ಬುನಾದಿಗೆ ಚರಂಡಿ ನೀರು ನುಗ್ಗಿದ ಪರಿಣಾಮ ನಾಲ್ಕು ಅಂತಸ್ತಿನ ಕಟ್ಟಡವೊಂದು ಪಕ್ಕದ ಕಟ್ಟಡದ ಮೇಲೆ ವಾಲಿದ ಘಟನೆ ನಗರದ ನವರಂಗ ದರ್ವಾಜ್ ರಸ್ತೆಯ ಮೋತಿ ಮಸೀದಿ ಬಳಿ ನಡೆದಿದೆ.ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಚರಂಡಿ ನೀರು ನುಗ್ಗಿದೆ. ಇದರಿಂದ ಕಟ್ಟಡದ ಅಡಿಪಾಯ ಸಡಿಲಗೊಂಡು ಗೋಡೆ ವಾಲಿದೆ. ಹೀಗಾಗಿ ಮನೆಯಲ್ಲಿದ್ದವರನ್ನೆಲ್ಲ ಖಾಲಿ ಮಾಡಿಸಲಾಗಿದೆ.ಜೆಸಿಬಿ ಮೂಲಕ ಮೇಲ್ಮಹಡಿ ತೆರವುಗೊಳಿಸಿ, ಬುನಾದಿ ದುರಸ್ತಿ ಮಾಡಲು ತೀರ್ಮಾನಕ್ಕೆ ಬರಲಾಗಿದೆ. ಇದರೊಟ್ಟಿಗೆ ಪಾಲಿಕೆ ಇಂಜಿನಿಯರ್ ಅವರಿಂದ ಪರಿಶೀಲನೆ ಮಾಡಿ ಸುಗಮವಾಗಿ ಚರಂಡಿ ನೀರು ಸಾಗಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ಪ್ರಭಾರ ಅಧ್ಯಕ್ಷರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

