲ್ಲಿ ಪ್ರಾದ್ಯಾಪಕರಿಂದ ತಿಂಗಳುಗಳಿಂದ ನಿಂದನೆ, ಬೆದರಿಕೆ, ಎದುರಿಸುತ್ತಿರುವ ಬಗ್ಗೆ ವಿವರವಾಗಿ ಬರೆದಿದ್ದಳು, ಆದರೆ ಪ್ರಾಧ್ಯಾಪಕರ ವಿರುದ್ಧ ಕಾಲೇಜಿನ ಆಡಳಿತ ಮಂಡಳಿ ಯಾವುದೇ …

Read More »

10 ಸಾವಿರ ಕೊಡ್ತೀನಿ..’ ವಿದ್ಯಾರ್ಥಿನಿಗೆ ಬಾ ಎಂದ ಪ್ರಿನ್ಸಿಪಾಲ್‌ ಪೊಲೀಸರ ವಶಕ್ಕೆ!

ತುಮಕೂರಿನ ಜಯನಗರದಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಇದಕ್ಕೂ ಮೊದಲು ಆತ ಬಾರ್ ಲೈನ್ ರಸ್ತೆಯಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಇಂಗ್ಲಿಷ್ ಪ್ರಾದ್ಯಾಪಕನಾಗಿ ಕೆಲಸ ಮಾಡುತ್ತಿದ್ದ. ಈಸ ಸಮಯದಲ್ಲಿ ಆ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ನಂಬರ್ ಪಡೆದುಕೊಂಡಿದ್ದ ಅಸಾಮಿ, ಅಶ್ಲೀಲ ಮೆಸೇಜ್‌ಗಳನ್ನ ಮಾಡಲು ಆರಂಭಿಸಿದ್ದ.ಯೋಗೇಶ್‌ ಕಾಟ ಕೊಡುತ್ತಿರುವ ಬಗ್ಗೆ ಯುವತಿ ತಂದೆಗೆ ತಿಳಿಸಿದ್ದು, ನಂತರ ತುಮಕೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಯುವತಿಯ ದೂರಿನ ಆಧಾರದ ಮೇಲೆ ಲೈಂಗಿಕ ಕಿರುಕುಳ …

Read More »

ಕಾಂತಾರ 1′ ರಿಲೀಸ್‌ಗೂ ಮುನ್ನವೇ ಹೊಸ ಪ್ಯಾನ್ ಇಂಡಿಯಾ ಚಿತ್ರಕ್ಕೆ ಸಹಿ ಹಾಕಿದ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ಮೂರನೇ ಪ್ಯಾನ್ ಇಂಡಿಯಾ ಸಿನಿಮಾಗೆ ಸಹಿ ಹಾಕಿದ್ದಾರೆ! ಅವರಿಗೆ ಈಗ ಭಾರತದ ವಿವಿಧ ಭಾಷಾ ಚಿತ್ರರಂಗಗಳಿಂದ ಭಾರಿ ಬೇಡಿಕೆ ಇದ್ದು, ಇದು ಅವರ ಸಾಮಾಜಿಕ ಪ್ರಭಾವ ಮತ್ತು ಕಲಾತ್ಮಕ ಸಾಮರ್ಥ್ಯದ ಸಾಕ್ಷಿ. ಪ್ರಸ್ತುತ ಅವರು ಬಹು ನಿರೀಕ್ಷಿತ ‘ಕಾಂತಾರ ಚಾಪ್ಟರ್ 1′ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದು, ಈ ಚಿತ್ರ ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ.ಸುಟ್ಟ ಭೂಮಿಯಿಂದ ಒಬ್ಬ ಬಂಡುಕೋರ ಹುಟ್ಟಿದ’ ಎಂಬ ಶಕ್ತಿಶಾಲಿ ಟ್ಯಾಗ್‌ಲೈನ್‌ ಜೊತೆಗೆ ಚಿತ್ರದ …

Read More »