BigTv News
April 22, 2025
Breaking News, Crime
ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಮೂಲದ ಭಯೋತ್ಪಾದಕರು ದುಷ್ಕೃತ್ಯ ಎಸಗಿದ್ದಾರೆ. ಯಾವ ಧರ್ಮ ಅಂತ ಕೇಳಿ ಹಿಂದೂ ಪ್ರವಾಸಿಗರ ಮೇಲೆ ಗುಂಡಿನ ದಾಳಿಯ ಮೂಲಕ ಕೃತ್ಯ ಎಸಗಿದ್ದಾರೆ. ಮಿನಿ ಸ್ವಿಟ್ಜರ್ಲ್ಯಾಂಡ್ ಎಂದೇ ಹೆಸರಾಗಿರುವ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಟ್ರಕಿಂಗ್ ಗೆ ಹೋಗಿದ್ದ ಪ್ರವಾಸಿಗರ ಮೇಲೆ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಂಜುನಾಥ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಆದರೆ …
Read More »
BigTv News
April 22, 2025
Breaking News, ರಾಜಕೀಯ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಜಾತಿಗಣತಿ ಮಾಡುತ್ತಿರುವುದು ಜಾತಿ ಜಗಳ ಹಚ್ಚುವುದಕ್ಕೆ ಅಲ್ಲ. ಪ್ರತಿಯೊಂದು ಜಾತಿಗಳಿಗೂ ಸಾಮಾಜಿಕ ನ್ಯಾಯ ಒದಗಿಸಲು. ಇದು ಸೊಶಿಯೋ ಎಕನಾಮಿಕ್ ಸ್ಟಡಿಯಾಗಿದೆ. ಅಲ್ಲದೇ ಕಾರ್ಯಕರ್ತರಿಗೆ ಶಕ್ತಿ ತುಂಬುವ ಸದುದ್ದೇಶದಿಂದ ಮೂರು ತಿಂಗಳ ಅವಧಿಯಲ್ಲಿಯೇ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ ಚುನಾವಣೆ ನಡೆಸಲಾಗುತ್ತದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರದ ಅವಧಿಯಲ್ಲಿ ಒಂದೇ ಒಂದೇ ಅಧಿಕಾರ ವಿಕೇಂದ್ರೀಕರಣದ ನಿರ್ಧಾರ ತೆಗೆದುಕೊಂಡಿಲ್ಲ. ನಾವು …
Read More »
BigTv News
April 22, 2025
Breaking News, Crime, ಕರ್ನಾಟಕ
ಗುರುವಾಯನಕೆರೆ- ಕಾರ್ಕಳ ರಸ್ತೆಯ ಅಳದಂಗಡಿಯ ಕೆದ್ದುವಿನಲ್ಲಿ ಎರಡು ಕಾರುಗಳು ಸೋಮವಾರ ಮುಖಾಮುಖಿ ಡಿಕ್ಕಿಯಾಗಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಅಳದಂಗಡಿಯಿಂದ ಗುರುವಾಯನ ಕೆರೆ ಕಡೆ ತೆರಳುತ್ತಿದ್ದ ಕಾರು ಹಾಗೂ ಗುರುವಾಯನಕೆರೆಯಿಂದ ಕಾರ್ಕಳದತ್ತ ಪ್ರಯಾಣಿಸುತ್ತಿದ್ದ ಕಾರುಗಳು ಪರಸ್ಪರ ಅಪಘಾತಕ್ಕೀಡಾಗಿವೆ.ಗೇರುಕಟ್ಟೆಯ ಕುಸುಮಾವತಿ, ಭಾಗ್ಯವತಿ ಹಾಗೂ ವೈಭವ್ ಗಂಭೀರ ಗಾಯಗೊಂಡು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳುಗಳು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
Read More »
BigTv News
April 22, 2025
Breaking News, Crime, ಚಿಕ್ಕಮಗಳೂರು
ಅಮೃತಾಪುರ ಗ್ರಾಮದ ಸೇವಾಲಾಲ್ ಸಂಘದ ಚೀಟಿ ವ್ಯವಹಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ಗಲಾಟೆ ವೇಳೆ ರುದ್ರೇಶ್, ಸಂಜುನಾಯ್ಕನ ತಲೆ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಗಂಭೀರ ಗಾಯಗೊಂಡು ರಕ್ತಸ್ರಾವದಿಂದ ಯುವಕ ಸಾವಿಗೀಡಾಗಿದ್ದಾನೆ.ಸಂಜುನಾಯ್ಕ ಮೃತ ದುರ್ದೈವಿ. ರುದ್ರೇಶ್ ನಾಯ್ಕ ಹತ್ಯೆಗೈದ ಆರೋಪಿಯಾಗಿದ್ದಾನೆ. ತರೀಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆರೋಪಿ ರುದ್ರೇಶ್ ನಾಯ್ಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Read More »
BigTv News
April 22, 2025
Breaking News
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಗಂಗಲೂರು ಶಿಬಿರದಲ್ಲಿ ವಿದ್ಯುತ್ ಆಘಾತದಿಂದ ಸಿಆರ್‌ಪಿಎಫ್ 195ನೇ ಬೆಟಾಲಿಯನ್‌ನ ಯೋಧ ಸುಜಯ್ ಪಾಲ್ ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿ 9 ಗಂಟೆ ವೇಳೆ ಘಟನೆ ಸಂಭವಿಸಿದ್ದು, ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಿಸದೆ ಯೋಧ ಮೃತಪಟ್ಟಿದ್ದಾರೆ.
Read More »
BigTv News
April 22, 2025
Breaking News, Crime
ದೇಶ ಕಾಯುವ ಸೈನಿಕನ ಮೇಲೆ ಹಲ್ಲೆ ನಡೆದಿದ್ದರಿಂದ ಈ ಪ್ರಕರಣ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮೊದಲಿಗೆ ಬೈಕ್ ಸವಾರ ತನ್ನ ಮೇಲೆ ಹಲ್ಲೆ ಮಾಡಿದ್ದರು ಎಂದು ವಾಯುಸೇನೆ ಅಧಿಕಾರಿ ಆರೋಪಿಸಿದ್ದರು. ಆದರೆ, ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಇಬ್ಬರ ನಡುವೆ ಜಗಳ ನಡೆದಾಗ ಅಧಿಕಾರಿ ಕೂಡ ಬೈಕ್ ಸವಾರನ ಮೇಲೆ ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ವಿಕಾಸ್ …
Read More »
BigTv News
April 22, 2025
Breaking News, Crime, ಬೆಂಗಳೂರು
ಆರೋಪಿ ವಿಶ್ವನಾಥ್ ಎಂಬಾತ, ಕಳೆದ ಆರು ತಿಂಗಳುಗಳಿಂದ ಅಂಗಡಿಗೆ ಸುಮಾರು ₹1,500 ಬಾಕಿ ಇಟ್ಟುಕೊಂಡಿದ್ದ. ಈ ಮೊದಲು ಬಾಕಿ ಹಣ ಪಾವತಿಸದಿದ್ದರೂ, ಇದೀಗ ಮತ್ತೆ ಅಂಗಡಿಗೆ ಬಂದು ಹೊಸದಾಗಿ ಸಾಲ ಕೇಳಿದ್ದ. ಅಂಗಡಿಯ ಮಾಲಿಕ ಸಿದ್ದಲಿಂಗಯ್ಯ ಅವರು ಹಳೆಯ ಬಾಕಿಯ ಬಗ್ಗೆ ಕೇಳಿದಾಗ, ವಿಶ್ವನಾಥ್ ತನ್ನ ಜತೆಗೆ ಕಾರಿನಲ್ಲಿ ಇದ್ದ ಇಬ್ಬರೊಂದಿಗೆ ಇಳಿದು, ಮಾಲಿಕರ ಮೇಲೆ ಮಚ್ಚಿಯಿಂದ ಆಕ್ರೋಶದಿಂದ ದಾಳಿ ನಡೆಸಿದ್ದಾನೆ.ಮಾಲಿಕ ಸಿದ್ದಲಿಂಗಯ್ಯ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ …
Read More »
BigTv News
April 22, 2025
Breaking News, ಬೆಂಗಳೂರು
ಪತ್ನಿ ಮತ್ತು ಮಗಳಿಂದ ಹತ್ಯೆಗೀಡಾದ ರಾಜ್ಯದ ಮಾಜಿ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಅವರ ಅಂತ್ಯಕ್ರಿಯೆ ಸೋಮವಾರ ಬೆಂಗಳೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಸಂಜೆ ವಿಲ್ಸನ್ ಗಾರ್ಡನ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.ಪೊಲೀಸ್ ಪಡೆಯಿಂದ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಓಂ ಪ್ರಕಾಶ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲಾಯಿತು. ಬಳಿಕ ಪುತ್ರ ಕಾರ್ತಿಕೇಶ್ ಅಂತಿಮ ವಿಧಿ-ವಿಧಾನ ನೆರವೇರಿಸಿ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು.ಮಾಜಿ ಡಿಜಿಪಿಯ ಸಂಬಂಧಿಕರು, ಸ್ನೇಹಿತರು …
Read More »
BigTv News
April 22, 2025
Breaking News, Crime, ಬೆಂಗಳೂರು
ನಿವೃತ್ತ ಡಿಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣದ ರಹಸ್ಯ ಕೊನೆಗೂ ಬಯಲಾಗಿದೆ. ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ, ಪೊಲೀಸ್ ವಿಚಾರಣೆಯ ವೇಳೆ ಕೊಲೆಯ ಸಂಪೂರ್ಣ ವಿವರಗಳನ್ನು ಬಿಚ್ಚಿಟ್ಟಿದ್ದಾರೆ. ಗನ್ ಪಾಯಿಂಟ್, ಖಾರದ ಪುಡಿ, ಅಡುಗೆ ಎಣ್ಣೆ, ಹಗ್ಗ, ಚಾಕು ಬಳಕೆಯ ಜೊತೆಗೆ ಕೊಲೆಯ ಇಂಚಿಂಚು ವಿವರವನ್ನು ಅವರು ಬಹಿರಂಗಪಡಿಸಿದ್ದಾರೆ.ಕೊಲೆ ಮಾಡಲು ಕಾರನ ಏನು ಎಂದು ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದು, ಆಸ್ತಿ ವಿಚಾರಕ್ಕೆ ಮರ್ಡರ್ ಆಗಿದೆ ಎಂದು ಮೇಲ್ನೋಟಕ್ಕೆ …
Read More »
BigTv News
April 22, 2025
Breaking News, Crime, ಮುಂಬೈ
ಸಹೋದ್ಯೋಗಿ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಅಶ್ವಿನಿ ಬಿದ್ರೆ-ಗೋರೆ ಅವರನ್ನು ಹತ್ಯೆ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸೆದ ಆರೋಪದಲ್ಲಿ ವಜಾಗೊಂಡಿರುವ ಪೊಲೀಸ್ ಅಧಿಕಾರಿ ಅಭಯ್ ಕುರುಂಡ್ಕರ್ ಗೆ ಜೀವಾವಧಿ ಶಿಕ್ಷೆ ನೀಡಿ ಇಲ್ಲಿನ ನ್ಯಾಯಾಲಯ ತೀರ್ಪು ನೀಡಿದೆ.ತನಿಖೆಯಲ್ಲಿ ನವಿ ಮುಂಬೈ ಪೊಲೀಸರು ಪ್ರಾಮಾಣಿಕ ಕ್ರಮ ಕೈಗೊಂಡಿಲ್ಲ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕೆ.ಜಿ.ಪಲ್ದೇವಾರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಇಡೀ ವ್ಯವಸ್ಥೆ ಕುರುಂಡ್ಕರ್ ಅವರ ಪರವಾಗಿ ನಿಂತಿದೆ ಎಂದು ಆಕ್ಷೇಪಿಸಿದರು. …
Read More »