ಬುಧವಾರ ರಾತ್ರಿ ಊಟ ಮುಗಿಸಿಕೊಂಡು ಬಸ್‌ನಲ್ಲಿ ಪುರಿಗೆ ತೆರಳುತ್ತಿದ್ದಾರೆ ಬಾಲೇಶ್ವರ ಜಿಲ್ಲೆಯ ಸೊರೊ ಎಂಬಲ್ಲಿ ಈ ಘಟನೆ ನಡೆದಿದೆ.ಪ್ರವಾಸಿಗರು ಮಾರ್ಗಮಧ್ಯೆ ಅಸ್ವಸ್ಥಗೊಂಡಿದ್ದಾರೆ.ಪ್ರವಾಸಿಗರನ್ನು ಸೊರೊ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೊರೊ ಎಂಬಲ್ಲಿ ತಾವೇ ತಯಾರಿಸಿದ್ದ ಅನ್ನ ಮತ್ತು ಸಾಂಬರ್ ಸೇವಿಸಿದ್ದರು. ಬಸ್ ಸೊರೊ ನಗರ ತಲುಪುವಷ್ಟರಲ್ಲಿ 20 ಪ್ರವಾಸಿಗರು ವಾಂತಿ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರವಾಸಿಗರ ಅಸ್ವಸ್ಥತೆಗೆ ಬಿಸಿಗಾಳಿ ಕಾರಣವಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

