Breaking News

Breaking News

ಬೆಂಗಳೂರು: ನಿಂತಲ್ಲೇ ಕುಸಿದು ಬಿದ್ದು ಕ್ಯಾಬ್ ಚಾಲಕ ಸಾವು.!

ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಬಸವೇಶ್ವರ ನಗರದಲ್ಲಿ ನಿಂತಿದ್ದ ಜಾಗದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಅಷ್ಟರಲ್ಲೇ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ . ಮಗನನ್ನು ಕಳೆದುಕೊಂಡ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಮೃತನನ್ನು ಅರಕಲಗೂಡ ತಾಲೂಕಿನ ಕಾಡನೂರು ಗ್ರಾಮದ ಅಭಿಷೇಕ್ (19) ಎಂದು ಗುರುತಿಸಲಾಗಿದೆ. ಗ್ರಾಮದ ಅನುಸೂಯ ಹಾಗೂ ರಾಮಕೃಷ್ಣ ದಂಪತಿ ಪುತ್ರ ಎಂದು ಹೇಳಲಾಗಿದೆ.

Read More »

ಕೊಳ್ಳೇಗಾಲ: ಕಾಡು ಹಂದಿಗಳ ದಾಳಿ, ಬೆಳೆ ನಾಶ!

ದೊಡ್ಡಿಂದುವಾಡಿ ಗ್ರಾಮದ ಹೊರವಲಯದ ಗುಂಡಾಲ್ ಜಲಾಶಯದ ವ್ಯಾಪ್ತಿಯ ಜಮೀನುಗಳಲ್ಲಿ ಕಾಡು ಹಂದಿಗಳು ದಾಳಿ ಮಾಡಿ ಬೆಳೆಗಳನ್ನು ನಾಶ ಮಾಡಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಬಿಆರ್‌ಟಿ ವಲಯ ಅರಣ್ಯ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.ಮೊದಲೇ ರೈತರು ಸಾಲ ಮಾಡಿ ಬೆಳೆ ಬೆಳೆದಿದ್ದೇವೆ. ಕಾಡು ಪ್ರಾಣಿಗಳ ಕಾಟ ಮಿತಿಮೀರಿದ್ದು, ರೈತರು ಜೀವನ ನಡೆಸುವುದೇ ಕಷ್ಟವಾಗಿದೆ. ಆದ್ದರಿಂದ ಕೂಡಲೇ …

Read More »

ಗೋಣಿಕೊಪ್ಪಲು :ಕೊಡಗಿನ ಬುಡಕಟ್ಟು ಜನರ ‘ಕುಂಡೆ ಹಬ್ಬ’ಕ್ಕೆ ಚಾಲನೆ…

ಕೊಡಗಿನ ಬುಡಕಟ್ಟು ಜನರ ‘ಕುಂಡೆ ಹಬ್ಬ’ ಬುಧವಾರ ಆರಂಭಗೊಂಡಿತು. ಪೊನ್ನಂಪೇಟೆ ತಾಲ್ಲೂಕಿನ ಭದ್ರಗೋಳದಲ್ಲಿ ಗುರುವಾರ ನಡೆಯುವ ಹಬ್ಬಕ್ಕೆ ಗಿರಿಜನರು ಬುಧವಾರ ಚಾಲನೆ ನೀಡಿದರು.ಬುಡಕಟ್ಟು ಸಮುದಾಯದ ಯುವಕರು ದೇಹವೆಲ್ಲ ಬಣ್ಣ ಬಳಿದುಕೊಂಡು, ಕೈಗೆ ಸಿಕ್ಕಿದ ಒಡೆದ ಪ್ಲಾಸ್ಟಿಕ್ , ಮುರಿದ ತಗಿಡನ ಡಬ್ಬ, ತುಕ್ಕು ಹಿಡಿದ ಆಂಟೆನಾ ತಟ್ಟೆ, ಬಿದಿರಿನ ಪೈಪ್ ಮೊದಲಾದವುಗಳನ್ನು ವಾದ್ಯ ಪರಿಕರಗಳಾಗಿಸಿಕೊಂಡು ಬಡಿಯುತ್ತಾ ಕುಣಿದು ಕುಪ್ಪಳಿಸಿ ಹಣ ಬೇಡಿದರು.ಗೋಣಿಕೊಪ್ಪಲು ಬಳಿಯ ಭದ್ರಗೋಳದಲ್ಲಿ ನಡೆಯಲಿರುವ ಗಿರಿಜನರ ‘ಕುಂಡೆ ಹಬ್ಬ’ಕ್ಕೆ …

Read More »

ಉಳ್ಳಾಲ: ಪಿಕ್‌ಆಪ್ ಢಿಕ್ಕಿ, ಪಾದಚಾರಿ ಮೃತ್ಯು!

ಪಾದಚಾರಿಗೆ ಪಿಕ್‌ಆಪ್ ಢಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಅಬ್ಬಕ್ಕ ಸರ್ಕಲ್ ಬಳಿ ಬುಧವಾರ ರಾತ್ರಿ ನಡೆದಿದೆ.ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದಾರೆ.ಈ ಬಗ್ಗೆ ಮಂಗಳೂರು ಗ್ರಾಮಾಂತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನಾ ಸ್ಥಳಕ್ಕೆ ಪೊಲೀಸ್ ಸಂಚಾರಿ ವಿಭಾಗದ ಡಿಸಿಪಿ ರವಿಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಸ್ವಂತ ಹಣದಿಂದ ರಸ್ತೆ ಗುಂಡಿ ಮುಚ್ಚಿಸಿದ ನಟ ವಿನೋದ್ ರಾಜ್.

ನೆಲಮಂಗಲ ದಿಂದ ದೊಡ್ಡಬಳ್ಳಾಪುರದ ಕಡೆ ಹೋಗೋ ರಸ್ತೆ ಕೂಡ ರಿಪೇರಿ ಹಂತದಲ್ಲಿದೆ. ಒಂದು ವಾರದಿಂದ ನಿರಂತರ ಮಳೆ ಆಗುತ್ತಿದ್ದ ಎಫೆಕ್ಟ್ ನೆಲಮಂಗಲ ದೊಡ್ಡಬಳ್ಳಾಪುರ ರಸ್ತೆ ಗುಂಡಿ ಬಿದ್ದಿದೆ.ನಟ ವಿನೋದ್ ರಾಜ್ ಸ್ವತಃ ಗುಂಡಿ ರಿಪೇರಿ ಕಾರ್ಯಕ್ಕೆ ಇಳಿದಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಸ್ವಂತ ಹಣದಿಂದ ರಸ್ತೆ ಗುಂಡಿ ಮುಚ್ಚಿಸಿರುವ ಲೀಲಾವತಿ ಪುತ್ರಕ್ಕೆ ಕಾರ್ಯಕ್ಕೆ ಸ್ಥಳೀಯರು ಸಲಾಂ ಎಂದಿದ್ದಾರೆ.

Read More »

ಆಲಿಕಲ್ಲು ಮಳೆ, ಗುಡುಗು, ಮಿಂಚಿನಿಂದ ವಿಮಾನ ಜಸ್ಟ್​ ಮಿಸ್! 200 ಜನ ಪಾರು.

ದೆಹಲಿಯಿಂದ ಜಮ್ಮು ಕಾಶ್ಮೀರದ ಶ್ರೀನಗರಕ್ಕೆ 200 ಪ್ರಯಾಣಿಕರೊಂದಿಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನವೊಂದು ಆಕಾಶದಲ್ಲಿ ಆಲಿಕಲ್ಲು ಮಳೆಯ ಆತಂಕದಿಂದ ದೊಡ್ಡ ಅನಾಹುತದಿಂದ ಪಾರಾಗಿದೆ. ಆಲಿಕಲ್ಲು ಮಳೆಯಿಂದ ವಿಮಾನದ ಮುಂಭಾಗ ಹಾನಿಗೊಳಗಾದರೂ, ಎಲ್ಲಾ 200 ಪ್ರಯಾಣಿಕರು ಸುರಕ್ಷಿತವಾಗಿ ಶ್ರೀನಗರದಲ್ಲಿ ಲ್ಯಾಂಡ್ ಆಗಿದ್ದಾರೆ.ಇಂಡಿಗೋ ವಿಮಾನಯಾನ ಸಂಸ್ಥೆಯು ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದೆ. ವಿಮಾನದ ಮುಂಭಾಗದ ಹಾನಿಯನ್ನು ತಾಂತ್ರಿಕ ತಂಡವು ಪರಿಶೀಲಿಸುತ್ತಿದೆ. ಕ್ಯಾಬಿನ್ ಸಿಬ್ಬಂದಿ ಮತ್ತು ಪೈಲಟ್‌ನ …

Read More »

ಮುಂಬೈ: ಆನ್‌ಲೈನ್ ಲೈಂಗಿಕ ದಂಧೆ ಭೇದಿಸಿದ ಪೊಲೀಸರು, 28 ವರ್ಷದ ಏಜೆಂಟ್ ಬಂಧನ!

ಆನ್‌ಲೈನ್ ಲೈಂಗಿಕ ದಂಧೆಯನ್ನು ಭೇದಿಸಿರುವ ಅಂಬೋಲಿ ಪೊಲೀಸರು, ಈ ಅಕ್ರಮ ವ್ಯವಹಾರದಲ್ಲಿ ತೊಡಗಿದ್ದ 28 ವರ್ಷದ ಏಜೆಂಟ್ ಒಬ್ಬನನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಒಬ್ಬ ಮಹಿಳೆಯನ್ನು ರಕ್ಷಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯ ನಂತರ ಅವರನ್ನು ಕಂಡಿವಲಿಯ ಖಾಸಗಿ ರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ.ಈ ಕಾರ್ಯಾಚರಣೆಯಲ್ಲಿ, 30 ವರ್ಷದ ಮಹಿಳೆಯೊಬ್ಬರನ್ನು ರಕ್ಷಿಸಲಾಯಿತು. ವಿಚಾರಣೆಯ ವೇಳೆ, ಸರ್ಫರಾಜ್ ತನ್ನನ್ನು ವೇಶ್ಯಾವಾಟಿಕೆಗಾಗಿ ಹೋಟೆಲ್‌ಗೆ ಕರೆತಂದಿದ್ದಾಗಿ ಅವರು ಬಹಿರಂಗಪಡಿಸಿದರು.ಘಟನೆಯ ನಂತರ, ಅಂಬೋಲಿ ಪೊಲೀಸರು ಸರ್ಫರಾಜ್ ವಿರುದ್ಧ ಸಂಬಂಧಿತ …

Read More »

ಪೂಜಾ ಖೇಡ್ಕರ್‌ಗೆ ಸುಪ್ರೀಂಕೋರ್ಟ್ ನಿಂದ ಜಾಮೀನು ಮಂಜೂರು.!

ಒಬಿಸಿ ಮತ್ತು ಅಂಗವಿಕಲ ಮೀಸಲಾತಿ ಸವಲತ್ತುಗಳನ್ನು ಬಳಸಿಕೊಂಡು ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಮಾಜಿ ಐಎಎಸ್ ಪ್ರೊಬೆಷನರ್ ಪೂಜಾ ಖೇಡ್ಕರ್ ಅವರಿಗೆ ಸುಪ್ರೀಂ ಕೋರ್ಟ್ ಬುಧವಾರ ನಿರೀಕ್ಷಣಾ ಜಾಮೀನು ನೀಡಿದೆ. ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಪ್ರಕರಣದ ಗಂಭೀರತೆಯನ್ನು ಪ್ರಶ್ನಿಸಿ, “ಅವಳು ಯಾವ ಗಂಭೀರ ಅಪರಾಧ ಮಾಡಿದ್ದಾಳೆ? ಅವಳು ಮಾದಕವಸ್ತು ವ್ಯಸನಿ ಅಥವಾ ಭಯೋತ್ಪಾದಕಿ ಅಲ್ಲ. …

Read More »

ಬೆಂಗಳೂರಲ್ಲಿ ಮನೆ ಕಟ್ಟುವಾಗ ಬೇಸ್ಮೆಂಟ್ ಮಾಡುವಂತಿಲ್ಲ, ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ.

ರಾಜಧಾನಿ ಬೆಂಗಳೂರಿನಲ್ಲಿ ವರ್ಣಾರ್ಭಟದಿಂದ ಸಂಪೂರ್ಣ ಜನಜೀವನವೇ ಅಸ್ತವ್ಯಸ್ತವಾಗಿದೆ. ಹಾಗಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಚಿವರು ಶಾಸಕರು ಸೇರಿದಂತೆ ಅಧಿಕಾರಿಗಳು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇನ್ಮುಂದೆ ಬೇಸ್ಮೆಂಟ್ ನಿರ್ಮಿಸುವುದಕ್ಕೆ ಅವಕಾಶ ನೀಡಬಾರದು. ತಗ್ಗು ಪ್ರದೇಶದಲ್ಲಿ ಬೇಸ್ಮೆಂಟ್ ನಿರ್ಮಿಸಲು ಅವಕಾಶ ನೀಡಬಾರದು. 166 ಸೂಕ್ಷ್ಮ ಅತಿ ಸೂಕ್ಷ್ಮ ಪ್ರದೇಶಗಳು ಅಂತ ಗುರುತಿಸಲಾಗಿದೆ. ಎಷ್ಟೇ ಪ್ರಭಾವಿಗಳಿದ್ದರೂ ರಾಜಕಾಲುವೇ ಒತ್ತುವರಿತರೆಗೆ ಸೂಚಿಸಿದ್ದೇನೆ. ಕೋರ್ಟ್ ನಿಂದ ತಡೆಯಾಜ್ಞೆ …

Read More »

ರಾಯಚೂರು: ವಕ್ಫ್ ಬೋರ್ಡ್ ಪರ ತೀರ್ಪು ಹಿನ್ನೆಲೆಯಲ್ಲಿ ಹಾಶ್ಮಿಯ ಕಾಂಪೌಂಡ್ ಜಮೀನು ಅತಿಕ್ರಮಣ ತೆರವು!!

ಅಂಬೇಡ್ಕರ್ ವೃತ್ತದ ಮುಂದಿರುವ ವಕ್ಫ್ ಮಂಡಳಿಗೆ ಸಂಬಂಧಿಸಿದ ಹಾಶ್ಮಿಯ ಕಾಂಪೌಂಡ್ ಜಮೀನು ಅತಿಕ್ರಮಣದ ಬಗ್ಗೆ ಕಲಬುರಗಿಯ ನ್ಯಾಯ ಮಂಡಳಿಯಲ್ಲಿ ವಾದ-ವಿವಾದ ನಡೆದು ಕೊನೆಗೆ ನ್ಯಾಯಾಲಯವು ಜಿಲ್ಲಾ ವಕ್ಫ್ ಮಂಡಳಿ ಪರವಾಗಿ ತೀರ್ಪು ನೀಡಿದೆ.ಅತಿಕ್ರಮಣ ತೆರವಿನ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ನಿವಾಸಿಗಳು ಕುಟುಂಬ ಸಮೇತ ಹಾಶ್ಮಿಯ ಕಾಂಪೌಂಡ್ ಮುಖ್ಯದ್ವಾರದ ಬಳಿ ಪ್ರತಿಭಟನಾ ಧರಣಿ ಆರಂಭಿಸಿ ತೆರವಿಗೆ ವಿರೋಧ ವ್ಯಕ್ತಪಡಿಸಿ ಘೋಷಣೆ ಕೂಗಾಲಾರಂಭಿಸಿದರು.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರು ಮತ್ತು ಅಧಿಕಾರಿಗಳು …

Read More »