Breaking News

ಪತಿ ಕೊಲೆ: ಗ್ರಾ.ಪಂ. ಸದಸ್ಯೆ, ಪ್ರಿಯಕರ ಸೇರಿ 6 ಮಂದಿ ಬಂಧನ!

ಪ್ರಿಯಕರನ ಜೊತೆಗೂಡಿ ಪತಿಗೆ ವಿಷ ಕುಡಿಸಿ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಪತ್ನಿಯೊಬ್ಬಳು, ಪತಿ ಸಾವಿನ ಬಗ್ಗೆ ಅನುಮಾನವಿದ್ದು ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ದೂರಿ ಇದೀಗ ಅದೇ ಪೊಲೀಸರಿಗೆ ತನ್ನ ಸುಪಾರಿ ತಂಡದೊಂದಿಗೆ ಅತಿಥಿಯಾಗಿದ್ದಾಳೆ!ಪ್ರಕರಣದ ದೂರುದಾರಳೂ ಆಗಿದ್ದ ಚಂದ್ರಕಲಾ ವರ್ತನೆಯಲ್ಲಾದ ಬದಲಾವಣೆ, ಪತಿ ಸಾವಿನ ಕುರಿತ ಮಾತುಗಳು ಆಕೆಯ ಪಾತ್ರವಿರುವುದರ ಕುರಿತು ಅನುಮಾನ ಮೂಡಿಸಿದ್ದವು. ಅದರ ಜಾಡು ಹಿಡಿದು ತನಿಖೆ ನಡೆಸಿದಾಗ ಆಕೆ ಮತ್ತು ಇಡೀ ತಂಡ ಸಿಕ್ಕಿಬಿದ್ದಿತು ಆರ್. ಶ್ರೀನಿವಾಸ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಂಗಳೂರು ದಕ್ಷಿಣ ಜಿಲ್ಲೆ.ದಂಪತಿ ಮಕ್ಕಳು ಓದುತ್ತಿದ್ದ ಶಾಲೆಯಲ್ಲೇ, ಆತನ ಮಕ್ಕಳು ಸಹ ಓದುತ್ತಿದ್ದರು. ಚಂದ್ರಕಲಾ ಮಕ್ಕಳನ್ನು ಬಿಡಲು ಹೋದಾಗ ಯೋಗೇಶ್ ಪರಿಚಯವಾಗಿತ್ತು. ನಂತರ ಅದು ಪ್ರೇಮಕ್ಕೆ ತಿರುಗಿತ್ತು ಎಂದು ಪೊಲೀಸರು ತಿಳಿಸಿದರು.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *