ತಮಿಳುನಾಡಿನ ಕರೂರಿನ 8 ವರ್ಷದ ಹುಡುಗನೊಬ್ಬ ತನ್ನ 10 ತಿಂಗಳ ಉಳಿತಾಯವನ್ನು ಭಾರತೀಯ ಸೇನೆಗೆ ದಾನ ಮಾಡಲು ನಿರ್ಧರಿಸಿದ್ದಾನೆ. ಅವನ ಈ ನಿಸ್ವಾರ್ಥ ಭಾವನೆ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಈ ಹುಡುಗ ಕಳೆದ 10 ತಿಂಗಳುಗಳಿಂದ ತನ್ನ ಮನೆಯವರು ಕೊಟ್ಟ ಪಾಕೆಟ್ ಮನಿಯನ್ನು ಖರ್ಚು ಮಾಡದೇ ಹಾಗೇ ಕೂಡಿಟ್ಟಿದ್ದಾನಂತೆ. ಅವನ ಬಳಿ ಇರುವ ಹಣದ ಮೊತ್ತವು ಸಣ್ಣದಾಗಿದ್ದರೂ ಅದನ್ನು ಒಂದು ಒಳ್ಳೆಯ ಉದ್ದೇಶಕ್ಕಾಗಿ ಮೀಸಲಿಟ್ಟಿರುವುದು ದೊಡ್ಡ ಗುಣವೇ ಸರಿ. ರಾಷ್ಟ್ರವನ್ನು ರಕ್ಷಿಸುವಲ್ಲಿ ಭಾರತೀಯ ಸೇನೆಯ ತ್ಯಾಗಗಳ ಬಗ್ಗೆ ತಿಳಿದುಕೊಂಡ ನಂತರ ಭಾವುಕನಾಗಿ ಈ ಕೊಡುಗೆ ನೀಡುವ ಬಯಕೆಯನ್ನು ಆತ ವ್ಯಕ್ತಪಡಿಸಿದ್ದಾನಂತೆ.ಈ ಹುಡುಗ ತಾನು ಕೂಡಿಟ್ಟ ಹಣದ ಡಬ್ಬಿಯನ್ನು ಹಿಡಿದುಕೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದಾನೆ. ಅವನ ಈ ನಡೆ ಜಿಲ್ಲಾಧಿಕಾರಿಗಳನ್ನೇ ಭಾವುಕರನ್ನಾಗಿ ಮಾಡಿದೆ ಮತ್ತು ಆ ಬಾಲಕನ ನಿಸ್ವಾರ್ಥತೆ ಮತ್ತು ಔದಾರ್ಯದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

