Breaking News

Breaking News

ಮೇಘಾಲಯದ ಸರಕಾರಿ ಗೋದಾಮಿನಿಂದ 4 ಸಾವಿರ ಟನ್ ಕಲ್ಲಿದ್ದಲು ನಾಪತ್ತೆ

ಮೇಘಾಲಯದ ನೈಋತ್ಯ ಖಾಸಿ ಹಿಲ್ಸ್ ಜಿಲ್ಲೆಯ ರಾಜಾಜು ಮತ್ತು ಡಿಯೆಂಗನಗಾಂವ್ ಗ್ರಾಮಗಳಲ್ಲಿರುವ ಸರಕಾರಿ ಕಲ್ಲಿದ್ದಲು ಡಿಪೋಗಳಿಂದ (ಗೋದಾಮುಗಳಿಂದ) ಸುಮಾರು 4 ಸಾವಿರ ಟನ್ ಕಲ್ಲಿದ್ದಲು ನಾಪತ್ತೆಯಾಗಿದೆ.ನ್ಯಾಯಮೂರ್ತಿ ಬಿ.ಪಿ. ಕಟಕೆ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ತನಿಖಾ ಸಮಿತಿಯು ಸಲ್ಲಿಸಿದ ವರದಿಯಲ್ಲಿ ಇದನ್ನು ಗಂಭೀರ ಆಡಳಿತಾತ್ಮಕ ವೈಫಲ್ಯ ಎಂದು ಪರಿಗಣಿಸಲಾಗಿದೆ. ಕಲ್ಲಿದ್ದಲು ನಾಪತ್ತೆಯಾದ ಘಟನೆಯ ಬಗ್ಗೆ ಆಡಳಿತವು ತನಿಖೆ ಆರಂಭಿಸಿದೆ; ಆದರೆ ಇಲ್ಲಿಯವರೆಗೆ ಯಾವುದೇ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಂಡಿಲ್ಲ.

Read More »

ರಷ್ಯಾ ಕರಾವಳಿಗೆ ಅಪ್ಪಳಿಸಿದ `ಸುನಾಮಿ’, ದಿಕ್ಕಾಪಾಲಾಗಿ ಓಡಿದ ಜನ!

ರಷ್ಯಾದಲ್ಲಿ 8.8 ತೀವ್ರತೆಯ ಭೂಕಂಪದ ಬಳಿಕ ರಷ್ಯಾ, ಜಪಾನ್ ಕರಾವಳಿಗೆ ಸುನಾಮಿ ಅಲೆಗಳು ಅಪ್ಪಳಿಸಿದ್ದು, ಬೆಚ್ಚಿ ಬೀಳಿಸುವ ವಿಡಿಯೋ ವೈರಲ್ ಆಗಿದೆ. ಭೂಕಂಪದ ನಂತರ, ಕಮ್ಚಟ್ಕಾದ ಕೆಲವು ಕರಾವಳಿ ಪ್ರದೇಶಗಳಲ್ಲಿ ಸುಮಾರು 10 ರಿಂದ 13 ಅಡಿ ಎತ್ತರದ ಸುನಾಮಿ ಅಲೆಗಳು ಕಾಣಿಸಿಕೊಂಡವು..ಪೆಸಿಫಿಕ್ನಲ್ಲಿರುವ ರಷ್ಯಾದ ಕುರಿಲ್ ದ್ವೀಪಗಳ ಮುಖ್ಯ ವಸಾಹತು ಸೆವೆರೊ-ಕುರಿಲ್ಸ್ಕ್ ಕರಾವಳಿ ಪ್ರದೇಶಕ್ಕೂ ಮೊದಲ ಸುನಾಮಿ ಅಲೆ ಅಪ್ಪಳಿಸಿದೆ ಎಂದು ಸ್ಥಳೀಯ ಗವರ್ನರ್ ವ್ಯಾಲೆರಿ ಲಿಮರೆಂಕೊ ಹೇಳಿದ್ದಾರೆ. ನಿವಾಸಿಗಳು …

Read More »

ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ ಕೇಸ್ ಹಿಂಪಡೆಯಿರಿ’ : ನಟಿ ರಮ್ಯಾ ಮುಂದೆ ಮಂಡಿಯೂರಿದ ದರ್ಶನ್ ಫ್ಯಾನ್ಸ್!

ದರ್ಶನ್ ಅಭಿಮಾನಿಗಳು ನಟಿ ರಮ್ಯಾ ಗೆ ಅಶೀಲ ಮೆಸೇಜ್ ಮಾಡಿದ್ದರು. ಈ ವಿಚಾರವಾಗಿ ದಾಖಲೆ ಸಮೇತ ನಟಿ ರಮ್ಯಾ ಬೆಂಗಳೂರು ಕಮಿಷನರಿಗೆ ದೂರು ನೀಡಿದ್ದರು. ಬಳಿಕ ಕಮಿಷನರ್ ಈ ಒಂದು ಪ್ರಕರಣವನ್ನು ಸಿಸಿಬಿಗೆ ವರ್ಗಯಿಸಿದ್ದರು. ಬಳಿಕ 43 ಇನ್ಸ್ಟಾ ಖಾತೆಗಳ ವಿರುದ್ಧ ಕೂಡ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದರು.ಅಧಿಕಾರಿಗಳು 43 ಇನ್ಸ್ಟಾ ಅಕೌಂಟ್ಗಳ ತನಿಖೆಗೆ ಇಳಿದಿದ್ದರು. ಇದೀಗ ದರ್ಶನ್ ಅಭಿಮಾನಿಗಳು ಕೊನೆಗೂ ನಟಿ ರಮ್ಯಾ ಎದುರು ಮಂಡಿಯೂರಿದ್ದು, ಮುಂದೆ ಈ ರೀತಿ …

Read More »

ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಕಾಕ್‌ಪಿಟ್‌ಗೆ ನುಗ್ಗಿ ಪೈಲಟ್ ಬಂಧಿಸಿದ ಪೊಲೀಸರು

ವಿಮಾನ ಏರ್‌ಫೋರ್ಟ್‌ನಲ್ಲಿ ಲ್ಯಾಂಡ್ ಆಗಿ ಪ್ರಯಾಣಿಕರು ಇಳಿಯುವ ಮೂದಲೇ ವಿಮಾನದ ಕಾಕ್‌ಪಿಟ್‌ಗೆ ನುಗ್ಗಿದ ಪೊಲೀಸರು ಹಾಗೂ ಅಧಿಕಾರಿಗಳು ವಿಮಾನದ ಪೈಲಟ್‌ಗೆ ಕೋಳ ತೊಡಿಸಿ ಕರೆದುಕೊಂಡು ಹೋದಂತಹ ಘಟನೆ ಅಮೆರಿಕಾದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ನಡೆದಿದೆ. ಬಂಧಿತ ಪೈಲಟ್‌ ಭಾರತೀಯ ಮೂಲದ ರುಸ್ತುಂ ಭಾಗ್ವಾಗರ್ ಎಂದು ಗುರುತಿಸಲಾಗಿದೆ.ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೈಲಟ್‌ನನ್ನು ಬಂಧಿಸಲಾಗಿದೆ.

Read More »

ವೀರ್ಯ ಮತ್ತು ಅಂಡಾಣು ಸಂಗ್ರಹದ ಹೆಸರಿನಲ್ಲಿ ನಗರದಲ್ಲಿ ನಡೆಯುತ್ತಿರುವ ವಿಕೃತ ವ್ಯವಹರ!

ಸಾಮಾನ್ಯವಾಗಿ ಮಕ್ಕಳಿಲ್ಲದ ಪೋಷಕರು ದಾನಿಗಳಿಂದ ವೀರ್ಯ ಮತ್ತು ಅಂಡಾಣುಗಳನ್ನು ಪಡೆಯಲಾಗುತ್ತದೆ. ಆ ದಾನಿಗಳು ಸುಶಿಕ್ಷಿತರು ಮತ್ತು ಬುದ್ಧಿವಂತರಾಗಿರಬೇಕು ಎಂದು ಹೇಳಲಾಗುತ್ತದೆ. ಆದರೆ ಹೆಚ್ಚಿನ ಹಣದ ಆಸೆಗೆ ಕೆಲವರು ವಿಕೃತಿ ಮೆರೆಯುತ್ತಿದ್ದಾರೆ. ‘ಇಂಡಿಯನ್ ಸ್ಪರ್ಮ್ ಟೆಕ್ ಕ್ರಯೋಸಿಸ್ಟಮ್ ಕ್ಲಿನಿಕ್’ ಹೆಸರಿನಲ್ಲಿ ಸಿಕಂದರಾಬಾದ್‌ನಲ್ಲಿ ಈ ವ್ಯವಹಾರವನ್ನು ನಡೆಸುತ್ತಿದ್ದ ಏಳು ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.ಭಿಕ್ಷುಕರಿಗೆ ಬಿರಿಯಾನಿ.. ಸಣ್ಣಪುಟ್ಟ ಕೆಲಸಗಾರರಿಗೆ ಎಣ್ಣೆ.. ಅಲ್ಪ ಸ್ವಲ್ಪ ಓದಿದವರಿಗೆ 1,000 ರಿಂದ 4,000 ರೂ.!. ಜೊತೆಗೆ ಮಹಿಳೆಯರಿಗೆ …

Read More »

ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿಯಾಗಿ, ಇಬ್ಬರು ಸಾವು 15 ಜನರಿಗೆ ಗಾಯ!

ಮಂಗಳೂರಿನಿಂದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಕಡೆ ಹೊರಟಿದ್ದ KA 51 C0146 ದುರ್ಗಾಂಬ ಬಸ್ ಗಾಜನೂರು ಬಳಿ ರಸ್ತೆಯಲ್ಲಿ ಕೆಟ್ಟು ನಿಂತಿದ್ದ AP 04 UB 3339 ಆಂಧ್ರ ಪ್ರದೇಶದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ..ಅಪಘಾತದ ರಭಸಕ್ಕೆ ತೀವ್ರ ಗಾಯಗೊಂಡ ಬಸ್ ಕಂಡಕ್ಟರ್ ಅಣ್ಣಪ್ಪ (40) ಹಾಗೂ ಚಳ್ಳಕೆರೆ ನಿವಾಸಿ ಹರ್ಷಿತ್ (35) ಎಂಬವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

Read More »

ಬೆಂಗಳೂರಿನಿಂದ ಕಾರ್ಯಾಚರಿಸುತ್ತಿದ್ದ ಶಂಕಿತ ಅಲ್ ಕೈದಾ ಭಯೋತ್ಪಾದಕಿ ಸಮಾ ಪರ್ವೀನ್ ಬಂಧಿಸಿದ ಗುಜರಾತ್ ಎಟಿಎಸ್!

ಅಲ್ ಕೈದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಸಮಾ ಪರ್ವೀನ್ ಎಂಬಾಕೆಯನ್ನು ಗುಜರಾತ್ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರು ಬೆಂಗಳೂರಿನಿಂದ ಬಂಧಿಸಿದ್ದಾರೆ. ಈಕೆ ದೇಶ ವಿರೋಧಿ ಕೃತ್ಯಗಳನ್ನು ಮಾಡುವ ಮೂಲಕ ಜಿಹಾದಿ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದಳು ಎಂಬ ಆರೋಪವಿದೆ.ಮಾಧ್ಯಮಗಳಲ್ಲಿ ಪ್ರಚೋದನಕಾರಿ ವಿಷಯವನ್ನು ಹಂಚಿಕೊಳ್ಳುತ್ತಿದ್ದರು. ಅವರು ‘ಘಜ್ವಾ-ಎ-ಹಿಂದ್’ ಬಗ್ಗೆ ವೀಡಿಯೊಗಳು ಮತ್ತು ಭಾಷಣಗಳ ಮೂಲಕ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡಲು ಪ್ರಯತ್ನಿಸಿದ್ದರು. ಈ ನಾಲ್ವರ ವಿಚಾರಣೆ ವೇಳೆ ಬೆಂಗಳೂರಿನಿಂದ ಕಾರ್ಯಾಚರಿಸುತ್ತಿರುವ ಸಮಾ ಪರ್ವೀನ್ …

Read More »

ಟಿಕೆಟ್ ಕೊಡದೇ ಮೊಬೈಲ್ ನಲ್ಲಿ ಮಾತನಾಡುತ್ತ ಕುಳಿತಿದ್ದ ರೈಲ್ವೆ ಸಿಬ್ಬಂದಿ: ಸೇವೆಯಿಂದ ಸಸ್ಪೆಂಡ್ ಮಾಡಿ ಆದೇಶ!

ಪ್ರಯಾಣಿಕರಿಗೆ ಟಿಕೆಟ್ ಕೊಡದದೇ ಮೊಬೈಲ್ ನಲ್ಲಿ ಮಾತನಾಡುತ್ತ ಹರಡೆ ಹೊಡ್ಶೆಯುತ್ತಿದ್ದ ರೈಲ್ವೆ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ..ಇದನ್ನು ಗಮನಿಸಿದ ಗುಂತಕಲ್ ರೈಲ್ವೆ ವಿಭಾಗದ ಅಧಿಕಾರಿಗೆ ಸ್ಟೇಷನ್ ಮಾಸ್ಟರ್ ಕಳುಹಿಸಿದ್ದರು. ಸ್ಟೇಷನ್ ವ್ಯವಸ್ಥಾಪಕ ಭಾಗೀರಥ ಮೀನಾ ಅಧಿಕಾರಿ ಮಹೇಶ್ ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ

Read More »

ಹಿರಣ್ಯಕೇಶಿಗಾಗಿ ಒಂದಾದ ಕತ್ತಿ- ಪಾಟೀಲ ಕುಟುಂಬ; ಬೆಳಗಾವಿ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆ

ಹುಕ್ಕೇರಿ ಕ್ಷೇತ್ರ ಹಾಗೂ ಜಿಲ್ಲಾ ರಾಜಕಾರಣದಲ್ಲಿ ಪಲ್ಲಟಗಳಿಗೆ ಕಾರಣವಾಗಿದ್ದ ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಈಗ ಮತ್ತೊಂದು ಅಚ್ಚರಿಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ರಾಜಕೀಯ ಕಣದಲ್ಲಿ ಪರಸ್ಪರ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹಾಗೂ ವಿರೋಧಿಗಳೆಂದು ಗುರುತಿಸಿಕೊಂಡಿರುವ ಕತ್ತಿ ಮತ್ತು ಎ.ಬಿ.ಪಾಟೀಲ ಕುಟುಂಬ ಕಾರ್ಖಾನೆ ಮುನ್ನಡೆಸಲು ಕೈಜೋಡಿಸಿವೆ

Read More »

ರಾಯಚೂರು: ಅಂಗವಿಕಲ ವ್ಯಕ್ತಿಯಿಂದ ಆತ್ಮಹತ್ಯೆ ಯತ್ನ!

ಸರ್ಕಾರದಿಂದ ವಿತರಿಸುವ ನಾಲ್ಕು ಚಕ್ರದ ಸ್ಕೂಟಿ ನೀಡದ ಕಾರಣಕ್ಕೆ ಮನನೊಂದ ಅಂಗವಿಕಲ ವ್ಯಕ್ತಿಯೊಬ್ಬರು ಓವರ್‌ ಹೆಡ್‌ ಟ್ಯಾಂಕ್‌ ಮೇಲೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲ್ಲೂಕಿನ ದೇವಸುಗೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.

Read More »