Breaking News

Breaking News

ಮತ್ತೊಂದು ಕಟ್ಟಡದ ಮೇಲೆ ವಾಲಿದ ನಾಲ್ಕಂತಸ್ತಿನ ಕಟ್ಟಡ!

ಬುನಾದಿಗೆ ಚರಂಡಿ ನೀರು ನುಗ್ಗಿದ ಪರಿಣಾಮ ನಾಲ್ಕು ಅಂತಸ್ತಿನ ಕಟ್ಟಡವೊಂದು ಪಕ್ಕದ ಕಟ್ಟಡದ ಮೇಲೆ ವಾಲಿದ ಘಟನೆ ನಗರದ ನವರಂಗ ದರ್ವಾಜ್ ರಸ್ತೆಯ ಮೋತಿ ಮಸೀದಿ ಬಳಿ ನಡೆದಿದೆ.ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಚರಂಡಿ ನೀರು ನುಗ್ಗಿದೆ. ಇದರಿಂದ ಕಟ್ಟಡದ ಅಡಿಪಾಯ ಸಡಿಲಗೊಂಡು ಗೋಡೆ ವಾಲಿದೆ. ಹೀಗಾಗಿ ಮನೆಯಲ್ಲಿದ್ದವರನ್ನೆಲ್ಲ ಖಾಲಿ ಮಾಡಿಸಲಾಗಿದೆ.ಜೆಸಿಬಿ ಮೂಲಕ ಮೇಲ್ಮಹಡಿ ತೆರವುಗೊಳಿಸಿ, ಬುನಾದಿ ದುರಸ್ತಿ ಮಾಡಲು ತೀರ್ಮಾನಕ್ಕೆ ಬರಲಾಗಿದೆ. ಇದರೊಟ್ಟಿಗೆ ಪಾಲಿಕೆ ಇಂಜಿನಿಯರ್ ಅವರಿಂದ ಪರಿಶೀಲನೆ …

Read More »

ಪತಿ ಕೊಲೆ: ಗ್ರಾ.ಪಂ. ಸದಸ್ಯೆ, ಪ್ರಿಯಕರ ಸೇರಿ 6 ಮಂದಿ ಬಂಧನ!

ಪ್ರಿಯಕರನ ಜೊತೆಗೂಡಿ ಪತಿಗೆ ವಿಷ ಕುಡಿಸಿ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತ್ನಿಯೊಬ್ಬಳು, ಪತಿ ಸಾವಿನ ಬಗ್ಗೆ ಅನುಮಾನವಿದ್ದು ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ದೂರಿ ಇದೀಗ ಅದೇ ಪೊಲೀಸರಿಗೆ ತನ್ನ ಸುಪಾರಿ ತಂಡದೊಂದಿಗೆ ಅತಿಥಿಯಾಗಿದ್ದಾಳೆ!ಪ್ರಕರಣದ ದೂರುದಾರಳೂ ಆಗಿದ್ದ ಚಂದ್ರಕಲಾ ವರ್ತನೆಯಲ್ಲಾದ ಬದಲಾವಣೆ, ಪತಿ ಸಾವಿನ ಕುರಿತ ಮಾತುಗಳು ಆಕೆಯ ಪಾತ್ರವಿರುವುದರ ಕುರಿತು ಅನುಮಾನ ಮೂಡಿಸಿದ್ದವು. ಅದರ ಜಾಡು ಹಿಡಿದು ತನಿಖೆ ನಡೆಸಿದಾಗ ಆಕೆ ಮತ್ತು ಇಡೀ ತಂಡ …

Read More »

ವೈದ್ಯಕೀಯ ವಿದ್ಯಾರ್ಥಿನಿ ಸಾವು! ಶಿಕ್ಷಕರ ವಿರುದ್ಧ ಕಿರುಕುಳ ಆರೋಪ..

ಉದಯಪುರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಗುರುವಾರ ರಾತ್ರಿ ಈ ಘಟನೆ ನಡೆದಿದ್ದು, ಜಮ್ಮು ಮತ್ತು ಕಾಶ್ಮೀರದ ಅಂತಿಮ ವರ್ಷದ ಬಿಡಿಎಸ್ ವಿದ್ಯಾರ್ಥಿನಿ ಶ್ವೇತಾ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.ಶ್ವೇತಾ ರೂಮ್‌ಮೇಟ್ ಅವರು ನೇಣು ಬಿಗಿದುಕೊಂಡಿರುವುದನ್ನು ಕಂಡು ತಕ್ಷಣ ಹಾಸ್ಟೆಲ್ ಸಿಬ್ಬಂದಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸುಖೇರ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ರವೀಂದ್ರ ಚರಣ್ ಅವರ ಪ್ರಕಾರ, ವಿದ್ಯಾರ್ಥಿಯ …

Read More »

ಪರೀಕ್ಷೆಯ ಸಮಯದಲ್ಲಿ ಮೂರ್ಛೆ ಹೋದ ಮಹಿಳೆ; ಆಂಬ್ಯುಲೆನ್ಸ್‌ನಲ್ಲಿ ಸಿಬ್ಬಂದಿಯಿಂದ ಸಾಮೂಹಿಕ ಅತ್ಯಾಚಾರ ಆರೋಪ!

ಬಿಹಾರದ ಗಯಾ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದು ಹೋಗಿದೆ. ಗೃಹರಕ್ಷಕ ದಳ ನೇಮಕಾತಿ ಪರೀಕ್ಷೆಯಲ್ಲಿ ಭಾಗವಹಿಸಿದ್ದ ಮಹಿಳೆಯೊಬ್ಬರು ದೈಹಿಕ ಪರೀಕ್ಷೆಯ ಸಮಯದಲ್ಲಿ ಮೂರ್ಛೆ ಹೋಗಿದ್ದಾರೆ. ನಂತರ ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಆಂಬ್ಯುಲೆನ್ಸ್‌ನಲ್ಲಿ ಸಿಬ್ಬಂದಿಯಿಂದ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್‌ಐಆರ್ ದಾಖಲಾದ ಕೆಲವೇ ಗಂಟೆಗಳ ಬಳಿಕ, ಪೊಲೀಸರು ಆಂಬ್ಯುಲೆನ್ಸ್ ಚಾಲಕ ವಿನಯ್ ಕುಮಾರ್ ಮತ್ತು ವಾಹನದಲ್ಲಿದ್ದ ತಂತ್ರಜ್ಞ ಅಜಿತ್ ಕುಮಾರ್ ಎಂಬ ಇಬ್ಬರು …

Read More »

ತವರು ಮನೆಗೆ ಹೋದ ಪತ್ನಿ: ಮಗ, ಮಗಳು, ತಾಯಿ ಜೊತೆ ಸಲ್ಫಾ ಮಾತ್ರೆ ಸೇವಿಸಿ ವ್ಯಕ್ತಿ ಆತ್ಮಹತ್ಯೆ!

ಸಾಗರ್ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಇದು ಇಡೀ ಪ್ರದೇಶವನ್ನು ಬೆಚ್ಚಿಬೀಳಿಸಿದೆ. ಇಲ್ಲಿ ತೆಹಾರ್ ಗ್ರಾಮದಲ್ಲಿ, ಒಂದೇ ಕುಟುಂಬದ ನಾಲ್ವರು ಸದಸ್ಯರು ಒಟ್ಟಿಗೆ ಸಲ್ಫಾ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರಲ್ಲಿ ತಂದೆ, ಮಗ-ಮಗಳು ಮತ್ತು 70 ವರ್ಷದ ಅಜ್ಜಿ ಸೇರಿದ್ದಾರೆ.ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಕೌಟುಂಬಿಕ ಉದ್ವಿಗ್ನತೆ ಮತ್ತು ಖಿನ್ನತೆಯನ್ನು ಶಂಕಿಸಲಾಗಿದೆ.ಖುರೈ ಸಿವಿಲ್ ಆಸ್ಪತ್ರೆಯ ಡಾ. ವರ್ಷಾ ಕೇಶರ್ವಾನಿ ಅವರು ನಾಲ್ವರೂ ಸಲ್ಫಾ ಮಾತ್ರೆಗಳನ್ನು ಸೇವಿಸಿದ್ದಾರೆ …

Read More »

ವಿಷಪೂರಿತ ನಾಗರಹಾವನ್ನು ಕಚ್ಚಿದ ಒಂದು ವರ್ಷದ ಮಗು; ಹಾವು ಸಾವು!

ಪಶ್ಚಿಮ ಚಂಪಾರಣ್ ಜಿಲ್ಲೆಯ ಮಜೌಲಿಯಾ ಬ್ಲಾಕ್‌ನ ಮೊಹ್ಚಿ ಬಂಕಟ್ವಾ ಗ್ರಾಮದಲ್ಲಿ ನಡೆದಿದೆ. ಮಗುವನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಜೌಲಿಯಾ ಪಿಎಚ್‌ಸಿಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ, ಬೆಟ್ಟಿಯಾದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಜಿಎಂಸಿಎಚ್) ರವಾನಿಸಲಾಗಿತ್ತು.ಮನೆಯಲ್ಲಿ ಆಟವಾಡುತ್ತಿದ್ದಾಗ ಎರಡು ಅಡಿ ಉದ್ದದ ನಾಗರಹಾವು ಬಂದಿತ್ತು ಎಂದು ಅಜ್ಜಿ ಮಾಟೇಶ್ವರಿ ದೇವಿ ಹೇಳಿದರು. ಅದನ್ನು ಆಟಿಕೆ ಎಂದು ಭಾವಿಸಿ ಮಗು ಹಾವನ್ನು ಹಿಡಿದುಕೊಂಡು ತನ್ನ ಹಲ್ಲುಗಳಿಂದ ಕಚ್ಚಿದೆ. ಇದಾದ ಕೂಡಲೇ …

Read More »

ನಟ ಪ್ರಥಮ್ ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ : ಡ್ರಾಗರ್ ನಿಂದ ಹಲ್ಲೆ ನಡೆಸಿ ಅವಾಚ್ಯ ಪದಗಳಿಂದ ನಿಂದನೆ!

ನಟ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿದೆ. ಸಿನಿ ಚಿತ್ರೀಕರಣವೊಂದಕ್ಕೆ ತೆರಳೋದಕ್ಕೂ ಮುನ್ನ ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿದ್ದಾರೆ. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಡ್ಯಾಗ್ರರ್‌ ತೋರಿಸಿ ನಟನಿಗೆ ಜೀವಬೆದರಿಕೆ ಹಾಕಿದ್ದಾರೆ. ಪೂಜೆ ಮುಗಿಸಿ ಹೊರಟ ವೇಳೆ ಕಾರಿಗೆ ಅಡ್ಡಬಂದ ಕೆಲವರು ಪ್ರಥಮ್‌ನನ್ನ ಬಲವಂತವಾಗಿ ಕರೆದೊಯ್ದಿದ್ದಾರೆ. ಈ ವೇಳೆ ನಮ್ ಬಾಸ್ ಬಗ್ಗೆ ಮಾತಾಡ್ತಿಯ ಅಂತ ಹಲ್ಲೆಗೆ ಯತ್ನಿಸಿ ಅವಾಚ್ಛವಾಗಿ …

Read More »

ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗುತ್ತಾರೆ ಎಂದು ಮಕ್ಕಳನ್ನು ಕೊಂದ ತಾಯಿ!

ಮಹಿಳೆಯೊಬ್ಬಳು ತನ್ನ ಗೆಳೆಯನೊಂದಿಗಿನ ಸುಖಕ್ಕಾಗಿ ತಮ್ಮ ಮಕ್ಕಳನ್ನು ಕೊಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಕೆಗೆ ಇದೀಗ ಕಾಂಚಿಪುರಂ ನ್ಯಾಯಾಲಯದ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ.ತನ್ನ ಗಂಡ ಮತ್ತು ಮಕ್ಕಳನ್ನು ಕೊಂದು ತನ್ನ ಗೆಳೆಯನೊಂದಿಗೆ ಪರಾರಿಯಾಗಿದ್ದ ಅಭಿರಾಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಲ್ಲಾ ವಿಚಾರಣೆಗಳು ಮತ್ತು ಸಾಕ್ಷಿಗಳ ಸಾಕ್ಷ್ಯದ ನಂತರ, ನ್ಯಾಯಾಧೀಶರು ಗುರುವಾರ ಅಂತಿಮ ತೀರ್ಪು ನೀಡಿದ್ದಾರೆ

Read More »

ಪತ್ನಿ ಎದುರೇ ಕತ್ತು ಕುಯ್ದುಕೊಂಡು ಪತಿ ಆತ್ಮಹತ್ಯೆ.!

ಮಲ್ಲಪ್ಪ ಹಾಗೂ ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ವಿಚಾರಕ್ಕೆ ಒಂದು ದಿನ ಬಾಮೈದ ಹಾಗೂ ಪತ್ನಿ ಜೊತೆ ಮಲ್ಲಪ್ಪ ಗಲಾಟೆ ಮಾಡಿಕೊಂಡಿದ್ದಾನೆ. ಆವೇಷದಲ್ಲಿ ಬಾಮೈದ ಮಲ್ಲಿಕಾರ್ಜುನ ನೀನು ಸತ್ರೆ ಅಕ್ಕ ಚೆನ್ನಾಗಿರ್ತಾಳೆ ಎಂದು ಹೇಳಿದ್ದಾನೆ. ಇದರಿಂದ ನೊಂದ ಮಲ್ಲಪ್ಪ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಮಾರಿಹಾಳ ಠಾಣೆಯಲ್ಲಿ ಮಲ್ಲಿಕಾರ್ಜುನ ವಿರುದ್ಧ ಕೇಸ್ ದಾಖಲಾಗಿದೆ.

Read More »

ಬೆಂಗಳೂರು | ಮಳಿಗೆಗೆ ನುಗ್ಗಿ ಪಿಸ್ತೂಲ್‍ನಿಂದ ಬೆದರಿಸಿ ಚಿನ್ನಾಭರಣ ಕಳವು

ಚಿನ್ನಾಭರಣ ಮಳಿಗೆಗೆ ನುಗ್ಗಿದ ದುಷ್ಕರ್ಮಿಗಳ ತಂಡ ಮಾಲಕನಿಗೆ ಪಿಸ್ತೂಲ್‍ನಿಂದ ಬೆದರಿಸಿ 180 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಮಳಿಗೆಯ ಸಿಸಿ ಕ್ಯಾಮೇರಾವನ್ನು ಪರಿಶೀಲಿಸಿದಾಗ ಮೂವರು ಪಿಸ್ತೂಲ್ ತೋರಿಸಿ ಆಭರಣ ದೋಚಿರುವುದು ಗೊತ್ತಾಗಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Read More »