BigTv News
June 18, 2025
Breaking News
ಕುಂದಾಪುರ- ಶಿವಮೊಗ್ಗ ರಾಜ್ಯ ಹೆದ್ದಾರಿಯ ಹುಲಿಕಲ್ ಘಾಟಿಯ ಶ್ರೀ ಚಂಡಿಕಾಂಬಾ ದೇವಸ್ಥಾನದ ಹತ್ತಿರದ ಯು ತಿರುವಿನಲ್ಲಿ ಸರಕು ತುಂಬಿದ ಬೃಹತ್ ಗಾತ್ರದ ಲಾರಿಯೊಂದು ಕೆಟ್ಟುನಿಂತ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡು, ಸುಮಾರು 10 ಗಂಟೆಗಳ ಕಾಲ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಕರು ಪರದಾಡಿದರು.
Read More »
BigTv News
June 18, 2025
Breaking News
ಕೆರೆಗೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಸ ಕ್ಲೈನ್ ನನ್ನು ರಕ್ಷಿಸಲು ಯತ್ನಿಸುತ್ತಿದ್ದಾಗ ಫೈಝಾನ್ ನೀರಿನಲ್ಲಿ ಮುಳುಗಿದನೆನ್ನಲಾಗಿದೆ.ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಇಬ್ಬರನ್ನು ಮೇಲಕ್ಕೇತ್ತಿ ಆಸ್ಪತ್ರೆ ಗೆ ತಲುಪಿಸಿದರೂ ಫೈಝಾನ್ ನ ಜೀವ ಉಳಿಸ ಲಾಗಲಿಲ್ಲ ಎಂದು ತಿಳಿದು ಬಂದಿದೆ. ಝಿಯಾರತ್ ಗಾಗಿ ಬೆಂಗಳೂರಿನಿಂದ 11 ಮಂದಿಯ ತಂಡವು ಮಾಲಿಕ್ ದಿನಾರ್ ಮಸೀದಿಗೆ ತಲಪಿತ್ತು. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
Read More »
BigTv News
June 18, 2025
Breaking News
ಪ್ರದೇಶದ ಬುಲಂದ್ಶಹರ್ ಜಿಲ್ಲೆಯ ಜಹಾಂಗೀರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ, ಒಂದೇ ಕುಟುಂಬದ ಐವರು ಸಜೀವ ದಹನವಾಗಿದ್ದು, ಒಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಜಹಾಂಗೀರಾಬಾದ್-ಬುಲಂದ್ಶಹರ್ ರಸ್ತೆಯ ಜಾನಿಪುರ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದ್ದು, ಸ್ವಿಫ್ಟ್ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಲ್ವರ್ಟ್ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ.
Read More »
BigTv News
June 18, 2025
Breaking News
ವಿದ್ಯುತ್ ಕಂಬ ದುರಸ್ತಿ ಮಾಡುವಾಗ ಕರೆಂಟ್ ಶಾಕ್ ಹೊಡೆದು ಲೈನ್ ಮ್ಯಾನ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ನಡೆದಿದೆ.ಬೆಸ್ಕಾಂ ಉಪ ಅಧಿಕಾರಿಗಳು ಜೈಯರಾಮ್ ಗೆ ಲೈಟ್ ಕಂಬ ದುರಸ್ತಿ ಮಾಡಲು ಸೂಚಿಸಿದ್ದರು. ಅದರಂತೆ ವಿದ್ಯುತ್ ಕಂಬ ಹತ್ತಿ ದುರಸ್ತಿ ಮಾಡುತ್ತಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ಜಯರಾಮ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
Read More »
BigTv News
June 18, 2025
Breaking News
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹಿಂಡಸಕಟ್ಟೆ ಬಳಿಯಲ್ಲಿ ಕಾರೊಂದು ಬೈಕಿಗೆ ಡಿಕ್ಕಿಯಾಗಿದೆ.ಅಪಘಾತದಲ್ಲಿ ಕಾರಿನಲ್ಲಿದ್ದಂತ ಮತ್ತೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹಿರಿಯೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಈ ವಿಷಯ ತಿಳಿದು ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read More »
BigTv News
June 18, 2025
Breaking News
ಯುವತಿಯ ಕಿರುಕುಳ ತಾಳಲಾರದೇ ಸೆಲ್ಪಿ ವಿಡಿಯೋ ಮಾಡಿಟ್ಟು ಬೆಂಗಳೂರಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೂನ್ 13 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ.ಯುವತಿ ನನ್ನನ್ನು ನಂಬಿಸಿ ಮೋಸ ಮಾಡಿದ್ದಾಳೆ. ನಾನು ಅವಳ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದೆ, ಆದರೂ ಆಕೆಯನ್ನು ನಾನು ಮದುವೆಯಾಗಲು ನಿರ್ಧರಿಸಿದ್ದೆ, ಎಂದು ಆತ ವಿಡಿಯೋದಲ್ಲಿ ಹೇಳಿದ್ದಾನೆ. ಅಲ್ಲದೇ ಆಕೆಗೆ ಬೇರೋಬ್ಬನ ಜೊತೆಯಲ್ಲಿ ಸಂಬಂಧವಿದೆ ಎಂದು ಯುವಕ ವಿಡಿಯೋದಲ್ಲಿ ಆರೋಪಿಸಿದ್ದಾನೆ. ನನ್ನ ಸಾವಿಗೆ ನಾನು ಪ್ರೀತಿಸಿದ ಯುವತಿಯೇ …
Read More »
BigTv News
June 18, 2025
Breaking News
ಪತಿಯನ್ನು ಇಷ್ಟವಿಲ್ಲ ಎಂಬ ಕಾರಣಕ್ಕೆ ಸುನೀತಾ, ಪತಿಗೆ ವಿಷಬೆರೆಸಿದ ಆಹಾರ ನೀಡಿ ಕೊಂದಿದ್ದಾಗಿ ಯುವಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.ಇದಕ್ಕೂ ಮೊದಲು ಎರಡು ಬಾರಿ ಸುನೀತಾ ಮಾಡಿದ್ದ ಅಡುಗೆಯನ್ನು ಉಣ್ಣಲು ಬುಧನಾಥ್ ನಿರಾಕರಿಸಿದ್ದರಿಂದ ಉಳಿದುಕೊಂಡಿದ್ದ ಎಂದು ತಾಯಿ ಹೇಳಿದ್ದಾರೆ.ಭಾನುವಾರ ಚಿಕನ್ ಸಿದ್ಧಪಡಿಸಿದ್ದ ಸುನೀತಾ ರಹಸ್ಯವಾಗಿ ಅದಕ್ಕೆ ಕೀಟನಾಶಕ ಲೇಪಿಸಿದ್ದಳು. ಅದನ್ನು ಸೇವಿಸಿದ್ದ ಚಿಕನ್ ಪ್ರಿಯನಾಗಿದ್ದ ಬುಧನಾಥ್ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದ. ಈ ಸಾವಿನಲ್ಲಿ ಪತ್ನಿಯ ಕೈವಾಡ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ …
Read More »
Shaikh BigTv
June 18, 2025
Breaking News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬರುವ ಪ್ರವಾಸಿಗರ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ನಗರದ ಹೃದಯ ಭಾಗದಲ್ಲಿ ಇರುವ ಲಕ್ಷ್ಮಿ ಮಾಲ್ ನಲ್ಲಿ ಅತ್ಯಾಧುನಿಕ ಸೌಲಭ್ಯಗಳಿಂದ ಸುಸಜ್ಜಿತ 46 ರೂಂ ಗಳನ್ನೂ ಹೊಂದಿರುವ ” ಹೋಟೆಲ್ ಆಶ್ರಯ ಇನ್” ಗ್ರಾಹಕರ ಸೇವೆಗೆ ಸಜ್ಜಾಗಿದೆ. ಔರಾ ಮತ್ತು ಅಮ್ರೀತ ಅವಳಿ ಸಭಾಂಗಣಗಳಾಗಿದ್ದು, ಪ್ರತಿಯೊಂದೂ ಸಭಾಂಗಣ 250-350 ಅತಿಥಿಗಳಿಗೆ ಅವಕಾಶ ಕಲ್ಪಿಸುತ್ತದೆ. ಮನಸೆಳೆಯುವ ಒಳಾಂಗಣ ಅಲಂಕಾರಗಳೊಂದಿಗೆ ವಿನ್ಯಾಸಗೊಳಿಸಲಾದ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರುವ ಎರಡೂ ಸಭಾಂಗಣಗಳು ಮದುವೆಗಳು, ನಿಶ್ಚಿತಾರ್ಥಗಳು, …
Read More »
BigTv News
June 18, 2025
Breaking News
ಮದುವೆಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಗೋವಾಕ್ಕೆ ಪ್ರಯಾಣಿಸಿದ್ದರು ಎಂದು ವರದಿಯಾಗಿದೆ, ಆದರೆ ಅವರ ನಡುವಿನ ವಿವಾದ ದುರಂತದಲ್ಲಿ ಕೊನೆಗೊಂಡಿತು.ಸಂಜೆ ದಕ್ಷಿಣ ಗೋವಾದ ಪ್ರತಾಪ್ ನಗರದ ಅರಣ್ಯ ಪ್ರದೇಶದಲ್ಲಿ ರೋಷ್ಣಿಯ ಶವ ಪತ್ತೆಯಾದಾಗ ಕೊಲೆ ಬೆಳಕಿಗೆ ಬಂದಿತು. ಆಕೆಯ ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ದೃಢಪಡಿಸಿದರು.ಶವ ಪತ್ತೆಯಾದ ನಂತರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ (ದಕ್ಷಿಣ ಗೋವಾ) ಟಿಕಮ್ ಸಿಂಗ್ ವರ್ಮಾ, “ಈ ಕೊಲೆ ಪ್ರೇಮ ಸಂಬಂಧ, ಮದುವೆ …
Read More »
BigTv News
June 17, 2025
Breaking News
ಮನೆಯ ನೀರಿನ ಪಂಪ್ ಸ್ವಿಚ್ ಹಾಕುವ ವಿದ್ಯುತ್ ಶಾಕ್ ಹೊಡೆದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ತಕ್ಷಣ ಅವರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಈ ಸಂಬಂಧ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More »