ಮಂಜುನಾಥ ಎಂಬುವರು ತಮ್ಮ ತಂದೆಗೆ ಸೇರಿದ 2.20 ಎಕರೆ ಜಮೀನು ಪೋಡಿ ಮಾಡಿಸಿಕೊಳ್ಳಲು ಮುಂದಾಗಿದ್ದರು. ಪೋಡಿ ಮಾಡಿಕೊಡಲು ಮಂಜುನಾಥ್ ಅವರ ಬಳಿ ಗ್ರಾಮ ಆಡಳಿತಾಧಿಕಾರಿ ನಾಗರಾಜ್ ₹55 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಈ ಪ್ರಕಾರ ಮಂಜುನಾಥ್ ಅವರು ಗುಡಿಬಂಡೆಯ ಐಬಿ ರಸ್ತೆಯ ಖಾಸಗಿ ಕಚೇರಿಯಲ್ಲಿ ನಾಗರಾಜ್ ಅವರಿಗೆ ಹಣ ನೀಡಿದ್ದರು. ಈ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ನಾಗರಾಜ್ ಅವರನ್ನು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

