Breaking News

ಶಿವಮೊಗ್ಗ :ಬೇಟೆಗೆ ತೆರಳಿದ್ದಾಗ ಆಕಸ್ಮಿಕವಾಗಿ ಗುಂಡು ಸಿಡಿದು ಯುವಕ ಸಾವು!

ತಡರಾತ್ರಿ ನಾಲ್ವರು ಸ್ನೇಹಿತರೊಂದಿಗೆ ಗೌತಮ್‌ ಕಾರಿನಲ್ಲಿ ತೆರಳಿದ್ದ. ವಾಹನವನ್ನು ದಾರಿ ಮಧ್ಯೆ ನಿಲ್ಲಿಸಿ ಉಳಿದ ಸ್ನೇಹಿತರನ್ನು ಅಲ್ಲಿಯೇ ಬಿಟ್ಟು ಬಂದೂಕು ಹಿಡಿದುಕೊಂಡು ಸಮೀಪದ ಗುಡ್ಡ ಏರಿದ್ದಾನೆ.ಬಂದೂಕಿನ ಟ್ರಿಗರ್‌ ಎಳೆದು ಗುಡ್ಡ ಹತ್ತುವಾಗ ಕಾಲು ಜಾರಿ ಕೆಳಗೆ ಬಿದ್ದ ವೇಳೆ ಬಂದೂಕಿನಿಂದ ಗುಂಡು ಸಿಡಿದು ಕುತ್ತಿಗೆ ಮೂಲಕ ಮುಖವನ್ನು ಸೀಳಿಕೊಂಡು ಹೋಗಿ ಮೃತಪಟ್ಟಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತ ಯುವಕನನ್ನು ಬಸವಾನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವಾರ ಮಜರೆ ಗ್ರಾಮದ ಗೌತಮ್‌ ಕೆ.ವಿ. (27) ಎಂದು ತಿಳಿದುಬಂದಿದೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *