BigTv News
May 12, 2025
Breaking News
ಎರಡು ಟ್ರಕ್ ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ 13 ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಛತ್ತೀಸ್ ಘರ್ ರಾಜ್ಯದ ರಾಯಪುರ -ಬಲೋಡಾಬಜಾರ್ ರಸ್ತೆಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದೆ.ಚೌತಿಯಾ ಚಟ್ಟಿ ಕಾರ್ಯಕ್ರಮ ಮುಗಿಸಿ ವಾಪಸ್ ಬರುವ ವೇಳೆ ಅವಘಡ ನಡೆದಿದೆ. ಅತಿಯಾದ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿ ಅಪಘಾತ ನಡೆದಿದೆ. ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ …
Read More »
BigTv News
May 12, 2025
Breaking News, Crime
ಮಥುರಾ ಜಿಲ್ಲೆಯ ಛಾಟಾ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಸರ್ಕಾರಿ ಜೂನಿಯರ್ ಹೈಸ್ಕೂಲ್‌ನಿಂದ ಬಹಳ ಗಂಭೀರ ಮತ್ತು ಆತಂಕಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಶಾಲೆಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿರುವ ತರಬೇತಿ ಶಿಕ್ಷಕರೊಬ್ಬರು ವಿದ್ಯಾರ್ಥಿನಿಯರನ್ನು ಅಸಭ್ಯವಾಗಿ ಸ್ಪರ್ಶಿಸಿ ಅವರಿಗೆ ವಯಸ್ಕರ ವೀಡಿಯೊಗಳನ್ನು ತೋರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ವಿದ್ಯಾರ್ಥಿನಿಯರ ಕುಟುಂಬ ಸದಸ್ಯರು ಮತ್ತು ಶಾಲಾ ಸಿಬ್ಬಂದಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದು, ಅದರಲ್ಲಿ ಆರುಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಸಹಿಗಳಿವೆ. ದೂರು ಸ್ವೀಕರಿಸಿದ ನಂತರ, ಪೊಲೀಸರು …
Read More »
BigTv News
May 12, 2025
Breaking News, Crime
ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದು ಪಬಗೆ ಬಂದು ಆತಂಕ ಸೃಷ್ಟಿಸಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದು ಎಲ್ಲೆಡೆ ಓಡಾಡುತ್ತಿದ್ದ, ಏಕಾಏಕಿ ರಾಜಾಜಿನಗರದಲ್ಲಿರುವ ಜಾಮಿಟ್ರಿ ಪಬ್ಗೆ ಬಂದಿದ್ದಾರೆ.ಪಬ್ನಲ್ಲಿ ಆತ ಅವಿತುಕೊಂಡಿದ್ದು, ಆತನನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಪಿಸ್ತೂಲ್ ಇರುವುದರಿಂದ ಈ ಪ್ರಕರಣವನ್ನು ತುಂಬಾ ಸೂಕ್ಷ್ಮವಾಗಿ ತೆಗೆದುಕೊಳ್ಳಬೇಕಿದೆ. ಘಟನಾ ಸ್ಥಳದಲ್ಲಿ ಡ್ರೋನ್ ಹಾರಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳತನಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಉತ್ತರ ವಿಭಾಗದ …
Read More »
BigTv News
May 12, 2025
Breaking News, Crime
ಚೆನ್ನೈನಲ್ಲಿ ರಸ್ತೆ ಬದಿಯಲ್ಲಿ ಎಸೆದಿದ್ದ ಸೂಟ್‌ಕೇಸ್‌ನಲ್ಲಿ ಮಹಿಳೆಯ ಛಿದ್ರಗೊಂಡ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ಬೇರೆಡೆ ಕೊಲೆ ಮಾಡಿ ಸೂಟ್‌ಕೇಸ್ ಅನ್ನು ತೊರೈಪಾಕ್ಕಂನ ಐಟಿ ಕಾರಿಡಾರ್‌ಗೆ ಹೊಂದಿಕೊಂಡಿರುವ ವಸತಿ ಪ್ರದೇಶದಲ್ಲಿ ಬಿಸಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.ಮೃತ ಮಹಿಳೆಯನ್ನು ಮನಾಲಿಯ 32 ವರ್ಷದ ದೀಪಾ ಎಂದು ಗುರುತಿಸಲಾಗಿದ್ದು, ಆಕೆ ಅವಿವಾಹಿತೆಯಾಗಿದ್ದಳು. ಚೆನ್ನೈನ ದಕ್ಷಿಣ ಉಪನಗರದ ತೊರೈಪಾಕ್ಕಂ ಬಳಿ ಈ ಭೀಕರ ಹತ್ಯೆ ನಡೆದಿದೆ. ಪೊಲೀಸರು ಶಿವಗಂಗಾ ಜಿಲ್ಲೆಯ ನಿವಾಸಿ …
Read More »
BigTv News
May 12, 2025
Breaking News
ಕನ್ನಡ ಚಿತ್ರರಂಗ, ರಂಗಭೂಮಿ ಉದಯೋನ್ಮುಖ ನಟನನ್ನು ಕಳೆದುಕೊಂಡಿದೆ. ಹೃದಯಾಘಾತಕ್ಕೆ ನಗುಮುಖದ, ಸರಳ ವ್ಯಕ್ತಿತ್ವದ ರಾಕೇಶ್ ಪೂಜಾರಿ ಬಲಿಯಾಗಿದ್ದಾರೆ.ಉಡುಪಿಯ ಕಾರ್ಕಳದ ನಿಟ್ಟೆ ಗ್ರಾಮದಲ್ಲಿ ಸ್ನೇಹಿತನ ಮೆಹೆಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸ್ನೇಹಿತರ ಜತೆ ಇದ್ದಾಗಲೇ ಅವರಿಗೆ ಹಠಾತ್ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಆದರೆ ಚಿಕಿತ್ಸೆ ಫಲಿಸದೆ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.ಇಂತಹ ಅದ್ಭುತ ಕಲಾವಿದ ಸಣ್ಣ ವಯಸ್ಸಿನಲ್ಲೇ ನಮ್ಮನ್ನು ಅಗಲಿದ್ದಾರೆ.12 ಗಂಟೆಗೆ ಪಾರ್ಥಿವ ಶರೀರವನ್ನು ಊರಿಗೆ ತರಲಾಗುತ್ತದೆ. …
Read More »
BigTv News
May 11, 2025
Breaking News
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಮ್ಮಟಗೇರಿ ಬೈಕ್ ಡಿಕ್ಕಿಯಾಗಿ ಘಟನೆ ನಡೆದಿದ್ದು ಬೈಕ್‌ನಲ್ಲಿದ್ದ ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ವ್ಯಕ್ತಿ ನೀರಲಕೇರಿ ಗ್ರಾಮದ ನಿವಾಸಿ ಬೀರಪ್ಪ ಹಂಪಿಹೊಳ್ಳಿ (55) ಎಂದು ತಿಳಿದುಬಂದಿದೆ. ಕೆರೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
Read More »
BigTv News
May 11, 2025
Breaking News
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಜೋಳಿನ್ ಬಡಾವಣೆಯಲ್ಲಿ ದಾರುಣ ಘಟನೆಗೆ ಸಂಭವಿಸಿದೆ. ನಾಯಿಗಳ ದಾಳಿಗೆ 53 ವರ್ಷದ ಮಹಿಳೆ ಬಲಿಯಾಗಿದ್ದಾಳೆ. ಬೀದಿನಾಯಿಗಳ ದಾಳಿಗೆ ಸಿಕ್ಕು ಪ್ರೇಮಾ ಜೋಳಿನ್ ಎಂಬವರು ಮೃತರಾಗಿದ್ದಾರೆ.ಗಜೇಂದ್ರಗಡ ನಿವಾಸಿಯಾದ ಪ್ರೇಮಾ ಜೋಳಿನ್ ಅವರು ತಮ್ಮ ಮನೆ ಪಕ್ಕದ ಗಿಡದಲ್ಲಿ ಹೂವು ತೆಗೆಯುತ್ತಿದ್ದಾಗ ಹಲವಾರು ಶ್ವಾನಗಳು ಅವರ ಮೇಲೆ ದಾಳಿ ನಡೆಸಿವೆ.ಸ್ಥಳಕ್ಕೆ ಗಜೇಂದ್ರಗಡ ಪೊಲೀಸ್ ಇಲಾಖೆ ಮತ್ತು ಪೌರಸಭೆ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಬೀದಿನಾಯಿ ಹಾವಳಿ …
Read More »
BigTv News
May 11, 2025
Breaking News, Crime
ದೆಹಲಿಯಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ (ಕೆಕೆ) ರೈಲಿನಲ್ಲಿ ಬಾಂಬ್ ಇದೆ ಎಂದು ಹುಸಿ ಕರೆ ಮಾಡಿದ್ದ ವ್ಯಕ್ತಿಯನ್ನು ವಾಡಿ ರೈಲ್ವೆ ಠಾಣೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ.ಕೆಕೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇಟ್ಟಿರುವ ಶಂಕೆ ಇದೆ ಎಂದು ರಾತ್ರಿ 1ರ ಸುಮಾರಿಗೆ ರೈಲ್ವೆ ಕಂಟ್ರೋಲ್ ರೂಂಗೆ ಕರೆ ಬಂದಿತ್ತು. ವಾಡಿ ನಿಲ್ದಾಣದಲ್ಲಿ ರೈಲು ನಿಲ್ಲಿಸಿದ ರೈಲ್ವೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಶ್ವಾನಗಳೊಂದಿಗೆ ಸುಮಾರು 4 ಗಂಟೆ ತಪಾಸಣೆ ಮಾಡಿದರು. …
Read More »
BigTv News
May 11, 2025
Breaking News, Crime
ನೆಲ್ಯಾಡಿ ಗ್ರಾಮದ ಮಾದೇರಿ ಎಂಬಲ್ಲಿ ಕಟ್ಟಿಗೆ ಕೊಂಡೊಯ್ಯುವ ವಿಷಯದಲ್ಲಿ ಜಗಳ ನಡೆದು ದೊಡ್ಡಪ್ಪನ ಮಗನನ್ನೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಲಾಗಿದೆ.ಮೇ 8ರಂದು ರಾತ್ರಿ ಶರತ್ ಅವರ ಜಾಗದಲ್ಲಿ ಹಾಕಿದ್ದ ಕಟ್ಟಿಗೆಯನ್ನು ಜನಾರ್ದನ ಅವರ ಮನೆಯವರು ಕೊಂಡು ಹೋಗುತ್ತಿದ್ದಾಗ ಶರತ್ ಆಕ್ಷೇಪಿಸಿದ್ದರು. ಈ ವೇಳೆ ಗಲಾಟೆ ನಡೆದಿದೆ. ಮೇ 9ರಂದು ರಾತ್ರಿ ಶರತ್ ಅವರು ಮಾದೇರಿಯಲ್ಲಿರುವ ಜನಾರ್ದನ ಅವರ ಮನೆ ಅಂಗಳದಲ್ಲಿ ನಿಂತು ಅವರ ಪುತ್ರ ಸತೀಶ ಅವರನ್ನು ನಿಂದಿಸುತ್ತಿದ್ದರು.ಈ ವೇಳೆ …
Read More »
BigTv News
May 11, 2025
Breaking News, Crime
ಚಲಿಸುವ ಕಾರ್ ನೊಳಗೆ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಆಕೆಯ ಜೊತೆಗಿದ್ದ ಸ್ನೇಹಿತೆ ವಾಹನದಿಂದ ಹೊರಗೆ ತಳ್ಳಲ್ಪಟ್ಟ ನಂತರ ಸಾವನ್ನಪ್ಪಿದ್ದಾರೆ.ಗ್ರೇಟರ್ ನೋಯ್ಡಾದಿಂದ ಇಬ್ಬರು ಮಹಿಳೆಯರನ್ನು ಕರೆದುಕೊಂಡು ಬಲವಂತವಾಗಿ ಕಾರ್ ಹತ್ತಿಸಿಕೊಂಡು ಹೋಗಿ ಕೃತ್ಯವೆಸಗಿದ್ದಾರೆ.ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಆರೋಪಿಗಳ ಕಾಲುಗಳಿಗೆ ಗುಂಡು ತಗುಲಿದೆ.ಬಂಧಿತ ವ್ಯಕ್ತಿಗಳನ್ನು ಸಂದೀಪ್, ಗೌರವ್ ಮತ್ತು ಅಮಿತ್ ಎಂದು ಗುರುತಿಸಲಾಗಿದೆ. ಎನ್ಕೌಂಟರ್ನಲ್ಲಿ ಸಂದೀಪ್ ಮತ್ತು ಗೌರವ್ ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ಗ್ರಾಮೀಣ) ಡಾ. …
Read More »