Breaking News

Breaking News

ಬಾವಿಗೆ ಬಿದ್ದ ಗೂಡ್ಸ್ ಇಬ್ಬರ ಸಾವು!

ಬೀದರ್ ತಾಲೂಕಿನ ಚಿತ್ತ ಹತ್ತಿರ ಬುಧವಾರ ತಡರಾತ್ರಿ ರಸ್ತೆ ಪಕ್ಕದ ಬಾವಿಗೆ ಗೂಡ್ಸ್ ವಾಹನ ಬಿದ್ದು ಇಬ್ಬರು ಸವಿ ಕ್ರೀಡಾಗಿ ಇವರು ಗಾಯಗೊಂಡಿದ್ದಾರೆ ಗುಂಡಪಲ್ಲಿ ನಿವಾಸಿಗಳಾದ ಲಕ್ಷ್ಮಿಕಾಂತ್ ರವಿ ಮೃತರು ಅರ್ಜುನ್ ಪ್ರಜ್ವಲ್ ಸಂಗಮೇಶ್ ಮಾಣಿಕ್ ಪವನ್ ಗಾಯಗೊಂಡಿದ್ದು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಪಘಾತದಲ್ಲಿ ಮಗ ಶಂಕರ ಸಾವಿಗೀಡಾದ ಸುದ್ದಿ ಕೇಳಿ ಅವರ ತಾಯಿ ಹೃದಯ ಗಾತದಿಂದ ಅಸುನಿಗಿದ್ದಾರೆ ಗಾಂಧಿಗಂಜ್ ತಾನೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ತಾನೇ ರಕ್ಷಿಸಿದ ನಾಯಿ ಮರಿ ಕಚ್ಚಿ ರೇಬಿಸ್ ನಿಂದ ಕಬಡ್ಡಿ ಆಟಗಾರ ಸಾವು!

ಆಟಗಾರನೊಬ್ಬ ನಾಯಿ ಕಡಿತದಿಂದ ‘ರೇಬೀಸ್’ ಗೆ ತುತ್ತಾಗಿ ಸಾವನ್ನಪ್ಪಿದ್ದಾನೆ. ಆಟಗಾರನ ನಿರ್ಲಕ್ಷ್ಯದಿಂದಾಗಿ ರೇಬೀಸ್ ಲಸಿಕೆ ಪಡೆಯಲಿಲ್ಲ. ಮೂರು ತಿಂಗಳ ಹಿಂದೆ, ನಾಯಿಯೊಂದು ಆಟಗಾರನಿಗೆ ಕಚ್ಚಿತ್ತು. ನಾಯಿ ಕಡಿತವನ್ನು ಸಣ್ಣ ಗಾಯವೆಂದು ಪರಿಗಣಿಸಿ ಬ್ರಿಜೇಶ್ ಸೋಲಂಕಿ ನಿರ್ಲಕ್ಷಿಸಿದ್ದರು.ಬ್ರಿಜೇಶ್ ಇದ್ದಕ್ಕಿದ್ದಂತೆ ನೀರನ್ನು ನೋಡಿ ಹೆದರಲು ಪ್ರಾರಂಭಿಸಿದರು. ಕ್ರಮೇಣ ಅವರಲ್ಲಿ ರೇಬೀಸ್ ರೋಗದ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿತ್ತು ಎಂದು ಬ್ರಿಜೇಶ್ ಅವರ ಸಹೋದರ ಸಂದೀಪ್ ಕುಮಾರ್ ತಿಳಿಸಿದ್ದಾರೆ. ಇದ್ದಕ್ಕಿದ್ದಂತೆ ಅವರು ನೀರನ್ನು ನೋಡಿ ಹೆದರಲು …

Read More »

30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಉಗ್ರ ಅರೆಸ್ಟ್‌!

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಶಂಕಿತ ಉಗ್ರ ಅಬೂಬಕರ್‌ನನ್ನು ತಮಿಳುನಾಡು ಉಗ್ರ ನಿಗ್ರಹ ಪಡೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಬಂಧಿಸಿದೆ. ಕಳೆದ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪಾತಕಿ ಜೊತೆಗೆ ಆತನ ಸಹಚರ ಮಹಮ್ಮದ್ ಅಲಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್ ಉಮ್ಮಾ ಜೊತೆಗೆ ಕೈಜೋಡಿಸಿರುವ ತಮಿಳುನಾಡಿನ 20 ಕ್ಕೂ ಹೆಚ್ಚು ಜನರು ಮಲ್ಲೇಶ್ವರಂ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದರು. ಘಟನೆ ಬಳಿಕ ಶಂಕಿತ ಉಗ್ರ …

Read More »

ಬೆಂಗಳೂರು :ವಿದ್ಯುತ್ ಸಂಪರ್ಕ ಬಗ್ಗೆ ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ!

ರಾಜ್ಯದಲ್ಲಿ ಕಂದಾಯ ನಿವೇಶನ ಹಾಗೂ ಕಟ್ಟಡಗಳಿಗೆ ಬಿ ಖಾತಾ ನೀಡಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಕುರಿತು ಗುರುವಾರ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.ಇದರೊಂದಿಗೆ ರಾಜ್ಯಾದ್ಯಂತ ಸಿಸಿ, ಒಸಿ ಇಲ್ಲದ ವಾಣಿಜ್ಯ ಮತ್ತು ವಸತಿ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡದಿರುವುದರಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಗಿದ್ದು, ಇವೆಲ್ಲವುಗಳ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಗಿದೆ.ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ನೇತೃತ್ವದಲ್ಲಿ …

Read More »

ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಇಟ್ಟ ಕಿಡಿಗೇಡಿ.!

ಮದುವೆಯಾಗಿ ತಿಂಗಳುಗಳೇ ಕಳೆದರೂ ಹಣ ವಾಪಸ್ ನೀಡಿರಲಿಲ್ಲ.. ಇದರಿಂದ ಬೇಸತ್ತ ವೆಂಕಟರಮಣಿ ತಾನೇ ಹೋಗಿ ಕೊಟ್ಟ ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಆದರೆ ಈ ವೇಳೆ ಪಾರ್ವತಿ ಹಾಗೂ ಆಕೆಯ ಮಗಳು ರಂಪಾಟ ಮಾಡಿದ್ದರು.ಇದನ್ನು ಕೇಳಿದ ಆರೋಪಿ ಸುಬ್ರಮಣಿ ಏಕಾಏಕಿ ವೆಂಕಟರಮಣಿಯ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಅದೃಷ್ಟವಶಾತ್‌ ಮನೆಯಲ್ಲಿದ್ದವರು ಪಾರಾಗಿದ್ದಾರೆ. ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೆಂಕಟರಮಣಿಯವರ ಮಗ ವಿವೇಕ್ ನಗರ ಪೊಲೀಸ್ …

Read More »

ಅಮೆರಿಕದಲ್ಲಿ ವಿಮಾನ ಪತನ!- 15 ಜನರಿಗೆ ಗಾಯ!

ಅಮೆರಿಕದ ನ್ಯೂಜೆರ್ಸಿಯಲ್ಲಿ ಸಣ್ಣ ವಿಮಾನವೊಂದು ಪತನವಾಗಿದ್ದು, ದುರ್ಘಟನೆಯಲ್ಲಿ 15 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.ಫಿಲಡೆಲ್ಫಿಯಾದ ಆಗ್ನೇಯಕ್ಕೆ ಸುಮಾರು 21 ಮೈಲುಗಳಷ್ಟು ದೂರದಲ್ಲಿರುವ ಕ್ರಾಸ್ ಕೀಸ್ ವಿಮಾನ ನಿಲ್ದಾಣದಲ್ಲಿ ಈ ಅಪಘಾತ ಸಂಭವಿಸಿದೆ.15 ಜನರನ್ನು ಹೊತ್ತೊಯ್ಯುತ್ತಿದ್ದ ಸೆಸ್ನಾ 208B ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದ ಬಗ್ಗೆ ಪ್ರಸ್ತುತ ತನಿಖೆ ನಡೆಯುತ್ತಿದೆ ಎಂದು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ವಕ್ತಾರರು ತಿಳಿಸಿದ್ದಾರೆ.

Read More »

ಭಾರತ ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಪ್ರಧಾನಿ ಮೋದಿ

ಟ್ರೀನಿಡಾಡ್ ಮತ್ತು ಟೊಬಾಗೊದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತವು ಇಂದು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ ಮತ್ತು ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಸಜ್ಜಾಗಿದೆ ಎಂದು ಹೇಳಿದರು.ಇಂದು, ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಕೇಂದ್ರವಾಗಿದೆ. ಈ ಸ್ಟಾರ್ಟ್‌ಅಪ್ಗಳಲ್ಲಿ ಸುಮಾರು ಅರ್ಧದಷ್ಟು ಮಹಿಳೆಯರನ್ನು ನಿರ್ದೇಶಕರನ್ನಾಗಿ ಹೊಂದಿವೆ. ಸುಮಾರು ೧೨೦ ಸ್ಟಾರ್ಟ್ ಅಪ್ ಗಳು ಯುನಿಕಾರ್ನ್ ಸ್ಥಾನಮಾನವನ್ನು ಪಡೆದಿವೆ. ಕೃತಕ ಬುದ್ಧಿಮತ್ತೆ, ಅರೆವಾಹಕ ಮತ್ತು ಕ್ವಾಂಟಮ್ …

Read More »

ಗುಡಿಬಂಡೆ: ಗ್ರಾಮ ಆಡಳಿತಾಧಿಕಾರಿ ನಾಗರಾಜ್‌ ಲೋಕಾಯುಕ್ತ ಬಲೆಗೆ!!

ಮಂಜುನಾಥ ಎಂಬುವರು ತಮ್ಮ ತಂದೆಗೆ ಸೇರಿದ 2.20 ಎಕರೆ ಜಮೀನು ಪೋಡಿ ಮಾಡಿಸಿಕೊಳ್ಳಲು ಮುಂದಾಗಿದ್ದರು. ಪೋಡಿ ಮಾಡಿಕೊಡಲು ಮಂಜುನಾಥ್ ಅವರ ಬಳಿ ಗ್ರಾಮ ಆಡಳಿತಾಧಿಕಾರಿ ನಾಗರಾಜ್ ₹55 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಈ ಪ್ರಕಾರ ಮಂಜುನಾಥ್ ಅವರು ಗುಡಿಬಂಡೆಯ ಐಬಿ ರಸ್ತೆಯ ಖಾಸಗಿ ಕಚೇರಿಯಲ್ಲಿ ನಾಗರಾಜ್ ಅವರಿಗೆ ಹಣ ನೀಡಿದ್ದರು. ಈ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ನಾಗರಾಜ್ ಅವರನ್ನು ಬಂಧಿಸಿದ್ದಾರೆ.

Read More »

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಕುಖ್ಯಾತ ದನಕಳ್ಳನ ಬಂಧನ!!

ಮಂಗಳೂರಿಗೆ ಬೆಂಗಳೂರು ಮತ್ತು ಮುಂಬೈಯಿಂದ ಎಂಡಿಎಂಎ ತರಿಸಿಕೊಂಡು ಅದನ್ನು ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಿಳಿ ಬಣ್ಣದ ಕಾರಿನಲ್ಲಿ ಮುಡಿಪು ಕಂಬಳ ಪದವು ಕೆಐಡಿಬಿ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ 1,20,000 ರೂ ಮೌಲ್ಯದ 12.05 ಗ್ರಾಂ ಮಾದಕವಸ್ತು ಸಹಿತ ಬಂಧಿಸಿದ್ದಾರೆ.ಬಂಧಿತ ಆರೋಪಿ ಅಬ್ದುಲ್ ಕಬೀರ್ ಅಲಿಯಾಸ್ ಪಾರಿವಾಳ ಕಬೀರ್(36) ಎಂಬಾತನಾಗಿದ್ದುಕಸಬಾ ಬೆಂಗ್ರೆ ಮೂಲದವನಾಗಿದ್ದು ಕೊಣಾಜೆ ಆಸೈಗೋಳಿ ಯಲ್ಲಿ …

Read More »

ಸಹೋದ್ಯೋಗಿಗಳ ಜೊತೆ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವ್ಯಕ್ತಿಗೆ ಹೃದಯಾಘಾತ!

ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಇದ್ದಕಿದ್ದಂತೆ ಕುಸಿದು ಬಿದ್ದು ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ಘಟನೆಯೊಂದು ಫರಿದಾಬಾದ್‌ನಲ್ಲಿ ನಡೆದಿದ್ದು ಇದು ಕೂಡ ಹೃದಯಾಘಾತದಿಂದಲೇ ನಡೆದಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.ಅಲ್ಲಿದ್ದ ಸಹೋದ್ಯೋಗಿಗಳು ಪಂಕಜ್ ಅವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ ಆದರೆ ದುರದೃಷ್ಟವಶಾತ್ ಆಸ್ಪತ್ರೆ ದಾರಿ ಮಧ್ಯೆ ಪಂಕಜ್ ಕೊನೆಯುಸಿರೆಳೆದಿದ್ದಾರೆ.

Read More »