BigTv News
April 26, 2025
Breaking News, Crime
ವಿದ್ಯಾರ್ಥಿನಿಯೊಬ್ಬಳು ಕಮಲಾನಗರದಲ್ಲಿರುವ ಶ್ರೀಕಾಂತ್ ಮನೆಯಲ್ಲಿ ಕಳೆದ ಒಂದು ವರ್ಷದಿಂದ ಬಾಡಿಗೆಗೆ ಇದ್ದಳು. ಈ ವೇಳೆ ಯುವತಿ ಮೇಲೆ ಕಣ್ಣಾಕ್ಕಿದ್ದ ಶ್ರೀಕಾಂತ್ ಯುವತಿಗೆ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಯುವತಿ ಶ್ರೀಕಾಂತ್ನಿಂದ ಅಂತರ್ ಕಾಯ್ದುಕೊಂಡಿದ್ದಳು. ಆದರೆ ಬೆನ್ನುಬಿದ್ದಿದ್ದ ಶ್ರೀಕಾಂತ್ ಆಕೆಗೆ ಪದೇ ಪದೇ ಕಿರುಕುಳ ನೀಡುತ್ತಲೆ ಇದ್ದನು. ಇದರಿಂದ ಬೇಸತ್ತಿದ್ದ ಯುವತಿ ಈ ವಿಷಯವನ್ನು ಆತನ ಪತ್ನಿಗೂ ತಿಳಿಸಿದ್ಳು. ಆದರೆ ಶ್ರೀಕಾಂತ ಆಗಲೂ ಕಿರುಕುಳ ನೀಡಲು ಆರಂಭಿಸಿದ್ದನು.ಅಷ್ಟೇ ಅಲ್ಲದೇ ಶ್ರೀ ಕಾಂತ್ ಜೇಬಿನಲ್ಲಿದ್ದ …
Read More »
BigTv News
April 26, 2025
Breaking News, ಚಾಮರಾಜನಗರ
ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ಮೇಲೆ ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸದ್ಯ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳದಲ್ಲಿ ದೌಡಾಯಿಸಿದ್ದಾರೆ.ಮೃತರನ್ನು ಅಭಯ್ ಗೌಡ , ವೃಷಭೇಂದ್ರ ಎಂದು ಗುರುತಿಸಲಾಗಿದೆ. ಸದ್ಯ ವೃಷಭೇಂದ್ರ ಶವ ಪತ್ತೆಯಾಗಿದ್ದು, ಅಭಯ್ ಗೌಡ ಶವವಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
Read More »
BigTv News
April 26, 2025
Breaking News, Crime, ಹಾವೇರಿ
ಗೋಡಿಹಾಳ ಗ್ರಾಮದಿಂದ ಹರಿಹರಕ್ಕೆ ನಾಮಕರಣ ಶಾಸ್ತ್ರಕ್ಕೆ ಟ್ರ್ಯಾಕ್ಟರ್ ನಲ್ಲಿ ತೆರಳುತ್ತಿದ್ದ ವೇಳೆ ಟ್ರ್ಯಾಕ್ಟರ್ ಟ್ರೇಲರ್ ಮಗುಚಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ರಾಣೆಬೆನ್ನೂರು ಆಸ್ಪತ್ರೆಗೆ ದಾಖಲಿಸಲಾಗಿದೆ.ಮೃತರನ್ನು ಗೋಡಿಹಾಳ ಗ್ರಾಮದ ಅಶೋಕ್ ಸಿದ್ದಪ್ಪ ಮಾಗನೂರ (56) ಹಾಗೂ ಜಗದೀಶ್ ಸಿದ್ದಪ್ಪ (50) ಎಂದು ಗುರುತಿಸಲಾಗಿದೆ.ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »
BigTv News
April 26, 2025
Breaking News
ಕರ್ನಾಟಕದ ಪ್ರವಾಸಕ್ಕೆ ಬಂದಿದ್ದ ತಮಿಳುನಾಡಿನ ಇಬ್ಬರು ಮೆಡಿಕಲ್ ಕಾಲೇಜಿನ ವಿಧ್ಯಾರ್ಥಿನಿಯರು ಸಮುದ್ರದ ಅಲೆಗಳ ಹೊಡೆದತಕ್ಕೆ ಕೊಚ್ಚಿ ಹೋದ ಘಟನೆ ಗೋಕರ್ಣದ ಕುಡ್ಲೆ ಕಡಲ ತೀರದ ಜಟಾಯುತೀರ್ಥದ ಬಳಿ ಗುರುವಾರ ಸಂಜೆ ಸಂಭವಿಸಿದೆ.ಎಂ.ಬಿ.ಬಿ.ಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದ ಇವರು ಪ್ರವಾಸದ ಸಂದರ್ಭದಲ್ಲಿ ಗೋಕರ್ಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಮೃತರನ್ನು ತಮಿಳುನಾಡು ತಿರುಚಿಯ ಎಸ್.ಆರ್.ಎಂ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಕನ್ನಿಮೋಳಿ ಈಶ್ವರನ್(23) ಮತ್ತು ಹಿಂದುಜಾ ನಟರಾಜನ್ (23) ಎಂದು ಗುರುತಿಸಲಾಗಿದೆ.ವಿದ್ಯಾರ್ಥಿನಿಯರ …
Read More »
BigTv News
April 26, 2025
Breaking News, Crime
ಬುಧವಾರ ಸುರಿದ ಮಳೆ ಮತ್ತು ಬಿರುಗಾಳಿಯಿಂದ ಬೇವಿನ ಮರದ ಬೇರು ಸಡಿಲಗೊಂಡಿತ್ತು. ಹಾಗಾಗಿ ಗುರುವಾರ ಮಳೆಯಾಗದಿದ್ದರೂ, ಏಕಾಏಕಿಯಾಗಿ ಮರ ಬಿದ್ದಿದ್ದರಿಂದ ವಾಹನ ಸಂಪೂರ್ಣ ಹಾಳಾಗಿದೆ. ಕೆಲವರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೆ, ಉಳಿದವರನ್ನು ಹುಬ್ಬಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಭೇಟಿ ನೀಡಿದ್ದ ವಲಯ ಅರಣ್ಯಾಧಿಕಾರಿ ಭಾಗ್ಯಶ್ರಿ ಮಸಳಿ ಅವರನ್ನು ಗಾಯಾಳು ಕುಟುಂಬದವರು ತರಾಟೆಗೆ ತೆಗೆದುಕೊಂಡರು.ಮದುವೆಗೆಂದು ವಧು ಮತ್ತು ಸಂಬಂಧಿಕರನ್ನು ಹೊತ್ತು ಬರುತ್ತಿದ್ದ ಕ್ರೂಸರ್ ವಾಹನ ಮೇಲೆ ಮರ …
Read More »
BigTv News
April 26, 2025
Breaking News, Crime
ಕೊಪ್ಪಳ ಜಿಲ್ಲೆಯ ಹರ್ಲಾಪುರ ಗ್ರಾಮದಿಂದ ದಾವಣಗೆರೆ ಜಿಲ್ಲೆಯ ದೊಣ್ಣೆಹಳ್ಳಿ ಗ್ರಾಮಕ್ಕೆ ಕಲ್ಲು ಕಂಬಗಳನ್ನು ಹೊತ್ತೊಯ್ಯುತ್ತಿದ್ದ ಟ್ರಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.ಈ ವೇಳೆ ಟ್ರ್ಯಾಕ್ಟರ್ ಮೇಲೆ ಕುಳಿತಿದ್ದ ಇಬ್ಬರ ಮೇಲೆ ಕಲ್ಲುಗಳು ಬಿದ್ದು ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಗಂಭೀರ ಗಾಯಗೊಂಡ ಇಬ್ಬರನ್ನು ಹೆದ್ದಾರಿ ಸಹಾಯಕರ ತಂಡ, ಟೋಲ್ ಸಿಬ್ಬಂದಿ ಹಾಗೂ ಪೊಲೀಸರು …
Read More »
BigTv News
April 26, 2025
Breaking News, Crime
ವರ್ಷದ ವ್ಯಕ್ತಿಯೊಬ್ಬ ರಕ್ತ ಕೆಮ್ಮುತ್ತಿದ್ದ. ಅವರ ಕುಟುಂಬ ಸದಸ್ಯರು ಏಪ್ರಿಲ್ 19 ರಂದು ಅವರನ್ನು ಅಲ್ಲಿಗೆ ಕರೆತಂದರು. ಅಲ್ಲಿನ ವೈದ್ಯರು ಅವರಿಗೆ ಹಲವಾರು ಪರೀಕ್ಷೆಗಳನ್ನು ನಡೆಸಿದರು. CT ಸ್ಕ್ಯಾನ್ ಮತ್ತು ಬ್ರಾಂಕೋಸ್ಕೋಪಿ ನಡೆಸಲಾಯಿತು, ಮತ್ತು ಅವರ ಬಲ ಶ್ವಾಸಕೋಶದಲ್ಲಿ ಚಾಕುವಿನ ತುಣುಕು ಕಂಡುಬಂದಿದೆ. ವೈದ್ಯರ ತಂಡವು ಥೋರಕೋಟಮಿ ನಡೆಸಿ, ಅವರ ಶ್ವಾಸಕೋಶದಿಂದ ಎಂಟು ಸೆಂಟಿಮೀಟರ್ ಉದ್ದದ ಮುರಿದ ಚಾಕುವಿನ ತುಂಡನ್ನು ಯಶಸ್ವಿಯಾಗಿ ಹೊರತೆಗೆದರು. ಚಾಕುವಿನ ತುಣುಕು 2.5 ಸೆಂ.ಮೀ ಅಗಲ …
Read More »
BigTv News
April 26, 2025
Breaking News, Crime
ಮನೆಯಲ್ಲಿ ರೂಂ ಬಾಗಿಲು ಹಾಕಿಕೊಂಡು ಸ್ಪಂದನಾ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪಕ್ಕದ ಮನೆಯ ಸ್ನೇಹಿತೆ ಜತೆ ಬಾಲಕಿ ನಿತ್ಯ ಸೈಕಲ್ ಆಡುತ್ತಿದ್ದಳು.ಇಂದು ಆಕೆ ಸೈಕಲ್ ಕೊಟ್ಟಿಲ್ಲವೆಂದು ನೊಂದ ಬಾಲಕಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎನ್ನಲಾಗಿದೆ. ಹಿರಿಯೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಠಾಣಾ ವ್ಯಾಪ್ತಿಯಲ್ಲಿ ಬಾಲಕಿಯೊಬ್ಬಳು ನೇಣಿಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ. ಸ್ಪಂದನಾ (11) ಆತ್ಮಹತ್ಯೆ ಮಾಡಿಕೊಂಡ ಬಾಲಕಿ.
Read More »
BigTv News
April 26, 2025
Breaking News
ಮಾಜಿ ಸಚಿವ ಬೇಗಾನೆ ರಾಮಯ್ಯನವರ ಹೊಸಹಳ್ಳಿಯ ಸೀತಾ ಫಾರಂಗೆ ಭೇಟಿ ನೀಡಿ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿ, ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.ಬೇಗಾನೆ ರಾಮಯ್ಯನವರ ನಿಧನವು ಮಲೆನಾಡಿನ ರಾಜಕೀಯ ರಂಗಕ್ಕೆ ತುಂಬಲಾರದ ನಷ್ಟ. ಅವರ ಸರಳತೆ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿ ಸದಾ ಸ್ಮರಣೀಯ. ‘ಬೋರ್ವೆಲ್ ರಾಮಯ್ಯ’ ಎಂದೇ ಖ್ಯಾತಿ ಪಡೆದಿದ್ದ ಅವರು ಮಲೆನಾಡಿನ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸಿದವರು. ಅವರ …
Read More »
BigTv News
April 26, 2025
Breaking News, Crime
ಕಲಬುರ್ಗಿ ಜಿಲ್ಲೆಯ ಅಳಂದ ತಾಲ್ಲೂಕಿನ ನರೋಣ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದಂತ ಚನ್ನವೀರ ಹೀರಾ ಎಂಬಾತನನ್ನು ತಲ್ವಾರ್ ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.ವಿಷಯ ತಿಳಿದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Read More »