Breaking News

ಹಾಸನ: ನಾಲ್ವರು ಕಳ್ಳಿಯರ ಗ್ಯಾಂಗ್ ಅರೆಸ್ಟ್!!

ಉಚಿತ ಬಸ್‌ ಪ್ರಯಾಣದಿಂದಾಗಿ ಜನಸಂದಣಿಯಿಂದ ಕೂಡಿದ ಬಸ್‌ಗಳು ಕೆಲವರಿಗೆ ಕಳ್ಳತನಕ್ಕೆ ಅನುಕೂಲವಾಗಿದ್ದು,ಹಾಸನ ಜಿಲ್ಲೆಯ ಹೊಳೆನರಸೀಪುರದ ಸಾರಿಗೆ ಬಸ್‌ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಚಿನ್ನದ ಸರ ಕಳ್ಳತನವಾದ ಘಟನೆಯಿಂದ ತನಿಖೆ ಆರಂಭಿಸಿದ ಹೊಳೆನರಸೀಪುರ ನಗರ ಠಾಣೆಯ ಪೊಲೀಸರು, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಗ್ರಾಮದ ನಾಲ್ವರು ಮಹಿಳೆಯರಾದ ಶಶಿ (35), ಮಾಧವಿ (40), ಅಕಿಲ (30), ಮತ್ತು ವಿದ್ಯಾ (29)ರನ್ನು ಬಂಧಿಸಿದ್ದಾರೆ. ಈ ಗ್ಯಾಂಗ್‌ನಿಂದ ₹6.38 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ, ಇದರಲ್ಲಿ 35 ಗ್ರಾಂ ಚಿನ್ನದ ಸರ, 22 ಗ್ರಾಂ ನೆಕ್ಲೇಸ್‌, 5 ಗ್ರಾಂ ಬೆಳ್ಳಿ ಗಣಪತಿ ಡಾಲರ್‌, ಮತ್ತು 29 ಗ್ರಾಂ ಚಿನ್ನದ ಸರ ಒಳಗೊಂಡಿವೆ. ಇನ್ಸ್‌ಪೆಕ್ಟರ್‌ ಪ್ರದೀಪ್‌ ಮತ್ತು ಪಿಎಸ್‌ಐ ಅಭಿಜಿತ್‌ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ಕಳ್ಳರ ಗ್ಯಾಂಗ್‌ ಸಿಕ್ಕಿಬಿದ್ದಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *