BigTv News
June 25, 2025
Breaking News
ಹೂವಿನ ಹಡಗಲಿ ತಾಲೂಕಿನಲ್ಲಿ ಕಲುಷಿತ ನೀರು ಕುಡಿದು ಮಾನ್ಯ ರಮಸಲವಾಡ ಗ್ರಾಮದ ಹಡಗಲಿ ಹುಲಿಗೆಮ್ಮ ಸೋಮವಾರ ರಾತ್ರಿ ಮೃದಪಟ್ಟಿದ್ದಾರೆ ಕಳೆದ ವಾರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಎಪ್ಪತ್ತರಿಂದ 80 ಜನ ಆರೋಗ್ಯದಲ್ಲಿ ವ್ಯತ್ಯವಾಗಿದ್ದು ಚಿಕಿತ್ಸೆ ನೀಡಲಾಗಿತ್ತು ಹುಲಿಗೆಮ್ಮನವರು ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದ ಇವರು ಭಾನುವಾರ ಮನೆಗೆ ಹೋಗಿದ್ದರು ಆದರೆ ಸೋಮವಾರ ಆರೋಗ್ಯದಲ್ಲಿ ಮತ್ತೆ ವ್ಯತ್ಯಾಸ ಕಾಣಿಸಿಕೊಂಡು ಮೃತಪಟ್ಟಿದ್ದಾರೆ.
Read More »
BigTv News
June 25, 2025
Breaking News
ಅಥಣಿ ತಾಲೂಕಿನ ಚಮಕೇರಿ ಗ್ರಾಮದ ಶಿವಯ್ಯ ಸ್ವಾಮಿ ಅನುದಾನಿತ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಬೇಡರ ಹಟ್ಟಿ ಗ್ರಾಮ ರೇಣುಕಾ ಸಂಜಯ್ ಬಂಡಗರ್ ಮಂಗಳವಾರ ಶಾಲೆಯಲ್ಲಿ ಆಟವಾಡುತ್ತಿದ್ದ ವೇಳೆ ಹೃದಯಘಾತ ಸಂಭವಿಸಿದೆ ಕೂಡಲೇ ಶಿಕ್ಷಕರು ಆಸ್ಪತ್ರೆಗೆ ದಾಖಲಿಸಿಕೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.
Read More »
BigTv News
June 24, 2025
Breaking News
ಕರ್ನಾಟಕದ ಸ್ಟಾರ್ ಸ್ಪಿನ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಸಹ ಮಹಿಳಾ ಕೆರೆಬಿಯನ್ ಲೀಗ್‌ನಲ್ಲಿ (ಡಬ್ಲ್ಯುಸಿಪಿಎಲ್) ಆಡಲಿದ್ದಾರೆ. ಇವರು ಕಳೆದ ಒಂದು ವರ್ಷಗಳಿಂದ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗಿದ್ದರು. ಶ್ರೇಯ್ಯಾಂಕ್ ಪಾಟೀಲ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಬಾರ್ಬಡೋಸ್ ರಾಯಲ್ಸ್ ಪರ ಆಡಲಿದ್ದಾರೆ. ಇವರು ಕಳೆದ ಆವೃತ್ತಿಯ ಡಬ್ಲ್ಯುಸಿಪಿಎಲ್‌ನಲ್ಲಿ ಆಡಿರಲಿಲ್ಲ. 2023ರಲ್ಲಿ ಗಯಾನಾ ವಾರಿಯರ್ಸ್ ತಂಡ ಫೈನಲ್ ತಲುಪಿರುವಲ್ಲಿ ಶ್ರೇಯಾಂಕ ಕೊಡುಗೆ ಅಪಾರ.22 ವರ್ಷದ ಕನ್ನಡತಿ ಶ್ರೇಯಾಂಕಾ ಈಗಾಗಲೇ …
Read More »
BigTv News
June 24, 2025
Breaking News
ಹಾವೇರಿಯ ಶಿವಶಕ್ತಿ ಪ್ಯಾಲೇಸ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಕಿಕ್ಕಿರಿದು ತುಂಬಿದ್ದ ಬಿಜೆಪಿ ಕಾರ್ಯಕರ್ತರು, ಹೊಸ ಹುರುಪಿನೊಂದಿಗೆ ಮುಂಬರುವ ಚುನಾವಣೆಗೆ ಕಹಳೆ ಊದಿದರು. ಬಿಜೆಪಿ ಬಾವುಟ ಹಸ್ತಾಂತರಿಸುವ ಮೂಲಕ ನೂತನ ಅಧ್ಯಕ್ಷರಿಗೆ ಅಧಿಕಾರ ವಹಿಸಲಾಯಿತು.ನೂತನ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ‘ಯಾವ ಗ್ಯಾರಂಟಿಗೂ ನಾವು ಸೋತಿಲ್ಲ. ಸಣ್ಣ ವಿಷಯಗಳಿಗೆ ಬಿಜೆಪಿಗೆ ಸೋಲಾಯಿತು. ನಮ್ಮಲ್ಲಿಯೇ ತಪ್ಪುಗಳನ್ನು ಮಾಡಿದ್ದಕ್ಕೆ ಜನರು ಶಿಕ್ಷೆ ಕೊಟ್ಟರು. ಆದರೆ, ಈಗ ನಾವು ಬದಲಾಗೋಣ. …
Read More »
BigTv News
June 24, 2025
Breaking News
ಅಂಗಡಿಗೆ ತೆರಳುತ್ತಿದ್ದ ಯುವತಿಯ ಮೈಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಪುಂಡರನ್ನು ಪೊಲೀಸರು ಬಂಧಿಸಿದ್ದಾರೆ. ಜಾನ್ ರಿಚರ್ಡ್, ಪುನೀತ್, ಅನುಷ್ ಮದನ್, ಕಾಣಿಕ್ಯಾ ಸ್ವಾಮಿ ಬಂಧಿತ ಆರೋಪಿಗಳಾಗಿದ್ದು, ಗಾಂಜಾ ನಶೆಯಲ್ಲಿ ಇವರು ಮನಬಂದಂತೆ ವರ್ತಿಸಿದ್ದರು.ಯುವಕರಿಗೆ ಕಾಲಿನಿಂದ ಒದ್ದು ತೆರಳಿದ್ದ ಯುವತಿಯ ಮನೆಯ ಬಳಿಗೂ ಹೋಗಿ ಪುಂಡರು ಆವಾಜ್ ಹಾಕಿದ್ದರು. ಬಳಿಕ ಸಂತ್ರಸ್ತ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Read More »
BigTv News
June 24, 2025
Breaking News
ಬಾಲಕಿ ಬರೇಲಿಯ ಇಜ್ಜತ್‌ನಗರದಲ್ಲಿ ಕೋಚಿಂಗ್ ತರಗತಿಗೆ ಹೋಗುತ್ತಿದ್ದಾಗ ಬೈಕ್‌ನಲ್ಲಿ ಬಂದ ವಿಕೃತಕಾಮಿ ಮಠ ಕಮಲ್ ನಯನ್‌ಪುರ ನಿವಾಸಿ ಮುಸಬ್ಬೀರ್ ಬಾಲಕಿಯ ಖಾಸಗಿ ಅಂಗವನ್ನು ಸ್ಪರ್ಶಿಸಿ ಪರಾರಿಯಾಗಿದ್ದಾನೆ.ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸುವ ಮೂಲಕ ಆತನನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಯಿಂದ 315 ಬೋರ್ ಪಿಸ್ತೂಲ್, 315 ಬೋರ್ ಕಾರ್ಟ್ರಿಡ್ಜ್, ಲೈವ್ ಕಾರ್ಟ್ರಿಡ್ಜ್‌ಗಳು ಮತ್ತು ನಂಬರ್ ಪ್ಲೇಟ್ ಇಲ್ಲದ ಬೈಕ್ ವೊಂದನ್ನು ವಶಪಡಿಸಿಕೊಂಡಿದ್ದಾರೆ.
Read More »
BigTv News
June 24, 2025
Breaking News
ಯೋಗ ದಿನಾಚರಣೆಯ ಅಂಗವಾಗಿ ದೇವಸ್ಥಾನದ ಆವರಣವೊಂದರಲ್ಲಿ ಯೋಗದ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ದೈಹಿಕ ತೊಂದರೆಗಳಿಂದ ಬಳಲುತ್ತಿದ್ದ ಹಲವು ಮುಸ್ಲಿಂ ಮಹಿಳೆಯರು ಅಲ್ಲಿ ಬಂದು ಯೋಗದ ಬಗ್ಗೆ ತರಬೇತಿ ಪಡೆಯುತ್ತಿದ್ದರು. ಈ ವೇಳೆ ಕೆಲವರು ಅಚಾನಕ್ಕಾಗಿ ಆಗಮಿಸಿ ಯೋಗ ಮಾಡುತ್ತಿದ್ದ ಬುರ್ಖಾ ಧಾರಿ ಮಹಿಳೆಯರನ್ನು ಬೆದರಿಸಿ ಅಲ್ಲಿಂದ ಓಡಿಸಿದ್ದಾರೆ.ಮಹಿಳೆಯರನ್ನು ಬೆಂಬೆತ್ತಿದ ದುಷ್ಕರ್ಮಿಗಳು ಇದೇನಾ ನಿಮಗೆ ಮಸೀದಿಯಲ್ಲಿ ಕಲಿಸಿಕೊಟ್ಟಿದ್ದು, ದೇವಸ್ಥಾನದ ಒಳಗೆ ಹೋಗಲು ನಾಚಿಕೆಯಾಗುವುದಿಲ್ಲವೇ. ಚಿಕ್ಕಂದಿನಿಂದ ನಿಮಗೆ ಹೇಳಿಕೊಟ್ಟರೂ ಪ್ರಯೋಜನವಾಗಿಲ್ಲ ಎಂದೆಲ್ಲಾ ನಿಂದಿಸಿ …
Read More »
BigTv News
June 24, 2025
Breaking News
ಅನಾರೋಗ್ಯದಿಂದ ಮೃತಪಟ್ಟ ದೇವರ ಹಸುವನ್ನು ಭವ್ಯ ಮೆರವಣಿಗೆ ಮಾಡಿ, ದೇವಸ್ಥಾನದ ಮುಂದೆಯೇ ಅಂತ್ಯಕ್ರಿಯೆ ಮಾಡಿರುವ ಅಪರೂಪದ ಘಟನೆ ಇಂಡಿ ತಾಲೂಕಿನ ಹೊರ್ತಿಯಲ್ಲಿ ನಡೆದಿದೆ. ಗ್ರಾಮದ ಆರಾಧ್ಯ ದೈವ ಶ್ರೀ ರೇವಣಸಿದ್ಧೇಶ್ವರ ದೇವರಿಗಾಗಿ ಕಳೆದ 15 ವರ್ಷಗಳ ಹಿಂದೆ ಹಸುವನ್ನು ಬಿಡಲಾಗಿತ್ತು. ಯಾವಾಗಲೂ ಗುಡಿಯ ಮುಂದೆಯೇ ಇರುತ್ತಿದ್ದ ಹಸುವಿಗೆ ನಿತ್ಯ ದೇವಸ್ಥಾನಕ್ಕೆ ಬರುತ್ತಿದ್ದ ಭಕ್ತರು ಗೋಮಾತೆ ಎಂದು ಭಕ್ತಿಯಿಂದ ಪೂಜಿಸುತ್ತಿದ್ದರು.ಗ್ರಾಮಸ್ಥರ ದೈವಿಭಕ್ತಿಗೆ ಶ್ಲಾಘನೆ ವ್ಯಕ್ತವಾಗಿದೆ.
Read More »
BigTv News
June 24, 2025
Breaking News
ಮಹಾರಾಷ್ಟ್ರದಲ್ಲಿ ಪ್ರತಿ ವರ್ಷವೂ ಆಷಾಢಿ ವಾರಿ ಅಥವಾ ಪಂಢರಾಪುರ್ ವಾರಿ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಭಕ್ತರನ್ನು ವರ್ಕಾರೀಸ್ ಎಂದು ಕರೆಯಲಾಗುತ್ತದೆ. ಭಗವಾನ್ ವಿಠ್ಠಲನನ್ನು ನೆನಪಿಸಿ ಆರಾಧಿಸುವ ದಿನ ಇದಾಗಿದೆ. ಮಳೆಗಾಲದ ಆರಂಭಿಕ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ನಡೆಯುವ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಈ ವಾರಿ ಕೂಡ ಒಂದು.ಮಮ್ಮದೇವಿ ಚೌಕ್ ಬಳಿಯ ಶೇಖ್ ಅವರ ಮನೆಯ ಮುಂಭಾಗದ ರಸ್ತೆಯಲ್ಲಿ ಪಲ್ಲಕ್ಕಿ ಮೆರವಣಿಗೆ ಹಾದುಹೋಗುತ್ತಿದ್ದಾಗ, ಆಕೆ ಜನರ ಮೇಲೆ ಮಾಂಸ ಎಸೆದು, ಏನು ಮಾಡುತ್ತೀರೋ …
Read More »
BigTv News
June 24, 2025
Breaking News, Crime
ಹಾವೇರಿ ನಗರಸಭೆಯಲ್ಲಿ ಬರ್ತಡೇ ಬ್ಯಾನರ್ ತೆರವಿಗೆ ನಡೆದ ಗಲಾಟೆಯಲ್ಲಿ ನಿಂದನೆಯಿಂದ ಖಿನ್ನಗೊಂಡು ರಂಗಪ್ಪ ಹೆರಕಲ್ಲ ವಿಷ ಸೇವಿಸಿ ಸಾವನ್ನಪ್ಪಿದ ದುಃಖದ ಘಟನೆ ನಡೆದಿದೆ. ಸಂಬಂಧಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕುಟುಂಬದವರು ಆಗ್ರಹಿಸಿದ್ದಾರೆ.ವಿಷ ಸೇವನೆ ಮಾಡಿದ್ದ ರಂಗಪ್ಪನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದರೂ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳನ್ನ ಗಡಿಪಾರು ಮಾಡುವಂತೆ ಕುಟುಂಬ ಸದಸ್ಯರು ಆಗ್ರಹ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ರಂಗಪ್ಪನ ಕುಟುಂಬ …
Read More »