ಧಾರವಾಡ : ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಕಿಸಾನ ಸಮ್ಮಾನ್ ನಿಧಿ ಯೋಜನೆಯ ಈಕೆವೈಸಿ ವಿಚಾರದಲ್ಲಿ ಧಾರವಾಡ ಬಹಳ ಹಿನ್ನೆಡೆಯಲ್ಲಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ 1,22,794 ರೈತ ಫಲಾನುಭವಿಗಳಲ್ಲಿ 33,726 ಫಲಾನುಭವಿಗಳು ಇ- ಕೆವೈಸಿ ಮಾಡಿಸಿಕೊಂಡಿಲ್ಲ. ಈ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಅಸಡ್ಡೆ ವಹಿಸಿದ್ದು ಪ್ರಚಾರದ ವಾಹನಗಳಿದ್ದರೂ ಹಳ್ಳಿಗಳ ಕಡೆಗೆ ತೆರಳುತ್ತಿಲ್ಲ. ನಾಮಕೇವಾಸ್ತೇ ಪತ್ರಿಕಾ ಪ್ರಕಟಣೆ ನೀಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಯಾವ ಕೆಲಸವೂ ಸರಿಯಾಗಿ ಆಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಆದ್ದರಿಂದ ಇನ್ನು ಮುಂದೆ ಅಧಿಕಾರಿಗಳು ಎಚ್ಚತ್ತುಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಇಲ್ಲದೆ ಹೋದರೆ ರೈತರಿಗಾಗಿ ಜಾರಿಗೆ ಬಂದಿರುವ ಯೋಜನೆಗಳು ಸಮರ್ಪಕವಾಗಿ ಫಲ ನೀಡದೆ, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮಾಡುವ ತಪ್ಪಿಗೆ ಯೋಜನೆಗಳು ದಾರಿತಪ್ಪುವ ಸಾಧ್ಯತೆಗಳು ಇವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





