BigTv News
June 8, 2025
Breaking News, Crime
ಮದುವೆ ಸಮಾರಂಭದಿಂದ 14 ಮತ್ತು 15ರ ಹರೆಯದ ಇಬ್ಬರು ಬಾಲಕಿಯರನ್ನು ಅಪಹರಿಸಿದ್ದ ನಾಲ್ವರು ದುಷ್ಕರ್ಮಿಗಳು ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ಒಡಿಶಾದ ಗಂಜಾಮ್ ಜಿಲ್ಲೆಯಲ್ಲಿ ನಡೆದಿದೆ.ಎಲ್ಲ ನಾಲ್ವರು ಆರೋಪಿಗಳು ವಿಶಾಖಪಟ್ಟಣಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಅವರನ್ನು ಪೋಲಿಸರು ಬಂಧಿಸಿದ್ದಾರೆ.
Read More »
BigTv News
June 8, 2025
Breaking News, Crime
ಹೈದ್ರಾಬಾದ್ ನಲ್ಲಿ 30 ವರ್ಷದ ನೇಪಾಳಿ ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಸಂಗಾತಿ ಕೊಲೆ ಮಾಡಿದ್ದಾನೆ. ಗರ್ಭಧಾರಣೆಯ ವಿವಾದದ ನಂತರ ಕೊಲೆ ಮಾಡಿ ಆಕೆಯ ಶವವನ್ನು ಚೀಲದಲ್ಲಿ ತುಂಬಿಸಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾನೆ.ಸ್ಥಳೀಯ ಕಾವಲುಗಾರನೊಬ್ಬ ಅನುಮಾನಾಸ್ಪದ ಚೀಲವನ್ನು ನೋಡಿ ಅಧಿಕಾರಿಗಳಿಗೆ ತಿಳಿಸಿದಾಗ ಅಪರಾಧ ಬೆಳಕಿಗೆ ಬಂದಿತು. ವಿಧಿವಿಜ್ಞಾನ ತಜ್ಞರೊಂದಿಗೆ ಹೈದರಾಬಾದ್ ಪೊಲೀಸರು ತ್ವರಿತವಾಗಿ ವಿವರವಾದ ತನಿಖೆಯನ್ನು ಪ್ರಾರಂಭಿಸಿದರು.
Read More »
BigTv News
June 8, 2025
Breaking News
ಆಯರಹಳ್ಳಿ ಗ್ರಾಮದ ಏತನೀರಾವರಿ ಹೊಳೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ತೇಲುತ್ತಿದ್ದು, ಇದನ್ನು ಕಂಡ ಸಾರ್ವಜನಿಕರು ಬಿಳಿಕೆರೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.ವಿಷಯ ತಿಳಿದು ಎಸ್‌ಪಿ ವಿಷ್ಣುವರ್ಧನ್, ಡಿವೈಎಸ್ಪಿ ಗೋಪಾಲಕೃಷ್ಣ, ಸಂತೋಷ್ ಕಷ್ಯಪ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಪೂಜಾ ಅವರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read More »
BigTv News
June 8, 2025
Breaking News, Crime
ಇಂದು ಮುಂಜಾನೆ ಸುಮಾರು ಒಂದು ಗಂಟೆ ಸಮಯದಲ್ಲಿ ವಿಷ್ಣು ಕುಡಿದು ಹೆಣ್ಣೂರು ಜಂಕ್ಷನ್‌ನಲ್ಲಿ ಗಲಾಟೆ ಮಾಡುತ್ತಿದ್ದ. ಆಗ ಅಲ್ಲಿಗೆ ಬಂದ ಹೊಯ್ಸಳ ಪೊಲೀಸರು ಆತನನ್ನು ಹಿಡಿಯಲು ಪ್ರಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ರಾಮ್‌ಕುಮಾರ್ ಮುನ್ನುಗ್ಗಿ ಆತನನ್ನು ಹಿಡಿಯಲು ಯತ್ನಿಸಿದ.ಆಗ ರಾಮ್‌ಕುಮಾರ್ ಹೊಟ್ಟೆಗೆ ವಿಷ್ಣು ಚಾಕುವಿನಿಂದ ಇರಿದು ಓಡುತ್ತಿದ್ದಾಗ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ಈ ಬಗ್ಗೆ ರಾಮ್‌ಕುಮಾರ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Read More »
BigTv News
June 8, 2025
Breaking News, Crime
ಉಚಿತ ಬಸ್ ಪ್ರಯಾಣದಿಂದಾಗಿ ಜನಸಂದಣಿಯಿಂದ ಕೂಡಿದ ಬಸ್‌ಗಳು ಕೆಲವರಿಗೆ ಕಳ್ಳತನಕ್ಕೆ ಅನುಕೂಲವಾಗಿದ್ದು,ಹಾಸನ ಜಿಲ್ಲೆಯ ಹೊಳೆನರಸೀಪುರದ ಸಾರಿಗೆ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಳ್ಳತನವಾದ ಘಟನೆಯಿಂದ ತನಿಖೆ ಆರಂಭಿಸಿದ ಹೊಳೆನರಸೀಪುರ ನಗರ ಠಾಣೆಯ ಪೊಲೀಸರು, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಗ್ರಾಮದ ನಾಲ್ವರು ಮಹಿಳೆಯರಾದ ಶಶಿ (35), ಮಾಧವಿ (40), ಅಕಿಲ (30), ಮತ್ತು ವಿದ್ಯಾ (29)ರನ್ನು ಬಂಧಿಸಿದ್ದಾರೆ. ಈ ಗ್ಯಾಂಗ್‌ನಿಂದ ₹6.38 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ, ಇದರಲ್ಲಿ …
Read More »
BigTv News
June 8, 2025
Breaking News
ಮನೆಯವರು ಮೆಹಂದಿಗೆ ತೆರಳಿದ್ದ ವೇಳೆ ಆಕಸ್ಮಿಕ ಬೆಂಕಿಗೆ ಹಂಚಿನ ಮನೆ ಸುಟ್ಟುಹೋದ ಘಟನೆ ತಡರಾತ್ರಿ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಗಂಬಿಲ ವೈದ್ಯನಾಥನಗರದಲ್ಲಿ ನಡೆದಿದೆ.ಸ್ಥಳೀಯರು ಸೇರಿ ಮನೆಯೊಳಗೆ ಇದ್ದ ಗ್ಯಾಸ್ ಸಿಲಿಂಡರನ್ನು ಹೊರಗೆ ಎಸೆದಿದ್ದಾರೆ. ನಂತರ ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು. ಅದಾಗಲೇ ಮನೆಯೊಳಗೆ ಇದ್ದ ಗ್ರೇಂಡರ್, ಪ್ರಿಡ್ಜ್, ಟಿ.ವಿ, ಫ್ಯಾನ್, ಬಟ್ಟೆ, ಕಪಾಟು ಸುಟ್ಟುಕರಕಲಾಗಿದ್ದವು. ಇಡೀ ಕುಟುಂಬ ಮೊದಲೇ …
Read More »
BigTv News
June 8, 2025
Breaking News, Crime
ಸುಧಾ ಹಾಗೂ ಸಿದ್ದಪ್ಪಾಜಿ ದಂಪತಿ 5, 10 ಲಕ್ಷ ರೂಪಯಿವರೆಗೆ ಚೀಟಿ ವ್ಯವಹಾರ ನಡೆಸುತ್ತಿದ್ದರು. 5 ಲಕ್ಷದ ಚೀಟಿಗೆ ತಿಂಗಳಿಗೆ 12,500, 10 ಲಕ್ಷದ ಚೀಟಿಗೆ 25 ಸಾವಿರೂ ಕಟ್ಟಿಸಿಕೊಳ್ಳುತ್ತಿದ್ದರು . ಆರಂಭದಲ್ಲಿ ಕೆಲವರಿಗೆ ಹಣವನ್ನು ನೀಡಿ ದಂಪತಿ ನಂಬಿಕೆ ಗಿಟ್ಟಿಸಿಕೊಂಡಿದ್ದರು. ದಂಪತಿಯನ್ನು ನಂಬಿ ಹಣ ಹಾಕಿದರೆ ಮೋಸ ಮಾಡಲ್ಲ. ತೊಂದರೆ ಇದ್ದಾಗ ಪಡೆಯಬಹುದು ಎಂದು ಹೇಳಿ ಜರಗನಹಳ್ಳಿ ಜನರು ಲಕ್ಷ ಲಕ್ಷ ಹಣ ಕೊಟ್ಟಿದ್ದಾರೆ. 200ಕ್ಕೂ ಹೆಚ್ಚು ಜನರಿಂದ …
Read More »
BigTv News
June 8, 2025
Breaking News, Crime
ಬೆಂಗಳೂರಿನ ಹಳೆ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಸೂಟ್‌ಕೇಸ್‌ನಲ್ಲಿ ಪತ್ತೆಯಾದ 17 ವರ್ಷದ ಯುವತಿಯ ಶವ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಅತ್ಯಾಚಾರ ಮತ್ತು ಕೊಲೆ ಆರೋಪದ ಮೇಲೆ ಬಂಧಿತರ ಪೈಕಿ ಇಬ್ಬರು ಅಪ್ರಾಪ್ತರು ಸೇರಿದ್ದಾರೆ.ಆಶಿಕ್ ಕುಮಾರ್ (22), ಮುಖೇಶ್ ರಾಜಬನ್ಶಿ (35), ಇಂದುದೇವಿ (32), ರಾಜರಾಮ್ ಕುಮಾರ್ (18), ಪಿಂಟು ಕುಮಾರ್ (18), ಕಾಲು ಕುಮಾರ್ (17), ರಾಜು ಕುಮಾರ್ (17) ಎಂಬವರನ್ನು ಬಂಧಿಸಲಾಗಿದೆ.
Read More »
BigTv News
June 8, 2025
Breaking News
ನೀರಿನಲ್ಲಿ ಈಜಾಡುವ ಆಸೆಯಿಂದ ಗೋದಾವರಿಯಲ್ಲಿ ಸ್ನಾನ ಮಾಡಲು ನದಿಗೆ ಇಳಿದಿದ್ದರು. ನೀರಿನ ಹರಿವಿನ ಬಗ್ಗೆ ಅಂದಾಜು ಇಲ್ಲದ ಬಾಲಕರು, ಮೋಜಿನ ಮನಸ್ಥಿತಿಯಲ್ಲಿ ನದಿಗೆ ಹಾರಿದ್ದಾರೆ. ಈ ವೇಳೆ ನೀರಿನ ಮಟ್ಟ ಹೆಚ್ಚಾಗಿ ಓರ್ವ ಕೊಚ್ಚಿ ಹೋಗಿದ್ದಾನೆ.ಆತನನ್ನು ಉಳಿಸಲು ಒಬ್ಬರ ಬೆನ್ನಲ್ಲೇ ಮತ್ತೊಬ್ಬರು ಹೋದ ಹಿನ್ನೆಲೆ ಆರು ಮಂದಿ ನೀರಿನಲ್ಲಿ ಮುಳುಗಿ ದಾರುಣ ಅಂತ್ಯ ಕಂಡಿದ್ದಾರೆ.ಮಧುಸೂಧನ್ (18), ಪಟ್ಟಿ ಶಿವಮನೋಜ್ (15), ತೊಗರಿ ರಕ್ಷಿತ್ (13), ಸಾಗರ್ (16), ಬೊಲ್ಲೆದ್ಲಾ ರಾಮಚರಣ್ …
Read More »
BigTv News
June 8, 2025
Breaking News, Crime
ಖಾಸಗಿ ಬ್ಯಾಂಕ್ ಉದ್ಯೋಗಿಯೊಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಶುಕ್ರವಾರ ರಾತ್ರಿ 9 ಗಂಟೆಗೆ ಸುಮಾರಿಗೆ ನಡೆದಿದೆ. ಗೊಲ್ಲಹಳ್ಳಿ ಗ್ರಾಮದ ದರ್ಶನ್ (25) ಕೊಲೆಯಾದವರು. ಗೊಲ್ಲಹಳ್ಳಿ ಗ್ರಾಮದ ವೇಣುಗೋಪಾಲ್ ಎಂಬಾತ ಕೃತ್ಯ ಎಸಗಿರುವ ಶಂಕೆಯಿದ್ದು, ಆತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.ಪ್ರೇಮದ ವಿಚಾರಕ್ಕೆ ಕೊಲೆ ನಡೆದಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
Read More »