Breaking News

Breaking News

ದಿಬ್ಬಣದ ವಾಹನ ಅಪಘಾತ, ವಧು ಸೇರಿ ಐವರು ಸಾವು, ವರ ಗಂಭೀರ!!

ಮದುವೆ ದಿಬ್ಬಣ ಸಾಗಿಸುತ್ತಿದ್ದ ವಾಹನವು ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ವಧು ಸೇರಿದಂತೆ ಐವರು ದಾರುಣವಾಗಿ ಸಾವನ್ನಪ್ಪಿ, ವರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.ಮೃತರಲ್ಲಿ ಒಬ್ಬರ ಗುರುತನ್ನು ದೃಢಪಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಗಂಭೀರವಾಗಿ ಗಾಯಗೊಂಡ ಎಂಟು ಪ್ರಯಾಣಿಕರಲ್ಲಿ ಉದಯಪುರಾವತಿಯ ವರ ವಿಕ್ರಮ್ ಮೀನಾ (25) ಸೇರಿದ್ದಾರೆ.ಮದುವೆ ದಿಬ್ಬಣ ಹೊತ್ತೊಯ್ಯುತ್ತಿದ್ದ ವಾಹನವು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಳಗೆ ಇದ್ದವರನ್ನು ಹರಸಾಹಸ ಪಟ್ಟು ಹೊರತೆಗೆಯಲಾಗಿದೆ.ಉದಯಪುರಾವತಿ ಪಟ್ಟಣಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು …

Read More »

ಲಿಂಗಸಗೂರು: ಒಂದೇ ದಿನ ಮೂವರು ಬಾಲಕಿಯರು ನಾಪತ್ತೆ!!

ಮನೆಯಿಂದ ಹೊರ ಹೋಗಿ ಬರುವುದಾಗಿ ಹೇಳಿ ಹೊರಟ ಮೂವರು ಬಾಲಕಿರು ಮರಳಿ ಮನೆಗೆ ಬಂದಿಲ್ಲ. ಆತಂಕಗೊಂಡ ಪೋಷಕರು ಲಿಂಗಸಗೂರಿನ ಸುತ್ತಮುತ್ತಲು ಹುಡುಕಾಟ ನಡೆಸಿದ್ದಾರೆ. ಆದರೆ ಬಾಲಕಿಯರ ಸುಳಿವಿಲ್ಲ.ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ದಾಖಲಿಸಿದ್ದಾರೆ. ಇಬ್ಬರು ಬಾಲಕಿಯರು 9ನೇ ತರಗತಿ ಓಡುತ್ತಿದ್ದರೆ, ಓರ್ವ ಬಾಲಕಿ 10 ನೇತರಗಿ ಓದುತ್ತಿದ್ದಾಳೆ. ನಾಪತ್ತೆಯಾಗಿರುವ ಬಾಲಕಿಯರಿಗಾಗಿ ಲಿಂಗಸಗೂರು ಪೊಲೀಸರು ಹುಡುಕಾಟ ನಡೆಸಿದ್ದಾರೆ.

Read More »

ಕೋಲಾರ : ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ ಅರ್ಜುನ್ ಗೌಡ!

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯಲ್ಲಿ ತಿಂಗಳ ಮಾಮೂಲಿ ಹಣ ಪಡೆಯುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಲೋಕಾಯುಕ್ತ ವಿಭಾಗ ಭರ್ಜರಿ ದಾಳಿ ನಡೆಸಿದ್ದು, ಠಾಣೆಯ ಸಿಬ್ಬಂದಿ ಹಾಗೂ ಪಿಎಸ್‌ಐ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ .ಸೋಮವಾರ ನಡೆದ ದಾಳಿಯ ವೇಳೆ ಬಾರ್ ಮಾಲೀಕ ಪ್ರಶಾಂತ್ ಎಂಬವರಿಂದ ₹10,000 ಲಂಚ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಪೇದೆ ಸುರೇಶ್ ತಕ್ಷಣವೇ ಬಲೆಗೆ ಬಿದ್ದಿದ್ದಾರೆ.

Read More »

ಹಾಸನ :ಹಾರ್ಟ್​ ಅಟ್ಯಾಕ್‌ನಿಂದ ಯುವಕ ನಿಶಾಂತ್ ಸಾವು!

ಹೊಳೆನರಸೀಪುರ ಪಟ್ಟಣದ ನಿವಾಸಿಗಳಾದ ಚನ್ನಕೇಶವ ಮತ್ತು ಜ್ಯೋತಿ ದಂಪತಿಯ ಪುತ್ರ ನಿಶಾಂತ್ (19) ಬೆಂಗಳೂರಿನ ಜೆಪಿ ನಗರದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಡಿಪ್ಲೋಮಾ ವ್ಯಾಸಂಗವನ್ನು ಮುಗಿಸಿದ್ದ ನಿಶಾಂತ್, ಕೈಗಾರಿಕಾ ತರಬೇತಿಗಾಗಿ 15 ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿ ಪಿಜಿಯಲ್ಲಿ ವಾಸವಾಗಿದ್ದರು. ಜೂನ್ 11ರಂದು ಬೆಳಗ್ಗೆ ತನ್ನ ಕೋಣೆಯಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದಾರೆ.ಬೆಳಗ್ಗೆ 10 ಗಂಟೆಯಾದರೂ ನಿಶಾಂತ್ ಕೋಣೆಯ ಬಾಗಿಲನ್ನು ತೆರೆಯದ ಕಾರಣ, ಸ್ನೇಹಿತರು ಮತ್ತು …

Read More »

ಸಿಮೆಂಟ್ ಮಿಕ್ಸರ್ ಲಾರಿ ಹರಿದು ಮಹಿಳೆ ಸ್ಥಳದಲ್ಲೇ ಸಾವು..!

ಸಿಮೆಂಟ್ ಮಿಕ್ಸರ್ ಲಾರಿ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಯಲಹಂಕ ಕೋಗಿಲು ಕ್ರಾಸ್ ನಲ್ಲಿ ನಡೆದಿದೆ. ರತ್ನ (54) ಸಾವನ್ನಪ್ಪಿದ್ದ ಮಹಿಳೆ.ಇದರಿಂದ ಮಹಿಳೆ ಮೃತಪಟ್ಟಿದ್ದಾರೆ. ಇನ್ನೂ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Read More »

ಹುಬ್ಬಳ್ಳಿ :ಕೋಟ್ಯಾಂತರ ರೂಪಾಯಿ ಮೌಲ್ಯದ ಖೋಟಾ ನೋಟು ಜಾಲ ಪತ್ತೆ ಮಾಡಿದ ಸಿಸಿಬಿ ತಂಡ!!

ಹುಬ್ಬಳ್ಳಿಯಲ್ಲಿ ಖೋಟಾನೋಟು ಜಾಲ ಪತ್ತೆ 1ಕೋಟಿ 87 ಲಕ್ಷ 45 ಸಾವಿರ ರೂಪಾಯಿಗಳಲ್ಲಿ 5 ಸಾವಿರ ರೂ ಅಷ್ಟೆ ಅಸಲಿ ನೋಟು.. ಸಿಸಿಬಿ ಪೊಲೀಸರ ಕೈಗೆ ಸಿಕ್ಕ ಕತರ್ನಾಕ್ ಕಳ್ಳ ಆಸೀಫ್. ತಮಿಳುನಾಡಿನಲ್ಲಿ ನಕಲಿ ನೋಟಿನ ಮುದ್ರಣ ಕರ್ನಾಟಕದಲ್ಲಿ ಚಲಾವಣೆ ಪೂನಾ ಮೂಲದ ಅಶ್ವಿನಿ ಎಂಬುವವರಿಗೆ ಮೋಸ ಮಾಡಿದ್ದ ಕತರ್ನಾಕ್ ಆರೋಪಿಗಳು,ಅಶ್ವಿನಿ ಅವರಿಗೆ 50 ಕೋಟಿ ಕೊಡಿಸುವ ಆಸೆ ತೋರಿಸಿದ್ದ ಮೊಹಮ್ಮದ್ ಆಸೀಫ್ 50 ಕೋಟಿಗೆ ಪ್ರೊಸೆಸಿಂಗ್ ಫೀ ಅಂತ …

Read More »

4.79 ಕೋಟಿ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ!!

ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಸಂತ್ರಸ್ತರಿಗೆ ಕರೆ ಮಾಡಿದ್ದ ಸೈಬರ್ ವಂಚಕರು, ನಿಮ್ಮ ಬ್ಯಾಂಕ್ ಖಾತೆಗಳ ಮೂಲಕ ಅಕ್ರಮವಾಗಿ ಹಣ ವರ್ಗಾವಣೆ ಆಗುತ್ತಿದ್ದು, ಅದಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿದ್ದರು. ಅಲ್ಲದೇ, ನಕಲಿ ಬಂಧನ ವಾರೆಂಟ್ ಪ್ರತಿ ಕಳುಹಿಸಿ, ಬಂಧನದಿಂದ ತಪ್ಪಿಸಿಕೊಳ್ಳಲು ತಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುವಂತೆ ಒತ್ತಡ ಹಾಕಿದ್ದರು ವಂಚಕರಾದ ಈಶ್ವರ್ ಖಾತೆಗೆ ರೂ. 10 ಲಕ್ಷ ಹಾಗೂ ನಾರಾಯಣ್ …

Read More »

ಕಲಬುರಗಿ :ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ!

ಕಲಬುರ್ಗಿ ಜಿಲ್ಲೆಯ ಆಳಂದ‌ ತಾಲ್ಲೂಕಿನ ಸಾವಳೇಶ್ವರ ಕ್ರಾಸ್ ಬಳಿ ತಡರಾತ್ರಿ ರೌಡಿಶೀಟರ್ ಬರ್ಬರ ಕೊಲೆಯಾಗಿದೆ. ಸುಧಾಕರ್‌ (32) ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಮಂಗಳವಾರ ತಡರಾತ್ರಿ ಸಹೋದರನ ಜೊತೆ ಬೈಕ್ ಮೇಲೆ ತೆರಳುವಾಗ ದುಷ್ಕರ್ಮಿಗಳು ದಾಳಿ ನಡೆಸಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.ಈ ಘಟನೆಯಲ್ಲಿ ಸುಧಾಕರನ ಸಹೋದರನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಳೆ ವೈಶಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.

Read More »

ಮತಾಂತರಕ್ಕಾಗಿ ಅತ್ತೆ-ಮಾವನಿಂದ ಕಿರುಕುಳ; ಗರ್ಭಿಣಿ ಹಿಂದೂ ಮಹಿಳೆ ಆತ್ಮಹತ್ಯೆ!!

ಕ್ರೈಸ್ತ ಧರ್ಮವನ್ನು ಸ್ವೀಕರಿಸುವಂತೆ ಬಲವಂತಪಡಿಸಿ ಮತ್ತು ನಿರಂತರವಾಗಿ ಒತ್ತಡ ಹೇರಿ ಅತ್ತೆ ಮನೆಯವರಿಂದ ಅತಿಯಾದ ಕಿರುಕುಳಕ್ಕೊಳಗಾಗಿ ಕುಪವಾಡದ ಯಶವಂತನಗರದಲ್ಲಿ ವಾಸಿಸುತ್ತಿದ್ದ ವಿವಾಹಿತ ಗರ್ಭಿಣಿ ಮಹಿಳೆಯೊಬ್ಬಳು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, ಆಕೆಯ ತಂದೆಯವರು ಅವಳ ಅತ್ತೆಯ ಮನೆಯವರಿಗೆ ತಿಳಿಸಿ ಹೇಳಲು ಪ್ರಯತ್ನಿಸಿದ್ದರು; ಆದರೆ ನಿರಂತರ ಕಿರುಕುಳ ಮತ್ತು ಒತ್ತಡಕ್ಕೆ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಳು.

Read More »

ಮದ್ದೂರು: ಗರ್ಭಿಣಿ ಅನುಮಾನಾಸ್ಪದ ಸಾವು, ಪತಿಯ ಬಂಧನ!

ಚಾಮರಾಜನಗರ ಜಿಲ್ಲೆಯ ಮೂಲತಃ ಕೊಳ್ಳೆಗಾಲ ತಾಲೂಕಿನ ಕಾಮಗೆರೆ ನಿವಾಸಿಗಳಾದ ಚಂದನ್ ಗೌಡ ಹಾಗೂ ಆಶಾ (19) ಇಬ್ಬರೂ ಪ್ರೇಮಿಗಳು ಕಳೆದ ಒಂದೂವರೆ ವರ್ಷದ ಹಿಂದೆ ಕುಟುಂಬದವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದರು.ಶುಕ್ರವಾರ ರಾತ್ರಿ ಮತ್ತೆ ಇಬ್ಬರ ನಡುವೆ ಜಗಳ ಉಂಟಾಗಿ ತೀವ್ರ ಸ್ವರೂಪ ಪಡೆದು ವೇಲ್ ನಿಂದ ತುಂಬು ಗರ್ಭಿಣಿ ಪತ್ನಿಯ ಕುತ್ತಿಗೆಗೆ ಬಿಗಿದು ಉಸಿರು ಕಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಮದ್ದೂರು ಪೋಲೀಸರು …

Read More »