BigTv News
June 8, 2025
Breaking News
ಚಿತ್ರದುರ್ಗ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಎರಡನೇ ಮದುವೆಗೆ ಸಿದ್ಧವಾಗಿದ್ದ ವರನಿಗೆ ಮೊದಲ ಪತ್ನಿ ಮದುವೆ ಮಂಟಪದಲ್ಲೇ ಚಪ್ಪಲಿಯಿಂದ ಏಟು ಕೊಟ್ಟ ಘಟನೆ ನಡೆದಿದೆ. ಆರೋಪಿ ಕಾರ್ತಿಕ್ ನಾಯ್ಕ್, ಚಿಕ್ಕಮಗಳೂರು ಜಿಲ್ಲೆಯ ಅರಸೀಕೆರೆ ತಾಲೂಕಿನ ತಿಪ್ಪಘಟ್ಟದವನು, ನಾಲ್ಕು ವರ್ಷಗಳ ಹಿಂದೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಶೇನಾಳದ ತನುಜಾ ಎಂಬಾಕೆಯನ್ನು ಮದುವೆಯಾಗಿದ್ದ. ಆದರೆ, ಈ ಮದುವೆಯನ್ನು ಮರೆಮಾಚಿ ಕಾರ್ತಿಕ್ ಚಿತ್ರದುರ್ಗದಲ್ಲಿ ಎರಡನೇ ಮದುವೆಗೆ ರಹಸ್ಯ ಯೋಜನೆ ರೂಪಿಸಿದ್ದ. ವರದಕ್ಷಿಣೆಯ ಆಸೆಯಿಂದ …
Read More »
BigTv News
June 8, 2025
Breaking News
ಮೂರು ಬಾರಿ ಶಾಸಕರಾಗಿದ್ದ ಅವರನ್ನು ಹೃದಯಾಘಾತ ಉಂಟಾದ ಹಿನ್ನೆಲೆಯಲ್ಲಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೃದಯಾಘಾತದಿಂದ ಭಾರತ ರಾಷ್ಟ್ರ ಸಮಿತಿ (BRS) ಜುಬಿಲಿ ಹಿಲ್ಸ್‌ನ ಶಾಸಕ ಮಗಂತಿ ಗೋಪಿನಾಥ್ ಅವರು ಇಂದು ಬೆಳಿಗ್ಗೆ 5.45 ಕ್ಕೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಮಗಂತಿ ಗೋಪಿನಾಥ್ ಪತ್ನಿ ಸುನಿತಾ ಮತ್ತು ಮೂವರು ಮಕ್ಕಳಾದ ಮಗಂತಿ ವಾತ್ಯಾಲ್ಯನಾದ್, ಅಕ್ಷರ ನಾಗ ಮತ್ತು ದಿಶಿರಾ ಅವರನ್ನು ಅಗಲಿದ್ದಾರೆ.
Read More »
BigTv News
June 7, 2025
Breaking News, Crime
ಹಿಂದೂ ಯುವತಿಯನ್ನು ಪ್ರೀತಿಯಲ್ಲಿ ಸಿಲುಕಿಸಿ ಆಕೆಗೆ ಬುರಖಾ ಧರಿಸುವಂತೆ ಬಲವಂತ ಮಾಡಿದ ಮತಾಂಧನೊಂದಿಗೆ ಅವನ ಮಿತ್ರನ ಮೇಲೂ ಅಪರಾಧವನ್ನು ದಾಖಲಿಸಲಾಗಿದೆ.ಆಕೆಯು ತನ್ನ ಪ್ರೀತಿಯನ್ನು ಸ್ವೀಕರಿಸದಿದ್ದರೆ ತಾನು ಆತ್ಮಹತ್ಯೆ ಮಾಡುವುದಾಗಿ ಅವನು ಬೆದರಿಸಿದನು. ಒಮ್ಮೆ ಯುವತಿಯು `ಡಿ-ಮಾರ್ಟ್’ ಅಂಗಡಿಗೆ ಖರೀದಿಗಾಗಿ ಹೋದಾಗ ಫರಹಾನ ಖಾಟೀಕನು ತನ್ನ ಮಿತ್ರನಾದ ಜಮೀಲ ಕುರೇಶಿಯೊಂದಿಗೆ ಬುರಖಾ ತಂದನು. ಫರಹಾನನು ಆ ಯುವತಿಗೆ ಬುರಖಾ ಧರಿಸಲು ಬಲವಂತ ಮಾಡಿದ್ದರಿಂದ ಆಕೆಯು ಬಟ್ಟೆ ಬದಲಾಯಿಸುವ ಕೋಣೆಗೆ ಹೊಗಿ ಬುರಖಾ …
Read More »
BigTv News
June 7, 2025
Breaking News
ವಿದ್ಯಾರ್ಥಿನಿ ದೈಹಿಕ ಸಂಬಂಧಕ್ಕೆ ಒತ್ತಾಯಿಸುತ್ತಿದ್ದ ಹಿನ್ನಲೆಯಲ್ಲಿ ಮನನೊಂದು 20 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ . ಹಿಮಾಚಲ ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಮಂಡಿ ಜಿಲ್ಲೆಯ ಸುಂದರ್ ನಗರದ ಜವಹರಲಾಲ್ ನೆಹರೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಹಾಸ್ಟೆಲ್‌ನಲ್ಲಿ ಅರ್ಪಿತ್ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದೆ.ʼʼಹಲವು ಸಮಯಗಳಿಂದ ಮಗನ ಬೆನ್ನು ಬಿದ್ದಿರುವ ಅದೇ ಕಾಲೇಜಿನ ಲಾವಣ್ಯಾ ದೈಹಿಕ ಸಂಪರ್ಕ ಬೆಳೆಸುವಂತೆ ಪೀಡಿಸುತ್ತಿದ್ದಳು ಎಂದು ಅರ್ಪಿತ್‌ನ ತಾಯಿ …
Read More »
BigTv News
June 6, 2025
Breaking News
ಬೊಳಿಯಾರು ನಿವಾಸಿ ದಿನೇಶ್ ಅವರು ಮನೆಯಿಂದ ಧರ್ಮಸ್ಥಳದ ಕಡೆಗೆ ಹೋಗುತ್ತಿದ್ದಾಗ ರಸ್ತೆ ಮಧ್ಯದಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ದಿನೇಶ್ ಭಯದಿಂದ ಆಟೊ ಬಿಟ್ಟು ಓಡಿ ತಪ್ಪಿಸಿಕೊಂಡರು.ಕಾಡಾನೆ ಆಟೊವನ್ನು ನಜ್ಜುಗುಜ್ಜು ಮಾಡಿ ಚರಂಡಿಗೆ ದೂಡಿ ಹಾಕಿದೆ. ಧರ್ಮಸ್ಥಳ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ.
Read More »
BigTv News
June 6, 2025
Breaking News
ಮನೆಗೆ ಬರುವ ಇಳಿಜಾರು ರಸ್ತೆಯಲ್ಲಿ ಮಳೆ ನೀರು ಹಾದು ಹೋಗಲು ರಸ್ತೆ ಅಡ್ಡವಾಗಿ ಚರಂಡಿ ತೋಡಿದ್ದು, ಇಲ್ಲಿ ಟಯರ್ ಸಿಲುಕಿ ಕಾರಿನ ಇಂಜಿನ್ ಆಫ್ ಆಗಿತ್ತು. ಇದರಿಂದ ತಾಯಿ ಹಾಗೂ ಮಗು ಹೃದ್ಯಾನಂದ ಕೆಳಗಿಳಿದಿದ್ದು, ಹಿರಿಯ ಮಗಳು ದೇವಾನಂದ ಕಾರಿನೊಳಗಿದ್ದಳು. ಕಾರನ್ನು ತಳ್ಳುತ್ತಿದ್ದಾಗ ಒಮ್ಮೆಲೇ ಕಾರು ಸ್ಟಾರ್ಟ್ ಆಗಿ ಮುಂದಕ್ಕೆ ಚಲಿಸಿದೆ. ಈ ವೇಳೆ ಮಗು ಕಾರಿನಡಿಗೆ ಸಿಲುಕಿ ಈ ದುರ್ಘಟನೆ ನಡೆದಿದೆ.ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಈ …
Read More »
BigTv News
June 6, 2025
Breaking News
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಜನ RCB ಅಭಿಮಾನಿಗಳು ಬಲಿಯಾಗಿರುವ ಪ್ರಕರಣ ಸಂಬಂಧ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ನರಸಿಂಹರಾಜು ಎಂಬ ಹೆಡ್ ಕಾನ್ಸ್ ಟೇಬಲ್, ಸರ್ಕಾರದ ಆದೇಶ ಖಂಡಿಸಿ ಕೈಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಫೋಟೋ ಹಿಡಿದು, ಕಪ್ಪುಪಟ್ಟಿ ಧರಿಸಿ ರಾಜಭವನದ ಎದುರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕಾಗಮಿಸಿದ ವಿಧಾನಸೌಧ ಪೊಲೀಸರು, ಹೆಡ್ …
Read More »
BigTv News
June 6, 2025
Breaking News
ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಹೊಣೆಯಾಗಿಸಿ ಕಮಿಷನರ್ ಬಿ ದಯಾನಂದ ಅವರನ್ನು ಅಮಾನತು ಮಾಡಿದ ಬೆನ್ನಲ್ಲೇ ಸರ್ಕಾರ ಹೊಸ ಆಯುಕ್ತರನ್ನಾಗಿ ಹಿರಿಯ ಅಧಿಕಾರಿ ಸೀಮಂತ ಕುಮಾರ್ ಅವರನ್ನು ನೇಮಿಸಿದೆ.ಬ್ಯಾಟನ್ ಪಡೆಯದೇ ಸೀಮಂತ ಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ. ಸೀಮಂತ ಕುಮಾರ್ ಕೂಡಾ ದಕ್ಷ ಅಧಿಕಾರಿಯೇ. ಬಿಹಾರ ಮೂಲದವರಾದ ಸೀಮಂತ ಕುಮಾರ್ 1970 ರಲ್ಲಿ ಜನಿಸಿದ್ದು 1996 ರ ಬ್ಯಾಚ್ ನ ಐಪಿಎಸ್ ಅಧಿಕಾರಿ.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಿ. ಕಮಿಷನರೇಟ್ ವ್ಯಾಪ್ತಿಯಲ್ಲಿ …
Read More »
BigTv News
June 6, 2025
Breaking News
ಕಾಮಗಾರಿ ಹಿನ್ನೆಲೆ ಟಿಪ್ಪರ್ ಮೂಲಕ ಮಣ್ಣು ಇಳಿಸಲು ಚಾಲಕ ಬಂದಿದ್ದ.ಮಣ್ಣು ಲಿಪ್ಟ್ ಮಾಡಿ ಇಳಿಸುವ ವೇಳೆ ಟಿಪ್ಪರ್ ಗೆ ವಿದ್ಯುತ್ ತಂತಿ ತಗುಲಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯ ರೋಟರಿ ಸರ್ಕಲ್ ಬಳಿ ಜರುಗಿದೆ. ನೋಡ ನೋಡುತ್ತಿದ್ದಂತೆ ಟಿಪ್ಪರ್ ಗೆ ಬೆಂಕಿ ಹೊತ್ತಿಕೊಂಡಿದೆ. ನವನಗರ ಯುನಿಟ್ ೩ರ ಕಾಮಗಾರಿ ನಡೆದ ಸ್ಥಳದಲ್ಲಿ ಈ ಅವಘಡ ಸಂಭವಿಸಿದೆ.ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Read More »
BigTv News
June 6, 2025
Breaking News
ಬಸ್ ದೇವದುರ್ಗದಿಂದ ಗಾಜು ಒಡೆದ ಬೆನ್ನಲ್ಲೇ ಚಾಲಕ ಸುರೇಶಬಾಬು ಬಸ್ ಅನ್ನು ನೇರವಾಗಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಹೆಡ್‌ಕಾನ್‌ಸ್ಟೆಬಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸುರೇಶಬಾಬು ಹಾಗೂ ಪ್ರಯಾಣಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ರಾಯಚೂರಿಗೆ ಹೊರಟ್ಟಿತ್ತು. ಅಂಬೇಡ್ಕರ್ ಸರ್ಕಲ್ ಬಳಿ ಬಸ್ ಸೀಟಿಗಾಗಿ ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಹೆಡ್ ಕಾನ್‌ಸ್ಟೆಬಲ್ ಶ್ರೀನಿವಾಸ್, ಕಲ್ಲು ಎಸೆದು ಬಸ್ಸಿನ ಮುಂಭಾಗದ ಗಾಜು ಒಡೆದಿದ್ದಾರೆ.ಗಾಜು ಒಡೆದ ಬೆನ್ನಲ್ಲೇ ಚಾಲಕ ಸುರೇಶಬಾಬು ಬಸ್ …
Read More »