Breaking News

Breaking News

ಬೆಂಗಳೂರು :ಆಪರೇಷನ್‌ ಸಿಂಧೂರ ವಿಜಯೋತ್ಸವದಲ್ಲಿ ಪಾಕ್‌ ಪರ ಘೋಷಣೆ: ಟೆಕ್ಕಿ ಅರೆಸ್ಟ್!

ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ವೈಟ್‌ಫೀಲ್ಡ್ ಪ್ರದೇಶದ ಪ್ರಶಾಂತ್ ಲೇಔಟ್‌ನ ಪಿಜಿಯಲ್ಲಿ ನಡೆದಿದೆ. ಛತ್ತೀಸ್‌ಗಢ ಮೂಲದ 26 ವರ್ಷದ ಶುಭಾಂಶು ಶುಕ್ಲಾ ಬಂಧಿತ ಆರೋಪಿಯಾಗಿದ್ದು,ಪೊಲೀಸರು ಸ್ಥಳಕ್ಕೆ ಆಗಮಿಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಶುಭಾಂಶು ಪಾಕ್ ಪರ ಘೋಷಣೆ ಕೂಗಿದ್ದು ವಿಚಾರಣೆ ವೇಳೆ ದೃಢಪಟ್ಟಿದ್ದು, ವೈಟ್‌ಫೀಲ್ಡ್ ಠಾಣೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಸದ್ಯ ತನಿಖೆ ಮುಂದುವರಿದಿದೆ.ಆಪರೇಷನ್ …

Read More »

ಗೋಡೆ ಕೊರೆದು,ಬೆತ್ತಲೆಯಾಗಿ ಕಳ್ಳತನ ಮಾಡಿದ ಖತರ್ನಾಕ್ ಕಳ್ಳ..! CCTVಯಲ್ಲಿ ಸೆರೆಯಾಯ್ತು ಕಳ್ಳನ ಕೈಚಳಕ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೊಬ್ಬ ವಿಚಿತ್ರ ಕಳ್ಳನ ಪ್ರಕರಣ ಬೆಳಕಿಗೆ ಬಂದಿದ್ದು,ಚಡ್ಡಿ ಗ್ಯಾಂಗ್,ಬೆಡ್ ಶೀಟ್ ಗ್ಯಾಂಗ್ ಆಯ್ತು ನಗರಕ್ಕೆ ಬೆತ್ತಲೆ ಗ್ಯಾಂಗ್ ಎಂಟ್ರಯಾಗಿಯಾ ಎಂಬ ಅನುಮಾನ ಕಾಡಿದೆ. ಐನಾತಿ ಕಳ್ಳನೊಬ್ಬ ಪೊಲೀಸರ ಯಾಮಾರಿಸಲು ಹೊಸ ದಾರಿ ಹುಡುಕಿದ್ದಾನೆ.ಬೊಮ್ಮನಹಳ್ಳಿಯಲ್ಲಿ ಕಳ್ಳನೊಬ್ಬ ಬೆತ್ತಲೆಯಾಗಿ ಬಂದು, ಗೋಡೆ ಕೊರೆದು ಕಳ್ಳತನ ಮಾಡಿರುವಂತ ಘಟನೆ ನಡೆದಿದೆ. ಮುಖಕ್ಕೆ ಮಾಸ್ಕ್ ಧರಿಸಿ ಬೆತ್ತಲೆಯಾಗಿ ಎಂಟ್ರಿ ಕೊಟ್ಟು ಕೃತ್ಯವೆಸಗಿ ಪರಾರಿಯಾಗಿದ್ದಾನೆ. ಮೊಬೈಲ್ ಶಾಪ್ ನುಗ್ಗಿ ಬರೋಬ್ಬರಿ 85 ಮೊಬೈಲ್ ಎಗರಿಸಿದ್ದಾನೆ.ದಿನೇಶ್ …

Read More »

ಕುಡಿಯುವ ನೀರಿಗೆ ಹಾಹಾಕಾರ: ಹುಬ್ಬಳ್ಳಿಯಲ್ಲಿ ಖಾಲಿ ಕೊಡ ಹಿಡಿದು ನಾರಿಯರ ಪ್ರತಿಭಟನೆ!

ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ರಾಮಲಿಂಗ ನಗರ, ರವಿ ನಗರ ಸೇರಿದಂತೆ ಇತರ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಹೀಗಾಗಿ ಈ ಬಡಾವಣೆಗಳ ನಿವಾಸಿಗಳು ರೋಸಿ ಹೋಗಿದ್ದಾರೆ. ಕಳೆದ 12 ದಿನಗಳಿಂದ ನೀರು ಸರಬರಾಜು ಮಾಡದ ವ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ನಾರಿಯರು ಬೀದಿಗಿಳಿದಿದ್ದಾರೆ.ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ ಪ್ರತಿನಿಧಿಸುವ ವಾರ್ಡ್ ನಲ್ಲಿಯೇ ನೀರಿಗೆ ಬರ ಎದುರಾಗಿದೆ. ಚುನಾವಣೆ ಬಂದಾಗ ಭರವಸೆ ನೀಡುವ ಜನಪ್ರತಿನಿಧಿಗಳು ಎಲ್ಲಿ …

Read More »

ರಾಜಸ್ಥಾನ: ಗಡಿಯಲ್ಲಿ ಡ್ರೋನ್‌ಪತ್ತೆ, ಭದ್ರತಾ ಸಂಸ್ಥೆಗಳ ಎಚ್ಚರಿಕೆ!

ಭಾರತ-ಪಾಕಿಸ್ತಾನ ಗಡಿಯಲ್ಲಿರುವ ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ಹೊಲದಲ್ಲಿ ಡ್ರೋನ್‌ ಪತ್ತೆಯಾಗಿದ್ದು, ಪೊಲೀಸರು ಮತ್ತು ಗಡಿ ಭದ್ರತಾ ಪಡೆ ಸಿಬ್ಬಂದಿ ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.ಡ್ರೋನ್‌ ಅನ್ನು ಅದರ ಮೂಲ ಮತ್ತು ಉದ್ದೇಶವನ್ನು ನಿರ್ಧರಿಸಲು ವಿಧಿವಿಜ್ಞಾನ ಮತ್ತು ತಾಂತ್ರಿಕ ವಿಶ್ಲೇಷಣೆಗೆ ಕಳುಹಿಸಲಾಗುವುದು ಎಂದು ಅವರು ಹೇಳಿದರು.ಅಂತರರಾಷ್ಟ್ರೀಯ ಗಡಿಯಲ್ಲಿರುವ ಶ್ರೀ ಗಂಗಾನಗರದ ಕಾರ್ಯತಂತ್ರದ ಸ್ಥಳವನ್ನು ಗಮನಿಸಿದರೆ, ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಭದ್ರತಾ ಸಂಸ್ಥೆಯ ಮೂಲಗಳು ತಿಳಿಸಿವೆ.ಬಿಎಸ್‌‍ಎಫ್‌ ಸಿಬ್ಬಂದಿ ಮತ್ತು ಪೊಲೀಸರು ಈ ಪ್ರದೇಶದಲ್ಲಿ …

Read More »

ಮಳವಳ್ಳಿ: ಜೂಜು ಅಡ್ಡೆ ಮೇಲೆ ದಾಳಿ, 9 ಮಂದಿ ಬಂಧನ!

ಮಾಗನೂರು ಗ್ರಾಮದ ಹೊರವಲಯದಲ್ಲಿ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿದ ಗ್ರಾಮಾಂತರ ಪೊಲೀಸರು 9 ಮಂದಿಯನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ.ಗ್ರಾಮದ ಬಸವನಪುರ ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿ ಮಂಗಳವಾರ ಸಂಜೆ ಗ್ರಾಮಾಂತರ ಪಿಎಸ್‌ಐ ಶ್ರವಣ ದಾಸರಡ್ಡಿ ನೇತೃತ್ವದಲ್ಲಿ ದಾಳಿ ಮಾಡಿದ ಪೊಲೀಸರು ಪಣಕ್ಕಿಟ್ಟಿದ್ದ ₹3500 ಅನ್ನು ವಶ ಪಡಿಸಿಕೊಂಡಿದ್ದಾರೆ.ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಬೆಂಗಳೂರು : ಆನಂದ್ ಗುರೂಜಿಗೆ ಬ್ಲ್ಯಾಕ್ ಮೇಲ್, ಜೀವಬೆದರಿಕೆ, ಇಬ್ಬರ ವಿರುದ್ಧ FIR ದಾಖಲು!

ಆನಂದ್ ಗುರೂಜಿ ಅವರಿಗೆ ಹಣಕ್ಕೆ ಬೇಡಿಕೆ ಇಟ್ಟು ಜೀವಬೆದರಿಕೆ ಹಾಗೂ ಬ್ಲ್ಯಾಕ್ ಮೇಲ್ ಮಾಡಿದ ಆರೋಪದಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಬೆಂಗಳೂರಿನ ಚಿಕ್ಕಜಾಲ ಠಾಣೆಯಲ್ಲಿ ಆನಂದ್ ಗುರೂಜಿ ದೂರು ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಕೃಷ್ಣಮೂರ್ತಿ ಹಾಗೂ ದಿವ್ಯಾ ವಸಂತ್ ಎಂಬುವವರ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.ಆನ್ಂದ್ ಗುರೂಜಿ ವಿಡಿಯೋ ಹಾಗೂ ಜಮೀನು ಖರೀದಿ ಸಂಬಂಧ ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರು. ಆದಾರೂ ಈ ಪ್ರಕರಣದ ವಿಚಾರವಾಗಿ ಇಬ್ಬರೂ …

Read More »

ದೊಡ್ಡಬಳ್ಳಾಪುರ: ದಿಢೀರನೆ ಕುಸಿದು ಬಿದ್ದು ನಾಲ್ಕು ರಾಸು ಸಾವು!

ತಾಲ್ಲೂಕಿನ ಗುಂಜೂರು ಗ್ರಾಮದ ಹೊರವಲಯದಲ್ಲಿರುವ ಮುನಿಯಪ್ಪ ಎಂಬುವವರ ತೋಟದ ಮನೆಯಲ್ಲಿ ಸಾಕಿದ್ದ ಒಂದು ಎಮ್ಮೆ ಕರು, ಎರಡು ಹಸುವಿನ ಕರು ಹಾಗೂ ಒಂದು ಹಸು ಸೇರಿ ನಾಲ್ಕು ರಾಸು ಮೃತಪಟ್ಟಿವೆ.ಹಸುಗಳಿದ್ದ ಸ್ಥಳದ ನೀರಿನ ಮಾದರಿ ಸಂಗ್ರಹಿಸಲಾಗಿದೆ. ಘಟನೆ ಬಗ್ಗೆ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ.ಎನ್.ಜಗದೀಶ್ ಅವರಿಗೆ ಮಾಹಿತಿ ನೀಡಲಾಗಿದೆ. ಅಸ್ವಸ್ಥ ಹಸುಗಳಿಗೆ ಚಿಕಿತ್ಸೆ ನೀಡಲಾಗಿದೆ. ಪ್ರಯೋಗಾಲಯದ ವರದಿ ಬಂದ ನಂತರ ಹಸುಗಳ ಸಾವಿನ …

Read More »

ಚೆನೈ :ಪಾಕೆಟ್‌ ಮನಿಯನ್ನು ಭಾರತೀಯ ಸೇನೆಗೆ ನೀಡಿದ ಪುಟ್ಟ ಪೋರ; ಈ ಬಾಲಕನ ದೇಶಪ್ರೇಮಕ್ಕೆ ಸಾಟಿಯೇ ಇಲ್ಲ!

ತಮಿಳುನಾಡಿನ ಕರೂರಿನ 8 ವರ್ಷದ ಹುಡುಗನೊಬ್ಬ ತನ್ನ 10 ತಿಂಗಳ ಉಳಿತಾಯವನ್ನು ಭಾರತೀಯ ಸೇನೆಗೆ ದಾನ ಮಾಡಲು ನಿರ್ಧರಿಸಿದ್ದಾನೆ. ಅವನ ಈ ನಿಸ್ವಾರ್ಥ ಭಾವನೆ ಕಂಡು ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಈ ಹುಡುಗ ಕಳೆದ 10 ತಿಂಗಳುಗಳಿಂದ ತನ್ನ ಮನೆಯವರು ಕೊಟ್ಟ ಪಾಕೆಟ್ ಮನಿಯನ್ನು ಖರ್ಚು ಮಾಡದೇ ಹಾಗೇ ಕೂಡಿಟ್ಟಿದ್ದಾನಂತೆ. ಅವನ ಬಳಿ ಇರುವ ಹಣದ ಮೊತ್ತವು ಸಣ್ಣದಾಗಿದ್ದರೂ ಅದನ್ನು ಒಂದು ಒಳ್ಳೆಯ ಉದ್ದೇಶಕ್ಕಾಗಿ ಮೀಸಲಿಟ್ಟಿರುವುದು …

Read More »

ಸಿದ್ದಾಪುರ: ಕಾಡಾನೆ ಕಾಡಿಗಟ್ಟಲು ಕಾರ್ಯಾಚರಣೆ!

ಕಣ್ಣಂಗಾಲ ಗ್ರಾಮದಲ್ಲಿ 27 ಕಾಡಾನೆಗಳು ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದು, ಬುಧವಾರ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಯಿತು.ಈ ವೇಳೆ ಮರಿಗಳು ಸೇರಿದಂತೆ ಒಟ್ಟು 27 ಕಾಡಾನೆಗಳು ಕಂಡುಬಂದವು. ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ತೆರಳುತ್ತಿದ್ದು, ಅರಣ್ಯ ಇಲಾಖೆ ಸಂಜೆಯವರೆಗೂ ಕಾರ್ಯಾಚರಣೆ ನಡೆಸಿತು.ಆನೆಗಳು ತೋಟದಲ್ಲೇ ಇದ್ದು, ಗುರುವಾರ ಕಾರ್ಯಾಚರಣೆ ಮುಂದುವರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಶಿವರಾಮ್, ಡಿಆರ್‌ಎಫ್‌ಒ ಸಂಜೀತ್, ಸಿಬ್ಬಂದಿ, ಆರ್.ಆರ್.ಟಿ ಸಿಬ್ಬಂದಿ ಹಾಜರಿದ್ದರು.

Read More »

ವಿಜಯಪುರ: ‘ಲೋಕಾ’ ದಾಳಿ; ರೇಣುಕಾ ಮನೆಯಲ್ಲಿ ಅಪಾರ ನಗದು, ಬೆಳ್ಳಿ, ಬಂಗಾರ ಪತ್ತೆ!

ರೇಣುಕಾ ಸಾತರ್ಲೆ ಅವರ ವಿಜಯಪುರ ಮತ್ತು ಸೋಲಾಪುರ ನಗರದಲ್ಲಿರುವ ಮನೆಗಳ ಮೇಲೆ ಗುರುವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ₹2 ಕೋಟಿ ಮೊತ್ತದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.ವಿಜಯಪುರದ ಚಾಣಕ್ಯ ನಗರದಲ್ಲಿರುವ ಮನೆ ಹಾಗೂ ನೆರೆಯ ಮಹಾರಾಷ್ಟ್ರ ರಾಜ್ಯದ ಸೋಲಾಪುರ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಿ, ತಪಾಸಣೆ ನಡೆಸಿದರು.ದಾಳಿಯ ವೇಳೆ ₹ 10 ಲಕ್ಷ ನಗದು, ಬೆಳ್ಳಿ, ಬಂಗಾರದ ಆಭರಣಗಳು, ವಾಹನಗಳು ಮತ್ತು ಇತರೆ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆ …

Read More »