BigTv News
May 22, 2025
Breaking News, Crime
ತಡರಾತ್ರಿ ನಾಲ್ವರು ಸ್ನೇಹಿತರೊಂದಿಗೆ ಗೌತಮ್ ಕಾರಿನಲ್ಲಿ ತೆರಳಿದ್ದ. ವಾಹನವನ್ನು ದಾರಿ ಮಧ್ಯೆ ನಿಲ್ಲಿಸಿ ಉಳಿದ ಸ್ನೇಹಿತರನ್ನು ಅಲ್ಲಿಯೇ ಬಿಟ್ಟು ಬಂದೂಕು ಹಿಡಿದುಕೊಂಡು ಸಮೀಪದ ಗುಡ್ಡ ಏರಿದ್ದಾನೆ.ಬಂದೂಕಿನ ಟ್ರಿಗರ್ ಎಳೆದು ಗುಡ್ಡ ಹತ್ತುವಾಗ ಕಾಲು ಜಾರಿ ಕೆಳಗೆ ಬಿದ್ದ ವೇಳೆ ಬಂದೂಕಿನಿಂದ ಗುಂಡು ಸಿಡಿದು ಕುತ್ತಿಗೆ ಮೂಲಕ ಮುಖವನ್ನು ಸೀಳಿಕೊಂಡು ಹೋಗಿ ಮೃತಪಟ್ಟಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತ ಯುವಕನನ್ನು ಬಸವಾನಿ ಗ್ರಾಮ ಪಂಚಾಯಿತಿ …
Read More »
BigTv News
May 22, 2025
Breaking News, Crime
ಬೂದಗುಂಪ ಗ್ರಾಮದಲ್ಲಿ ಶಿವಪ್ಪ ಎಂಬಾತ ಕೊಡಲಿಯಿಂದ ಕೊಚ್ಚಿ ಪತ್ನಿ ಗಂಗಮ್ಮ ದೊಣ್ಣೆ (38) ಎಂಬುವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.ಶಿವಪ್ಪ ಪ್ರತಿನಿತ್ಯ ಪತಿ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಇದರಿಂದ ನಿತ್ಯ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು.ನಿನ್ನೆ ಜಗಳ ತಾರಕಕ್ಕೇರಿದ್ದು, ರೊಚ್ಚಿಗೆದ್ದ ಶಿವಪ್ಪ ಪತ್ನಿ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ಕೊಂದು ಪರಾರಿ ಆಗಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ
Read More »
BigTv News
May 22, 2025
Breaking News, Crime
ಇಂಧನ ತುಂಬಿಸಿ ಪೆಟ್ರೋಲ್ ಬಂಕ್ ಗೆ ಹಣ ನೀಡದೆ ಪರಾರಿಯಾದ ಕಾರೊಂದು ಅಪಘಾತಕ್ಕೀಡಾಗಿ ಅದರಲ್ಲಿದ್ದ ಯುವಕರಿಬ್ಬರು ಪೊಲೀಸರ ಅತಿಥಿಗಳಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲೆತ್ತೂರು ಎಂಬಲ್ಲಿ ಸಂಭವಿಸಿರುವುದು ವರದಿಯಾಗಿದೆ.ದ್ವಿಚಕ್ರ ವಾಹನವೊಂದಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದ ದ್ವಿಚಕ್ರ ವಾಹನ ಸವಾರ ಕಟ್ಟತ್ತಿಲ ನಿವಾಸಿ ಅಬೂಬಕರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಸ್ಥಳಕ್ಕೆ 112 ಪೊಲೀಸರು ಮತ್ತು ವಿಟ್ಲ ಪೊಲೀಸರು ಆಗಮಿಸಿ ಕಾರಿನಲ್ಲಿದ್ದ ಯುವಕರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಮದ್ಯದ ನಶೆಯಲ್ಲಿ ತೇಲಾಡುತ್ತಿದ್ದ ಯುವಕರಿಬ್ಬರೂ …
Read More »
BigTv News
May 22, 2025
Breaking News, Crime
ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದ 28 ವರ್ಷದ ಯುವಕ ಸಾವನ್ನಪ್ಪಿದ್ದು ಆತನ ಪ್ರೇಯಸಿ 24 ವರ್ಷದ ಯುವತಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾಳೆ.ಸ್ಥಳೀಯ ಪೊಲೀಸ್ ಠಾಣಾಧಿಕಾರಿ ರಮೇಶ್ ಕುಮಾರ್ ಮಾಹಿತಿ ನೀಡಿ, “ಸೊನ್ಹಾರ್ ಮಹುವಾ ಪಟ್ಟಿಯ ನಿವಾಸಿಗಳಾದ ರೋಹಿತ್ ಕುಮಾರ್ ಯಾದವ್ (28) ಮತ್ತು ಕಾಜಲ್ ಗೌತಮ್ (24) ಎಂಬುವವರು ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಭದೋಹಿ-ವಾರಾಣಸಿ ಗಡಿಯ ಕಾಂಢಿಯಾ ರೈಲ್ವೆ ಕ್ರಾಸಿಂಗ್ ಬಳಿ ಚಲಿಸುತ್ತಿದ್ದ ರೈಲಿನ ಮುಂದೆ …
Read More »
BigTv News
May 22, 2025
Breaking News, Crime
ಪತಿಯೇ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಹನೂರು ತಾಲೂಕಿನ ಒಡೆಯರ ಪಾಳ್ಯ ಸಮೀಪದ ಗುಳ್ಳದ ಬಯಲು ಗ್ರಾಮದಲ್ಲಿ ಮೇ 21ರ ಬುಧವಾರ ನಡೆದಿದೆ.ಬುಧವಾರ ಬೆಳಿಗ್ಗೆ 11ರ ವೇಳೆ ದಂಪತಿಗಳಿಬ್ಬರ ನಡುವೆ ಕೌಟುಂಬಿಕ ಕಲಹ ತಾರಕಕೇರಿದ್ದು, ಪತಿ ಚಾಕುವಿನಿಂದ ಇರಿದ ಪರಿಣಾಮ ಪತ್ನಿ ಮಾದೇವಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಈ ಸಂಬಂಧ ಹನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಪೊಲೀಸರ ತನಿಖೆಯಿಂದ …
Read More »
BigTv News
May 22, 2025
Breaking News
ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಕನ್ನಡಿಗ ಡಾ. ಎಂ ಎ ಸಲೀಂ ನೇಮಕ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ (DG & IGP) ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಕನ್ನಡಿಗ ಡಾ. ಎಂ ಎ ಸಲೀಂ (M A Salim) ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಡಾ. ಎಂ ಎ ಸಲೀಂ ಅವರು ಬುಧವಾರವೇ (ಮೇ.21) ಅಧಿಕಾರಿ ವಹಿಸಿಕೊಂಡಿದ್ದಾರೆ. ಡಾ. ಎಂ. ಎ ಸಲೀಂ ಅವರು ಸದ್ಯ …
Read More »
BigTv News
May 21, 2025
Breaking News, Crime
ಕಾಮುಕನೊಬ್ಬ ಮಾನಸಿಕ ಅಸ್ವಸ್ಥೆ ಮಹಿಳೆಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಿದ ಘಟನೆ ಬುಧವಾರ ನಡೆದಿದೆ.ಮಾನಸಿಕ ಅಸ್ವಸ್ಥೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಟಂ ಟಂ ನಲ್ಲಿ ಹೋಗುತ್ತಿರುವ ಯುವಕರು ಇದನ್ನು ವಿಡಿಯೋ ತೆಗೆಯಲು ಮುಂದಾಗಿದ್ದಾಗ ಅಲ್ಲಿಂದ ಮೊಬೈಲ್‌ನಲ್ಲಿ ಮಾತನಾಡುತ್ತಾ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದ್ದರಿಂದ ಎಚ್ಚೇತ್ತ ಪೊಲೀಸರು ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದಾರೆ. ನಂತರ ಸಿಡಿಪಿಒ ವಿರುಪಾಕ್ಷಿ ಆರೋಪಿಯ …
Read More »
BigTv News
May 21, 2025
Breaking News, Crime
ಆಹಾರ ಇಲಾಖೆ ಅಧಿಕಾರಿಗಳು ನ್ಯಾಯಬೆಲೆ ಅಂಗಡಿ ಮುಂದೆ ಅಕ್ರಮವಾಗಿ ಅಕ್ಕಿ ಖರೀದಿ ಮಾಡುವವರ ಮೇಲೆ ದಾಳಿ ಮಾಡಿ ಪಡಿತರ ಅಕ್ಕಿ ವಶಪಡಿಸಿಕೊಂಡ ಘಟನೆ ಬುಧವಾರ ಬೆಳಿಗ್ಗೆ ನಗರದ ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿ ನಡೆದಿದೆ.ನಗರದ ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿ ಕೆ.ಗೋಪಾಲರಾವ್ ನ್ಯಾಯಬೆಲೆ ಅಂಗಡಿ ಸಂಖ್ಯೆ-134 ಮುಂದೆ ಅಕ್ರಮವಾಗಿ ಅಕ್ಕಿ ಖರೀದಿ ಮಾಡುವ ಕುರಿತು ಸಾರ್ವಜನಿಕರ ದೂರಿನ ಮೇರೆಗೆ ಬುಧವಾರ ಆಹಾರ ಇಲಾಖೆ ನಿರೀಕ್ಷಕ ಹನಮೇಶ ನಾಯಕ ದಿಢೀರನೇ ಭೇಟಿ ನೀಡಿ ಅಕ್ರಮವಾಗಿ ಖರೀದಿ ಮಾಡುತ್ತಿದ್ದವರಿಂದ …
Read More »
BigTv News
May 21, 2025
Breaking News, Crime
ಕಾರಿನ ಬಾಡಿಗೆ ಸಂಬಂಧ ಸಚಿನ ಕೋಡ್ಕಣಿ ಅವರಿಂದ 20 ಸಾವಿರ ರೂ. ಹಣ ಸ್ವೀಕರಿಸು ತ್ತಿದ್ದ ವೇಳೆ ಪ್ರಥಮ ದರ್ಜೆ ಲೆಕ್ಕಾಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬುಧವಾರ ಬೆಳಿಗ್ಗೆ ಪಂಚಾಯತ ರಾಜ್ ಇಂಜಿನಿಯರಿಂಗ್ ವಿಭಾಗದ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಸಂದರ್ಭ ಪ್ರಥಮ ದರ್ಜೆ ಲೆಕ್ಕಾಧಿಕಾರಿ ಸುರೇಶ ಬಿಳಗಿ ಅವರನ್ನು ವಶಕ್ಕೆ ಪಡೆಯಲಾಯಿತು.ಲೋಕಾಯುಕ್ತ ಇನ್ಸ್ಪೇಕ್ಟರ್ ವಿನಾಯಕ ಬಿಲ್ಲವ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಕಾರಿನ ಬಾಡಿಗೆ ಸಂಬಂಧ ಹಣ ಸ್ವೀಕರಿಸುತ್ತಿದ್ದ …
Read More »
BigTv News
May 21, 2025
Breaking News
ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಗಂಭೀರಗೊಂಡು ನಾಲ್ವರು ಗಾಯಗೊಂಡ ಘಟನೆ ಹೆರಟೆ ಸೇತುವೆ ಸಮೀಪ ಮಂಗಳವಾರ ಮಧ್ಯಾಹ್ನ ನಡೆದಿದೆ.ಕುಂದಾಪುರ ಕಡೆ ಹೊರಟಿದ್ದ ಕಾರಿನಲ್ಲಿ ಅಲ್ಪಾಜ್, ಇರ್ಫಾನ್ ಇಬ್ಬರು ಇದ್ದು ಅಲ್ಫಾಜ್ ಗೆ ಹೊಟ್ಟೆಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಗಂಭೀರ ಗಾಯವಾಗಿದೆ. ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇರ್ಫಾನ್ ಕೂಡ ಗಾಯಗೊಂಡಿದ್ದಾನೆ.ಕೊಡಚಾದ್ರಿ ಕಡೆ ಹೊರಟಿದ್ದ ಕಾರಿನಲ್ಲಿ ಮಂಜುನಾಥ್, ಯಶ್, ಮೋಹನ್ ಸೇರಿದಂತೆ ಮೂವರು ಇದ್ದು ಮೋಹನ್ ಎಂಬುವವರ ತಲೆಗೆ …
Read More »