Breaking News

Breaking News

ಸ್ಕೂಟರ್ ಕದ್ದು ಎಸ್ಕೇಪ್, ಆಕ್ಸಿಡೆಂಟ್ ಮಾಡಿ ಲಾಕ್!

ಮಂಡ್ಯದ ಪೇಟೆ ಬೀದಿಯಲ್ಲಿ ಸತೀಶ್ ಬಾಬು ಎಂಬುವವರ ಆಕ್ಟಿವಾ ಹೋಂಡಾ ಕಳ್ಳತನವಾಗಿತ್ತು.ಸ್ಕೂಟರ್ ನಲ್ಲಿ ಕೀ ಬಿಟ್ಟು ಪೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಕಳ್ಳ ಮಂಜುನಾಥ್ ಕದ್ದೊಯ್ದಿದ್ದ. ಇದಾದ ಬಳಿಕ ಬಟ್ಟೆ ಬದಲಾಯಿಸಿಕೊಂಡು ಬೆಂಗಳೂರಿನತ್ತ ಎಸ್ಕೇಪ್ ಆಗುತ್ತಿದ್ದ.ಈ ವೇಳೆ ಬೆಂ- ಮೈ ಎಕ್ಸ್ಪ್ರೆಸ್ ಹೈವೆ ಮದ್ದೂರಿನ ಗೆಜ್ಜಲಗೆರೆ ಬಳಿ ತಡೆ ಗೋಡೆಗೆ ಗುದ್ದಿ ಅಪಘಾತ ಮಾಡಿಕೊಂಡಿದ್ದಾನೆ. ಅಪಘಾತವಾದ ಬಳಿಕ ಮಂಜುನಾಥ್ ಆಸ್ಪತ್ರೆ ದಾಖಲಾಗಿದ್ದ. ವಿಚಾರಣೆ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.ಮಂಡ್ಯದ ಸೆಂಟ್ರಲ್ …

Read More »

ಸಿಂಧನೂರು: ಬಾಲಕಿ ಮೇಲೆ ಅತ್ಯಾಚಾರ, ಆರೋಪಿಯ ಬಂಧನ!

ಮನೆ ಬಳಿ ಆಟವಾಡುತ್ತಿದ್ದ ಬಾಲಕಿಗೆ ಪಕ್ಕದ ಮನೆಯ ವಿಶ್ವನಾಥ ಚಾಕೊಲೇಟ್‌ ಆಸೆ ತೋರಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿಯ ಪೋಷಕರು ದೂರು ದಾಖಳಿಸಿದ್ದಾರೆ.ವಿಶ್ವನಾಥ ಗುಂಡಪ್ಪ (35) ಬಂಧಿತ ಆರೋಪಿ. ಬಾಲಕಿ ಪಾಲಕರು ನೀಡಿರುವ ದೂರಿನ ಆಧಾರದಲ್ಲಿ ಶಹರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

Read More »

ಅಪಘಾತ : ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಸಾವು!

ದಾಬಸ್‌ಪೇಟೆ ಕಡೆಯಿಂದ ದೊಡ್ಡಬಳ್ಳಾಪುರದ ಕಡೆಗೆ ಎಂ-ಸ್ಯಾಂಡ್ ತುಂಬಿಕೊಂಡು ಟ್ರ್ಯಾಕ್ಟರ್ ಬರುತ್ತಿತ್ತು. ತಾಯಿ ಹಾಗೂ ಮಗ ಬರುತ್ತಿದ್ದ ಬೈಕ್‌ಗೆ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದ ಪರಿಣಾಮ ಗಂಗಾಬಾಯಿ ಮೃತಪಟ್ಟಿದ್ದಾರೆ.ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ಪ್ರಸನ್ನ, ಡಿವೈಎಸ್ಪಿ ಜಗದೀಶ್, ಇನ್‌ಸ್ಪೆಕ್ಟರ್‌ ರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ದಾಬಸ್‌ಪೇಟೆ: ರಸ್ತೆ ಅಪಘಾತ ಒಂದು ಸಾವು!!

ಕಲ್ಲು ತುಂಬಿಕೊಂಡು ಬರಲು ಟ್ರ್ಯಾಕ್ಟರ್ ತೆಗೆದುಕೊಂಡು ಕ್ರಷರ್‌ಗೆ ಹೋಗಿದ್ದರು. ಹಿಂದಿನಿಂದ ಬರುತ್ತಿದ್ದ ಟಿಪ್ಪರ್‌ನ ಬ್ರೇಕ್ ವಿಫಲಗೊಂಡು ಟ್ರ್ಯಾಕ್ಟರ್‌ಗೆ ಡಿಕ್ಕಿಯಾಗಿದೆ. ಕಲ್ಲಿನ ಲೋಡ್ ಇದ್ದ ಕಾರಣ ಟಿಪ್ಪರ್ ಗುದ್ದಿದ ರಭಸಕ್ಕೆ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕನ ಮೇಲೆ ಕಲ್ಲುಗಳು ಬಿದ್ದು ಮೃತಪಟ್ಟಿದ್ದಾರೆ.ತುಮಕೂರು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ದಾಬಸ್‌ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬೆಂಗಳೂರು :ಬೈಕ್‌ ಟ್ಯಾಕ್ಸಿ ನಿರ್ಬಂಧ ಆರಂಭ, ಮೊದಲ ದಿನವೇ 103 ದ್ವಿಚಕ್ರ ವಾಹನ ವಶ!

ಬೆಂಗಳೂರು ಕೇಂದ್ರ, ಬೆಂಗಳೂರು ಪಶ್ಚಿಮ, ಬೆಂಗಳೂರು ಪೂರ್ವ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಜ್ಞಾನಭಾರತಿ, ದೇವನಹಳ್ಳಿ, ಯಲಹಂಕ, ಎಲೆಕ್ಟ್ರಾನಿಕ್‌ ಸಿಟಿ, ಕೆ.ಆರ್‌. ಪುರ, ಚಂದ್ರಾ‍ಪುರ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.ಉಬರ್‌ ಇಂಡಿಯಾ ಸಿಸ್ಟಮ್ಸ್‌ ಪ್ರೈವೇಟ್‌ ಲಿಮಿಟೆಡ್‌, ರೊಪ್ಪೆನ್‌ ಟ್ರಾನ್ಸ್‌ಪೋರ್ಟೇಶನ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌ (ರ‍್ಯಾಪಿಡೊ), ಎಎನ್‌ಐ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ (ಓಲಾ) ಮುಂತಾದ ಕಂಪನಿಗಳ ಅಡಿಯಲ್ಲಿ ಬೈಕ್‌ ಟ್ಯಾಕ್ಸಿಗಳು ಕಾರ್ಯನಿರ್ವಹಿಸುತ್ತಿದ್ದವು.ವಿವಿಧೆಡೆ ಕಾರ್ಯಾಚರಣೆ ನಡೆಸಿ, 103 ಬೈಕ್‌ ಟ್ಯಾಕ್ಸಿಗಳನ್ನು …

Read More »

ಬೀಡಿಯ ತುಂಡು ನುಂಗಿ 10 ತಿಂಗಳ ಮಗು ಸಾವು.!

ಮಂಗಳೂರು ನಗರದ ಹೊರವಲಯದ ಅಡ್ಯಾರ್ನಲ್ಲಿ ಮನೆಯಲ್ಲಿ ತಂದೆ ಸೇದಿ ಬಿಸಾಡಿದ್ದ ಬೀಡಿಯ ತುಂಡನ್ನು ನುಂಗಿ 10 ತಿಂಗಳ ಮಗು ಮೃತಪಟ್ಟಿದೆ.ಅಡ್ಯಾರ್ನಲ್ಲಿ ವಾಸವಿದ್ದ ಬಿಹಾರ ಮೂಲದ ದಂಪತಿಯ ಮಗು ಅನೀಶ್ ಕುಮಾರ್ ಮೃತ ಮಗು, ತನ್ನ ಗಂಡನ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ.ಮನೆಯೊಳಗೆ ಬೀಡಿ ಸೇದಿ ಬಿಸಾಡದಂತೆ ಗಂಡನಿಗೆ ಹಲವು ಬಾರಿ ತಿಳಿಸಿದ್ದರೂ ಕೇಳದ್ದಕ್ಕೆ ಮಗುವಿನ ಪ್ರಾಣ ಹೋಗಿದೆ ಎಂದು ಮಗುವಿನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

Read More »

ಉಡುಪಿ :ನೋಡ ನೋಡುತ್ತಿದ್ದಂತೆ ಕೊಚ್ಚಿ ಹೋದ ಬೈಕ್ ಸವಾರರು!

ಕರಾವಳಿ: ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದದಲ್ಲಿ ಸೇತುವೆಗಳು ತುಂಬಿ ಹರಿಯುತ್ತಿದ್ದು, ಬೈಕ್ ಸವಾರರು ದಾಟಲು ಯತ್ನಿಸಿ ಕೊಚ್ಚಿಕೊಂಡು ಹೋಗಿರುವ ಘಟನೆ ಒಡಾಕೆರೆ ಬಳಿ ನಡೆದಿದೆ.ಅಪಾಯಮಟ್ಟದಲ್ಲಿ ಸೇತುವೆ ಮೇಲೆ ಮಳೆ ನೀರು ರಭಸದಿಂದ ಹರಿಯುತ್ತಿದ್ದರೂ ಬೈಕ್​​ ಮೇಲೆ ದಾಟಲು ಯತ್ನಿಸಿದ ಇಬ್ಬರೂ ನೀರಿ ಹೊಡೆತಕ್ಕೆ ಬೈಕ್​ ಸಮೇತ ಕೊಚ್ಚಿ ಹೋಗಿದ್ದಾರೆ. ಸದ್ಯ ಇಬ್ಬರು ಸವಾರರನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಮೊಬೈಲ್​​​ನಲ್ಲಿ ಸೆರೆಯಾಗಿರುವ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ …

Read More »

ರಾಜ್ಯದಲ್ಲಿ 44 ಲಕ್ಷ ಅನರ್ಹ ಪಡಿತರ ಚೀಟಿದಾರರ ಕಾರ್ಡ್ ರದ್ದು!!

ರಾಜ್ಯದಲ್ಲಿ 44 ಲಕ್ಷ ಅನರ್ಹ ಪಡಿತರ ಫಲಾನುಭವಿಗಳು ಇದ್ದಾರೆ ಎಂದು ಪತ್ತೆಹಚ್ಚಿ ಕಾರ್ಡ್ ರದ್ದುಪಡಿಸಲು ರಾಜ್ಯ ಸರ್ಕಾರ ಥರ್ಡ್ ಪಾರ್ಟಿ ಸರ್ವೇಗೆ ನಿರ್ಧರಿಸಿದೆ. 2011ರ ಜನಸಂಖ್ಯೆ ದತ್ತಾಂಶದ ಪ್ರಕಾರ 4,01,93,130 ಸ್ವೀಕೃತದಾರರ ಮಿತಿ ನಿಗದಿ ಮಾಡಲಾಗಿದೆ. ಆದರೆ, 44 ಲಕ್ಷ ಹೆಚ್ಚುವರಿ ಕಾರ್ಡ್ ಇರುವುದಾಗಿ ಹೇಳುತ್ತಿದೆ.ವಾರ್ಷಿಕ ಆದಾಯ 1.20 ಲಕ್ಷಗಿಂತ ಹೆಚ್ಚಿರುವ ಕುಟುಂಬ.3 ಹೆಕ್ಟೇರ್ಗಿಂತ ಹೆಚ್ಚಿನ ಭೂಮಿ ಹೊಂದಿದವರು. ಸರ್ಕಾರಿ, ಅನುದಾನಿತ, ಸರ್ಕಾರಿ ಸಂಯೋಜಿತ ಸಂಸ್ಥೆಗಳಲ್ಲಿ ನೌಕರರು. 1 ಸಾವಿರ …

Read More »

ಹಾವೇರಿ: ಹಾನಗಲ್ ಪೊಲೀಸ್ ಠಾಣೆ CPI ಸಿಪಿಐ ಅಮಾನತು!

ಹಾವೇರಿ ಜಿಲ್ಲೆ ಹಾನಗಲ್ ವೃತ್ತದ ಸಿಪಿಐ ಕರ್ತವ್ಯದಲ್ಲಿ ಅಶಿಸ್ತು ಪ್ರದರ್ಶನ ಮಾಡಿದ ಹಿನ್ನಲೆ ದಾವಣಗೆರೆ ಪೂರ್ವ ವಲಯದ ಐಜಿಪಿಯವರು ಸೇವೆಯಿಂದ ಅಮಾನತ್ತಿನಲ್ಲಿರಿಸಿ ಆದೇಶ ಹೊರಡಿಸಿದ್ದಾರೆ. ಹಾನಗಲ್ ಠಾಣೆ CPI ಆಂಜನೇಯ NH ಅಮಾನತ್ತಿನಲ್ಲಿರಿಸಿ ಆದೇಶ ಮಾಡಿದ್ದು, ಮುಂದಿನ ಆದೇಶ ಆಗುವವರೆಗೆ ಹಾನಗಲ್ ಸಿಪಿಐ ಹೆಚ್ಚುವರಿ ಪ್ರಭಾರವನ್ನು ಶಿಗ್ಗಾಂವಿ ವೃತ್ತದ ಸಿಪಿಐ ಅನೀಲಕುಮಾರ ರಾಠೋಡ ಅವರಿಗೆ ಹಾವೇರಿ ಎಸ್ಪಿ ಅಂಶುಕುಮಾರ ಆದೇಶ ಹೊರಡಿಸಿದ್ದಾರೆ. ಹಾನಗಲ್ ಸಿಪಿಐ ವೃತ್ತದಲ್ಲಿ ಕರ್ತವ್ಯದಲ್ಲಿ ಅಶಿಸ್ತು ಪ್ರದರ್ಶನ …

Read More »

ಆಟವಾಡುತ್ತಾ ನಾಲೆಗೆ ಬಿದ್ದು ಎರಡು ವರ್ಷದ ಮಗು ದುರ್ಮರಣ!

ಮನೆಯ ಬಳಿ ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ನಾಲೆಗೆ ಬಿದ್ದು ಸಾವನ್ನಪ್ಪಿರುವ ಘೋರ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಭಟ್ಕಳ ತಾಲೂಕಿನ ಜಾಲಿ ಪಟ್ಟಡಲ್ಲಿ ಈ ದುರಂತ ಸಂಭವಿಸಿದೆ. 2 ವರ್ಷದ ಕಂದಮ್ಮ ನಾಲೆಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದಾಳೆ.ಇದನ್ನು ಕಂಡ ಸ್ಥಳೀಯರು ತಕ್ಷಣ ಮಗುವನ್ನು ರಕ್ಷಿಸಲು ಯತ್ನಿಸಿ ಮೇಲಕೆತ್ತಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಗು ಬದುಕುಳಿಯಲಿಲ್ಲ.

Read More »