ಚಿಕ್ಕೋಡಿ: ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಹೇಶ್ ಕುಮಠಳ್ಳಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪೋಟೋಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ವಾಟ್ಸಅಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಮಹೇಶ್ ಕುಮಠಳ್ಳಿ ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿರುವ ಭಾವಚಿತ್ರ ವೈರಲ್ ಆಗಿದೆ.
ಮಹೇಶ ಕುಮಠಳ್ಳಿ ವರ್ತನೆಯಿಂದ ಜೆಡಿಎಸ್,ಮತ್ತು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಹೆಚ್ಚಿದ್ದು ಈ ಮೂಲಕ ವ್ಯಕ್ತವಾಗಿದೆ.
ಕಾರ್ಯಕರ್ತರು ಬೆನ್ನಿಗೆ ಚೂರಿ ಹಾಕಿದ ಮಹೇಶ್ ಕುಮಠಳ್ಳಿ ನಮ್ಮ ಕ್ಷೇತ್ರದ ಪಾಲಿಗೆ ಸತ್ತು ಹೊದರು ಎಂದು ಭಾವ ಚಿತ್ರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





