ಮನೆಯವರು ಮೆಹಂದಿಗೆ ತೆರಳಿದ್ದ ವೇಳೆ ಆಕಸ್ಮಿಕ ಬೆಂಕಿಗೆ ಹಂಚಿನ ಮನೆ ಸುಟ್ಟುಹೋದ ಘಟನೆ ತಡರಾತ್ರಿ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಗಂಬಿಲ ವೈದ್ಯನಾಥನಗರದಲ್ಲಿ ನಡೆದಿದೆ.ಸ್ಥಳೀಯರು ಸೇರಿ ಮನೆಯೊಳಗೆ ಇದ್ದ ಗ್ಯಾಸ್ ಸಿಲಿಂಡರನ್ನು ಹೊರಗೆ ಎಸೆದಿದ್ದಾರೆ. ನಂತರ ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು. ಅದಾಗಲೇ ಮನೆಯೊಳಗೆ ಇದ್ದ ಗ್ರೇಂಡರ್, ಪ್ರಿಡ್ಜ್, ಟಿ.ವಿ, ಫ್ಯಾನ್, ಬಟ್ಟೆ, ಕಪಾಟು ಸುಟ್ಟುಕರಕಲಾಗಿದ್ದವು. ಇಡೀ ಕುಟುಂಬ ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದು, ಇದರೊಂದಿಗೆ ಮನೆ ಸುಟ್ಟು ಕರಕಲಾಗಿದ್ದು. ಮನೆಯವರನ್ನು ಬೀದಿ ಪಾಲಾಗಿಸಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

