Breaking News

Breaking News

ತುಮಕೂರು :ನಕಲಿ ಬಿಲ್ ಸೃಷ್ಟಿಸಿ ಕೋಟ್ಯಂತರ ರೂಪಾಯಿ ವಂಚನೆ!

ಮೂರು ದಿನಗಳ ಹಿಂದೆ ಚೀನಾ ಪ್ರವಾಸಕ್ಕೆ ತೆರಳಿರುವ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಡಿ.ರಾಜಶೇಖರ್ ಮನೆ, ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದಿಸಿರುವುದು ದಾಳಿ ಸಮಯದಲ್ಲಿ ಬೆಳಕಿಗೆ ಬಂದಿದೆ.ಹಳೆ ಕಾಮಗಾರಿ ಹೆಸರಿನಲ್ಲಿ ನಕಲಿ ಬಿಲ್ ಸೃಷ್ಟಿಸಿ ₹2 ಕೋಟಿಗೂ ಅಧಿಕ ಮೊತ್ತ ಪಡೆದುಕೊಂಡಿರುವುದು, 2024-25ರಲ್ಲೂ ಹಳೆ ಕಾಮಗಾರಿಗಳಿಗೆ ನಕಲಿ ಬಿಲ್ ಸೃಷ್ಟಿಸಿ ₹3 ಕೋಟಿಗೂ ಅಧಿಕ ಮೊತ್ತ ಡ್ರಾ ಮಾಡಿಕೊಂಡಿದ್ದಾರೆ. …

Read More »

ಬೆಂಗಳೂರು :ಸಾಲದ ಹಣ ವಾಪಸ್ ಕೇಳಿದಕ್ಕೆ ಚಾಕು ಇರಿದಿದ್ದ ಆರೋಪಿ ಸೆರೆ!

ಸಾಲ ನೀಡಿದ್ದ ಹಣವನ್ನು ವಾಪಸ್ ನೀಡುವಂತೆ ಕೇಳಿದ್ದ ಮಹಿಳೆಯನ್ನು ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ್ದ ಆರೋಪಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಹಣ ನೀಡುವಂತೆ ಆರೋಪಿಯನ್ನು ಕೇಳಿದ್ದು, ಈ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿದ್ದಾಗ ಆರೋಪಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಆರೋಪಿ ವಿರುದ್ಧ ದೂರು ನೀಡಿದ್ದರು. ದೂರನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ …

Read More »

ಮೈಸೂರು : ಮುಂದಿನ ಬಲಿ ನೀನೇ – ಪುನೀತ್‌ ಕೆರೆಹಳ್ಳಿಗೆ ಜೀವ ಬೆದರಿಕೆ!

ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪುನೀತ್ ಕೆರೆಹಳ್ಳಿಗೆ ಜೀವ ಬೆದರಿಕೆ ಕರೆಯೊಂದು ಬಂದಿರುವ ಘಟನೆ ಬೆಳಕಿಗೆ ಬಂದಿದ್ದು, ಇದೀಗ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಉದಯಗಿರಿ ನಿವಾಸಿ ಅಕ್ರಮ್ ಖಾನ್ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಆರೋಪಿಯ ಬಂಧನಕ್ಕೆ ಬಲೆಬೀಸಿದ್ದಾರೆ.

Read More »

ಅಮ್ಮಾವ್ರ ಗಂಡ ದರ್ಶನ್! ಹೆಂಡತಿ ಬೆಂಗಾವಲಿನಲ್ಲಿ…

ನಟ ದರ್ಶನ್​ ಖದರ್​ ಕರಗಿ ತಿಂಗಳುಗಳೇ ಕಳೆದಿವೆ. ಒಂದೇ ಒಂದು ದೊಡ್ಡ ದುರಂತ ದಾಸನ ಗತ್ತು ದೌಲತ್ತನ್ನೆಲ್ಲಾ ರಕ್ತದಲ್ಲಿ ಕೊಚ್ಚಿ ಹೋಗೋ ಹಾಗೆ ಮಾಡಿದೆ. ದರ್ಶನ್ ಈಗೇನಿದ್ರು ಅಮ್ಮಾವ್ರ ಗಂಡ. ದಾಸನಿಗೆ ಹೆಂಡತಿಯೇ ಬೆಂಗಾವಲು.ದರ್ಶನ್ ಸುತ್ತ ಇದ್ದವರೆಲ್ಲಾ ಕಿರಾತಕರೆ. ಆದ್ರೆ ಈಗ ಆ ಕಿರಾತಕ ಗ್ಯಾಂಗ್​ ಅನ್ನ ದಚ್ಚು ದೂರ ಇಟ್ಟಿದ್ದಾರೆ. ಡ್ಯಾಮೇಜ್ ಆಗಿರೋ ದಾಸನ ಇಮೇಜ್​ ಅನ್ನ ಮತ್ತೆ ಕಟ್ಟಿಕೊಡೋಕೆ ಪತ್ನಿ ವಿಜಯಲಕ್ಷ್ಮೀ ಪಣ ತೊಟ್ಟಿದ್ದಾರೆ.ನಟ ದರ್ಶನ್​​​ ಸಂಪೂರ್ಣ …

Read More »

ಮಡಿಕೇರಿ :ಯುವಕರಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿದ್ದ ಎಸ್‌ಐ, ಎಎಸ್‌ಐ ಅಮಾನತು!

ಕೊಡಗು ಜಿಲ್ಲೆ ಸುಂಟಿಕೊಪ್ಪದಲ್ಲಿ ಮಫ್ತಿಯಲ್ಲಿ ಬಂದು ಲಾಂಗ್ ತೋರಿಸಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐ ಮತ್ತು ಎಎಸ್‌ಐ ಅವರನ್ನು ಅಮಾನತು ಮಾಡಲಾಗಿದೆ.ತಪ್ಪು ಮಾಡದೆ ಇದ್ದರೂ ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದು ಶಂಕಾಸ್ಪದವಾಗಿದ್ದ ಕಾರಣ ಯುವಕರು ನೇರವಾಗಿ ಜಿಲ್ಲಾ ಪೊಲೀಸ್ ಅಧಿಕಾರಿನ್ನು ಭೇಟಿಯಾಗಿ ದೂರು ನೀಡಿದ್ದಾರೆ. ಈ ಬಗ್ಗೆ ಎಸ್ಪಿ ತನಿಖೆಗೆ ಆದೇಶಿಸಿದ್ದು, ತೀರ್ಥಕುಮಾರ್ ದೂರವಾಣಿ ಮೂಲಕ ನಡೆದ ಘಟನೆ ಹಾಗೂ ಪಡೆದುಕೊಂಡ ಹಣದ ಬಗ್ಗೆ ಮಾತನಾಡಿರುವ ಆಡಿಯೋ ಇದ್ದು, …

Read More »

ಜೈಪುರ್ :ಬೆಳ್ಳಿ ಬಳೆಗಾಗಿ ತಾಯಿಯ ಅಂತ್ಯಸಂಸ್ಕಾರವನ್ನು ನಿಲ್ಲಿಸಿದ ಮಗ !

ಶವವನ್ನು ಅವರ ಪುತ್ರರು ಮತ್ತು ಸಂಬಂಧಿಕರು ಅಂತಿಮ ವಿಧಿಗಳಿಗಾಗಿ ಹತ್ತಿರದ ಸ್ಮಶಾನಕ್ಕೆ ಕರೆದೊಯ್ದರು. ಚಿತೆಯ ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿರುವಾಗ, ವಿವಾದ ಭುಗಿಲೆದ್ದಿತು.ಮೃತರನ್ನು ಚಿತೆಯ ಮೇಲೆ ಇಡುವ ಮೊದಲು, ಕುಟುಂಬದ ಹಿರಿಯರು ಅವಳ ಬೆಳ್ಳಿಯ ಬಳೆಗಳು ಮತ್ತು ಇತರ ಆಭರಣಗಳನ್ನು ಅವಳ ಹಿರಿಯ ಮಗ ಗಿರ್ಧಾರಿ ಲಾಲ್ಗೆ ಹಸ್ತಾಂತರಿಸಿದರು, ಅವರು ಜೀವಂತವಾಗಿದ್ದಾಗ ಅವಳನ್ನು ನೋಡಿಕೊಂಡರು. ಕಿರಿಯ ಮಗ ಓಂಪ್ರಕಾಶ್ ಕೋಪದಿಂದ ಪ್ರತಿಕ್ರಿಯಿಸಿದರು. ಆಘಾತಕಾರಿ ಕ್ರಮವೊಂದರಲ್ಲಿ, ಅವರು ಚಿತೆಯ ಮೇಲೆ ಮಲಗಿದರು ಮತ್ತು …

Read More »

ಕುರಾನ್‌ ಪುಸ್ತಕಕ್ಕೆ ಬೆಂಕಿ ಪ್ರಕರಣ – ಕರ್ತವ್ಯ ಲೋಪದ ಆರೋಪಡಿಯಲ್ಲಿ ಸಿಪಿಐ ಅಮಾನತು!

ಕುರಾನ್‌ ಪುಸ್ತಕ ಕಳ್ಳತನ ಮಾಡಿ ಬೆಂಕಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಗ್ರಾಮೀಣ ಠಾಣೆಯ ಸಿಪಿಐ ಮಂಜುನಾಥ್‌ ಅವರನ್ನು ಕರ್ತವ್ಯಲೋಪದ ಆರೋಪದಡಿಯಲ್ಲಿ ಅಮಾನತುಗೊಳಿಸಲಾಗಿದೆ. ಈ ಕುರಿತು ನಗರ ಪೊಲೀಸ್‌ ಆಯುಕ್ತ ಯಡಾ ಮಾರ್ಟಿನ್‌ ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಸಿಪಿಐ ಮಂಜುನಾಥ ಹಿರೇಮಠ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಕರ್ತವ್ಯ ಲೋಪ ಆರೋಪದಲ್ಲಿ ಮಂಜುನಾಥ್ ಅವರನ್ನು ಅಮಾನತು ಮಾಡಲಾಗಿದೆ.ಈ ಬಗ್ಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ …

Read More »

ಒಡಿಶಾದ ಪುರಿ ಜಗನ್ನಾಥ ದೇವಾಲಯಕ್ಕೆ ಹೊರಟಿದ್ದ ಬೆಂಗಳೂರಿನ 20ಪ್ರವಾಸಿಗರು ಅಸ್ವಸ್ಥ!

ಬುಧವಾರ ರಾತ್ರಿ ಊಟ ಮುಗಿಸಿಕೊಂಡು ಬಸ್‌ನಲ್ಲಿ ಪುರಿಗೆ ತೆರಳುತ್ತಿದ್ದಾರೆ ಬಾಲೇಶ್ವರ ಜಿಲ್ಲೆಯ ಸೊರೊ ಎಂಬಲ್ಲಿ ಈ ಘಟನೆ ನಡೆದಿದೆ.ಪ್ರವಾಸಿಗರು ಮಾರ್ಗಮಧ್ಯೆ ಅಸ್ವಸ್ಥಗೊಂಡಿದ್ದಾರೆ.ಪ್ರವಾಸಿಗರನ್ನು ಸೊರೊ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೊರೊ ಎಂಬಲ್ಲಿ ತಾವೇ ತಯಾರಿಸಿದ್ದ ಅನ್ನ ಮತ್ತು ಸಾಂಬರ್ ಸೇವಿಸಿದ್ದರು. ಬಸ್ ಸೊರೊ ನಗರ ತಲುಪುವಷ್ಟರಲ್ಲಿ 20 ಪ್ರವಾಸಿಗರು ವಾಂತಿ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರವಾಸಿಗರ ಅಸ್ವಸ್ಥತೆಗೆ ಬಿಸಿಗಾಳಿ ಕಾರಣವಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.

Read More »

ಮಂಗಳೂರಿಂದ ಲಕ್ಷದ್ವೀಪಕ್ಕೆ ಹೊರಟಿದ್ದ ಹಡಗು ಮುಳುಗಡೆ!!

ಮಂಗಳೂರಿನಿಂದ ಲಕ್ಷದ್ವೀಪಕ್ಕೆ ತೆರಳುತ್ತಿದ್ದ ಹಡಗು ಮುಳುಗಡೆಯಾಗಿದೆ. ಸರಕು ತುಂಬಿದ್ದ ಮಂಗಳೂರಿನ ಹಡಗು ಮುಳುಗಡೆಯಾಗಿದೆ.ತಾಂತ್ರಿಕ ಸಮಸ್ಯೆಯಿಂದಾಗಿ ಹಡಗಿನೊಳಗೆ ನೀರು ನುಗ್ಗಿ ಮುಳುಗಿದೆ.ಮುಳುಗುತ್ತಿದ್ದ ಹಡಗಿನಿಂದ ಸಣ್ಣ ಬೋಟಿಗೆ ಹಾರಿ ಆರು ಜನ ಸಿಬ್ಬಂದಿ ಪ್ರಾಣ ಉಳಿಸಿಕೊಂಡಿದ್ದಾರೆ. ಡಿಂಗಿ ಬೋಟ್ ಮೂಲಕ ಸಿಬ್ಬಂದಿ ಪ್ರಾಣ ಉಳಿಸಿಕೊಂಡಿದ್ದಾರೆ. ಕರಾವಳಿ ರಕ್ಷಣಾ ಪಡೆಗೆ ಬಂದ ಮಾಹಿತಿಯ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ.ಇಸ್ಮಾಯಿಲ್ ಶರೀಫ್, ಅಲೆಮನ್ ಅಹಮದ್ ಶಾಕಲ್, ಸುಲೇಮಾನ್, ಅಕ್ಬರ್ ಅಬ್ದುಲ್ ಸುರಾನಿ, ಅಜ್ಮಲ್ ಅವರನ್ನು ಕೋಸ್ಟ್ …

Read More »

ಚಿತ್ರದುರ್ಗ: ಬಾಂಬ್‌ ಸ್ಫೋಟ, ಅಗ್ನಿ ಅವಘಡ, ಗಾಯಳುಗಳು ಗಂಭೀರ!

ಬಾಂಬ್ ಸ್ಫೋಟಗೊಂಡ ಕೂಡಲೇ ಸಾರ್ವಜನಿಕರು ಓಡಲಾರಂಭಿಸಿದರು, ಗಾಯಾಳುಗಳು ಕೆಳಕ್ಕೆ ಬಿದ್ದು ನರಳಾಡುತ್ತಿದ್ದರು. ಬಾಂಬ್ ಸ್ಫೋಟದ ಶಬ್ದ ಕೇಳಿದ ತಕ್ಷಣ ತುರ್ತು ಸಂದರ್ಭದ ಸೈರನ್‌ ಮೊಳಗಿತು. ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಲಾಯಿತು.ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ, ರೆಡ್‍ಕ್ರಾಸ್ ಸಂಸ್ಥೆಯ ತಂಡದ ಸದಸ್ಯರು ಗಾಯಾಳುಗಳ ರಕ್ಷಣಾ ಕಾರ್ಯಕ್ಕೆ ಧಾವಿಸಿದರು. ವೈದ್ಯಕೀಯ ತಂಡ ಸ್ಥಳದಲ್ಲಿಯೇ ತುರ್ತು ಚಿಕಿತ್ಸೆ ಆರಂಭಿಸಿತು.ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ …

Read More »