ಹುಬ್ಬಳ್ಳಿ: ರಾಮ ಜನ್ಮಭೂಮಿ ಹೋರಾಟಗಾರ ಅರೆಸ್ಟ್ ವಿಚಾರ, ಪೋಲಿಸರು ತಮ್ಮ ರೋಟಿನ್ ವರ್ಕ್ ಮಾಡಿದ್ದಾರೆ. ಬಿಜೆಪಿಗೆ ಚುನಾವಣೆ ಸಮಯದಲ್ಲಿ ಯಾವುದಾದರೂ ಒಂದು ವಿಷಯ ಬೇಕು, ರೋಟಿನ್ ವರ್ಕ್ ಗೆ ಬಣ್ಣ ಹಚ್ಚಿ ಬೇರೆ ತರಹದ ಮೇಸಜ್ ಪಾಸ್ ಮಾಡಿ ಜನರ ಕೋಮು ಸೌಹಾರ್ದತೆ ಹಾಳು ಮಾಡೋದು ಬಿಜೆಪಿ ಮೊದಲಿನಿಂದಲೂ ಮಾಡುತ್ತಿದೆಂದು ರಾಮ ಮಂದಿರ ಕೇಸ್ ರೀ ಒಪನ್ ಬಗ್ಗೆ ಶಾಸಕ ಪ್ರಸಾದ ಅಬ್ಬಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶಾಸಕ ಪ್ರಸಾದ್ ಅಬ್ಬಯ್ಯ, ಆರ್ ಅಶೋಕ್ ಅವರು ವಿಪಕ್ಷ ನಾಯಕನಾಗಿ ಅಭಿವೃದ್ಧಿ ವಿಚಾರವಾಗಿ ಪ್ರತಿಭಟನೆ ಮಾಡಲಿ,
ಅದು ಬಿಟ್ಟು ಯಾವೋದು ವಿಚಾರ ಇಟ್ಟಕೊಂಡು ಎಲೆಕ್ಷನ್ ಗಿಮಿಕ್ ಮಾಡೋದು ಸರಿಯಲ್ಲಾ. ಇದು ಯಾವೋದು ಒಂದು ಪ್ರಕರಣ ಇದಕ್ಕೆ ಅದನ್ನು ದೊಡ್ಡದು ಮಾಡಿ ಗಲಾಟೆ ಮಾಡೋದು ಎಷ್ಟರಮಟ್ಟಿಗೆ ಸರಿ, ಬಿಜೆಪಿ ಬೇರೆ ವಿಷಯ ಇಲ್ಲ ಯಾವು ವಿಚಾರ ಮಾಡಲ್ಲ, ಜನ ಸರ್ಕಾರದ ಮೆಚ್ಚುಗೆ ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಅಳಿಸಿ ಹಾಕಲು ಕೋಮು ಭಾವನೆಗೆ ಬೆಂಕಿ ಹಚ್ಚುವ ಕೆಲಸ ಬಿಜೆಪಿ ಮಾಡಿಕೊಂಡು ಬಂದಿದೆ.ಸುಮ್ಮನೆ ರಾಮ ಮಂದಿರ ತೆಗೆದುಕೊಂಡು ಗಲಭೆ ಬೇಡ, ಈಗ ರಾಮ ಜನ್ಮಭೂಮಿ ಕೇಸ್ ಅಂತ ಮಾತನಾಡುತ್ತಾರೆ ಆದರೆ ಪೋಲಿಸರು ಇದನ್ನು ಏನು ನೋಡಿಕೊಂಡು ಮಾಡಿದ್ದಾರಾ, ಪೋಲೀಸರು ಜನರಲ್ ಆಗಿ ಪೆಂಡಿಂಗ್ ಕ್ಲಿಯರ್ ಮಾಡಿದ್ದಾರೆ. ಬಿಜೆಪಿಗರು ತಮಗೆ ಹೇಗೆ ಬೇಕೊ ಹಾಗೇ ತಿರುಚಿತ್ತಾರೆ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಹುಬ್ಬಳ್ಳಿ ಈದ್ಗಾ ವಿಷಯದಿಂದ ಬಿಜೆಪಿ ದೇಶದಲ್ಲಿ ನಲೆಯೂರಿತ್ತು ಈಗ ಇಂತಹದ್ದೆ ವಿಷಯ ಹುಡುಕುತ್ತಾರೆ. ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ, ಗೊಂದಲ ಸೃಷ್ಟಿ ಮಾಡೋದು, ಜನರ ಭಾವನೆಗೆ ಧಕ್ಕೆ ತರೋದೆ ಬಿಜೆಪಿ ಅಜೆಂಡಾ ಎಂದರು. ಹಳೇ ಹುಬ್ಬಳ್ಳಿ ಗಲಭೆಯಲ್ಲಿ 90% ಅಮಾಯಕರನ್ನು ವರ್ಷಾನುಗಟ್ಟಲೆ ಜೈಲಿಗೆ ಹಾಕಿ ಹಾಳು ಮಾಡಿದ್ದು ರಾಜಕಾರಣ ಅಲ್ವಾ, ಇದು ಕೋರ್ಟ್ ನಿರ್ದೇಶನ ಪ್ರಕರಣದ ತನಿಖೆ ನಡೆದಿದೆ. ಆರೋಪಿಗಳು ಇಳಿಯ ವಯಸ್ಸಿನಲ್ಲಿ ಇದ್ದಾರೆ ಅಂದ್ರೆ ಅಮಯಕರು ಇಷ್ಟು ವರ್ಷ ಸತ್ತಿಲ್ವಾ ಎಂದ ಅಬ್ಬಯ್ಯ.
bigtvnews | Hubli Dharwad News | Kannada News | Karnataka News Hubli News | News In Hubli | Local news





