ಹೊಗೆನಕಲ್: ಈ ಬಾರಿಯ ಮಳೆಯ ಪ್ರವಾಹಕ್ಕೆ ಹಲವು ಜಲಾಶಯಗಳು ಉಕ್ಕಿ ಹರಿಯುತ್ತಿದ್ದು, ಕೆಲ ಗ್ರಾಮಗಳಿಗೆ ನೀರು ನುಗ್ಗಿ ಜನರ ಜೀವನ ಅಕ್ಷರಶಃ ನಲುಗಿ ಹೋಗಿದೆ. ಅದೇ ರೀತಿ ಕರ್ನಾಟಕದ ತಮಿಳುನಾಡು ಗಡಿ ಭಾಗದ ಹೊಗೆನಕಲ್ ಜಲಾಶಯವೂ ಸಹ ಸಂಪೂರ್ಣ ಭರ್ತಿಯಾಗಿದ್ದು, ಅಪಾಯ ಮಟ್ಟ ಮೀರಿ ಹರಿಯುತ್ತಿದೆ.ಹೌದು ಕಬಿನಿ ಹಾಗು ಕೆ ಆರ್ ಎಸ್ ಜಲಾಶಯಗಳಿಂದ ಹೊಗೆನಕಲ್ ಜಲಾಶಯಕ್ಕೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯಾಗಿ ರಸ್ತೆ ಹಾಗೂ ಗ್ರಾಮಗಳ ಕಡೆ ನೀರು ನುಗ್ಗಿ , ಹೊಗೆನಕಲ್ ಜಲಾಶಯಕ್ಕೆ ಹೋಗುವ ಮಾರ್ಗವು ಸಂಪರ್ಕವನ್ನು ಕಳೆದುಕೊಂಡಿದೆ. ಇನ್ನು ರಸ್ತೆಯಲ್ಲಿ ಸುಮಾರು ಮೂರು ಅಡಿಯಷ್ಟು ನೀರು ಹರಿಯುತ್ತಿದ್ದು ಹೊಗೆನಕಲ್ ಪಕ್ಕದಲ್ಲಿನ ಕೆಲವು ಗ್ರಾಮಗಳು ಜಲಾವೃತ ಗೊಂಡಿದ್ದು ಕರ್ನಾಟಕ ಭಾಗದ ಹಾಗೂ ತಮಿಳುನಾಡಿನ ಎರಡು ಕಡೆ ಪ್ರವಾಸಿಗರನ್ನು ಪೋಲಿಸರು ಯಾವುದೇ ಅನಾಹುತಗಳು ನಡೆಯದಂತೆ ಪ್ರವಾಸಿಗರನ್ನು ತಡೆ ಹಿಡಿದಿದ್ದಾರೆ.ಇನ್ನು ಪ್ರತಿ ಗಂಟೆಗೊಮ್ಮೆ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿರುವುದರಿಂದ ಅಲ್ಲಿನ ಸುತ್ತಮುತ್ತಲಿನ ಗ್ರಾಮದ ಜನಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರ ಮಾಡಿದ್ದು ಕೆಲ ಗ್ರಾಮಗಳು ಮತ್ತಷ್ಟು ಮುಳುಗಡೆಯಾಗುವ ಭೀತಿಯಲ್ಲಿ ಸುತ್ತಮುತ್ತಲಿನ ಗ್ರಾಮದ ಜನರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





