BigTv News
June 14, 2025
Breaking News
ಮದೀನಗುಡದ ಆಟೋಮೊಬೈಲ್ ಶೋ ರೂಂನಲ್ಲಿ ಕೆಲಸ ಮಾಡುತ್ತಿರುವ ಕಿಶೋರ್ ಕುಮಾರ್ (35) ಜೂನ್ 2 ರಂದು ಅವರ ಶೋ ರೂಂಗೆ ಸರ್ವಿಸಿಂಗ್‌ಗೆ ಬಂದ ಬೈಕನ್ನು ಕದ್ದಿದ್ದಾನೆ.ತನಿಖೆ ನಡೆಸಿದಾಗ ಶೋ ರೂಂ ಮೇಲ್ವಿಚಾರಕರಿಗೆ ಬೈಕ್ ಕಳುವಾಗಿರುವುದು ಇತ್ತೀಚೆಗೆ ತಿಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ದೂರಿನ ಆಧಾರದ ಮೇಲೆ, ಮಿಯಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಿಶೋರ್ ಕುಮಾರ್ ಅವರನ್ನು ಅನುಮಾನದ ಮೇಲೆ ಬಂಧಿಸಿದಾಗ ಅವರು ಅಪರಾಧವನ್ನು ಒಪ್ಪಿಕೊಂಡರು. ಅವರಿಂದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
Read More »
BigTv News
June 14, 2025
Breaking News
ಪಶ್ಚಿಮವಾಹಿನಿ ಬಳಿ ಶನಿವಾರ ಮುಂಜಾನೆ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರೈಲು ಹರಿದ ರಭಸಕ್ಕೆ ರುಂಡ ಮತ್ತು ಮುಂಡ ಬೇರ್ಪಟ್ಟಿವೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ತಾಲ್ಲೂಕಿನ ಅರಕೆರೆ ಗ್ರಾಮದ ಮಹದೇವು ಅವರ ಮಗ ಆಕಾಶ್ (24) ಮೃತರು.ಸ್ಥಳಕ್ಕೆ ಮೈಸೂರು ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read More »
BigTv News
June 14, 2025
Breaking News
ಇಟಲಿಯ ಉತ್ತರ ಭಾಗದ ಕೊಮೊ ಎಂಬ ಊರಿನಲ್ಲಿ ವಾಸವಿದ್ದ, ತನ್ನ ಮನೆಯಿಂದ ಸುಮಾರು 450 ಕಿಮೀ ದೂರದ ಫಾನೊ ಎಂಬ ಕರಾವಳಿ ಪಟ್ಟಣವರೆಗೆ ಪಾದಯಾತ್ರೆ ನಡೆಸಿದ್ದಾನೆ. ಅವನ ದೀರ್ಘ ನಡಿಗೆ 7 ದಿನಗಳವರೆಗೆ ಮುಂದುವರೆದಿದ್ದು, ಪ್ರತಿದಿನ ಸರಾಸರಿ 60 ಕಿಮೀ ನಡೆಯುತ್ತಿದ್ದ.ಘಟನೆ ವೈರಲ್ ಆದ ಬಳಿಕ, ನೆಟಿಜನ್‌ಗಳು ಆ ವ್ಯಕ್ತಿಗೆ ಸೆಲ್ಯೂಟ್ ಮಾಡುತ್ತಿದ್ದಾರೆ. “ಅವನಿಗೆ ದಂಡವಲ್ಲ, ಒಂದು ಜೋಡಿ ಶೂಗಳನ್ನು ಬಹುಮಾನವಾಗಿ ಕೊಡಬೇಕಿತ್ತು!” “ಅವನನ್ನು ಕೊಂಡಾಡಬೇಕು. ತನ್ನ ಕೋಪವನ್ನು ಹಿಂಸಾಚಾರವಿಲ್ಲದೇ …
Read More »
BigTv News
June 14, 2025
Breaking News
ಪತಿಯ ಮದ್ಯದ ಚಟದಿಂದ ಬೇಸತ್ತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.ರಾತ್ರಿ ಮನೆಯ ಚಾವಣಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.ಈ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
Read More »
BigTv News
June 14, 2025
Breaking News
ಉದ್ಯಾನದಂಚಿನ ಸೊಳ್ಳೆಪುರ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗಷ್ಟೆ ಆದಿವಾಸಿ ಯುವಕನನ್ನು ಬಲಿ ಪಡೆದಿದ್ದ ಹುಲಿ ಮತ್ತೆ ಕಾಣಿಸಿಕೊಂಡಿದ್ದು, ಮಮೇಯಲು ಬಿಟ್ಟಿದ್ದ ತೆನೆ ಹಸುವನ್ನು ಬಲಿ ಪಡೆದಿದೆ.ಈ ಭಾಗದಲ್ಲಿ ಹುಲಿ ಸೆರೆಗೆ ಹಲವೆಡೆ ಬೋನ್‌ಗಳನ್ನು ಇಡಲಾಗಿದೆ. ಹುಲಿಯೂ ಮೇಯಲು ಹಸುವನ್ನು ಬಿಟ್ಟಿದ್ದಾಗ ಹಗಲು ವೇಳೆಯೇ ದಾಳಿ ನಡೆಸಿ ಕೊಂದು ಹಾಕಿದೆ. ಇದರಿಂದ ರೈತ ಕಂಗಾಲಾಗಿದ್ದಾರೆ. ಹುಲಿಯನ್ನು ಸೆರೆ ಹಿಡಿದು ಜನರ ಆತಂಕವನ್ನು ದೂರ ಮಾಡುವಂತೆ ಅರಣ್ಯ ಇಲಾಖೆಯನ್ನು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Read More »
BigTv News
June 14, 2025
Breaking News
ಅಕ್ಕಪಕ್ಕದ ಮನೆಗಳಲ್ಲಿ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ತನ್ನ ಮನೆಯಲ್ಲಿ ದಾಸ್ತಾನು ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ವರ್ಷಾ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಮಹಿಳೆಯನ್ನು ಬಂಧಿಸಿದ್ದಾರೆ.ವಹೀದಾ (39) ಬಂಧಿತ ಆರೋಪಿ. ಈಕೆಯಿಂದ 5 ಚೀಲದಲ್ಲಿ 196 ಕೆ.ಜಿ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಶಂಕರರಾಜು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read More »
BigTv News
June 14, 2025
Breaking News
ತಾನು ಸುಂದರವಾಗಿಲ್ಲ ಎಂದು ಹೇಳಿ ಕಿರುಕುಳ ನೀಡಿದ್ದರಿಂದ ಪತಿಯನ್ನು ಮಹಿಳೆ ಕೊಂದಿದ್ದಾಳೆ. ಕೃಷ್ಣಗಿರಿಯಲ್ಲಿ ಈ ಘಟನೆ ನಡೆದಿದೆ. ಕೃಷ್ಣಗಿರಿ ಜಿಲ್ಲೆಯ ರಂಗಸಾಮಿ (47), ಕವಿತಾ (44) ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿವೆ. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಕವಿತಾಳನ್ನು ಹುಡುಕುತ್ತಿದ್ದರು ಮತ್ತು ಜೂನ್ 13, 2025 ರಂದು ತಿರುಪತಿಯಲ್ಲಿ ಅವರನ್ನು ಬಂಧಿಸಲಾಯಿತು. ಇದರ ನಂತರ, ಪೊಲೀಸರ ವಿಚಾರಣೆಯ …
Read More »
BigTv News
June 14, 2025
Breaking News
ಕೋಲಾರ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುಪತಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಆಂಧ್ರ ಸಾರಿಗೆ ಮತ್ತು ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ಅಪಘಾತ ನಡೆದಿದೆ.ಅಪಘಾತದ ತೀವ್ರತೆಗೆ ಬಸ್ಸಿನಲ್ಲಿದ್ದ ಕೇಶವರೆಡ್ಡಿ (44ವ), ತುಳಸಿ (21ವ), ಪ್ರಣತಿ (4ವ) ಹಾಗೂ 1 ವರ್ಷದ ಮಗು ಸಾವಿಗೀಡಾಗಿದ್ದಾರೆ. 16 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
Read More »
BigTv News
June 14, 2025
Breaking News
ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕುಮಾರಪಟ್ಟಣಂ ಗ್ರಾಮದ ಬೈಪಾಸ್ ಬಳಿ ನಡೆದಿದೆ.ಅಪಘಾತದಲ್ಲಿ ಗಂಭೀರ ಗಾಯಗೊಂಡ ಕೊಟ್ಟೇಶ ಅಬಲೂರನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Read More »
BigTv News
June 14, 2025
Breaking News
ಮಳೆ ಹಾನಿ ವೀಕ್ಷಣೆಗೆ ಸಚಿವ ಸಂತೋಷ್ ಲಾಡ್ ಜೊತೆ ಹೆಚ್ಚುವರಿ ಡಿಸಿ ಗೀತಾ ತೆರಳಿದ್ದರು. ಹೆಚ್ಚುವರಿ ಡಿಸಿ ಗೀತಾ ಕಾರಿಗೆ ಸಿಲಿಂಡರ್ ತುಂಬಿದ್ದ ಕ್ಯಾಂಟರ್ ಡಿಕಿ ಹೊಡೆದಿದೆ. ಹುಬ್ಬಳ್ಳಿ ತಾಲೂಕಿನ ಹೆಬಸೂರು ಸಮೀಪ ಈ ಅಪಘಾತ ಸಂಭವಿಸಿದೆ.ಮಳೆ ಹಾನಿ ವೀಕ್ಷಿಸಿ ವಾಪಾಸ್ ಆಗುತ್ತಿದ್ದಾಗ ಹೆಬಸೂರು ಬಳಿ ಕಾರಿಗೆ ಕ್ಯಾಂಟರ್ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »