Breaking News

Breaking News

ಕಾಸರಗೋಡು :ಲಾರಿ ಮತ್ತು ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸವಾರ ಸಾವು!!

ಲಾರಿ ಮತ್ತು ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿಯ ಮಂಜೇಶ್ವರ ತೂಮಿನಾಡು ಎಂಬಲ್ಲಿ ನಡೆದಿದೆ.ಇವರು ಉಪ್ಪಳದಿಂದ ಕೆ.ಸಿ ರೋಡ್ ನ ಪೇಪರ್ ಮಿಲ್ ಗೆ ಕೆಲಸಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಅಪಘಾತದ ತೀವ್ರತೆಗೆ ಕಲ್ಲೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ.ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More »

ಚಿತ್ರದುರ್ಗ: ಕೆರೆಯಲ್ಲಿ ಕುರಿ ತೊಳೆಯಲು ತೆರಳಿದ್ದ ದಂಪತಿಗಳು ನೀರುಪಾಲು!!

ಕೆರೆಯಲ್ಲಿ ಕುರಿ ತೊಳೆಯಲು ತೆರಳಿದ್ದ ದಂಪತಿಗಳು ನೀರು ಪಾಲಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ದುರ್ಗ ತಾಲೂಕಿನ ಕಾನೆಹಳ್ಳದಲ್ಲಿ ನಡೆದಿದೆ.ಅತ್ತಿಮಗೆ ಗ್ರಾಮದ ತಿಮ್ಮಯ್ಯ (35) ಮತ್ತು ಪುಟ್ಟಮ್ಮ (32) ನೀರು ಪಾಲಾಗಿದ್ದಾರೆ. ಪತ್ನಿ ಪುಟ್ಟಮ್ಮಳ ಶವ ಪತ್ತೆಯಾಗಿದ್ದು, ಪತಿ ತಿಮ್ಮಯ್ಯ ಶವಕ್ಕಾಗಿ ಇದೀಗ ಅಗ್ನಿಶಾಮಕ ದಳ ಸಿಬ್ಬಂದಿಗಳು ಹುಡುಕಾಟ ನಡೆಸುತ್ತಿದ್ದಾರೆ.ಘಟನೆ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ತುಮಕೂರು :ಮನೆಮುಂದೆ ಆಟವಾಡ್ತಿದ್ದ ಮಗು ಕರೆಂಟ್ ವೈರ್ ತುಳಿದು ಸಾವು..!

ತುಮಕೂರಿನಲ್ಲಿ ಘೋರ ಘಟನೆಯೊಂದು ನಡೆದಿದ್ದು, ಮನೆ ಮುಂದಿನ ವಿದುತ್‌ ತಂತಿ ಸ್ಪರ್ಶಿಸಿ 5 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋರಘಟ್ಟದಲ್ಲಿ ಮನೆ ಮುಂದಿನ ತಂತಿ ಬೇಲಿ ವಿದ್ಯುತ್‌ ತಂತಿ ಬಿದ್ದಿತ್ತು. ಬಾಲಕ ತಂತಿ ಬೇಲಿ ಮುಟ್ಟಿದ್ದು, ಈ ವೇಳೆ ಕರೆಂಟ್ ಶಾಕ್ ನಿಂದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಘಟನೆಗೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದ್ದು, ದಂಡಿಶಿವರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

Read More »

ಭದ್ರಾವತಿ: ಕ್ರಿಕೆಟ್ ಆಟದಲ್ಲಿ ಜಗಳ, ಯುವಕನ ಕೊಲೆಯಲ್ಲಿ ಅಂತ್ಯ!

ಅರುಣ್ ಮತ್ತು ಇತರರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ.ಜಗಳ ರಾತ್ರಿ ಗಾಂಧಿನಗರ, ಕೇಶವಪುರ ಬಡಾವಣೆ ನೀರಿನ ಟ್ಯಾಂಕ್ ಹತ್ತಿರ ಮದ್ಯ ಸೇವಿಸುವಾಗ ಮುಂದುವರಿದಿದ್ದು, ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಯುವಕನ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಮತ್ತೊಬ್ಬ ಯುವಕ ಸಂಜಯ್ ಎಂಬಾತ ಗಾಯಗೊಂಡಿದ್ದಾನೆ.ನಗರದ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪನಿರೀಕ್ಷಕ ಕೃಷ್ಣಕುಮಾರ್, ನಗರ ಪೊಲೀಸ್ ಠಾಣೆ …

Read More »

ಉತ್ತರಪ್ರದೇಶ:ಓಯೋ ರೂಮಿನಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿನಿ ಶವವಾಗಿ ಪತ್ತೆ.!

ಉತ್ತರ ಪ್ರದೇಶದ ಅಲಿಘರ್‌ನ ರೋರಾವರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿ ರಾಯಲ್ ರಿಟ್ರೀಟ್ ಹೊಟೇಲ್‌ನ ಕೊಠಡಿಯೊಂದರಲ್ಲಿ ಯುವಕ ಮತ್ತು ಅಪ್ರಾಪ್ತ ಬಾಲಕಿಯ ಶವ ಪತ್ತೆಯಾಗಿದೆ.ಪ್ರಾಥಮಿಕ ತನಿಖೆಯಲ್ಲಿ ಇಬ್ಬರೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಅಲಿಘರ್ ಪೊಲೀಸರು ತಿಳಿಸಿದ್ದಾರೆ.ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಫೀಲ್ಡ್ ಯೂನಿಟ್ ತಂಡದೊಂದಿಗೆ ತನಿಖೆ ನಡೆಸಿದ್ದಾರೆ.ಶಾಲೆಯಲ್ಲಿ ಆರಂಭವಾದ ಪ್ರೀತಿ, OYO ರೂಮ್‌ನಲ್ಲಿ ಅಂತ್ಯ ಕಂಡಿದೆ.

Read More »

ಮಡಿಕೇರಿ :ತಮ್ಮನನ್ನೇ ಗುಂಡಿಟ್ಟು ಹತ್ಯೆಗೈದ ಅಣ್ಣ!

ಅಭ್ಯತ್ ಮಂಗಲದಲ್ಲಿ ತೋಟದ ಗೋದಾಮಿನಲ್ಲಿ ಪೈಪ್ ಗಳ ಪರಿಶೀಲನೆಗೆಂದು ವಿನು ಬೆಳ್ಯಪ್ಪ ತೆರಳಿದ್ದರು. ಈ ವೇಳೆ ಹಿಂದಿನಿಂದ ಬಂದ ಸಹೋದರಮಣಿ ಏಕಾಏಕಿ ತಮ್ಮನ ಮೇಲೆ ಗುಂಡು ಹಾರಿಸಿದ್ದಾನೆ. ಗುಂಡೇಟಿಗೆ ವಿನು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಘಟನೆ ಬಳಿಕ ಆರೋಪಿ ಮಣಿ ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಅಣ್ಣನೇ ತಮ್ಮನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಕೊಳಂಬೆ ವಿನು ಬೆಳ್ಯಪ್ಪ (53) …

Read More »

ವೆಸ್ಟರ್ನ್ ಟಾಯ್ಲೆಟ್‌ ಸೀಟ್ ಸ್ಫೋಟ: ಯುವಕನಿಗೆ ಗಂಭೀರ ಗಾಯ!

ಶೌಚಾಲಯದ ವೆಸ್ಟರ್ನ್ ಟಾಯ್ಲೆಟ್ ಸೀಟ್ ಸ್ಫೋಟಗೊಂಡು 20 ವರ್ಷದ ಯುವಕನಿಗೆ ಗಂಭೀರ ಗಾಯಗಳಾಗಿವೆ.ಗ್ರೇಟರ್ ನೋಯ್ಡಾದ ಸೆಕ್ಟರ್-36ನ ಮನೆ ಸಂಖ್ಯೆ C-364ರಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮನೆಯ ಮಾಲೀಕ ಸುನಿಲ್ ಪ್ರಧಾನ್ ಅವರ 20 ವರ್ಷದ ಮಗ ಆಶು ನಗರ್ ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶೌಚಾಲಯದಲ್ಲಿದ್ದರು. ಮಲವಿಸರ್ಜನೆಯ ನಂತರ ತೊಳೆಯುವ ಸಂದರ್ಭದಲ್ಲಿ, ವೆಸ್ಟರ್ನ್ ಟಾಯ್ಲೆಟ್ ಸೀಟ್ ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತು. ಈ ಸ್ಫೋಟದಿಂದ ಆಶು …

Read More »

ರಾಯಚೂರು : 2 ದಿನದ ಹಿಂದೆ ನಾಪತ್ತೆಯಾಗಿದ್ದ ಲ್ಯಾಬ್ ಟೆಕ್ನಿಷಿಯನ್ ಚರಂಡಿಯಲ್ಲಿ ಶವವಾಗಿ ಪತ್ತೆ!!

ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಆರೋಗ್ಯ ಇಲಾಖೆಯ ಲ್ಯಾಬ್ ಟೆಕ್ನಿಷಿಯನ್ ಇದೀಗ ರಾಯಚೂರಿನ ಮಸ್ಕಿ ಪಟ್ಟಣದ ಬಳಿ ಠಾಕೂರ್ ಲೇಔಟ್​​ ನಲ್ಲಿ ಅನುಮಾನಾಸ್ಪದವಾಗಿ ಶವ ಪತ್ತೆಯಾಗಿದೆ.ಠಾಕೂರ್ ಲೇಔಟ್​​ ಬಳಿ ಕಳೆದ ಎರಡು ದಿನಗಳಿಂದ ಒಂದೇ ಕಡೆ ಬೈಕ್ ನಿಂತಿರುವುದರಿಂದ ಅನುಮಾನಗೊಂಡ ಸ್ಥಳೀಯರು ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಸ್ಥಳಕ್ಕೆ ಮಸ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.ಮೃತ ಲ್ಯಾಬ್ ಟೆಕ್ನಿಷಿಯನ್ …

Read More »

ಸಂಡೂರು: ನಕಲಿ ಬಂಗಾರ ನೀಡಿ ವಂಚನೆ, ಆರೋಪಿ ಬಂಧನ

ತಾಲ್ಲೂಕಿನ ಡಿ.ಅಂತಾಪುರ ಕೊರಚರಹಟ್ಟಿಯ ಗ್ರಾಮದಲ್ಲಿನ ಕೆಲ ವ್ಯಕ್ತಿಗಳು ಆಂಧ್ರ ಮೂಲದ ಶಿವಾರೆಡ್ಡಿ ಎನ್ನುವ ವ್ಯಕ್ತಿಗೆ ನಕಲಿ ಬಂಗಾರವನ್ನು ಅಸಲಿ ಬಂಗಾರ ಎಂದು ನಂಬಿಸಿ ₹ 10 ಲಕ್ಷ ಹಣ ವಂಚಿಸಿ ಪರಾರಿಯಾದ ಘಟನೆ ಶನಿವಾರ ನಡೆದಿದೆ.ಕೊರಚರಹಟ್ಟಿ ಗ್ರಾಮದ ಆರೋಪಿ ತಿರುಪತಿ, ಇತನ ಸಹಚರರು ಸೇರಿ ಶಿವಾರೆಡ್ಡಿ ಅವರಿಗೆ ನಮ್ಮ ಬಳಿ 1 ಕೆಜಿ ಅಸಲಿ ಬಂಗಾರವಿದ್ದು ₹ 40 ಲಕ್ಷಕ್ಕೆ ಮಾರಾಟ ಮಾಡಲಾಗುವುದು ಎಂದು ದೂರವಾಣಿ ಕರೆಯ ಮೂಲಕ ತಿಳಿಸಿದ್ದಾರೆ.ತೋರಣಗಲ್ಲು …

Read More »

ತರೀಕೆರೆ: ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ,ಅಪಾರ ಹಾನಿ!

ಸಂತವೇರಿ ಗ್ರಾಮದ ಅಬ್ದುಲ್ ಸುಬಾನ್ ಬಿನ್ ಅಬ್ದುಲ್ ಮಜೀದ್ ಎಂಬುವರಿಗೆ ಸೇರಿದ ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದು ಅಪಾರ ಹಾನಿ ಸಂಭವಿಸಿದೆ. ರಾತ್ರಿ ವೇಳೆ ತೋಟಕ್ಕೆ ಆಕಸ್ಮಿಕ ಬೆಂಕಿ ಬಿದ್ದಿದೆ. ತೋಟದಲ್ಲಿ ಒಣಗಿದ ತರಗೆಲೆಗಳು ಇದ್ದಿದ್ದರಿಂದ ಬೆಂಕಿಯು ಕ್ಷಿಪ್ರಗತಿಯಲ್ಲಿ ವ್ಯಾಪಿಸಿಸಿದೆ.ಸುಮಾರು ₹20 ಲಕ್ಷದಷ್ಟು ನಷ್ಟವಾಗಿದೆ ಎಂದು ಅಬ್ದುಲ್ ಮಜೀದ್ ಲಿಂಗದಹಳ್ಳಿ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

Read More »